About Us       Contact

 

ಮಹಾನಗರದಲ್ಲಿನ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಸಂಸ್ಥೆಯು ಇದೇ ನ.25ನೇ ರವಿವಾರ ಸಂಜೆ 4.00 ಗಂಟೆಗೆ ಘಾಟ್ಕೋಪರ್ ಪಶ್ಚಿಮದಲ್ಲಿನ ದೀಪ್ತಿ ಸೊಲಿಟೇರ್ ಕಟ್ಟಡದಲ್ಲಿನ ಹವ್ಯಕರ ಸಭಾಗೃಹದಲ್ಲಿ ನಾಡಿನ ಹೆಸರಾಂತ ಕವಿವರ್ಯ ವಿ.ಜಿ ಭಟ್ ಸ್ಮಾರಣಾರ್ಥ ಕವಿಗೋಷ್ಠಿ ಮತ್ತು ಕವನ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಿದೆ.ಕನ್ನಡದ ಸಂವೇದನಾಶೀಲ ಕವಿ ಗೋಪಾಲ ತ್ರಾಸಿ ಅಧ್ಯಕ್ಷತೆಯಲ್ಲಿ ಜರಗಲಿರುವ ಕವಿಗೋಷ್ಠಿಯಲ್ಲಿ ಡಾ| ಕರುಣಾಕರ್ ಶೆಟ್ಟಿ ಪಣಿಯೂರು, ಸಾ.ದಯಾ, ಕೆ.ಗೋವಿಂದ ಭಟ್, ವಿಶ್ವನಾಥ ಶೆಟ್ಟಿ ಪೇತ್ರಿ, ಶಾಂತಾ ಶಾಸ್ತ್ರಿ, ಮಹೇಶ್ ಹೆಗ್ಡೆ ಪುಣೆ, ನ್ಯಾ| ಅಮಿತಾ ಭಾಗವತ್, ಡಾ| ಜಿ.ಪಿ ಕುಸುಮಾ, ಶೈಲಜಾ ಹೆಗ್ಡೆ, ಅನಿತಾ ಪಿ.ಪೂಜಾರಿ ತಾಕೋಡೆ, ಸುನಂದ ಭಟ್, ಡಾ| ದಾಕ್ಷಾಯನಿ ಯೆಡಹಳ್ಳಿ, ಶಾರದಾ ಅಂಬಸಂಗೆ ಪಾಲ್ಗೊಂಡು ತಮ ಕವಿತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

 

 

 

ಕವಿಗೋಷ್ಠಿ ಬಳಿಕ ಟ್ರಸ್ಟ್ ಆಯೋಜಿಸಿದ್ದ ಕವನ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಹವ್ಯಕ ವೆಲ್ಫೇರ್ ಟ್ರಸ್ಟ್‍ನ ಅಧ್ಯಕ್ಷ ಶಿವಕುಮಾರ್ ಪಿ.ಭಾಗ್ವತ್ ಅಧ್ಯಕ್ಷತೆಯಲ್ಲಿ ಜರುಗಲಿದೆ. ಮುಖ್ಯ ಅತಿಥಿüಯಾಗಿ ವಿ.ಎನ್ ಹೆಗಡೆ ಕಲ್ವಾ, ಅತಿಥಿüಗಳಾಗಿ ಕವನ ಸ್ಪರ್ಧೆಯ ತೀರ್ಪುಗಾರರಾಗಿ ಸಹಕಾರವಿತ್ತ ಲೇಖಕ,ಕವಿ ಶರದ್ ಸೌಕೂರು, ಲೇಖಕಿ ತುಳಸಿ ವೇಣುಗೋಪಾಲ್ ಉಪಸ್ಥಿತರಿರುವರು.

ಕವನ ಸ್ಪರ್ಧೆಯ ವಿಜೇತರು:
ಪ್ರಜ್ಞಾ ಮತ್ತಿಹಳ್ಳಿ, ಧಾರವಾಡ (ಪ್ರಥಮ), ಸ್ಮಿತಾ ಅಮೃತ್‍ರಾಜ್ ಸಂಪಾಜೆ (ದ್ವಿತೀಯ), ಧೀರೇಂದ್ರ ನಾಗರಹಳ್ಳಿ, ಬೆಂಗಳೂರು (ತೃತೀಯ), ಹೇಮಾ ಎಸ್.ಅಮೀನ್ ಮುಂಬಯಿ (ಸಮಾಧಾನಕರ) ಇವರಿಗೆ ಪ್ರಾಪ್ತಿಯಾಗಿದೆ ಎಂದು ಹವ್ಯಕ ವೆಲ್ಫೇರ್ ಟ್ರಸ್ಟ್‍ನ ಕಾರ್ಯದರ್ಶಿ ಎನ್.ಆರ್ ಆಕದಾಸ ತಿಳಿಸಿದ್ದಾರೆ.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal