About Us       Contact

ಮುಂಬಯಿ, ಡಿ.31, 2017: ಜೂಯಿಸ್ ಫಿಟ್ನೆಸ್ ಕ್ಲಬ್ ಕೊಡಿಯಾಲ್‍ಬೈಲಿನ ತರಬೇತುದಾರ ಧನರಾಜ್ ಕೆ. ಅವರನ್ನು ನಗರದ ದೀಪಾ ಕಂಪರ್ಟ್‍ನಲ್ಲಿ ಜರಗಿದ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಇವರು 2017ರ ಸಾಲಿನಲ್ಲಿ ದೇಹದಾಡ್ರ್ಯ ಸ್ಪರ್ಧೆಯಲ್ಲಿ ಐದು ಪ್ರಶಸ್ತಿಗಳನ್ನು ಪಡೆದಿರುವರು. ಜೂಯಿಸ್ ಫಿಟ್ನೆಸ್ ಕ್ಲಬ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಸ್ಪೋಟ್ರ್ಸ್ ಪ್ರಮೋಟರ್ಸ್ ಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಮಾಜೀ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರು ಧನರಾಜ್ ಅವರನ್ನು ಶಾಲುಹೊದಿಸಿ ಸನ್ಮಾನಿಸಿದರು.

 

 

ಪ್ರತಿಭಾನ್ವಿತ ಯುವಕರು ಇಂದು ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈಯುತ್ತಿದ್ದಾರೆ. ಇಂತಹ ಕ್ರೀಡಾಳುಗಳಿಗೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದು ಎ.ಸದಾನಂದ ಶೆಟ್ಟಿ ತಿಳಿಸಿದರು. ದೇಹದಾಡ್ರ್ಯ ಸ್ಪರ್ಧೆಯಲ್ಲಿ 2017ರ ಸಾಲಿನಲ್ಲಿ ಐದು ಪ್ರಶಸ್ತಿಗಳನ್ನು ಗಳಿಸಿರುವ ಧನರಾಜ್ ಮುಂದಿನ ದಿನಗಳಲ್ಲಿ ರಾಷ್ಟ್ರ, ಅಂತರಾಷ್ಟೀಯ ಪಂದ್ಯಗಳನ್ನು ಆಡಿ ಪ್ರಶಸ್ತಿ ಗೆಲ್ಲುವಂತಾಗಲಿ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಹಾರೈಸಿದರು.

ದ.ಕ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಸಾಗರ್ ರಿಯಲ್ಟಿ ಪ್ರಮೋಷನ್ಸ್ ಸಂಸ್ಥೆಯ ಮುಖ್ಯಸ್ಥ ಗಿರಿಧರ ಶೆಟ್ಟಿ, ಉದ್ಯಮಿ ಆನಂದ ಪ್ರಭು, ಶ್ರೀನಿವಾಸ್ ಶೆಟ್ಟಿ ಮತ್ತು ಕಾರ್ಯಕ್ರಮ ಆಯೋಜಕ ಕಿರಣ್ ಬಿ.ಎನ್ ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಧನರಾಜ್ ಅವರಿಗೆ ತರಬೇತಿ ನೀಡಿದ ಶಮಂತ್ ಶೆಟ್ಟಿ ಕೆಂಜಾರು ಅವರನ್ನು ಕೂಡಾ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಧನರಾಜ್ ಕೆ.ಅವರು ತನ್ನ ತರಬೇತುದಾರ ಶಮಂತ್ ಶೆಟ್ಟಿ ಅವರಿಗೆ ವಾಚ್ ಕಾಣಿಕೆಯಾಗಿ ನೀಡಿದರು. ಸುಹಾನ್ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮ ಸಂಘಟಿಸಿದ ಕಿರಣ್ ಬಿ.ಎನ್. ಪ್ರಶಸ್ತಿ ವಿಜೇತ ಧಜರಾಜ್ ಅವರಿಗೆ ಚಿನ್ನದ ಸರ ಹಾಗೂ ತರಬೇತುದಾರ ಶಮಂತ್ ಶೆಟ್ಟಿ ಅವರಿಗೆ ಚಿನ್ನದ ಉಂಗುರ ತೊಡಿಸಿ ಗೌರವಿಸಿದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal