ಸಾಗರೋತ್ತರ ತುಳುವರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ತುಳು ಒಕ್ಕೂಟ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುವ ಅಬುಧಾಬಿ ಎನ್.ಎಂ.ಸಿ ಸಮೂಹ ಸಂಸ್ಥೆಯ ಸ್ಥಾಪಕರು ಮತ್ತು ಕಾರ್ಯಾಧ್ಯಕ್ಷ ಪದ್ಮಶ್ರೀ ಡಾ| ಬಿ.ಆರ್ ಶೆಟ್ಟಿ ಅವರ ಘನಾಧ್ಯಕ್ಷತೆಯಲ್ಲಿ ಜರುಗುವ ವಿಶ್ವ ತುಳು ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪದ್ಮಭೂಷಣ ಪೂಜ್ಯ ಡಾ| ಡಿ.ವಿರೇಂದ್ರ ಹೆಗ್ಡೆ ಆಗಮಿಸಿ ಸಮ್ಮೇಳನ ಉದ್ಘಾಟಿಸುವರು. ಅತಿಥಿ ಅಭ್ಯಾಗತರುಗಳಾಗಿ ಮಂಗಳೂರು ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಧರ್ಮಧ್ಯಕ್ಷ ಬಿಷಪ್ ಅ| ವಂ| ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ, ಚರ್ಚ್ ಆಫ್ ಸೌತ್ಇಂಡಿಯಾ-ಸಿಎಸ್ಐ (ಮಂಗಳೂರು) ಪ್ರಾಂತ್ಯದ ಧರ್ಮಧ್ಯಕ್ಷ ವಂ| ಡಾ| ಜಾನ್ ಸ್ಟೆಫನ್ ಸದಾನಂದ್, ಹಿರಿಯ ಪತ್ರಕರ್ತ, ಮುಸ್ಲಿಂ ಧರ್ಮಶಾಸ್ತ್ರಜ್ಞ ಶ್ರೀ ಅಬ್ದುಸ್ಸಲಾಂ ಪುತ್ತಿಗೆ ಹಾಗೂ ಗೌರವ ಅತಿಥಿಗಳಾಗಿ ಕರ್ನಾಟಕ ರಾಜ್ಯದ ಸೇರಿದಂತೆ ಭಾರತ ರಾಷ್ಟ್ರದಾದ್ಯಂತದಿಂದ ಗಣ್ಯಾತಿ ಗಣ್ಯರು ಹಾಗೂ ಸಾಗರದಾಚೆಯ ಗಲ್ಫ್, ಅಮೇರಿಕಾ (ಯುಎಸ್ಎ), ಆಸ್ಟ್ರೇಲಿಯಾ, ಕೆನಡಾ (ಯು.ಕೆ) ತುಳು ಸಂಘಟನೆಗಳ ಮುಖ್ಯಸ್ಥರು ಆಗಮಿಸಲಿದ್ದಾರೆ.
ಹೊರನಾಡ ತುಳು ಸಂಘಟನೆಗಳಾದ ಮುಂಬಯಿ, ದೆಹಲಿ, ಬರೋಡಾ, ನಾಸಿಕ್, ಸಾಂಗ್ಲಿ, ಪುಣೆ, ಚೆನ್ನೈ, ಹುಬ್ಬಳ್ಳಿ, ಧಾರವಾಡ, ಬೆಳಗಾಂ, ಕಾಸರಗೋಡು ಅಲ್ಲಿನ ತುಳು ಸಂಸ್ಥೆಗಳ ಸಾವಿರಾರು ಪ್ರತಿನಿಧಿಗಳು ಅಂತೆಯೇ ಗಲ್ಫ್ ರಾಷ್ಟ್ರಗಳಾದ ಮಸ್ಕತ್, ಬಹರೈನ್, ಕತಾರ್, ಕುವೈತ್, ಸೌದಿ ಅರೇಬಿಯಾ, ಒಮಾನ್ ಇತ್ಯಾದಿ ರಾಷ್ಟ್ರಗಳಲ್ಲಿನ ತುಳು ಸಂಘಟನೆಗಳ ಧುರೀಣರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
ತುಳುನಾಡಿನಿಂದ ಹಲವಾರು ಸಾಹಿತಿಗಳು ವಿದ್ವಾಂಸರು ಕಲಾವಿದರು ಭಾಗವಹಿಸಿ ತಾಳ ಮದ್ದಳೆ, ಯಕ್ಷಗಾನ ನಾಟ್ಯ ವೈಭವ, ತುಳು ರಸ ಮಂಜರಿ, ತುಳು ಸಾಹಿತ್ಯ ಗೋಷ್ಠಿ ಮತ್ತು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿಸಲಿದ್ದಾರೆ. ವಿಶ್ವ ತುಳು ಸಮ್ಮೇಳನದ ಸವಿನೆನಪಿಗಾಗಿ `ವಿಶ್ವ ತುಳು ಐಸಿರಿ' ವಿಶೇಷ ಸ್ಮರಣ ಸಂಚಿಕೆ ಇದೇ ಶುಭಾವಸರದಲ್ಲಿ ಬಿಡುಗಡೆ ಗೊಳ್ಳಲಿದೆ.
ಬಿ.ಕೆ ಗಣೇಶ್ ರೈ, ಶೋಧನ್ ಪ್ರಸಾದ್, ಯೋಗೇಶ್ ಪ್ರಭು, ದೇವ್ ಕುಮಾರ್ ಕಾಂಬ್ಲಿ, ಸತೀಶ್ ಪೂಜಾರಿ, ಆಲ್ವಿನ್ ಪಿಂಟೊ, ಎಂ.ಇ ಮೂಳೂರ್, ಅಫ್ರೊಝ್ ಅಸ್ಸಾದಿ, ನೋವೆಲ್ ಡಿಅಲ್ಮೆಡಾ, ಅಜ್ಮಲ್, ಶ್ರೀಮತಿ ಸುವರ್ಣ ಸತೀಶ್, ಶ್ರೀಮತಿ ಲವಿನಾ ಫೆರ್ನಾಂಡಿಸ್, ಶ್ರೀಮತಿ ಜ್ಯೋತಿಕಾ ಹರ್ಷಾ ಶೆಟ್ಟಿ, ಶ್ರೀಮತಿ ಸ್ಮಿತಾ ಪ್ರಸನ್ನ, ಶ್ರೀಮತಿ ಶಸಿ ರವಿರಾಜ್ ಶೆಟ್ಟಿ ಇವರ ಸಲಹಾ ಸಮಿತಿಯೊಂದಿಗೆ ಸಮ್ಮೇಳನ ನಡೆಯುತ್ತಿದೆ.
ಆ ನಿಮಿತ್ತ ಆಸಕ್ತ ತುಳುವರು ತಮ್ಮ ಅಮೂಲ್ಯ ಸಮಯವನ್ನು ಬಿಡುವು ಮಾಡಿಕೊಂಡು ವಿಶ್ವ ತುಳು ಸಮ್ಮೇಳನಕ್ಕೆ ಆಗಮಿಸಿ ಸಮ್ಮೇಳನದಲ್ಲಿ ಭಾಗಿಯಾಗಲು ಸಮಸ್ಥ ವಿಶ್ವ ತುಳುವರ ಪರವಾಗಿ ಸರ್ವೋತ್ತಮ ಶೆಟ್ಟಿ ಸಮಗ್ರ ತುಳುವರನ್ನು ಹಾಗೂ ತುಳುವಭಿಮಾನಿಗಳನ್ನು ಈ ಮೂಲಕ ಆಹ್ವಾನಿಸಿದ್ದಾರೆ.
Comments powered by CComment