Print

 

ಉಡುಪಿ, ಅ.02: ಉಡುಪಿ ಸಂತೆಕಟ್ಟೆ ಇಲ್ಲಿನ ನಯಂಪಳ್ಳಿಯಲ್ಲಿ ಬಿಲ್ಲವರ ಸೇವಾ ಸಂಘ (ರಿ.) ಸಂತೆಕಟ್ಟೆ ನಿರ್ಮಿಸಲುದ್ದೇಶಿತ ಸಂಘದ ನಿವೇಶನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಇದೇ ಅ.06ನೇ ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಕೇರಳ ವರ್ಕಳ ಇಲ್ಲಿನ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಅವರು ಶಿಲಾನ್ಯಾಸ ನೆರವೇಸಲಿರುವÀರು ಎಂದು ಬಿಲ್ಲವರ ಸಂಘದ ಗೌರವಾಧ್ಯಕ್ಷ ಭಾಸ್ಕರ ಜತ್ತನ್ ತಿಳಿಸಿದ್ದಾರೆ.

ಬಿಲ್ಲವರ ಸೇವಾ ಸಂಘ ಸಂತೆಕಟ್ಟೆ ಅಧ್ಯಕ್ಷ ಜೇಸಿ ಶೇಖರ್ ಗುಜ್ಜರ್ಬೆಟ್ಟು ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ಸರಕಾರದ ಬಂದರು, ಮೀನುಗಾರಿಕೆ, ಮುಜರಾಯಿ ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅತಿಥಿ ಅಭ್ಯಾಗತರಾಗಿದ್ದು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಟಿ.ರಾಮ ಪೂಜಾರಿ ತಿಳಿಸಿದ್ದಾರೆ.

ಗೌರವ್ವನಿತ ಅತಿಥಿಗಳಾಗಿ ಉಡುಪಿ ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಉಡುಪಿ ಮಾಜಿ ಶಾಸಕ ಯು. ಆರ್ ಸಭಾಪತಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮೂಲ್ಕಿ ಅಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಉಡುಪಿ ಜಿಲ್ಲಾ ಪಂಚಾಯತ್‍ನ ಸದಸ್ಯ ಜನಾರ್ದನ ತೋನ್ಸೆ, ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಇದರ ಅಧ್ಯಕ್ಷ ಬಿ.ಎನ್ ಶಂಕರ್ ಪೂಜಾರಿ, ವಕೀಲ ನ್ಯಾ| ಸಂಕಪ್ಪ ಎ., ವೀರಮಾರುತಿ ಭಜನಾ ಮಂದಿರ ಗರಡಿಮಜಲು ಮಾಜಿ ಅಧ್ಯಕ್ಷ ದೇವದಾಸ್ ಸುವರ್ಣ, ಉದ್ಯಮಿಗಳಾದ ವಿಶ್ವನಾಥ ಎ.ಸನಿಲ್ ಕೆಮ್ಮಣ್ಣು, ಹೇಮರಾಜ್ ಡಿ.ಅಮೀನ್ ಸಂತೆಕಟ್ಟೆ, ವಿಶೇಷ ಆಹ್ವಾನಿತರಾಗಿ ಉಡುಪಿ ಜಿಲ್ಲಾ ಪಂಚಾಯತ್‍ನ ಸದಸ್ಯೆ ಗೀತಾಂಜಲಿ ಸುವರ್ಣ, ಉಡುಪಿ ನಗರಸಭಾ ಸದಸ್ಯೆ ಜಯಂತಿ ಕೆ., ಬಡಾನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಪೂಜಾರಿ, ಪುರೋಹಿತ ಕೇಶವ ಶಾಂತಿ ಬನ್ನಂಜೆ, ಚಲನಚಿತ್ರ ನಟ ಹಾಗೂ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ, ಬಿಲ್ಲವ ಪರಿಷತ್ ಕಟಪಾಡಿ ಅಧ್ಯಕ್ಷ ನವೀನ್ ಅಮೀನ್, ಬಿಲ್ಲವರ ಯುವ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಪ್ರವೀಣ್ ಎಂ.ಪೂಜಾರಿ, ಸೂರ್ಯಪ್ರಕಾಶ್, ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ನಾರಾಯಣ ಬಿ.ಎಸ್., ನಾರಾಯಣಗುರು ಅರ್ಬನ್ ಕೋ. ಬ್ಯಾಂಕ್‍ನ ಕಾರ್ಯಾಧ್ಯಕ್ಷ ಹರೀಶ್ಚಂದ್ರ ಅಮೀನ್, ಉಡುಪಿ ತಾಲೂಕು ಪಂಚಾಯತ್ ಸದಸ್ಯ ದಿನಕರ್ ಹೇರೂರು, ಉಡುಪಿ ನಗರ ಸಭೆಯ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಬಿಲ್ಲವ ಸಂಘ ಮೂಡುಕುದ್ರು ಮಾಜಿ ಅಧ್ಯಕ್ಷ ದಿನೇಶ್ ಜತ್ತನ್, ಬಿಲ್ಲವ ಸಂಘ ಉಪ್ಪೂರು ಗೌರವಾಧ್ಯಕ್ಷ ಸಂತೋಷ್ ಕೋಟ್ಯಾನ್, ದಸ್ತಾವೇಜು ಬರಹಗಾರ ಜಯಂತ್ ಎ.ಅಮೀನ್, ಗ್ಯಾರೇಜ್ ಮಾಲಕರ ಸಂಘ ಉಡುಪಿ ಮಾಜಿ ಅಧ್ಯಕ್ಷ ಪ್ರಭಾಕರ್ ಕೆ., ಉದ್ಯಮಿಗಳಾದ ಹರೀಶ್ ಪೂಜಾರಿ ಕುಕ್ಕೆಹಳ್ಳಿ, ಕಿಶೋರ್ ಪೂಜಾರಿ, ಲಕ್ಷ್ಮಣ್ ಕೆ. ಅಮೀನ್, ಸದಾಶಿವ ಸುವರ್ಣ ಬಡಾನಿಡಿಯೂರು, ದೇವು ಪೂಜಾರಿ ಮಣಿಪಾಲ, ಲಕ್ಷ್ಮಣ್ ಬಿ. ಅಮೀನ್, ಸಂಜೀವ ಪೂಜಾರಿ ತೋನ್ಸೆ ಮುಂಬಯಿ, ಹರೀಶ್ಚಂದ್ರ ಕೂಳೂರು (ನಯಂಪಳ್ಳಿ), ಎಂ. ಜಯಶೇಖರ್ ಶಿವಗಿರಿ (ಸಂತೆಕಟ್ಟೆ), ಕೃಷ್ಣಪ್ಪ ಪೂಜಾರಿ ಜಾತಬೆಟ್ಟು, ಸುಧಾಕರ್ ಅಮೀನ್ ಪಾಂಗಳ, ದಿನಕರ ಪೂಜಾರಿ ನಯಂಪಳ್ಳಿ, ರವೀಂದ್ರ ಪೂಜಾರಿ ಉಪ್ಪೂರು, ದಿವಾಕರ್ ಸನಿಲ್ ಉಡುಪಿ, ಸುರೇಶ್ ಜತ್ತನ್ ಬಡಾನಿಡಿಯೂರು, ಸುರೇಶ್ ಸುವರ್ಣ ಮತ್ತಿತರ ಗಣ್ಯರು ಉಪಸ್ಥಿತರಿರುವರು ಎಂದು ಗೌರವಾಧ್ಯಕ್ಷ ಶ್ಯಾಮ್ ಕೆ.ಪೂಜಾರಿ ತಿಳಿಸಿದ್ದಾರೆ.

 ಕಾರ್ಯಕ್ರಮದಲ್ಲಿ ಬಿಲ್ಲವರ ಸೇವಾ ಸಂಘ ಸಂತೆಕಟ್ಟೆ ಇದರ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೆಮ್ಮಣ್ಣು, ಕೋಶಾಧಿಕಾರಿ ಉಮೇಶ್ ಪೂಜಾರಿ, ಕಾರ್ಯದರ್ಶಿ ಶೇಖರ್ ಬಿ.ಪೂಜಾರಿ, ಕೋಶಾಧಿಕಾರಿ ಜಗನ್ನಾಥ್ ಕೆ., ಮಹಿಳಾಧ್ಯಕ್ಷೆ ಗೀತಾ ನಿರಂಜನ್, ಗೌರವಾಧ್ಯಕ್ಷೆ ಕುಸುಮ ಪೂಜಾರ್ತಿ, ಕಾರ್ಯದರ್ಶಿಉಷಾ ವಸಂತ್ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿರುವರು. ಆ ಪ್ರಯುಕ್ತ ಸಮಾಜ ಬಾಂಧವರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭ ಚೆಂದಗಾಣಿಸಿಸುವಂತೆ ಬಿಲ್ಲವರ ಸೇವಾ ಸಂಘ ಸಂತೆಕಟ್ಟೆ ಇದರ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೆಮ್ಮಣ್ಣು ಈ ಮೂಲಕ ವಿನಂತಿಸಿದ್ದಾರೆ.