About Us       Contact

ಬಂಟ್ವಾಳ ಫೆ.07, 2018: ಸದಾ ಬಂದೋಬಸ್ತ್ ಬಿಝಿಯ ಮಧ್ಯೆಯು ಬಂಟ್ವಾಳ ನಗರ ಠಾಣೆಯ ಮಹಿಳಾ ಕಾನ್ಸ್ ಟೇಬಲ್ ವೊರ್ವರು ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಇಲಾಖೆಗೆ ಕೀರ್ತಿ ತಂದಿದ್ದಾರೆ. ಬಂಟ್ವಾಳ ನಗರ ಠಾಣೆಯ ಮಹಿಲಕಾ ಕಾನ್ಸ್ ಟೇಬಲ್, ಪುತ್ತೂರು ರಾಮಮೂಲೆ ನಿವಾಸಿ ವೆಂಕಟೇಶ್, ರಾಜೀವಿ ದಂಪತಿಯವರ ಪುತ್ರಿ ವನಿತ ಆರ್. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದವರಾಗಿದ್ದಾರೆ.

 

ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ನಡೆದ ಕ್ರೀಡಾಕೂಟದ ಅತ್ಲೆಟಿಕ್ ವಿಭಾಗದಲ್ಲಿ 100,200,400 ಮೀ.ಓಟದಲ್ಲಿ ಪ್ರಥಮ ಸ್ಥಾನ ಪಡೆದರೆ, ಉದ್ದ ಜಿಗಿತ, 4*100 ರಿಲೇಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಉತ್ರರಾಖಂಡಾದ ಡೆಹರಾಡೂನ್ ನಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟ ನಡೆದಿದೆ.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal