About Us       Contact

 

ಸಂಜೆ 4.00 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಸನ್ಮಾನ ಸಂಭ್ರಮ ನಡೆಸಲಾಗುತ್ತಿದ್ದು ಮುಖ್ಯ ಅತಿಥಿüಯಾಗಿ ಭವಾನಿ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋದರ ದೇರಣ್ಣ ಶೆಟ್ಟಿ (ಕೆ.ಡಿ ಶೆಟ್ಟಿ) ಮತ್ತು ಗೌರವ ಅತಿಥಿüಗಳಾಗಿ ಸೋಮಕ್ಷತ್ರೀಯ ಗಾಣಿಗ ಸಮಾಜ ಬಾರ್ಕೂರು ಅಧ್ಯಕ್ಷ ಕೆ.ಗೋಪಾಲ್, ಶ್ರೀ ವೇಣುಗೋಪಾಲ ಕೃಷ್ಣ ಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿ ನಿಯಮಿತ ಬೆಂಗಳೂರು ಇದರ ಕಾರ್ಯಾಧ್ಯಕ್ಷ ಎಂ.ಗೋಪಾಲಕೃಷ್ಣ, ಸೋಮಕ್ಷತ್ರೀಯ ಗಾಣಿಗ ಸಮಾಜ ಬೆಂಗಳೂರು ಅಧ್ಯಕ್ಷ ಹೆಚ್.ಟಿ ನರಸಿಂಹ, ಗಾಣಿಗ ಸೇವಾ ಸಮಾಜ ಕುಂದಾಪುರ ಇದರ ಅಧ್ಯಕ್ಷ ಕೊಗ್ಗ ಗಾಣಿಗ ಆಗಮಿಸಲಿದ್ದಾರೆ ಎಂದು ಸಂಸ್ಥೆಯ ವಿದ್ಯೋದಯ ಸಮಿತಿ ಕಾರ್ಯಾಧಕ್ಷ ವಿಜಯೇಂದ್ರ ಗಾಣಿಗ ತಿಳಿಸಿದ್ದಾರೆ.

 

 

 

 

 

 

ಸಮಾರಂಭದಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಉಪ ಶಿಕ್ಷಣಾಧಿಕಾರಿ ಮಮತಾ ಡಿ.ರಾವ್ ಮತ್ತು ಸಂಪರ್ಕ ಸುಧಾ ಮಾಸಿಕದ ಮಾಜಿ ಸಂಪಾದಕ ರಘುರಾಮ ಬೈಕಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಅಂತೆಯೇ ಗಾಣಿಗ ಸಮಾಜದ ವಿದ್ಯೋದಯ ಸಮಿತಿ ವತಿಯಿಂದ ವಾರ್ಷಿಕವಾಗಿ ಪ್ರದಾನಿಸಲಾಗುವ ಶೈಕ್ಷಣಿಕ ಪುರಸ್ಕಾರ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸÀಲಾಗುವುದು ಎಂದು ಮಹಿಳಾ ವಿಭಾಗಧ್ಯಕ್ಷೆ ತಾರಾ ಎನ್.ಭಟ್ಕಳ್ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ಗಣೇಶ್ ಆರ್.ಕುತ್ಪಾಡಿ ತಿಳಿಸಿದ್ದಾರೆ.

ದಿನಪೂರ್ತಿಯಾಗಿಸಿ ಆಚರಿಸಲ್ಪಡುವ ಸಂಭ್ರಮದಲ್ಲಿ ಗಾಣಿಗ ಬಾಂಧವರು ಮತ್ತು ಮಕ್ಕಳು ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಜಗನ್ನಾಥ ಎಂ.ಗಾಣಿಗ ಮತ್ತು ಕೋಶಾಧಿಕಾರಿ ಜಯಂತ್ ಪಿ.ಗಾಣಿಗ ತಿಳಿಸಿದ್ದಾರೆ.

ವಾರ್ಷಿಕೋತ್ಸವದಲ್ಲಿ ಗಾಣಿಗ ಸಮಾಜದ ಸರ್ವ ಬಂಧುಗಳು ಪರಿವಾರ ಸಹಿತ ಪಾಲ್ಗೊಂಡು ಯಶಸ್ಸಿಗೆ ಸಹಕರಿಸುವಂತೆ ಆಡಳಿತ ಮಂಡಳಿ ಪರವಾಗಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ ಈ ಮೂಲಕ ವಿನಂತಿಸಿದ್ದಾರೆ.

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal