Print

ಶಿರ್ವ ಫೆ.05, 2018: ಮೂಲತ: ಸೂಡದವರಾದ ನಾಗಭೂಷಣ್ ಬೋರ್ಕಾರ್‍ರವರು ಎಮ್‍ಎಸ್ಸಿ ಪದವೀಧರರಾಗಿದ್ದು, ಸುರತ್ಕಲ್ ಎನ್‍ಐಟಿಕೆ ಯಿಂದ ಕೆಮಿಸ್ಟ್ರಿ ವಿಭಾಗದಲ್ಲಿ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಡಾ. ನಾಗಭೂಷಣ್ ಬೋರ್ಕಾರ್

ಇವರು ಶಿರ್ವ ಕೋಡುಗುಡ್ಡೆ ಶ್ರೀನಿವಾಸ ಬೋರ್ಕಾರ್,ರಮಾದೇವಿ ದಂಪತಿಗಳ ಸುಪುತ್ರ. ಪ್ರಸ್ತುತ ಮಣಿಪಾಲ ಟೆಕ್ನಾಲಜಿಸ್(ಲಿ) ಉದಯವಾಣಿ ವಿಭಾಗದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಸಹಾಯಕ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.