Print

 

ಮುಂಬಯಿ, ಫೆ.11: ತುಳುನಾಡ ಜಾನಪದ ಪ್ರತೀತಿಯ 66 ಪ್ರಾಚೀನ ಗರೋಡಿಗಳಲ್ಲಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತೀ ಗರೋಡಿಯೂ ಒಂದು. ಉಡುಪಿ ಜಿಲ್ಲೆಯ ಕಲ್ಯಾಣ್ಫುರದ ಪಡುತೋನ್ಸೆಯಲ್ಲಿ ಅನಾದಿ ಕಾಲದಿಂದ ಬಿಲ್ಲವರ ಕುಲದೇವರಾದ ಕೋಟಿಚೆನ್ನಯ ಮತ್ತು ಪಂಚಧೂಮಾವತೀ ದೈವವನ್ನು ಪೂಜಿಸಿ ಕೊಂಡು ಬರುತ್ತಿರುವ ಈ ಗರೋಡಿ ಅನೇಕ ದಶಕಗಳಿಂದ ಪ್ರಸಿದ್ಧಿಯ ಧಾರ್ಮಿಕ ಕೇಂದ್ರವಾಗಿದೆ. ಈ ಗರೋಡಿಯ ಅಭಿವೃದ್ಧಿಯ ಜೊತೆಗೆ ಪರಿಸರದ ಜನರ ಸರ್ವೋನ್ನತಿ, ಏಳಿಗೆಗಾಗಿ ತವರೂರ ಮುಂಬಯಿವಾಸಿ ಭಕ್ತರು ಒಗ್ಗೂಡಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೊಡಿ ಸೇವಾ ಟ್ರಸ್ಟ್ ಮುಂಬಯಿ ಸ್ಥಾಪಿಸಿ ಇದೀಗ ದಶಮಾನ ಸಂಭ್ರಮದಲ್ಲಿದೆ.

ಇದೇ ಮಾ.03ನೇ ಆದಿತ್ಯವಾರ ಸಾಂತಾಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ಅಪರಾಹ್ನ 2.30 ಗಂಟೆಯಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಈ ಸಂಸ್ಥೆ ದಶಮಾನೋತ್ಸವ ಆಚರಿಸಲಿದೆ. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉದಾರ ದಾನಿ, ಸಹೃದಯಿಯೂ ಆಗಿರುವ ಕೃಷ್ಣ ಪ್ಯಾಲೇಸ್ ಸಮೂಹದ ಆಡಳಿತ ನಿರ್ದೇಶಕ ಕೃಷ್ಣ ವೈ.ಶೆಟ್ಟಿ ಮತ್ತು ಪ್ರಸಿದ್ಧ ಉದ್ಯಮಿ ಧರ್ಮಪ್ರಕಾಶ್ ಟಿ.ಕೆ ಚೆನ್ನೈ ಆಗಮಿಸುವರು. ಗೌರವಾನ್ವಿತ ಅತಿಥಿಗಳಾಗಿ ತೋನ್ಸೆ ಮೂಲತಃ ಉದ್ಯಮಿ ಮತ್ತು ದಾನಿ ಜಯಕೃಷ್ಣ ಶೆಟ್ಟಿ, ರಾಜಗೋಪಾಲ ಶೆಟ್ಟಿ, ಡಾ| ಗಿಲ್ಬರ್ಟ್ ಡಿಸೋಜ, ಬಡಾನಿಡಿಯೂರು ರಮಾನಂದ ರಾವ್ ಅಲ್ಲದೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಬಿಲ್ಲವರ ಚೆಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಧ್ಯಕ್ಷ ಎನ್.ಟಿ ಪೂಜಾರಿ, ಹೆಚ್.ಬಾಬು ಪೂಜಾರಿ, ಗಣೇಶ್ ಪೂಜಾರಿ ಉಪಸ್ಥಿತರಿರುವರು.

ತೋನ್ಸೆಯ ಪುಣ್ಯಭೂಮಿಯಲ್ಲಿ ಈಗಾಗಲೇ ನೂರಾರು ಮಂದಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದು ಸಾಧಕರಾಗಿ ಗುರುತಿಸಿ ಕೊಂಡಿರುವರು. ಕರ್ಮಭೂಮಿಯಲ್ಲಿದ್ದರೂ ನಮ್ಮ ಸಂಸ್ಥೆಯೊಂದಿಗೆ ಕೈಜೋಡಿಸಿ ಗರೋಡಿ ಮತ್ತು ಹುಟ್ಟೂರ ಸೇವೆಯಲ್ಲಿ ತೊಡಗಿಸಿ ಕೊಂಡಿರುವರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲು ಇಪ್ಛಿಸಿದ್ದು, ಆ ಪಯ್ಕಿ ಸಾಧಕರೆಣಿಸಿದ ಸರ್ವಶ್ರೀ ಕ್ಯಾಪ್ಟನ್ (ನಿವೃತ್ತ) ಸರ್ವೋತ್ತಮ ಬಿ ಶೆಟ್ಟಿ (ದೇಶಸೇವೆ), ಡಾ| ಚಿರಾಗ್ ಪೂಜಾರಿ ತೋನ್ಸೆ (ವೈದ್ಯಕೀಯ), ಸದಾನಂದ ಎನ್.ಆಚಾರ್ಯ, ಜಗನ್ನಾಥ ಎಂ.ಗಾಣಿಗ, ನವೀನ್ ಎಸ್.ಶೆಟ್ಟಿ ತೋನ್ಸೆ (ಸಮಾಜ ಸೇವೆ), ಸಿಎ| ಅಶ್ವಿನ್ ಎಸ್.ಸುವರ್ಣ, ಪ್ರಶಾಂತ ಸಿ.ಪೂಜಾರಿ, ರವಿ.ಎಸ್ ಪೂಜಾರಿ ಮತ್ತು ರಮೇಶ್ ಸುವರ್ಣ (ಪ್ರತಿಷ್ಠಿತ ವೃತ್ತಿ-ಉದ್ಯಮ), ಲಕ್ಷ್ಮಣ ಕಾಂಚನ್ (ಹೆಸರಾಂತ ರಂಗಕರ್ಮಿ) ದಿನೇಶ್ ವಿ.ಕೋಟ್ಯಾನ್ (ಸ್ಯಾಕ್ಸೋಪೋನ್ ವಾದಕ) ಇವರಿಗೆ ತೋನ್ಸೆ ಅಚೀವ್ಸ್ (ತೋನ್ಸೆ ಸಾಧಕ) ಬಿರುದು ಪ್ರದಾನಿಸಿ ಅತಿಥಿüಗಳಿಂದ ಗೌರವಿಸಲಾಗುವುದು.

ಮನೋರಂಜನೆಯಯಾಗಿಸಿ ಮಧ್ಯಾಹ್ನ 2.30ರಿಂದ ಮುಂಬಯಿಯ ಪ್ರಸಿದ್ಧ ಸ್ಯಾಕ್ಸೋಪೋನ್ ವಾದಕ ದಿನೇಶ್ ವಿ.ಕೋಟ್ಯಾನ್ ಅವರಿಂದ ಸಂಗೀತ ಕಛೇರಿ ನಂತರ ಮಕ್ಕಳಿಂದ `ಅಂಭಾ ಪ್ರತಿಜ್ಞೆ' ಎಂಬ ಪ್ರಹಸನ ಕಾರ್ಯಕ್ರಮ ಜರುಗಲಿದೆ. ಸಚಿನ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.ಸತ್ಯ ಮತ್ತು ಧರ್ಮಕ್ಕಾಗಿ ಹೋರಾಡಿ, ಅನ್ಯಾಕ್ಕೊಳಗಾದವರಿಗೆ ನ್ಯಾಯ ಒದಗಿಸಿದ ಅವಳಿ ವೀರರಾದ ಕೋಟಿ ಚೆನ್ನಯ ಇವರ ಜೀವನ ಚಿತ್ರಣ ಬಗ್ಗೆ ಅಕ್ಷಯ ಪತ್ರಿಕೆಯ ಸಂಪಾದಕ ಹರೀಶ್ ಹೆಜ್ಮಾಡಿ ಮಾಹಿತಿ ನೀಡಲಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಲಿಮ್ಕಾ ದಾಖಲೆಯ ತೋನ್ಸೆಯ ಅಭಿಮಾನದ ಕಲಾವಿದ ತೋನ್ಸೆ ವಿಜಯಕುಮಾರ್ ಶೆಟ್ಟಿ ರಚನೆ ನಿರ್ದೇಶನದ ತುಳು ನಾಟಕ `ಈ ಬಾಲೆ ನಮ್ಮವು' ನಾಟಕವನ್ನು ಕಲಾಜಗತ್ತು ತಂಡ ಪ್ರದರ್ಶಿಸಲಿದ್ದಾರೆ.

ಮುಂಬಯಿನ ಧಾರ್ಮಿಕ ಮತ್ತು ಸಾಮಾಜಿಕ ಚಿಂತಕರು, ಸಮಾಜ ಸೇವಕರು, ಕಲಾಪೆÇೀಷಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಸರ್ವ ಪದಾಧಿಕಾರಿಗಳು ಈ ಮೂಲಕ ವಿನಂತಿಸಿದ್ದಾರೆ.

ಗರೋಡಿ ಸೇವಾ ಟ್ರಸ್ಟ್ (ಮುಂಬಯಿ) ಬಗ್ಗೆ:
ತುಳುನಾಡಿನ ಸಾಂಸ್ಕøತಿಕ ಇತಿಹಾಸದಲ್ಲಿ ಕಾರಣಿಕ ಅವಳಿ ವೀರಪುರುಷರು ಎಂದು ವಿರಾಜಮಾನರಾದವರು ಕೋಟಿ ಚೆನ್ನಯ್ಯ ಅವಳಿ ಸಹೋದರರು. ಆರಾಧ್ಯ ಪುರುಷರಾಗಿರುವ ಅವರನ್ನು ಕರಾವಳಿಯ ಪ್ರಾದೇಶಿಕ ಭಾಷೆ ತುಳುವಿನಲ್ಲಿ `ಬೈದ್ಯರ್' ಎಂದು ಕರೆಯಲಾಗುತ್ತದೆ. ಗರಡಿಗಳು ತುಳುನಾಡಿನ ಜಾನಪದ ಮತ್ತು ಸಾಂಸ್ಕøತಿಕ ಲೋಕದಲ್ಲಿ ಈ ಅವಳಿ ವೀರರನ್ನು ಆರಾಧಿಸುವ ಕೇಂದ್ರಗಳಾಗಿ ರೂಪುಗೊಂಡವು. ಸತ್ಯ, ಧರ್ಮ ನಿಷ್ಠರಾದ ಈ ಅವಳಿ ಸಹೋದರರು ಕಾಯಬಿಟ್ಟು ಮಾಯಕ್ಕೆ ಸಂದ ಕಾಲಘಟ್ಟದಲ್ಲಿ ಅವರ ಕೋರಿಕೆಯಂತೆ ವಿದ್ಯಾ ಕೇಂದ್ರಗಳಾಗಿ ಕಟ್ಟಲ್ಪಟ್ಟ ಗರೋಡಿಗಳು ಅವರನ್ನೇ ಪೂಜಿಸುವ ಆರಾಧನಾ ಕೇಂದ್ರಗಳಾದವು. ಆ ಪಯ್ಕಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತೀ ಗರೋಡಿ ಒಂದಾಗಿದ್ದು ಈ ಗರೋಡಿ ಮತ್ತು ಸಾಮಾಜಿಕ ಉನ್ನತಿಗಾಗಿ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಸ್ಪಂದಿಸುತ್ತಾ ಬಂದಿದೆ. ಈ ಟ್ರಸ್ಟ್ ಪರಿಸರದ ಎಲ್ಲಾ ಸ್ತರದ ಜನರೊಂದಿಗೆ ನಿಕಟ ಸಂಬಂಧ ಇರಿಸಿ ಕಳೆದ ಸುಮಾರು ಹತ್ತು ವರುಷಗಳಿಂದ ಗರೋಡಿಯ ಅಭಿವೃದ್ಧಿ ಪೂರಕವಾದ ಯೋಜನೆಗಳನ್ನು ಕೈಗೆತ್ತಿಕೊಂಡು ಕಾರ್ಯಪ್ರವೃತ್ತ ಆಗಿದೆ. ಮುಂಬಯಿಯ ಸಹೃದಯೀ ಉದ್ಯಮಿಗಳು, ಹೋಟೆಲು ಮಾಲೀಕರು, ಕೊಡುಗೈದಾನಿಗಳ ಸಹಕಾರದಿಂದಲೇ ಗರಡಿಯ ಹಲವಾರು ಕನಸುಗಳು ನನಸಾಗಲು ಕಾರಣವಾಯಿತು.

ನಾವೆಲ್ಲಾ ಉದರ ನಿಮಿತ್ತ ಕರ್ಮಭೂಮಿ ಮುಂಬಯಿಗೆ ಬಂದು ನಮ್ಮ ಭಾಷೆ, ಸಂಸ್ಕøತಿಯನ್ನು ಉಳಿಸಲು ನಮ್ಮಿಂದಾದ ನಿಟ್ಟಿನಲ್ಲಿ ಯತ್ನಿಸುತ್ತಾ ಮುನ್ನಡೆಯುವ ಟ್ರಸ್ಟ್‍ಗೆ ದಶಮಾನೋತ್ಸವದ ಸಂಭ್ರಮ, ಇಂತಹ ಶುಭ ಸಂದರ್ಭದಲ್ಲಿ ನಮಗೆ ಈ ವರೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಸಹಕರಿಸಿರುವ ದಾನಿಗಳನ್ನು, ಹಿತೈಷಿಗಳನ್ನು ಮರೆಯದೆ, ಅವರನ್ನು ಆಮಂತ್ರಿಸಿ ಕೃತಜ್ಞತೆ ಅರ್ಪಿಸುವ ಕಾರ್ಯಕ್ರಮ ಒಂದನ್ನು ಹಮ್ಮಿ ಕೊಂಡಿದ್ದೇವೆ. ಈ ಕಾರ್ಯಕ್ರಮದಲ್ಲಿ ನಾಡಿನ ಮತ್ತು ತೋನ್ಸೆ ಪರಿಸರದ ಹಲವು ಸಾಧಕರನ್ನು ಪುರಸ್ಕರಿಸಲು ನಿರ್ಧರಿಸಿದ್ದೇವೆ, ಮಹಾನಗರದಲ್ಲಿನ ತೋನ್ಸೆ ಗರೋಡಿಯ ಬಹಳಷ್ಟು ಭಕ್ತರು, ಹಿತೈಷಿಗಳು ನೆಲೆಯಾಗಿದ್ದು ಆ ನಿಮಿತ್ತ ನಮ್ಮ ಟ್ರಸ್ಟ್ ತನ್ನ ದಶಸಂಭ್ರಮವನ್ನು ಅದ್ದೂರಿಯಾಗಿ ಆಚರಿಸುವ ಸರ್ವ ಸಿದ್ದತೆ ನಡೆಸುತ್ತಿದೆ.

ಪ್ರಸ್ತುತ ಗರೊಡಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷರಾಗಿ ನಿತ್ಯಾನಂದ ಡಿ.ಕೋಟ್ಯಾನ್, ಉಪಾಧ್ಯಕ್ಷರುಗಳಾಗಿ ಡಿ.ಬಿ ಅಮೀನ್, ಸಿ.ಕೆ ಪೂಜಾರಿ, ವಿಶ್ವನಾಥ್ ತೋನ್ಸೆ, ಗೌರವ ಪ್ರಧಾನ ಕಾರ್ಯದರ್ಶಿ ಆಗಿ ಸಂಜೀವ ಪೂಜಾರಿ ತೋನ್ಸೆ, ಗೌರವ ಕೋಶಾಧಿಕಾರಿ ಆಗಿ ರವಿರಾಜ್ ಕಲ್ಯಾಣ್ಫುರ್, ಜೊತೆ ಕಾರ್ಯದರ್ಶಿ ಕರುಣಾಕರ್ ಬಿ.ಪೂಜಾರಿ, ಜೊತೆ ಕೋಶಾಧಿಕಾರಿ ವಿಜಯ್ ವಿ.ಸನಿಲ್, ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಶೋಕ್ ಎಂ.ಕೋಟ್ಯಾನ್, ವಿಠಲ್ ಎಸ್.ಪೂಜಾರಿ ಕಾರ್ಯಕಾರಿ ಮಂಡಳಿ ಸದಸ್ಯರುಗಳಾಗಿ ಅಶೋಕ್ ಎಂ.ಕೋಟ್ಯಾನ್, ಆನಂದ್ ಜತ್ತನ್, ಸೋಮ ಸುವರ್ಣ, ರೂಪ್‍ಕುಮಾರ್ ಕಲ್ಯಾಣ್ಫುರ್, ವಿಠಲ್ ಎಸ್. ಪೂಜಾರಿ, ಸುರೇಶ್ ಅಂಚನ್, ಸದಾನಂದ ಬಿ.ಪೂಜಾರಿ, ಕೃಷ್ಣ ಪಾಲನ್ ಮತ್ತು ಸಲಹಾಗಾರರಾಗಿ ಶಂಕರ ಸುವರ್ಣ, ವಿ.ಸಿ ಪೂಜಾರಿ, ಲಜ್ಹಾರ್ ಟಿ.ಮುತ್ತಪ್ಪ ಕೋಟ್ಯಾನ್, ಲಕ್ಷ್ಮೀ ಡಿ.ಅಂಚನ್, ದಶಮನೋತ್ಸವ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ವಿಶ್ವನಾಥ್ ತೋನ್ಸೆ, ಉಪ ಕಾರ್ಯಾಧ್ಯಕ್ಷರುಗಳಾಗಿ ಆನಂದ ಜತ್ತನ್ ಮತ್ತು ಕೆ.ಗೋಪಾಲ್ ಪಾಲನ್, ಗೌರವ ಕಾರ್ಯದರ್ಶಿ ಆಗಿ ವಿಠಲ್ ಎಸ್.ಪೂಜಾರಿ ಮತ್ತು ಹತ್ತು ಸದಸ್ಯರು ಸೇವಾ ನಿರತರಾಗಿದ್ದಾರೆ.