Print

ಮುಂಬಯಿ, ಡಿ.18: ಕರುನಾಡ ಸಿರಿ ಸಂಸ್ಥೆಯು ಇದೇ `ಕರುನಾಡ ಸಿರಿ ವಾರ್ಷಿಕ ಸಮ್ಮೇಳ'ವನ್ನು ಇದೇ ಬರುವ ಭಾನುವಾರ (ಡಿ.24) ಬೆಳಿಗ್ಗೆ 9.30 ಗಂಟೆಯಿಂದ ಮಧ್ಯಾಹ್ನದ ವರೆಗೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್‍ನ ಕಿರು ಸಭಾಗೃಹÀದಲ್ಲಿ ಆಯೋಜಿಸಲಾಗಿದೆ.  

ಮುಂಬಯಿ ಮಹಾನಗರದಲ್ಲಿ ಅನೇಕ ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಓರ್ವ ಆದರ್ಶ ಶಿಕ್ಷಕನಾಗಿ ಇತ್ತೀಚೆಗೆ ದಕ್ಷಿಣ ಅಮೇರಿಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‍ಗೆ ಭಾಜನರಾದ ಎನ್‍ಕೆಇಎಸ್ ಪ್ರೌಢಶಾಲೆಯ ಅಧ್ಯಾಪಕ ಡಾ| ಅಮರೀಶ್ ಚಂದ್ರಪ್ಪ ಪಾಟೀಲ ಅವರ ಪುಸ್ತಕ ಬಿಡುಗಡೆ ನಡೆಸಲಾಗುವುದು. ಹಾಗೂ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.

 


ಅಂತೆಯೇ ಸಮ್ಮೇಳನದಲ್ಲಿ ಅರ್ಹ, ಪ್ರತಿಭಾನ್ವಿತ ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವು ದು. ಸಮ್ಮೇಳನದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಎಂದು ಕರುನಾಡ ಸಿರಿ ಸಂಸ್ಥೆ ತಿಳಿಸಿದೆ.


ಮುಂಬಯಿ ಉಪನಗರದ ಚೆಂಬೂರು ಆರ್‍ಸಿಎಫ್ ಸನಿಹದ ಆಶೀಶ್ ಟಾಕೀಸ್‍ನ ಹತ್ತಿರದ ಸೇಥ್‍ಹೈಟ್ಸ್‍ನ ಮುಂಭಾಗದ ಜವಾಹರ್ ಮೈದಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಿದೆ. ಸಂಜೆ

ಆ ಪ್ರಯುಕ್ತ ಸಾಯಂಕಾಲ 4.00 ಗಂಟೆಗೆÀ ಅರಿಶಿಣ ಕುಂಕುಮ ಕಾರ್ಯಕ್ರಮದೊಂದಿಗೆ ಆರಂಭಗೊಳ್ಳಲಿದ್ದು, ಬಳಿಕ ಕಾಮಿಡಿ ಖಿಲಾಡಿ ಶಿವರಾಜ್ ಕೆ.ಆರ್ ಪೇಟೆ ಮತ್ತು ನಯನಾ ಬಳಗವು ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮ ನಡೆಸುವರು. ಸಂಜೆ 6.00 ಗಂಟೆಗೆ ಕನಕ ಜಯಂತ್ಯೋತ್ಸವ ಉದ್ಘಾಟನೆ, ಕನಕದಾಸರ ಭಾವಚಿತ್ರ ಅನಾವರಣ, ಸಭಾ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಕಾಮನಕೇರಿ ಅರಳಿಚಂಡಿ ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಮಠದ ಶ್ರೀ ಪರಮಾನಂದ ಮಹಾರಾಜ ಅವರ ದಿವ್ಯೋಪಸ್ಥಿತಿ ಮತ್ತು ಶನೀಶ್ವರ ದೇವಸ್ಥಾನ ಚೆಂಬೂರು ಇದರ ಧರ್ಮಾಧಿಕಾರಿ ಕೆ.ಎಂ ರಾಮಸ್ವಾಮಿ ಅವರ ಉಪಸ್ಥಿತಿಯಲ್ಲಿ ಕರ್ನಾಟಕ ಸರಕಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮಾರಂಭ ಉದ್ಘಾಟಿಸಲಿದ್ದಾ ರೆ. ಕುರುಬರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಮಂಜೇ ಚಿಕ್ಕೇಗೌಡ ಅವರ ಘನಾಧ್ಯಕ್ಷತೆಯಲ್ಲಿ ಜರುಗುವ ಭವ್ಯ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಸಾರಿಗೆ ಸಚಿವ ಹೆಚ್.ಎಂ ರೇವಣ್ಣ ಅವರು ಕನಕದಾಸರ ಭಾವಚಿತ್ರ ಅನಾವರಣ  ನಡೆಸುವರು.

ಸಮಾರಂಭದಲ್ಲಿ ಗೌರವ ಅತಿಥಿüಗಳಾಗಿ ಮುಂಬಾದೇವಿ ವಿಧಾನಸಭಾ ಕ್ಷೇತ್ರದ ಶಾಸಕ ಅಮೀನ್ ಪಟೇಲ್, ನಾಗಮಂಗಲ ಶಾಸಕ ಚೆಲುವರಾಯ ಸ್ವಾಮಿ,  ಕೆ.ಆರ್ ಪೇಟೆ ಶಾಸಕ ಡಾ| ಕೆ. ಸಿ ನಾರಾಯಣ ಆರ್.ಗೌಡ, ಚಾಮರಾಜ ಪೇಟೆ ಶಾಸಕ ಜಮೀರ್ ಅಹ್ಮದ್, ಶ್ರವಣಬೆಳಗೊಳ ಶಾಸಕ ಸಿ.ಎನ್ ಬಾಲಕೃಷ್ಣ, ಕೆ.ಆರ್ ಪೇಟೆ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್, ಕೆಪಿಸಿಸಿ ಸದಸ್ಯ ಶಿವಣ್ಣ, ಕುರುಬರ ಸಂಘ ಮಂಡ್ಯ ಇದರ ಕಾರ್ಯದರ್ಶಿ ಎಲ್.ದೇವರಾಜ, ಚನ್ನರಾಯಪಟ್ಟಣ ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಆರ್ ರಮೇಶ, ಒಕ್ಕಲಿಗರ ಸಂಘ ಬೆಂಗಳೂರು ಇದರ ಮಾಜಿ ಕಾರ್ಯದರ್ಶಿ ರಾಮಚಂದ್ರ ಗೌಡ, ಜಯಲಕ್ಷ್ಮೀ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ ರಂಗಪ್ಪ ಸಿ.ಗೌಡ, ಸಂಜೀವಿನಿ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ ಪುಟ್ಟ್ಟಸ್ವಾಮಿ ಗೌಡ, ಒಕ್ಕಲಿಗರ ಸಂಘ ಮಹಾರಾಷ್ಟ್ರದ ಅಧ್ಯಕ್ಷ ಜಿತೇಂದ್ರ ಗೌಡ, ಗೌಡರ ಉನ್ನತೀಕರಣ ಸಂಸ್ಥೆ ಮುಂಬಯಿ ಅಧ್ಯಕ್ಷ ಮೋಹನಕುಮಾರ್ ಗೌಡ, ಕೆಂಪೇಗೌಡ ಅಸೋಸಿಯೇಶ್ ಮುಂಬಯಿ ಅಧ್ಯಕ್ಷ ವಿಕಾಸಕುಮಾರ್ ಗೌಡ, ಅಖಿಲ ಗೋವಾ ಕನ್ನಡ ಸಂಘ ಅಧ್ಯಕ್ಷ ಸಿದ್ದಣ್ಣ ಎಸ್.ಮೇಟಿ, ಕರ್ನಾಟಕ ಬಸವನ ಬಾಗೇವಾಡಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಸಂಗಮೇಶ ಪಿ.ಓಲೇಕಾರ ಮತ್ತಿತರ ಗಣ್ಯರು ಆಗಮಿಸುವರು.

ಕುರುಬರ ಸಂಘ ಮಹಾರಾಷ್ಟ್ರ ವ್ಯವಸ್ಥಾಪಕ ಮಂಡಳಿ ಉಪಾಧ್ಯಕ್ಷ ಯೋಗೀಶ್ ಸಣ್ಣಪ್ಪ ಗೌಡ, ಕಾರ್ಯದರ್ಶಿ ರವಿಕುಮಾರ್ ಕಾಳೇಗೌಡ, ಕೋಶಾಧಿಕಾರಿ ಉಚ್ಚೇಗೌಡ ನಂಜಪ್ಪ ಗೌಡ, ಜೊತೆ ಕಾರ್ಯದರ್ಶಿ ಶಿವೇ ಪುಟ್ಟೇ ಗೌಡ, ಜೊತೆ ಕೋಶಾಧಿಕಾರಿ ಗಂಗಾಧರ ಕಾಳೇ ಗೌಡ, ಸಲಹೆಗಾರ ರವಿ ರಾಜು ಗೌಡ, ಸದಸ್ಯರುಗಳಾದ ರಾಜು ನಂಜಪ್ಪ ಗೌಡ, ಉಮೇಶ್ ಕಾಳೇ ಗೌಡ, ದೇವರಾಜ ಬೀರೇ ಗೌಡÀ, ಉಮೇಶ್ ರಾಜೇ ಗೌಡ, ಮಂಜು ಚಿಕ್ಕೇ ಗೌಡ, ಮಂಜೇಗೌಡ ಕುಳ್ಳೆ ಗೌಡ ಸೇವಾ ನಿರತರಾಗಿರುವರು. ಕುರುಬರ ಸಂಘವು ಆಯೋಜಿಸಿರುವ ಭವ್ಯ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದಾದ್ಯಂತ ನೆಲೆಯಾಗಿರುವ ಸಮುದಾಯ ಬಂಧುಗಳು ಸಕಾಲದಲ್ಲಿ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಉತ್ಸವದ ಯಶಸ್ಸಿಗೆ ಸಹಕರಿಸುವಂತೆ ಉಪಾಧ್ಯಕ್ಷ ಯೋಗೀಶ್ ಎಸ್.ಗೌಡ ಮತ್ತು ಕಾರ್ಯದರ್ಶಿ ರವಿಕುಮಾರ್ ಕಾಳೇಗೌಡ ಹಾಗೂ ಆಡಳಿತ ಸಮಿತಿಯು  ಈ ಮೂಲಕ ವಿನಂತಿಸಿ ಕೊಂಡಿದೆ.