About Us       Contact

 

ಸಂಸ್ಥೆಯ ನೃತ್ಯ ಗುರು ನಿರ್ದೇಶಕಿ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್‍ರವರ ನೇತೃತ್ವದಲ್ಲಿ ನೃತ್ಯ ರೂಪಕಗಳ ಪ್ರದರ್ಶನ, ನೃತ್ಯ ವೈವಿಧ್ಯಮಯ ಸಂಗೀತಮೇಳ, ಜುಗಲ್ ಬಂದಿ, ಸಂಗೀತ ನೃತ್ಯ ಇತ್ಯಾದಿಗಳ ಮೆಲೈಕೆಗಳೊಂದಿಗೆ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಅತಿಥಿüಯಾಗಿ ಮುಂಬಯಿ ಗಣ್ಯಾಧಿಗಣ್ಯರು, ತವರೂರಿನ ಗಣ್ಯರು, ಚಲನಚಿತ್ರ ಕ್ಷೇತ್ರದ ಮತ್ತು ರಾಜಕೀಯ ರಂಗದ ದಿಗ್ಗಜರು ಆಗಮಿಸಿ ಕಲಾವಿದರಿಗೆ ಗೌರವಾರ್ಪಣೆ, ಸಾಧಕರಿಗೆ ಸಮ್ಮಾನ, `ಸುವರ್ಣ ಭಾರತ ರತ್ನ ಪ್ರಶಸ್ತಿ' ಪ್ರದಾನಿಸಿ ಸಡಗರಕ್ಕೆ ಕಳೆ ನೀಡಲಿದ್ದಾರೆ.

ವಜ್ರಮಹೋತ್ಸವದ ಅಂಗವಾಗಿ ಒಂದೇ ವೇದಿಕೆಯಲ್ಲಿ ಒಂದೇ ಕಾಲಕ್ಕೆ ಸುಮಾರು 60 ಕಲಾವಿದರು ವಿವಿಧ ಭಾರತದ ಶಾಸ್ತ್ರೀಯ ನೃತ್ಯ, ಜುಗಲ್ ಬಂದಿ ನೃತ್ಯ ನಡೆಯಲಿದೆ. ಭರತನಾಟ್ಯಂ, ಮೋಹಿನಿಯಾಟ್ಟಂ, ಕಥಕ್, ಓಡಿಸ್ಸಿ, ಕೊಚುಪುಡಿ, ಮಣಿಪುರಿ, ಕಥ್‍ಕಳಿ ನೃತ್ಯ ಜುಗಲ್‍ಬಂದಿ ನಡೆಯಲಿದೆ.

 

 

 

 

ಜುಗಲ್ ಬಂದಿ: ಒಂದೇ ವೇದಿಕೆಯಲ್ಲಿ ಒಂದೇ ಸಮಯದಲ್ಲಿ 60 ಕಲಾವಿದರಿಂದ ತಾಳ- ವಾದ್ಯ, ಜುಗಲ್ ಬಂದಿ ನಡೆಯಲಿದೆ. ಸಂಗೀತ ವಾದನ ಮತ್ತು ಸ್ಟ್ರಿಂಗ್ ಸಲಕರಣೆ, ತಾಳವಾದ್ಯ, ಗಾಯ£, ಗಾಳಿ ವಾದ್ಯ ವಿವಿಧ ತರದ ಸಂಗೀತ ಸಾಧನಗಳಿಂದ ಜುಗಲ್ ಬಂದಿ ನಡೆಯಲಿದೆ.

ಸುವರ್ಣ ಭಾರತ ರತ್ನ ಪ್ರಶಸ್ತಿ: ಗುರುವಿನ ಸಂಸ್ಮರಣೆಯಲ್ಲಿ ಸದಾ ನಾಟ್ಯಗುರು ಸ್ವರ್ಗೀಯ ಮಹಾಬಲ ಎಂ. ಸುವರ್ಣ ಅವರ ಸ್ಮಾರಣಾರ್ಥ ಪ್ರಶಸ್ತಿ ಗುರುವಿನ ಸವಿ ನೆನಪಿನ ಸ್ಮರಣೆಯಲ್ಲಿ ಕೂಡುಮಾಡುವ ಈ ಪುರಸ್ಕಾರ ಭಾವ-ರಾಗ-ತಾಳ-ಭಾವ-ಅಭಿನಯಕ್ಕೆ ಕೊಡಮಾಡಲಾಗುತ್ತಿದ್ದು ಈ ಬಾರಿಯ ಪ್ರಶಸ್ತಿಗೆ ಬಾಲಿವುಡ್ ನಟಿ, ಹಿರಿಯ ಕಲಾವಿದೆ ಹೇಮಾ ಮಾಲಿನಿ, ರಾಗ-ಹಾಡುಗಾರಿಕೆ ಗಾಯನಕ್ಕೆ ಕೊಡಮಾಡುವ ಪ್ರಶಸ್ತಿಗೆ ಸುರೇಶ್ ವಾಡ್ಕರ್ ಮತ್ತು ತಾಳವಾದ್ಯಕ್ಕೆ ಕೊಡಮಾಡುವ ಪ್ರಶಸ್ತಿಗೆ ಶಿವಮಣಿ (ಡ್ರಮಾರ್) ಆಯ್ಕೆಯಾಗಿದ್ದಾರೆ. ಈ ಸುವರ್ಣ ಭಾರತ ರತ್ನ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಒಳಗೊಂಡಿದೆ.

ಅರುಣೋದಯ ಕಲಾನಿಕೇತನದ ಹುಟ್ಟು: ಸ್ಥಾಪಕ, ಕಲಾರಾಧಕ, ಭರತನಾಟ್ಯ ಮೇರು ಕಲಾವಿದ ದಿವಂಗತ ಮಹಾಬಲ ನಾರಾಯಣ ಸುವರ್ಣ (ಎಂ.ಎನ್ ಸುವರ್ಣ). ಅವರಿಂದ ಹುಟ್ಟು ಪಡೆದ ಅರುಣೋದಯ ಕಲಾ ನಿಕೇತನವು ಕಳೆದ ಆರು ದಶಕಗಳಿಂದ ಭರತನಾಟ್ಯ ಕಲಾರಾಧನೆಯಲ್ಲಿ ಸಲ್ಲಿಸಿದ, ಸಲ್ಲಿಸುತ್ತಿರುವ ಸೇವೆ ಅನುಪ. ಪ್ರಸ್ತುತ ಮಹಾನಗರದ ಮನೆ-ಮನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. 1958 ರಲ್ಲಿ ಅರುಣೋದಯ ಕಲಾನಿಕೇತನ, ಈ ಸಂಸ್ಥೆ ಸ್ಥಾಪಿಸಿ ಚೆಂಬೂರ್‍ನಲ್ಲಿ ಸುಸಜ್ಜಿತವಾದ ನೃತ್ಯವಿದ್ಯಾಲಯ ನಿರ್ಮಿಸಿದ್ದಾರೆ. ಕನ್ನಡಿಗರೊಬ್ಬರಿಂದ ಸ್ಥಾಪನೆಗೊಂಡ ಈ ಸಂಸ್ಥೆಯು ಕೇವಲ ತುಳು-ಕನ್ನಡಿಗರಲ್ಲದೆ ಅನ್ಯಭಾಷಿಕರಿಗೂ ಭರತನಾಟ್ಯ ಕಲಿಸುಸುವಲ್ಲಿ ಯಶ ಕಂಡಿದೆ.

ಎಂ.ಎನ್ ಸುವರ್ಣ ಅವರು ಉಡುಪಿ ಜಿಲ್ಲೆಯ ಹೆಜಮಾಡಿ ಪಡುವಲಿಮಾರಿ ಮೂಲದವರು. ತಮ್ಮ 4ರ ಹರೆಯದಲ್ಲಿ ಮುಂಬಯಿಗೆ ಆಗಮಿಸಿ ರಾತ್ರಿಶಾಲೆಯಲ್ಲಿ ಕಲಿತು ಬದುಕು ಕಟ್ಟಿಕೊಂಡವರು. ತಂಜಾವೂರು ಪುರಾಣದ ಮೂಲಕ ಪಳಗಿದ ಗುರು ಸುವರ್ಣ ಅವರ ಸಾವಿರಾರು ಶಿಷ್ಯಂದಿರು ಇಂದು ದೇಶ-ವಿದೇಶಗಳಲ್ಲಿ ಭರತನಾಟ್ಯವನ್ನು ಕಲಿಸುವ ಮೂಲಕ ಇತರರಿಗೆ ಧಾರೆಯೆರೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಭಾರತೀಯ ನೃತ್ಯ ಪರಂಪರೆಯನ್ನು ದೇಶ ವಿದೇಶಗಳಲ್ಲಿ ಪಸರಿಸಿದ ಖ್ಯಾತಿ ಕಲಾನಿಕೇತನಕ್ಕೂ ಸಲ್ಲುತ್ತದೆ.

ಅರುಣೋದಯ ಸಾಧಕಿ ನೃತ್ಯ ಗುರು ಡಾ| ಮೀನಾಕ್ಷಿ ರಾಜು ಶ್ರೀಯಾನ್
ಗುರು ಎಂ.ಎನ್ ಸುವರ್ಣ (ತಂದೆ) ಅವರಿಂದ ಬಳುವಳಿಯಾಗಿ ಪಡೆದ ಭರತನಾಟ್ಯವನ್ನು ಅವರು ಹಾಕಿಕೊಟ್ಟ ಆದರ್ಶದ ಪಥದಲ್ಲಿ ಮುನ್ನೆಡೆಸುತ್ತಿರುವ ಪುತ್ರಿ ನಾಟ್ಯಪ್ರವೀಣೆ ಗುರು ಡಾ| ಮೀನಾಕ್ಷಿ ರಾಜು ಶ್ರೀಯಾನ್ ಅವರದ್ದು. ಅವರತ ಸಾಧನೆ ತಂದೆಯಂತೆ ಎಳೆವಯಸ್ಸಿನಿಂದಲೇ ನೃತ್ಯದತ್ತ ಆಕರ್ಷಿತರಾದ ಮೀನಾಕ್ಷಿ ಅವರದ್ದು ಬಹುಮುಖ ಪ್ರತಿಭೆ. ಮೋಹಿನಿಯಟ್ಟಾ, ಕೊಚುಪುಡಿ, ಮಣಿಪುರಿ, ಕಥಕ್, ಭರತನಾಟ್ಯಂ, ಒಡಿಸ್ಸಿ ಮೊದಲಾದ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಕರಗತ ಮಾಡಿಕೊಂಡಿರುವುದಲ್ಲದೆ ಜಾನಪದ ನೃತ್ಯ ಪ್ರಕಾರದಲ್ಲೂ ವಿಶೇಷ ಪರಿಣಿತಿಯನ್ನು ಹೊಂದಿದ್ದಾರೆ.

ಅದರಂತೆ ನಾಟ್ಯ, ಕಲಾಪ್ರತಿಭೆಗೆ ಮನೆಯನ್ನೇ ಮೊದಲ ಪಾಠ ಶಾಲೆಯನ್ನಾಗಿರಿಸಿಕೊಂಡ ಆರಂಭದ ಶಿಕ್ಷಣವನ್ನು ತನ್ನ ತಂದೆಯಿಂದಲೇ ಕಲಿತುಕೊಂಡದ್ದಲ್ಲದೆ ಗುರು ವೇಣುಗೋಪಾಲ ಪಿಳ್ಳೆಯಿಂದ ಕಲಿತರು. `ನಾಟ್ಯ ವಿಶಾರದೆ' ಪದವಿ ಮತ್ತು ದಾದರ್ ಮಾಟುಂಗಾ ಸಾಂಸ್ಕೃತಿಕ ಕೇಂದ್ರದ ಮೂಲಕ ಕೊರಿಯೋಗ್ರಾಫ್ (ರಂಗರೇಖೆ) ಪ್ರಮಾಣಪತ್ರಕ್ಕೆ ಭಾಜನರಾಗಿದ್ದಾರೆ. ತಮ್ಮದೇ ಸ್ವಂತ ಕಲ್ಪನೆಯಲ್ಲಿ ಅಚ್ಚುಕಟ್ಟಾಗಿ ಆಕರ್ಷಣಿಯವಾಗಿ ಪ್ರಬುದ್ಧರೆಣಿಸಿ ನರ್ತಿಸಿ ಭಾರತ ರಾಷ್ಟ್ರದಾದ್ಯಂತ ಸಂಚರಿಸಿ ಕಲಾರಸಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ತನ್ನ ತಾಯಿಯಿಂದಲೇ ಪಿಟೀಲು, ಸಿತಾರ್, ವೀಣೆಯನ್ನು ನುಡಿಸುವ ಪ್ರಾಥಮಿಕ ಶಿಕ್ಷಣ ಪಡೆದು ಮುಂದೆ ವೀಣೆ ಇತ್ಯಾದಿಗಳಲ್ಲಿ ಗುರು ಶ್ರೀಮತಿ ಸರೋಜ ಹರಿಹರನ್ ಅವರಿಂದ ಹೆಚ್ಚಿನ ಶಿಕ್ಷಣವನ್ನು ಪಡೆದ ಮೀನಾಕ್ಷಿ, ಈ ಕ್ಷೇತ್ರದಲ್ಲೂ ಹಲವಾರು ಕಾರ್ಯಕ್ರಮಗಳನ್ನು ನೀಡಿ ಗಮನ ಸೆಳೆದಿದ್ದಾರೆ. ಉತ್ತಮ ಹಾಡುಗಾರ್ತಿ ಆಗಿರುವ ಈಕೆ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಕರಗತ ಮಾಡಿಕೊಂಡಿರುವುದಲ್ಲದೆ ಜಾನಪದ ನೃತ್ಯ ಪ್ರಕಾರದಲ್ಲೂ ವಿಶೇಷ ಪರಿಣತಿಯನ್ನು ಹೊಂದಿದ್ದಾರೆ.

ನಗರಗಳಲ್ಲಿ ವಿವಿಧ ಶಾಖೆಗಳ ಸ್ಥಾಪನೆ:
ಅರುಣೋದಯ ಕಲಾನಿಕೇತನ ಸಂಸ್ಥೆಯ ಗುರು ಎಂ.ಎನ್ ಸುವರ್ಣ ಮತ್ತು ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ಅವರು ವಿಶ್ವಮಟ್ಟದಲ್ಲಿ ಬೆಳೆಸುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಪರಿಪೂರ್ಣ ನೃತ್ಯ ಶಿಕ್ಷಕಿಯಾಗಿರುವ ಡಾ| ಮೀನಾಕ್ಷಿ ಚೆಂಬೂರ್‍ನಲ್ಲಿ ಮುಖ್ಯ ಶಾಖೆ ಹೊಂದಿದ್ದು ಉಪನಗರಗಳಾದ ಘಾಟ್‍ಕೋಪರ್, ಸಯಾನ್, ಚುನಾಭಟ್ಟಿ, ಕಲೀನಾ, ಸಾಂತಾಕ್ರೂಜ್, ಮೀರಾರೋಡ್ ಇನ್ನಿತರೆಡೆಗಳಲ್ಲೂ ಶಾಖೆಗಳನ್ನು ತೆರೆದು ಸಾವಿರಾರು ಮಕ್ಕಳಿಗೆ ಶಾಸ್ತ್ರೀಯ ಪ್ರಕಾರದ ನೃತ್ಯಗಳನ್ನು ಧಾರೆ ಎರೆಯುತ್ತಿದ್ದಾರೆ.

ದೇಶ ವಿದೇಶಗಳಲ್ಲಿ ನೃತ್ಯ ಪ್ರದರ್ಶನ: ಅರುಣೋದಯ ಕಲಾನಿಕೇತನ ಸಂಸ್ಥೆಯು ಪ್ರಸ್ತುತ ದೇಶ ವಿದೇಶಗಳಲ್ಲೂ ಪ್ರಸಿದ್ಧಿಯನ್ನು ಪ್ರಡೆದಿದೆ. ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯ ಪ್ರವೀಣೆ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ಅವರು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಸಿಂಗಾಪುರ, ಮಲೇಶಿಯಾ, ಜರ್ಮನಿ, ಥೈಲ್ಯಾಂಡ್, ಇಂಗ್ಲೆಂಡ್, ಎಡರ್ನ್‍ಬರ್ಗ್, ಲಂಡನ್, ಬೆಹರೇನ್, ಮಾರಿಷಸ್, ದುಬೈ, ಶ್ರೀಲಂಕಾ, ಅಮೆರಿಕಾ, ಕೆನಡಾ ಇತ್ಯಾದಿ ರಾಷ್ಟ್ರಗಳಲ್ಲಿ ನೃತ್ಯರೂಪಕಗಳನ್ನು ವೈವಿಧ್ಯಮಯ ನೃತ್ಯಗಳನ್ನು ಪ್ರದರ್ಶಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಭಾರತದ ರಾಷ್ಟ್ರೀಯ ರಾಯಭಾರಿ ಆಗಿ ಜರ್ಮನ್ ರಾಷ್ಟ್ರಕ್ಕೆ ತೆರಲಿದ ಪ್ರಥಮ ಕನ್ನಡತಿ-ನೃತ್ಯಗಾರ್ತಿ:
ಇಂಡಿಯನ್ ಕಲ್ಚರಲ್ ಕೌಂಸಿಲ್ ರಿಲೇಶನ್ (ಐಸಿಸಿಆರ್) ಸಹಯೋಗದಲ್ಲಿ ಭಾರತ ರಾಷ್ಟ್ರದ ರಾಯಭಾರಿ ಆಗಿ ಜರ್ಮನಿಗೆ ತೆರಳಿ ನಮ್ಮ ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿ ಅವರಿಗೆ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಉಣಬಡಿಸಿದ ಪ್ರಪ್ರಥಮ ಕನ್ನಡದ ನೃತ್ಯಗಾರ್ತಿ ಎಂಬ ಶ್ರೇಯಸ್ಸು ಮೀನಾಕ್ಷಿ ಇವರಿಗೆ ಸಲ್ಲುತ್ತಾ ಪ್ರಶಂಸೆಗೆ ಪಾತ್ರರಾಗಿದ್ದಾರೆ.

40 ಕ್ಕೂ ಅಧಿಕ ನೃತ್ಯರೂಪಕಗಳ ನಿರ್ದೇಶನ: ದಿ| ಗುರು ಎಂ.ಎನ್ ಸುವರ್ಣ ಹಾಗೂ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ಅವರು ಕಳೆದ 60 ವರ್ಷಗಳಿಂದ 40ಕ್ಕೂ ಅಧಿಕ ನೃತ್ಯ ರೂಪಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಸಂಸ್ಕೃತ, ಮಲಯಾಳಂ, ತಮಿಳು, ತೆಲುಗು, ಹಿಂದಿ, ಮರಾಠಿ, ಗುಜರಾತಿ ಭಾಷೆಗಳಲ್ಲಿ ನೃತ್ಯ ರೂಪಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಶಾಕುಂತಲಾ, ಭಕ್ತ ಮಾರ್ಕಂಡೇಯ, ಶ್ರಾವಣ ಕುಮಾರ, ಅಯ್ಯಪ್ಪವತಾರಂ, ವಿಷ್ಣು ಪುರಾಣ ದಶಾವತಾರ, ಕೃಷ್ಣಲೀಲೆ, ಭಸ್ಮಾಸುರ ಮೋಹಿನಿ, ಲವ-ಕುಶ, ಭಕ್ತ ದ್ರುವ, ನಾರಾಯಂ, ದೇವಿನಮಃ ಸಮಯ ಕಾಲಚಕರ, ಕಾಳಿದಾಸ, ಮೇಘದೂತ, ಶಿವತಾಂಡವ, ಲಿಂಗಭೈರವಿ, ಭಜ ಗೋವಿದಂ, ಅಷ್ಟಲಕ್ಷ್ಮೀ ನಮದುರ್ಗ, ಕಿನ್ನರಿಜೋಗಿ, ದ್ರೌಪದಿ, ಧೇಡ್-ರೊಟ್ಟಿ, ಜಯ ವಿಜಯ, ತಾಯಿಯೇ ಯಶೋಧಾ, ಕಾಳಿಂಗ ನರ್ತನ, ತ್ರಿಪುರ ಸಮರ, ಅಷ್ಟನಾಯಿಕಾ ಶ್ರೀಚಕ್ರ, ಶಕ್ತಿ ಮಾಯೇ ನವಸಂಧಿ ಇತ್ಯಾದಿ ನೃತ್ಯರೂಪಕಗಳು ಪ್ರಸಿದ್ಧಿಯನ್ನು ಪಡೆದಿದೆ.

ಸಿದ್ಧಿ-ಸಾಧನೆಗಳಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು:
ಭರತನಾಟ್ಯವನ್ನೇ ಜೀವಾಳವನ್ನಾಗಿಸಿಕೊಂಡು ಕಳೆದ ನಾಲ್ಕು ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ ಗುರು ದಿ| ಎಂ.ಎನ್ ಸುವರ್ಣ ಅವರಂತೆಯೇ ಗುರು ಡಾ| ಮೀನಾಕ್ಷಿ ರಾಜು ಶ್ರೀಯಾನ್ ಅವರ ಸಿದ್ಧಿ-ಸಾಧನೆಗಳಿಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜಕರಾಗಿದ್ದಾರೆ. ನಾಟ್ಯ ಸರಸ್ವತಿ, ನಾಟ್ಯ ಮಯೂರಿ, ಸಿಂಗಾಪುರದ ಗಲ್ಲಾಬಲ್ ಅವಾರ್ಡ್, ಕರ್ನಾಟಕದ ಸುವರ್ಣರತ್ನ, ಸ್ವಾಮಿ ವಿವೇಕಾನಂದ ನ್ಯಾಷನಲ್ ಆವಾರ್ಡ್, ಸಮಾಜರತ್ನ ಅವಾರ್ಡ್, ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ನ್ಯಾಷನಲ್ ಅವಾರ್ಡ್ , ಆರ್ಯ ಭಟ್ಟ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಅವಾರ್ಡ್, ಬೆಸ್ಟ್ ಡಾನ್ಸ್ ಕೊರಿಯೊಗ್ರಾಫರ್ ಅವಾರ್ಡ್, ಬಸವಜ್ಯೋತಿ ಅವಾರ್ಡ್, ಇನ್ನಿತರ ನೂರಾರು ಪ್ರಶಸ್ತಿ ಪುರಸ್ಕಾರ ವಿವಿಧ ಸಂಘಟನೆಗಳ ಸಮ್ಮಾನ ಗೌರವಗಳು ಗುರು ಡಾ| ಮೀನಾಕ್ಷಿ ಶ್ರೀಯಾನ್ ಅವರಿಗೆ ಲಭಿಸಿದೆ. ಸಂಸ್ಥೆಯ ವಜ್ರ ಮಹೋತ್ಸವಕ್ಕೆ ತುಳು-ಕನ್ನಡಿಗರು ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

 

ರೋನಿಡಾ, ಮುಂಬಯಿ

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal