About Us       Contact

(ಚಿತ್ರ / ಬರಹ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.13, 2018 : ಕರ್ನಾಟಕ ಈ ಹೆಸರೇ ಒಂದು ಚೈತನ್ಯದ ಜಲಪಾತ. ಇಲ್ಲಿನ ಸಾಹಸಿಗಳು ಸಾಧನೆಗಳಿಂದ ರಾರಾಜಿಸಿದವರು. ಅದೂ ಸಾಮರಸ್ಯದ ಬಾಳಿಗೆ ಮತ್ತು ಸಂಘಟನೆಗೆ ಹೆಸರುವಾಸಿಗಳು. ಧುರೀಣತನ ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅಪರೂಪದ ನಾಯಕರು ಅದೆಷ್ಟೂ ತೆರೆಮರೆಯಲ್ಲಿದ್ದಾರೆ. ನಾವು ಕರ್ಮಭೂಮಿಯ ನ್ನಾಗಿಸಿದ ಮುಂಬಯಿಯಲ್ಲಿ ಸಂಘಟನಾ ಚತುರನಾಗಿ ಸಮರ್ಥ ನಾಯಕತ್ವದ ಚುಕ್ಕಾಣಿ ಹಿಡಿದ ಧುರೀಣ ಎಂ.ಡಿ ಶೆಟ್ಟಿ ಬಗ್ಗೆ ಅಲ್ಪಸ್ವಲ್ಪವಾದರೂ ತಿಳಿದು ಕೊಳ್ಳುವುದು ಅಗತ್ಯವೂ, ಅನಿವಾರ್ಯವೂ ಪ್ರಸಕ್ತ ಪೀಳಿಗೆಗಿದೆ. ಆ ಪಯ್ಕಿ `ಬಂಟ ಕುಲಭೂಷಣ' ಮುಂಬಯಿ ತುಳುಕನ್ನಡಿಗರ ನೆಚ್ಚಿನ `ಯಜಮಾನ ಎಂ.ಡಿ ಶೆಟ್ಟಿ'. ಜೂ.14ರ ಇಂದು 90 ವಸಂತಗಳನ್ನು ಪೂರೈಸುತ್ತಿದ್ದಾರೆ.

ಹನುಮ ಶಕ್ತಿಯ ತವರುನಾಡು ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ (ಪ್ರಸಕ್ತ ಉಡುಪಿ) ಜಿಲ್ಲೆಯ ಕಾಪು ಸನಿಹದ ಮುಳೂರು ಇಲ್ಲಿನ ಪ್ರತಿಷ್ಠಿತ ಮನೆತನದ ಶೀನಾ ಶೆಟ್ಟಿ ಮತ್ತು ಶೇಷಿ ಶೆಟ್ಟಿ ದಂಪತಿ ಸುಪುತ್ರನಾಗಿ 1928ರ ಜೂ.14ರಂದು ಜನಿಸಿದವರೇ ಎಂ.ಡಿ ಪ್ರಸಿದ್ಧಿಯ ಮುಳೂರು ದೇಜು ಶೆಟ್ಟಿ. ತನ್ನ ಪ್ರಾಥಮಿಕ ಶಿಕ್ಷಣ ತಾಯ್ನಾಡಿನಲ್ಲೇ ಪೂರೈಸಿ ಹದಿನೈದರ ಯೌವನದಲ್ಲೇ ಕನಸಿನ ನಗರ ಮುಂಬಯಿಗೆ ವಲಸೆ ಬಂದಿದ್ದರು.

ಸ್ವರ್ಗ, ಮುಕ್ತಿ ಇವೆಲ್ಲಾ ಉತ್ತಮ ಕುಲದಲ್ಲಿ ಹುಟ್ಟಿದವರಿಗೆ ಮಾತ್ರ ಸೀಮಿತವಲ್ಲ. ಯಾರು ಮಾತು ಸದಾಚಾರ ಸದ್ವಿಚಾರಗಳಿಂದ ಸಾತ್ವಿಕ ಜೀವನವನ್ನು ನಡೆಸಬಹುದೋ ಅಂತಹವರು ಅತ್ಯಂತ ಸಾಮಾನ್ಯ ಕುಲದಲ್ಲಿ ಜನಿಸಿದ್ದರೂ ಸಹ ಮೇಲುಕೀಳು ಎನ್ನದೆ ಸ್ವರ್ಗ ಪಡೆಯ ಬಹುದು ಎನ್ನುವ ಮಾತಿದೆ. ಅದರಂತೆ ಕೊಟ್ಟ ಮಾತಿಗೆ ತಪ್ಪದೆ, ದುಷ್ಟರಿಗೆ ಸಹಾಯ ಮಾಡದೆ, ಸಜ್ಜನರಿಗೆ ತೊಂದರೆ ನೀಡದೆ, ಅವಶ್ಯಕವುಳ್ಳವರಿಗೆ ಸಹಯೋಗ ನೀಡಿ ನ್ಯಾಯಕ್ಕಾಗಿ ಎಂದೂ ಹೇಡಿತನದಿಂದ ಹಿಂದಿರುಗದೆ ಸರ್ವರನ್ನೂ ಕಾಯಾ ವಾಚಾ ಮನಸಾ ಗೌರವದಿಂದ ನೋಡಿಕೊಂಡು ತನ್ನಲ್ಲಿಗೆ ಬಂದವರಿಗೆ ಸದಾ ಸಲಹುವ ಎಂಡಿ ಸಾರ್ಥ ಬಾಳಿನ ಗುಟ್ಟನ್ನು ಹೇಳಿಕೊಟ್ಟವರು. ಆದುದರಿಂದಲೇ ತನ್ನ ಆಡಳಿತ ದಕ್ಷತೆಗೆ, ಪ್ರಜ್ಞಾವಂತಿಕೆಗೆ, ಪ್ರಜಾನುರಾಗಕ್ಕೆ ಪ್ರಸಿದ್ಧರು.

ಮಕ್ಕಳಿಂದ ವಯೋವೃದ್ಧರ ತನಕ ಎಲ್ಲರಿಗೂ ಅಕ್ಕರೆಯ `ಎಂಡಿ' ಆಗಿಯೇ ಪರಿಚಿತರು. ಹೊಟೇಲು ಉದ್ಯಮ ನಂಬಿ ಬದುಕಿರುವ ಕಾರ್ಮಿಕ ಬಂಧುಗಳಿಗೆ, ಮಾಲಿಕರಿಗೆ, ನಂಬಿಗಸ್ಥರಿಗೆ ಇವರು ಸಂಗಾತಿ. ಪ್ರಾಮಾಣಿಕÀರನ್ನು ಆದರದಿಂದ ಸ್ವಾಗತಿಸುವ ಸಹೃದಯಿ. ಪರಮತ ಸಹಿಷ್ಣುತೆಯನ್ನು ಸಹಜಧರ್ಮವಾಗಿಸಿ ಮನುಕುಲ ಧರ್ಮ (ಎಂಡಿ) ಆಗಿಯೇ ಬಾಳಿದ ಹಿರಿಯ ಚೇತನ. ಬಂಟತನದಲ್ಲಿ ಅತೀವ ಪ್ರೇಮ ಇರಿಸಿದ್ದರೂ ಜಾತಿಮತ ಬೇಧಗಳಿಂದ ದೂರವಿದ್ದು ಮಾನವೀಯತೆಯ ಅಮೂಲ್ಯ ಭಾಗವಾಗಿ ಬೆಳೆದವರು. ಆದುದರಿಂದಲೇ ತುಳುಕನ್ನಡಿಗ, ಮರಾಠಿಗರ ಸಾರ್ವಭೌಮರಾಗಿ ಪರಿಚಯಿತರು. ಇವರು ಗಂಭೀರ್ಯವುಳ್ಳವರಾಗಿದ್ದರೂ ಅಷ್ಟೇ ಸರಳ ಸಜ್ಜನಿಕೆ ಇವರ ವೈಶಿಷ್ಟ್ಯತೆ ಆಗಿದೆ. ಧರ್ಮನಿಷ್ಠರೂ, ಶಿಸ್ತಿನ ಶಿಪಾಯಿಯೂ ಆಗಿರುವ ಎಂಡಿ ಬದುಕು ಶೈಲಿಯನ್ನು ಭಿನ್ನವಾಗಿ ರೂಢಿಸಿ ಕೊಂಡವರು. ಯುವಕರು, ಯುವೋದ್ಯಮಿಗಳಿಗೆ ಅಪಾರ ಪೆÇ್ರೀತ್ಸಾಹ ನೀಡಿ ವಿಶೇಷವಾಗಿ ಹೊಟೇಲು ಉದ್ಯಮಕ್ಕೆ ಅಪೂರ್ವ ರೀತಿಯ ಬೆಂಬಲ ನೀಡಿದ್ದಾರೆ. ಆ ಮೂಲಕವು ತುಳುಕನ್ನಡ-ಮರಾಠಿಗರ ಸಮನ್ವಯಕ, ಪ್ರಭಾವಿ ನಾಯಕ ಇವರಾಗಿದ್ದಾರೆ. ಕರ್ಮಭೂಮಿ ಮಹಾರಾಷ್ಟ್ರದಲ್ಲಿ ಒಟ್ಟಾರೆ ತುಳು-ಕನ್ನಡ ಮರಾಠಿಗರ ಬಾಂಧವ್ಯ ಬೆಸೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಾಡಿನ ಹಲವಾರು ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ರಾಜಕಾರಣಿಗಳಂತಹ ದಿಗ್ಗಜರ ದೋಸ್ತಿಯೊಂದಿಗೆ ಬೆಳೆದ ಎಂಡಿ ಇವೆಲ್ಲರ ಪಾಲಿನ ಸ್ನೇಹ, ಬಂಧುತ್ವದ ಎಂಡಿಯಾಗಿಯೇ ಬೆಳೆದರು. ಅಂತೆಯೇ ಮುನ್ನಡೆಯುತ್ತಾ 1973ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಉಪಸ್ಥಿತಿಯಲ್ಲಿ ಇಂದಿರಾ ಬ್ರಿಗೇಡ್ ಇದರ ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿ ನಿಯುಕ್ತಿಗೊಂಡರು. 1977ರಲ್ಲಿ ವಿಶ್ವದ ಹೆಸರಾಂತ ಬಂಟ ಸಮಾಜದ ಸಂಸ್ಥೆಯಾದ ಬಂಟ್ಸ್ ಸಂಘ ಮುಂಬಯಿ ಇದರ ಅಧ್ಯಕ್ಷರಾಗಿ ಚುನಾಯಿತರಾಗಿ ಸಂಸ್ಥೆಯನ್ನು ಪ್ರತಿಷ್ಠಿತ ಮಟ್ಟಕ್ಕೆ ಬೆಳಿಸಿದ್ದು ಇಂದಿಗೂ ಬಂಟ ಸಮಾಜದ ಹಿರಿಯ ಮುತ್ಸದ್ಧಿ ಆಗಿಯೇ ಉಳಿದಿರುವರು.

ವರ್ಲಿಯಲ್ಲಿನ ನಿತ್ಯಾನಂದ ರಾತ್ರಿ ಹೈಸ್ಕೂಲು ಇದನ್ನು ಬಂಟ್ಸ್ ಸಂಘಕ್ಕೆ ಸೇರ್ಪಡೆ, ಬಂಟರ ಭವನದಲ್ಲಿ ಸ್ವಾಮಿ ಮುಕ್ತಾನಂದ ಸಭಾಗೃಹ ಮತ್ತು ಮಹಿಳಾ ವಿಭಾಗದ ರಚನೆ, ಬಂಟರ ಸಂಘದ ಮುಖವಾಣಿ ಬಂಟರವಾಣಿ ಪ್ರಕಾಶನ, 2006ರಲ್ಲಿ ಸ್ಥಾಪಿತ ಬಂಟ್ಸ್ ಉನ್ನತ ಶಿಕ್ಷಣ ಯೋಜನೆ, ಅಣ್ಣಲೀಲಾ ಕಲಾ ಮತ್ತು ಅರ್ಥ ಮಹಾವಿದ್ಯಾಲಯ, ಶೋಭಾ ಜಯರಾಮ ಶೆಟ್ಟಿ ಬಿಎಂಎಸ್ ಕಾಲೇಜು, ತನ್ನ ಕಾರ್ಯಾಧ್ಯಕ್ಷತೆಯಲ್ಲಿ 1978ರಲ್ಲಿ ಸ್ವರ್ಣ ಮಹೋತ್ಸವ ಮತ್ತು 2004ರಲ್ಲಿ ವಜ್ರಮಹೋತ್ಸವ ಸಂಭ್ರಮ ಇತ್ಯಾದಿಗಳು ಇಂದಿಗೂ ಜೀವಾಳವಾಗಿವೆ. ಬಂಟರ ಸಂಘದಲ್ಲಿ ಸಂಸ್ಕೃತಿಯ ತುಂಬಾ ತನ್ನ ಪ್ರಭಾವ ಪ್ರವಾಹವನ್ನು ಹರಿಸಿ ಹೊಸದೊಂದು ಸುವರ್ಣಯುಗ ನಿರ್ಮಿಸುವಲ್ಲಿ ಯಶಸ್ವಿಕಂಡ ಧುರೀಣರಿನರಿವರು. ಬಂಟರ ಸಂಘದ ಸಾಮಾಜಿಕ ಕ್ಷಿತಿಜದಲ್ಲಿ ಒಂದು ಪ್ರಮುಖ ಸ್ಥಾನ ಕಲ್ಪಿಸಿಕೊಟ್ಟಿರುವರು.

ಮಹಾನಗರದಲ್ಲಿ ಎಂಡಿ ಎನ್ನುವುದೇ ಗರ್ವದ ಪರಾಕಾಷ್ಠೆಯ ಸಂಕೇತ. ತಮ್ಮಘನತೆಯ ಸ್ವಭಾವದಿಂದಲೇ ತಮ್ಮ ಸ್ವಂತಿಕೆಯ ಪ್ರತಿಷ್ಠೆಯನ್ನು ಸೃಷ್ಟಿಸಿ ಕೊಂಡವರು. ಯಾವುದೇ ರೀತಿಯ ಮಾತುಕತೆ, ಚರ್ಚೆಗೆ ತಮ್ಮ ಪೂರ್ವ ಶರತ್ತುಗಳಿ ಅನುಸಾರವಾಗಿ ನಡೆದುಕೊಳ್ಳುವವರು. ಸಮಸ್ಯೆಗಳನ್ನು ಮಟ್ಟ ಹಾಕುವಲ್ಲಿ ಎತ್ತಿದ ಕೈ ಎಂದೆಣಿಸಿ ತನ್ನಲ್ಲಿ ವಿಶ್ವಾಸವಿರಿಸಿದ ಎಲ್ಲರನ್ನೂ ಬಂಧುಗಳನ್ನಾಗಿಯೇ ಕಂಡÀು ತಾವೋರ್ವ ಪ್ರತಿಭಾನ್ವಿತ, ಚತುರತೆಯ ಸಂಗಮರೆಂದೇ ಪರಿಚಿತರು. ಸರ್ವರಲ್ಲೂ ಅತ್ಮೀಯರಾಗಿ, ಸೇವೆಯಲ್ಲಿ ಎಲ್ಲರನ್ನೂ ಉಬ್ಬೇರಿಸುವಂತೆ ಮಾಡಿದ ನಿಷ್ಠಾವಂತ ಧುರೀಣರು. ತಮ್ಮ ಜೀವನದ ಒಂಭತ್ತು ದಶಕಗಳ ಬಹುರಂಗಿತ ಬದುಕಿನಲ್ಲಿ ತಾವು ಕಂಡ ಏರುಪೇರುಗಳು ಅದೇಷ್ಟೇ ಆಗಿದ್ದರೂ ನೀರಸಗೊಳ್ಳದ ಜೀವನೋತ್ಸವ ತಮ್ಮವರಿಗೆ ಆಸಕ್ತಿ ಮತ್ತು ಕುತೂಹಲಕಾರಿ ವಿಷಯ. ಬಾಳ ಸಂಗಾತಿ ರತಿ ಶೆಟ್ಟಿ ಮತ್ತು ಏಕೈಕ ಸುಪುತ್ರ ರಮೇಶ್ ಶೆಟ್ಟಿ ತಮ್ಮೆಲ್ಲರ ಬದುಕಿಗೆ ವಿದಾಯ ಕೋರಿದ ದಿನದಿಂದಲೂ ಬಾಳಿನ ನಾಳೆಗಳನ್ನು ತನ್ನ ಮೊಮ್ಮಕ್ಕಳು ಮತ್ತು ಸೊಸೆಯೊಂದಿಗೆ ಮೌನವಾಗಿಯೇ ಮುನ್ನಡೆಸಿ ತನ್ನ ಬದುಕಿನ ಆಯುಷ್ಯವನ್ನು ತೊಂಬತ್ತರತ್ತ ಬೆಳೆಸಿದ ದೀರ್ಘಾಯುಷ್ಯಿ

ಇಂಡಿಯನ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ಸಂಸ್ಥೆಯ ಎರಡು ಕಾಲಾವಧಿ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದರಲ್ಲದೆ ಹೊಟೇಲು ಉದ್ಯಮಿಗಳ ಒಕ್ಕೂಟವನ್ನು ಕೇವಲ ಮುಂಬಯಿಯಲ್ಲೇ ಕಾರ್ಯಗತಗೊಳಿಸದೆ ಇಡೀ ಮಹಾರಾಷ್ಟ್ರ ರಾಜ್ಯದಲ್ಲೇ ವ್ಯಾಪಿಸುವ ನೀಟ್ಟಿನಲ್ಲಿ ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರ ಇದರ ಸಂಸ್ಥಾಪಕ ಅಧ್ಯಕ್ಷರಾಗಿ, ಬಂಟ್ಸ್ ನ್ಯಾಯ ಮಂಡಳಿ ಅಧ್ಯಕ್ಷರಾಗಿ ದುಡಿದ ಧುರೀಣ. ಫೆಡರೇಶನ್‍ನ ಅಜೀವ ಗೌರವಾಧ್ಯಕ್ಷರಾಗಿ ಸೇವಾ ನಿರತ ಎಂ.ಡಿ ಅವರನ್ನು ತಿಳಿದು ಕೊಳ್ಳುವ ಭಾಗ್ಯ ಪಡೆದ ಅಭಿಮಾನಿಗಳಿಗೆ ಅವರು ನೀಡಿ, ನೀಡುತ್ತಿರುವ ನಿಸ್ವಾರ್ಥ ಸೇವಾಸಕ್ತಿ, ಅವರೊಂದಿಗಿನ ಆತ್ಮೀಯತೆಯನ್ನು ಇಮ್ಮಡಿ ಗೊಳಿಸಿದೆ.

ದಕ್ಷ ನಡೆಯ ಸಾಧನೆಯನ್ನೇ ಜೀವನವಾಗಿಸಿ, ಪ್ರಾಮಾಣಿಕತೆಯನ್ನೇ ಮೇಲ್ಫಂಕ್ತಿಯಾಗಿರಿಸಿ, ಸಂಘಟನಾಶೀಲ ವ್ಯಕ್ತಿತ್ವವನ್ನು ಮೈಗೂಡಿಸಿ, ಸೇವೆಯನ್ನೇ ಪ್ರವೃತ್ತಿಯಾಗಿರಿಸಿ ಪ್ರಾಮಾಣಿಕ ಸೇವೆಯೊಂದಿಗೆ ಲಕ್ಷಾಂತರ ಜನತೆಯ ಹೃನ್ಮನಗಳಲ್ಲಿ ನೆಲೆಯಾಗಿರುವ ಸರ್ವಶ್ರೇಷ್ಠ ಧುರೀಣ. ಶ್ರೇಷ್ಠ ವ್ಯಕ್ತಿತ್ವ ಮತ್ತು ಘನತೆಗೆ ಎಂಡಿ ಅವರನ್ನು ಸರಿಗಟ್ಟುವ ಸಮಕಾಲೀನ ವ್ಯಕ್ತಿಗಳು ಮುಂಬಯಿಯಲ್ಲಿ ಪ್ರಾಯಃ ಬೇರಾರೂ ಇರಲಾರರು. ಸಾಮರಸ್ಯ ಸ್ನೇಹಮಯಿ ಜೀವನದ ಸೇತುವೆಯಾಗಿ ಸರ್ವರೊಂದಿಗೆ ನಿರಂತರ ಬಾಳಿದ ಎಂಡಿ ಶತಾಯುಷ್ಯದತ್ತ ಕಾಲನ್ನಿರಿಸಿ ತಮ್ಮ ಬದುಕಿನ ಇನ್ನೊಂದು ಜನಾಂಗ ಪರ ಪಲ್ಲಟಕ್ಕೆ ಮೆರಗು ನೀಡುವಂತಿದೆ. ಎಂಡಿ ಅವರ ಕೀರ್ತಿ, ಘನತೆ, ಗೌರವ ಎಲ್ಲೆಡೆ ಪಸರಿದ್ದು, ಭವಿಷ್ಯತ್ತಿನ್ನುದ್ದಕ್ಕೂ ಇನ್ನೂ ಜಗಜ್ಜಾಹೀರಾಗಲಿ. ಇಂದು 90ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರ ಅಪಾರ ಸಂಖ್ಯೆಯ ಹಿತೈಷಿಗಳು ಅವರಿಗೆÀ ಅಭಿನಂದಿಸಿದ್ದು, ಸರ್ವಸಮರ್ಥ ದೇವರು ಅವರಿಗೆ ನೆಮ್ಮದಿ ಮತ್ತು ಆಯುರಾರೋಗ್ಯ ಭಾಗ್ಯ ಕರುಣಿಸಿ ಶತಾಯುಷ್ಯ ಕರುಣಿಸಲಿ ಎನ್ನುವುದೇ ನಮ್ಮೆಲ್ಲರ ಆಶಯ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal