Print

ಮುಂಬಯಿ, ಜ.09: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಂಧೇರಿ ಸ್ಥಳೀಯ ಕಚೇರಿಯು ಇದೇ ಜ.13ನೇ ಭಾನುವಾರ ಬೆಳಿಗ್ಗೆ 9.00 ಗಂಟೆಯಿಂದ ರಾತ್ರಿ 8.00 ಗಂಟೆ ತನಕ ಸಾಂತಾಕ್ರೂಜ್ ಪೂರ್ವದ ಗುರು ನಾರಾಯಣ ಮಾರ್ಗದಲ್ಲಿನ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದ ಸ್ವರ್ಗೀಯ ಸೂರು ಸಿ.ಕರ್ಕೇರ ಸ್ಮಾರಣಾರ್ಥ ವೇದಿಕೆಯಲ್ಲಿ ತನ್ನ 15ನೇ ವಾರ್ಷಿಕೋತ್ಸವವ ನ್ನು ಡೆನ್ನ ಡೆನ್ನಾಣ-2019 ಜಾನಪದ ನೃತ್ಯ ಸ್ಪರ್ಧೆ, ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇತ್ಯಾದಿಗಳೊಂದಿಗೆ ಆಚರಿಸಲಿದೆ.

ಆಪ್ರಯುಕ್ತ ಅಂದು ಬೆಳಿಗ್ಗೆ 9.00 ಗಂಟೆಯಿಂದ ವಾರ್ಷಿಕೋತ್ಸವ ಉದ್ಘಾಟನಾ ಸಮಾರಂಭ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ಚಂದ್ರಶೇಖ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಲಿದ್ದು, ಉದ್ಯಮಿ ಕ್ಯಾಪ್ಟನ್ ವೇಣುಗೋಪಾಲ್ ಎಂ.ಸುವರ್ಣ ಉದ್ಘಾಟಿಸಲಿದ್ದು, ವಾಸ್ತುತಜ್ಞ ಅಶೋಕ್ ಪುರೋಹಿತ್, ರಾಜೇಶ್ ಭಟ್ ಪೋರ್ಟ್ ಆಶೀರ್ವಚನ ನೀಡಲಿದ್ದಾರೆ.

ಅತಿಥಿ ಅಭ್ಯಾಗತರುಗಳಾಗಿ ಉದ್ಯಮಿಗಳಾದ ಸುರೇಶ್ ಶ್ರೀಯಾನ್, ಸಂಜೀವ ಸುವರ್ಣ, ಗೌರವ ಅತಿಥಿಗಳಾಗಿ ಉದ್ಯಮಿಗಳಾದ ರಾಜೇಶ್ ಸಿ.ಕೋಟ್ಯಾನ್, ಸಂತೋಷ್ ಕೆ.ಪೂಜಾರಿ ಮಲಾಡ್, ಶಿವಪ್ರಸಾದ್ ಪೂಜಾರಿ ಪುತ್ತೂರು (ಥಾಣೆ), ಪದ್ಮನಾಭ ಪೂಜಾರಿ ಆಗಮಿಸುವರು. ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಎಂ.ವಿ ಗುರುಚರಣ್ ಅವಿೂನ್, ಲಕ್ಷಿ ್ಮೀ ಎನ್.ಕೋಟ್ಯಾನ್, ಜಯಂತಿ ವಿ.ಉಳ್ಳಾಲ್, ಭೋಜ ಪೂಜಾರಿ, ಹರೀಶ್ ಜಿ.ಸಾಲ್ಯಾನ್ ಇವರನ್ನು ಸನ್ಮಾನಿಸಲಾಗುವುದು.

ಸಂಜೆ 5.30 ಗಂಟೆಯಿಂದ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ಜರುಗಲಿದ್ದು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮೂಲ್ಕಿ ಅಧ್ಯಕ್ಷ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಆಗಮಿಸಿ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಮತ್ತು ವಾಸ್ತುತಜ್ಞ, ಪುರೋಹಿತ ಡಾ| ಎಂ.ಜೆ ಪ್ರವೀಣ್ ಭಟ್ ಆಶೀರ್ವಚನ ನೀಡಲಿದ್ದಾರೆ.

ಅತಿಥಿ ಅಭ್ಯಾಗತರುಗಳಾಗಿ ಉದ್ಯಮಿಗಳಾದ ಶಾಸಕ ರಮೇಶ್ ಲಾಡ್ಕೆ, ಕಡಂದಲೆ ಸುರೇಶ್ ಎಸ್.ಭಂಡಾರಿ, ಎನ್.ಟಿ ಪೂಜಾರಿ, ಸಿಎ| ಶಂಕರ್ ಬಿ.ಶೆಟ್ಟಿ, ದಿವಾಕರ್ ಶೆಟ್ಟಿ ಮುದ್ರಾಡಿ, ಹರೀಶ್ ಜಿ.ಅವಿೂನ್, ಗೌರವ ಅತಿಥಿಗಳಾಗಿ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ ಘನ್ಸೋಲಿ, ಧರ್ಮದರ್ಶಿ ರಮೇಶ್ ಎಂ.ಪೂಜಾರಿ ನೆರೂಲ್, ಸಮಾಜ ಸೇವಕರೂ, ಉದ್ಯಮಿಗಳಾದ ಗಿಲ್ಬರ್ಟ್ ಡಿಸೋಜಾ, ಸುಧಾಕರ್ ಶೆಟ್ಟಿ, ದಿವಾಕರ್ ರೈ, ಸುಲೇಮನ್ ಎಂ.ಕುಳವೂರು, ಪಂ| ನವೀನ್‍ಚಂದ್ರ ಆರ್.ಸನಿಲ್, ರಮೇಶ್ ಎಂ.ಬಂಗೇರ, ಶಾರದಾ ಸೂರು ಕರ್ಕೇರ, ಪ್ರಮೋದ್ ಕರ್ಕೇರ ಅಡ್ವೆ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಆಗಮಿಸುವರು. ಕಾರ್ಯಕ್ರಮದಲ್ಲಿ ವಾದಕ ಕಲಾವಿದರಾದ ದಿನೇಶ್ ವಿ.ಕೋಟ್ಯಾನ್, ಹರೀಶ್ ಜೆ.ಪೂಜಾರಿ ಮತ್ತು ಮುದ್ದು ಕೆ.ಅಂಚನ್ ಇವರಿಗೆ ಪ್ರಶಸ್ತಿ ಪ್ರದಾನಿಸಲಾಗುವುದು. ಸಮಾಜ ಸೇವಕರಾದ ಚಂದ್ರಶೇಖರ್ ಎಸ್.ಪೂಜಾರಿ, ಬಪ್ಪನಾಡು ಕೂಸಪ್ಪ, ಮನೋಹರ್ ಶೆಟ್ಟಿ ನಂದಳಿಕೆ, ಭಾಸ್ಕರ್ ಸಸಿಹಿತ್ಲು, ಪ್ರಭಾಕರ್ ಬೆಳುವಾಯಿ, ನವೀನ್ ಪಡುಇನ್ನಾ, ಅಶೋಕ್ ಪೂಜಾರಿ ಬೋಳ ಇವರನ್ನು ಸನ್ಮಾನಿಸಲಾಗುವುದು.

ದಿನವಿಡೀ ಜರುಗುವ ಉತ್ಸವದ ಬೆಳಿಗ್ಗೆ 10.30 ಗಂಟೆಯಿಂದ ಅಸೋಸಿಯೇಶನ್‍ನ ಎಲ್ಲಾ ಸ್ಥಳೀಯ ಸಮಿತಿಗಳ ಯುವ ವಿಭಾಗದ ಸದಸ್ಯರಿಗಾಗಿ ಡೆನ್ನ ಡೆನ್ನಾಣ-2019 ಜಾನಪದ ನೃತ್ಯ ಸ್ಪರ್ಧೆ, ಅಪರಾಹ್ನ 2.00 ಗಂಟೆಯಿಂದ ಅಂಧೇರಿ ಸ್ಥಳೀಯ ಕಚೇರಿ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ಹಾಗೂ ಡಾ| ಚಂದ್ರಶೇಖರ್ ಕಂಬಾರ ಕಥೆ ರಚಿತ ನಾರಾಯಣ್ ಶೆಟ್ಟಿ ನಂದಳಿಕೆ ಸಂಭಾಷಣೆಯ ಮತ್ತು ಮನೋಹರ್ ಶೆಟ್ಟಿ ನಂದಳಿಕೆ ನಿರ್ದೇಶಿತ ಪ್ರಶಸ್ತಿ ವಿಜೇತ `ನಾಗ ಸಂಪಿಗೆ' ಕಿರು ನಾಟಕ ಪ್ರದರ್ಶಿಸುವರು.

ಆ ಪ್ರಯುಕ್ತ ಸಮಾಜ ಬಾಂಧವರು ಕ್ಲಪ್ತ ಸಮಯದಲ್ಲಿ ಹಾಜರಿದ್ದು ವಾರ್ಷಿಕೋತ್ಸವನ್ನು ಯಶಸ್ವಿ ಗೊಳಿಸಬೇಕೆಂದು ಅಸೋಸಿಯೇಶನ್‍ನ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್,  ಅಂಧೇರಿ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಬಾಬು ಕೆ.ಪೂಜಾರಿ, ಕಾರ್ಯಾಧ್ಯಕ್ಷ ರವೀಂದ್ರ ಎಸ್.ಕೋಟ್ಯಾನ್, ಉಪ ಕಾರ್ಯಾಧ್ಯಕ್ಷರುಗಳಾದ ಸುರೇಶ್ ಬಿ.ಸುವರ್ಣ ಮತ್ತು ಜಗನ್ನಾಥ ಕರ್ಕೇರ, ಗೌರವ ಕಾರ್ಯದರ್ಶಿ ಹರೀಶ್ ಶಾಂತಿ ಹೆಜಮಾಡಿ, ಗೌರವ ಕೋಶಾಧಿಕಾರಿ ಸುಧಾಕರ ಎಂ.ಜತ್ತನ್ ಈ ಮೂಲಕ ತಿಳಿಸಿದ್ದಾರೆ.