ಮುಂಬಯ್, ಮೇ.30: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ವಿದ್ಯಾಕ್ಷೇತ್ರದಲ್ಲಿತನ್ನದೇ ಆದ ಛಾಪು ಮೂಡಿಸಿದೆ. ಪ್ರಾಥಮಿಕ ಶಿಕ್ಷಣದಿಂದ ಆರಂಭಿಸಿ, ವೃತ್ತಿಶಿಕ್ಷಣ ವರೆಗೆ ಹಲವಾರು ಕ್ಷೇತ್ರಗಳಲ್ಲಿ ವಿದ್ಯಾಭ್ಯಾಸಕ್ಕೆ ಕರಾವಳಿಯ ಕೊಡುಗೆ ಅನನ್ಯ. ಇಂತಹ ಉತ್ತಮ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ನಿಲ್ಲುವ ಒಂದು ಸಂಸ್ಥೆ ಉಡುಪಿಯ ಸಮೀಪದ ಬಂಟಕಲ್ಲಿನಲ್ಲಿರುವಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ. ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರಿಂದ 2010ರಲ್ಲಿ ಪ್ರಾರಂಭಿಸಲ್ಪಟ್ಟ ಈ ಸಂಸ್ಥೆಯು ಅತ್ಯಲ್ಪ ಕಾಲದಲ್ಲೇ ಉತ್ತಮ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಮನ್ನಣೆಗಳಿಸಿರುವುದು, ಸಂಸ್ಥೆಯ ಸ್ಥಾಪಕರ ಹಾಗೂ ಸಿಬ್ಬಂದಿ ವರ್ಗದವರ ಕಾರ್ಯತತ್ಪರತೆಗೆ ಹಿಡಿದ ಕನ್ನಡಿಯಾಗಿದೆ.

ಕಾಲೇಜ್‍ಗೆ ಹೋಗಬೇಕಾದ ವಯಸ್ಸಿನಲ್ಲಿ ಧಾರ್ಮಿಕ ಜವಾಬ್ದಾರಿ ವಹಿಸಿಕೊಂಡ ವಿಶ್ವವಲ್ಲಭತೀರ್ಥರು, ತನ್ನ ಊರಿನಲ್ಲಿ, ಅರ್ಹ ವಿದ್ಯಾಥಿರ್üಗಳಿಗೆ, ಕೈಗೆಟಕುವ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ಒದಗಿಸುವ ಉದಾತ್ತವಾದ ಉದ್ಧೇಶದೊಂದಿಗೆ ಸ್ಥಾಪಿಸಿದ ಈ ಸಂಸ್ಥೆಯು ತನ್ನ ಮೂಲೋದ್ದೇಶಗಳನ್ನು ಈಡೇರಿಸುವಲ್ಲಿ ಸಾರ್ಥಕವಾಗಿ ಮುನ್ನಡೆಯುತ್ತಿದೆ. ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಉಡುಪಿಗೆ ಅನತಿ ದೂರದಲ್ಲಿರುವ, ಪ್ರಶಾಂತ ಸುಂದರ ಸಹಜ ಪ್ರಾಕೃತಿಕ ಸೊಬಗಿನ ವಾತಾವರಣದ ವಿಶ್ವೋತ್ತಮ ನಗರದಲ್ಲಿ ಈ ಜ್ಞಾನದೇಗುಲವು ಮೈದಳೆದಿದೆ. ಈ ಸಂಸ್ಥೆಯು ಉತ್ತಮ ವಿದ್ಯಾರ್ಹತೆಯುಳ್ಳ ಅಧ್ಯಾಪಕ ವೃಂದ, ನುರಿತ ಬೋಧಕೇತರ ಸಿಬ್ಬಂದಿ ಮತ್ತು ತಾಂತ್ರಿಕ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಅತ್ಯುತ್ಕೃಷ್ಟ ಮೂಲಸೌಕರ್ಯಗಳನ್ನು ಹೊಂದಿದ್ದು `ಪೂರ್ಣಕಾಳಜಿಯೊಂದಿಗೆ ಜೀವನ ಮತ್ತು ಜೀವನದ ನಡೆಯ ನಿರ್ಮಾಣ'ಎಂಬ ತನ್ನ ಘೋಷವಾಕ್ಯವನ್ನು ನೈಜವಾಗಿರಿಸುವತ್ತ ಸಮರ್ಥವಾಗಿ ಮುನ್ನಡೆಯುತ್ತಿದೆ. ಸಿವಿಲ್ ಇಂಜಿನಿಯರಿಂಗ್ (60), ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ (120), ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ (120) ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ (120) ವಿಭಾಗಗಳಲ್ಲಿ 60 ವಿದ್ಯಾಥಿರ್üಗಳ ಪ್ರವೇಶಕ್ಕೆ ಅನುಮತಿಯೊಂದಿಗೆ ಪ್ರಾರಂಭವಾದ ಈ ಸಂಸ್ಥೆಯಲ್ಲಿ ಪ್ರಸ್ತುತ ವಾರ್ಷಿಕವಾಗಿ 420 ವಿದ್ಯಾಥಿರ್üಗಳ ಪ್ರವೇಶಕ್ಕೆ ಅನುಮತಿಯು ಲಭಿಸಿದೆ. ಪ್ರಸ್ತುತ 1400 ಮಿಕ್ಕಿ ಸ್ಥಳೀಯ ಮತ್ತು ಹೊರ ರಾಜ್ಯಗಳ ವಿದ್ಯಾರ್ಥಿಗಳು ಕಾಲೇಜಿನಲ್ಲಿ ತಮ್ಮ ತಾಂತ್ರಿಕ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ.

ಬಂಟಕಲ್ ಅಂತಹ ಗ್ರಾಮೀಣ ಸೊಗಡಿನ ಪ್ರದೇಶದಲ್ಲಿದ್ದರೂ ಸಹ, ತನ್ನ ವಿದ್ಯಾರ್ಥಿಗಳಿಗೆ ಅಗತ್ಯವಾದ ತಾಂತ್ರಿಕ ಪ್ರಾವೀಣ್ಯ ಮತ್ತು ನೂತನ ಔದ್ಯಮಿಕ ಪ್ರವೃತ್ತಿಗಳನ್ನು ಬೆಳೆಸುವಲ್ಲಿ ಗಮನ ಹರಿಸುತ್ತಿರುವ ಈ ಸಂಸ್ಥೆಯು, ಹೊಸದೆಹಲಿಯಲ್ಲಿರುವ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‍ನ ಅನುಮೋದನೆ, ಹಾಗೂ ಕರ್ನಾಟಕ ಸರಕಾರದ ಮಾನ್ಯತೆಯನ್ನು ಪಡೆದುಕೊಂಡಿದ್ದು, ಬೆಳಗಾವಿಯಲ್ಲಿರುವ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧೀನಕ್ಕೊಳಪಟ್ಟಿದೆ.

ನಗರ ಪ್ರದೇಶಗಳಿಂದ ದೂರದಲ್ಲಿದ್ದರೂ, ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಒದಗಿಸುವ ಕಾಲೇಜಿನ ಉದಾತ್ತ ದೃಷ್ಟಿಕೋನವನ್ನು ಮೆಚ್ಚಿಕೊಂಡು ಖ್ಯಾತ ವಿಜ್ಞಾನಿಯೂ, ಶಿಕ್ಷಣ ತಜ್ಞರೂ ಆದ ಭಾರತ ರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಮ್, ಪದ್ಮಭೂಷಣ ಡಾ| ಬಿ.ಎನ್ ಸುರೇಶ್, (ಇಸ್ರೋ ವಿಜ್ಞಾನಿ), ಪದ್ಮಶ್ರೀ ಎ. ಎಸ್ ಕಿರಣ್‍ಕುಮಾರ್ (ಇಸ್ರೋ ನಿವೃತ ಅಧ್ಯಕ್ಷರು), ಡಾ| ರಾಮಾ ಜೋಯಿಸ್, ಪದ್ಮ ವಿಭೂಷಣ ಎಂ.ಎನ್ ವೆಂಕಟಾಚಲಯ್ಯ (ಮಾಜಿ ಮುಖ್ಯ ನ್ಯಾಯಮೂರ್ತಿಗಳು, ಸರ್ವೋಚ್ಚ ನ್ಯಾಯಾಲಯ) ಮುಂತಾದ ಖ್ಯಾತರಾದ ವಿಜ್ಞಾನಿಗಳು, ಶಿಕ್ಷಣ ತಜ್ಞರು, ತಂತ್ರಜ್ಞರು ಈ ಸಂಸ್ಥೆಗೆ ಭೇಟಿ ಕೊಟ್ಟು ವಿದ್ಯಾಥಿರ್üಗಳಿಗೆ ಪ್ರೇರಣೆ ಮತ್ತು ಮಾರ್ಗದರ್ಶನವನ್ನು ನೀಡಿದ್ದಾರೆ. 

ಎಸ್‍ಎಂವಿಐಟಿಎಂ ಇದರ ಉದಾತ್ತವಾದ ದೃಷ್ಠಿಕೋನ, ಮೌಲ್ಯವರ್ಧಿತ ತಾಂತ್ರಿಕ ಶಿಕ್ಷಣ ನೀಡುವ ಗುರಿಯನ್ನು ಸಾಕಾರಗೊಳಿಸುವ ಪ್ರಯತ್ನಗಳ ಫಲವಾಗಿ, ಕೆ.ಇ.ಎ ನಡೆಸುವ ಪ್ರವೇಶ ಪ್ರಕ್ರಿಯೆಗಳಲ್ಲಿ, 90% ಅಧಿಕ ಪ್ರವೇಶಾತಿಯನ್ನು, ಸಂಸ್ಥೆಯು ದಾಖಲಿರಿಸುವುದು ಗಮನಾರ್ಹ ಸಾಧನೆ. ಎಂಟು ವರ್ಷಗಳ ಅಲ್ಪಾವಧಿಯಲ್ಲಿ, ಇಲ್ಲಿನ ವಿದ್ಯಾಥಿರ್üಗಳ ಸರ್ವತೋಮುಖ ಸಾಧನೆ, ಅಧ್ಯಾಪಕ ವೃಂದದವರ ಪರಿಶ್ರಮ ಮತ್ತು ಅದನ್ನು ಗುರುತಿಸಿರುವ ನೂತನ ವಿದ್ಯಾಥಿರ್üಗಳು ನಮ್ಮ ಕಾಲೇಜನ್ನು ಅಯ್ಕೆ ಮಾಡಿ ಕೊಂಡಿರುವುದು ಈ ರೀತಿಯ ಪ್ರವೇಶವನ್ನು ದಾಖಲಿಸಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಇಲ್ಲಿ ಅಧ್ಯಯನ ಮಾಡುತ್ತಿರುವ ವಿದಾಥಿರ್üಗಳಲ್ಲಿ ಔದ್ಯೋಗಿಕ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಬೋಧನಾ ವಿಧಾನ ಮತ್ತು ಸಂಶೋಧನೆಯಲ್ಲಿ ಶ್ರೇಷ್ಠತೆಯನ್ನು ನಿರಂತರವಾಗಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿಷ್ಠಿತ ತಾಂತ್ರಿಕ ಉದ್ಯಮ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಒಡಂಬಡಿಕೆಗಳನ್ನು ಮಾಡಿಕೊಳ್ಳುವ ಮೂಲಕ, ನಿರಂತರ ಬದಲಾವಣೆ ಕಾಣುತ್ತಿರುವ ವರ್ತಮಾನದ ಜ್ಞಾನ ಪ್ರಪಂಚದಲ್ಲಿ ತನ್ನ ಅಸ್ತಿತ್ವವನ್ನು ಸುದೃಢವಾಗಿ ಸ್ಥಾಪಿಸಲು ಮುನ್ನಡೆಯುತ್ತಿದೆ. ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿ, ಅಂತರಾಷ್ಟ್ರೀಯ ಮಟ್ಟದ ತಾಂತ್ರಿಕ ಶಿಕ್ಷಣ ತಜ್ಞರನ್ನು ಒಳಗೊಂಡ ಒಂದು ಬಾಹ್ಯ ತಾಂತ್ರಿಕ ಸಲಹಾ ಮಂಡಳಿಯು ಕಾಲಕಾಲಕ್ಕೆ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಪೂರಕವಾದ ಸಲಹೆಗಳನ್ನು ನೀಡುತ್ತಾ ಸಂಸ್ಥೆಯಲ್ಲಿ ಉನ್ನತವಾದ, ಅಂತರಾಷ್ಟ್ರೀಯ ಗುಣಮಟ್ಟದ ತಾಂತ್ರಿಕ ಶಿಕ್ಷಣವು ಲಭ್ಯವಾಗುವಂತೆ ಪ್ರಯತ್ನವನ್ನು ಮಾಡುತ್ತಿದೆ.

ವಿದ್ಯಾಥಿರ್üಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುವಂತೆ, ಹಲವಾರು ಪಠ್ಯೇತರ ಚಟುವಟಿಕೆಗಳಿಗೆ ನಿರಂತರ ಪೆÇ್ರೀತ್ಸಾಹವನ್ನು ನೀಡುತ್ತಿದ್ದು, ಉತ್ತಮ ಮಾರ್ಗದರ್ಶನದ ಫಲವಾಗಿ, ನಮ್ಮ ವಿದ್ಯಾಥಿರ್üಗಳು ಹಲವಾರು ಅಂತರ-ಕಾಲೇಜು ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾಗಿ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ. ಕ್ರೀಡಾ ವಿಭಾಗದಲ್ಲೂ ಸಹ ನಮ್ಮ ವಿದ್ಯಾಥಿರ್üಗಳು ವಿಶ್ವವಿದ್ಯಾಲಯ ಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾಗಿ, ವಿಶ್ವವಿದ್ಯಾಲಯ ಕ್ರೀಡಾತಂಡದ ಸದಸ್ಯರಾಗಿ, ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲೂ ಸಹ ಭಾಗವಹಿಸಿರುತ್ತಾರೆ.

ವಿದ್ಯಾಥಿರ್üಗಳ ಜ್ಞಾನತೃಷೆಯನ್ನು ತಣಿಸಲು, ಉತ್ತಮ ಸುಸಜ್ಜಿತ ಲೈಬ್ರೆರಿಯು ಸಂಸ್ಥೆಯಲ್ಲಿದ್ದು, ತಾಂತ್ರ್ರಿಕ ಶಿಕ್ಷಣಕ್ಕೆ ಪೂರಕವಾದ ಎಲ್ಲಾ ಪುಸ್ತಕಗಳೂ ಸಹ ವಿದ್ಯಾಥಿರ್üಗಳಿಗೆ ಇಲ್ಲಿ ಲಭ್ಯವಿದೆ. ಅಲ್ಲದೆ, ಇಂದಿನ ತಾಂತ್ರಿಕ ಯುಗದಲ್ಲಿ ಆನ್‍ಲೈನ್ ಅಧ್ಯಯನಕ್ಕೆ ಅನುಕೂಲವಾಗುವಂತೆ, ಲೈಬ್ರರಿಯಲ್ಲಿ ಹಲವಾರು ವೈಜ್ಞಾನಿಕ ನಿಯತಕಾಲಿಕೆಗಳು ವಿದ್ಯಾಥಿರ್üಗಳ ಅಧ್ಯಯನಕ್ಕೆ ಮತ್ತು ಅವಲೋಕನಕ್ಕೆ ಲಭ್ಯವಿದ್ದು ವಿದ್ಯಾಥಿರ್üಗಳು ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.

ಅನ್ಯ ಪ್ರದೇಶದ ವಿದ್ಯಾಥಿರ್üಗಳ ಅನುಕೂಲಕ್ಕಾಗಿ, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾದ ಮತ್ತು ಸುಸಜ್ಜಿತವಾದ ವಸತಿನಿಲಯಗಳನ್ನು ಸಂಸ್ಥೆಯ ಆವರಣದಲ್ಲೇ ನಿರ್ಮಿಸಲಾಗಿದೆ. ಸ್ಥಳೀಯ ವಿದ್ಯಾಥಿರ್üಗಳ ಅನುಕೂಲಕ್ಕಾಗಿ ಕಾಲೇಜ್ ಬಸ್ ಸೌಲಭ್ಯವನ್ನೂ ಸಹ ರಿಯಾಯತಿ ದರದಲ್ಲಿ ವಿದ್ಯಾಥಿರ್üಗಳಿಗೆ ಒದಗಿಸಲಾಗಿದೆ.
ಎಸ್‍ಎಂವಿಐಟಿಎಂ ಇದರÀ ಇನ್ನೊಂದು ಹೆಗ್ಗಳಿಕೆ ವಿದ್ಯಾಥಿರ್üಗಳಿಗೆ ನೀಡುವ ವಿದ್ಯಾಥಿರ್üವೇತನ ಸೌಲಭ್ಯ. ನಮ್ಮಲ್ಲಿ ಬರುವ ಹೆಚ್ಚಿನ ವಿದ್ಯಾಥಿರ್üಗಳು ಆಥಿರ್üಕವಾಗಿ ಹಿಂದುಳಿದಿರುವ ಕುಟುಂಬದವರಾಗಿರುವುದರಿಂದ ಅವರ ವಿದ್ಯಾಭ್ಯಾಸಕ್ಕೆ ಆಥಿರ್üಕ ಅಡಚಣೆ ಆಗದಿರಲಿ ಎಂಬ ಉದ್ಧೇಶದೊಂದಿಗೆ, ಹಲವಾರು ದಾನಿಗಳು, ಸಂಘ ಸಂಸ್ಥೆಗಳು, ಹಾಗೂ ಸರಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿದ್ಯಾಥಿರ್ü ವೇತನವನ್ನು ಅರ್ಹ ವಿದ್ಯಾಥಿರ್üಗಳಿಗೆ ಒದಗಿಸುವ ಪರಿಪಾಠ ನಿರಂತರವಾಗಿ ನಡೆದು ಬಂದಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯಲ್ಲಿ ಕಲಿಯುತ್ತಿರುವ 850ಕ್ಕೂ ಹೆಚ್ಚು ವಿದ್ಯಾಥಿರ್üಗಳಿಗೆ ಸುಮಾರು ರೂಪಾಯಿ 2 ಕೋಟಿಗೂ ಅಧಿಕ ಮೊತ್ತದ ಹಣವನ್ನು ವಿದ್ಯಾಥಿರ್ü ವೇತನದ ರೂಪದಲ್ಲಿ ನೀಡಲಾಗಿದೆ.

ಸಕಲ ಆಧುನಿಕ ಸೌಲಭ್ಯಗಳಿಂದ ಕೂಡಿದ ತರಬೇತಿ ಮತ್ತು ನೇಮಕಾತಿ ವಿಭಾಗವು ಕಾಲೇಜಿನಲ್ಲಿ ಕ್ರಿಯಾಶೀಲವಾಗಿದ್ದು, ವಿದ್ಯಾರ್ಥಿಗಳಿಗೆ ನಿರಂತರವಾಗಿ ಉದ್ಯೋಗ ನೇಮಕಾತಿ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ನುರಿತ ಅಧ್ಯಾಪಕರುಗಳ ಮೂಲಕ ತರಬೇತಿಯನ್ನು ನೀಡುತ್ತಿದೆ. ಈ ತರಬೇತಿಯನ್ನು ಸರಿಯಾಗಿ ಬಳಸಿಕೊಂಡ ವಿದ್ಯಾರ್ಥಿಗಳು ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಗಳಲ್ಲಿ ಆಯ್ಕೆಯಾಗಿ ಹೆಚ್‍ಪಿ, ಟಿಸಿಎಸ್, ಇನ್ಫೊಸಿಸ್, ಐಬಿಎಮ್, ಎಂಫೆಸಿಸ್,ರೊಬೊಸಾಫ್ಟ್, ಕೋಗ್ನಿeóÉಂಟ್, ಹೆಚ್‍ಸಿಎಲ್, ವಿಪೆÇ್ರೀ, ಸೆಲ್‍ಸ್ಟ್ರೀಮ್, ಸಿವಿಸಿ, ಯುನಿಸಿಸ್, ದಿಯ ಸಿಸ್ಟಮ್ಸ್,ನೈಲ್‍ಸ್ಟ್ರೀಮ್, ವೀ ಟೆಕ್ನೋಲೊಜೀ ಸ್, ಎಥ್ನಸ್, ಭಾರತೀಯ ನೌಕಾಪಡೆ, ಶ್ರೀ ದತ್ ಟೆಕ್ನೋಲಜೀಸ್, ಮಣಿಪಾಲ್ ಡಿಜಿಟಲ್ ಸಿಸ್ಟಮ್ಸ್, ಮಣಿಪಾಲ್ ಟೆಕ್ನೋ¯ಜೀಸ್ ಲಿಮಿಟೆಡ್, ಸಮುಂದ್ರ, ಟೆಲಿನೆಟಿಕ್ಸ್, ಸರಯು, ಮಣಿಪಾಲ್ ಡಾಟ್ ನೆಟ್, ಎಕ್ಸಿಯೋನೆಟ್, ಗುಡ್‍ತ್ರೂ ಸಾಫ್ಟ್‍ವೇರ್, ನೊವಿಗೋ ಸೊಲ್ಯುಶನ್ಸ್, ವೆಸ್ಟ್‍ಲೈನ್ ಕನ್ಸ್ಟ್ರಕ್ಷನ್ಸ್ ಕ್ರೂಸ್ಲೈನ್ ಶಿಪ್ ಮ್ಯಾನೇಜ್‍ಮೆಂಟ್ ಸರ್ವಿಸಸ್, ಅಡನಿ ಪವರ್ ಗ್ರೂಪ್, ಲ್ಯಾನಿ ್ಸಕನ್ಸ್ಟ್ರಕ್ಷನ್ಸ್, ಯುಎಸ್‍ಟಿ ಗ್ಲೋಬಲ್, ಸಿಜಿಟಲ್ ಇಂಡಿಯ, ಪೆÇೀಲಿಕ್ಯಾಬ್ ವೈರ್ಸ್ ಮುಂತಾದ ಖ್ಯಾತ ಕಂಪೆನಿಗಳಲ್ಲಿ ಉದ್ಯೋಗವನ್ನು ಪಡೆದು ಕೊಂಡಿರುತ್ತಾರೆ. ಜಾಗತಿಕ ಆಥಿರ್üಕ ಹಿಂಜರಿತದ ಪರಿಣಾಮದಿಂದ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಭವವಾಗಿರುವ ಅನಿಶ್ಚಿತತೆಯ ಹೊರತಾಗಿಯೂ ಕಳೆದ ಶೈಕ್ಷಣಿಕ ವರ್ಷದಲ್ಲಿ ನಮ್ಮ ಸಂಸ್ಥೆಯ 150ಕ್ಕೂ ಹೆಚ್ಚು ವಿದ್ಯಾಥಿರ್üಗಳು 35ಕ್ಕೂ ಮಿಕ್ಕಿ ಉತ್ತಮ ಕಂಪೆನಿಗಳಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ಉದ್ಯೋಗವನ್ನು ಪಡೆದುಕೊಂಡಿರುವುದು ನಮ್ಮ ವಿದ್ಯಾರ್ಥಿಗಳ ಸಾಮಥ್ರ್ಯ ಮತ್ತು ಅವರನ್ನು ಈ ಮಟ್ಟಕ್ಕೆ ತಯಾರಿಸಿದ ಅಧ್ಯಾಪಕರ ಪರಿಶ್ರಮಕ್ಕೆ ಸಂದ ಪ್ರತಿಫಲವಾಗಿದೆ.

ಶ್ರೇಷ್ಠ ವಿದ್ಯಾಸಂಸ್ಥೆಯಾಗುವ ಹಾದಿಯಕೆಲವು ಮೈಲಿಗಲ್ಲುಗಳು......

ಬಹುಮುಖ ತಾಂತ್ರಿಕ ಬೆಳವಣಿಗೆಯನ್ನು ಉತ್ತೇಜಿಸಲು ಅಂತರ್ವಿಭಾಗೀಯ ಮಟ್ಟದಲ್ಲಿ `ಸೆಂಟರ್ ಆಫ್ ಎಕ್ಸಲೆನ್ಸ್'ಗಳ ಸ್ಥಾಪನೆ. ಪ್ರಮುಖ ಬಹುರಾಷ್ಟ್ರೀಯಕೈಗಾರಿಕೆ / ಕಂಪೆನಿಗಳಲ್ಲಿ ಪ್ರಸಿದ್ಧವಾದ ಬೆಂಗಳೂರಿನಲ್ಲಿರುವ ಸ್ಯಾಪ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್, ಸಿವಿಸಿ ಪ್ರೈವೇಟ್ ಲಿಮಿಟೆಡ್, ಎಡ್ವಾನ್ಸ್ಡ್ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್, ಎಫ್‍ಇ ಡಿಸೈನ್ಸ್, ಶಿವಮೊಗ್ಗದಲ್ಲಿರುವ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಸೆರಿಲ್ಯಾಬ್ಸ್, ಮುಂಬಯಿ, ಶ್ರೀ ವಿನಾಯಕ ಇಂಜಿನಿಯರಿಂಗ್ ವಕ್ರ್ಸ್ ಮಂಗಳೂರು ಹಾಗೂ ನ್ಯಾಷನಲ್ ಎಜ್ಯುಕೇಶನ್ ಫೌಂಡೇಶನ್ ನ್ಯೂಯಾರ್ಕ್ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಪಾಲುಗಾರಿಕಾ ಒಡಂಬಡಿಕೆಗಳು. ವಿಶ್ವವಿದ್ಯಾನಿಲಯದ ಪರೀಕ್ಷೆಗಳಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ (ನಾಲ್ಕು ನಿರ್ಗಮಿತ ಬ್ಯಾಚ್‍ಗಳಲ್ಲಿ ಸತತವಾಗಿ 95%ಕ್ಕೂ ಅಧಿಕ ಫಲಿತಾಂಶ)

ಮೂಲಭೂತ ವಿಜ್ಞಾನ ವಿಭಾಗ ಮತ್ತು ಇಂಜಿನಿಯರಿಂಗ್ ವಿಭಾಗಗಳಲ್ಲಿ ವಿಶ್ವವಿದ್ಯಾಲಯದಿಂದ ಅಂಗೀಕರಿಸಲ್ಪಟ್ಟ ಸಂಶೋಧನಾಕೇಂದ್ರಗಳು ಮತ್ತು ಬಾಹ್ಯ ಪ್ರಾಯೋಜಕತ್ತ್ವದಿಂದ ನಡೆಸಲ್ಪಡುವ ಸಂಶೋಧನೆಗಳಿಗೆ ಅನುದಾನಗಳು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕರ್ನಾಟಕ ಸರ್ಕಾರದ ವಾಣಿಜ್ಯಇಲಾಖೆಯ `ಕರ್ನಾಟಕ ತಾಂತ್ರಿಕ ಉನ್ನತೀಕರಣ ಕೌನ್ಸಿಲ್'ನಿಂದ ಪ್ರವರ್ತಿತವಾದ `ಸಂಶೋಧನೆ ಮತ್ತು ಅಭಿವೃಧ್ಧಿಕೇಂದ್ರ'ದ ಸ್ಥಾಪನೆ. ಈ ಕೇಂದ್ರದ ಮೂಲಕ ಸಮಾಜಮುಖಿ ಸಂಶೋಧನೆಗಳನ್ನು ಉದ್ಯಮವಲಯದ ಸಹಕಾರದಿಂದ ಮಾಡಿ ನಿಜಾರ್ಥದಲ್ಲಿ ಶೈಕ್ಷಣಿಕ ಸಂಸ್ಥೆ ಹಾಗೂ ಉದ್ಯಮ ವಲಯದ ಸಂಬಂಧದ ನಿರ್ಮಾಣ.

ಐಟಿ ಕ್ಷೇತ್ರದ ದಿಗ್ಗಜಗಳಲ್ಲೊಂದಾದ ಟಿಸಿಎಸ್ ಕಂಪನಿಯೊಂದಿಗೆ ಸ್ಥಳೀಯ ಮೂಲಭೂತ ಸೌಲಭ್ಯಗಳ ಒದಗಿಸುವಿಕಾ ಕೇಂದ್ರವಾಗಿ ಒಡಂಬಡಿಕೆ. ಪ್ರತಿಷ್ಠಿತ ಸಿಎಸ್‍ಐಆರ್, ಎನ್‍ಎಎಲ್ ಮತ್ತು ಇಸ್ರೋ ಸಂಸ್ಥೆಗಳ ವಿಜ್ಞಾನಿಗಳೊಂದಿಗೆ ವಿದ್ಯಾಥಿರ್üಗಳ ತರಬೇತಿ ಮತ್ತು ಸಹಕಾರಗಳಿಗಾಗಿ ಸಹಯೋಗ. ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಂಪೂರ್ಣ ಕ್ರಿಯಾಶೀಲವಾಗಿರುವ ಅತ್ಯಾಧುನಿಕ ಪರೀಕ್ಷೆ ಮತ್ತು ಸಲಹಾಘಟಕ. ವಿದ್ಯಾಥಿರ್üಗಳಲ್ಲಿ ಸಂಶೋಧನಾ ಅಭಿರುಚಿಯನ್ನು ಉದ್ದೀಪನಗೊಳಿಸಲು, ಕೆಎಸ್‍ಸಿಎಸ್‍ಟಿ ಮತ್ತು ವಿಜಿಎಸ್‍ಟಿ ಪ್ರಾಯೋಜಿತ ವಿದ್ಯಾಥಿರ್ü ಯೋಜನೆ (ಟ್ರಿಪ್) ಕಾರ್ಯಕ್ರಮದಡಿಯಲ್ಲಿ ಸಮಾಜಮುಖೀ ಯೋಜನೆಗಳಿಗಾಗಿ ಅನುದಾನಗಳು. ನಿಯಮಿತವಾಗಿ ಪರಿಣಾಮಕಾರೀ ವ್ಯಕ್ತಿತ್ತ್ವ ವಿಕಸನ ಕಾರ್ಯಕ್ರಮಗಳ ಆಯೋಜನೆ.ಕರ್ನಾಟಕ ಸರ್ಕಾರದ `ಯುವ ವಿಜ್ಞಾನಿಗಳ ಸಂಶೋಧನೆಗಳಿಗಾಗಿ ಪೆÇ್ರೀತ್ಸಾಹ ಧನ (ಎಸ್‍ಎಮ್‍ವೈಎಸ್ ಆರ್)' ಯೋಜನೆಯಲ್ಲಿ ಅನುದಾನಗಳು. ವಿದ್ಯಾಥಿರ್üಗಳ ಸೃಜನಾತ್ಮಕ ಮತ್ತು ನವೀನ ಚಿಂತನೆಗಳನ್ನು ಪೆÇ್ರೀತ್ಸಾಹಿಸಲು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದಲ್ಲಿ ಅನನ್ಯವಾದ `ನಾವೀನ್ಯತಾ ಪ್ರಯೋಗಾಲಯ', ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ `ಸೃಜನಶೀಲತಾ ಕೇಂದ್ರ' ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ `ಇಂಟರ್ನೆಟ್ ಆಫ್ ಥಿüಂಗ್ಸ್' ಕ್ರಿಯಾ ಸಮೂಹಗಳ ಆರಂಭ.
ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ– ಕಳೆದೊಂದು ವರ್ಷದಲ್ಲಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಯಾ ರಾಷ್ಟ್ರೀಯ ನಿಯತಕಾಲಿಕಗಳಲ್ಲಿ 27ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳ ಪ್ರಕಟಣೆ ಮತ್ತು ಖ್ಯಾತ ಅಂತಾರಾಷ್ಟ್ರೀಯ ಯಾ ರಾಷ್ಟ್ರೀಯ ಸಮ್ಮೇಳನಗಳಲ್ಲಿ (ದೇಶ ಮತ್ತುವಿದೇಶಗಳಲ್ಲಿ) 22ಕ್ಕೂ ಅಧಿಕ ಸಂಶೋಧ ನಾ ಪ್ರಬಂಧಗಳ ಮಂಡನೆ-ಅನೇಕ ಶಿಕ್ಷಕರಿಂದ ಡಾಕ್ಟರೇಟ್ ಪದವಿ ಶಿಕ್ಷಣದತ್ತ ನೋಂದಣಿ. ವಿದ್ಯಾಥಿರ್ü ಪ್ರತಿಭೆಗಳ ಅನಾವರಣಕ್ಕಾಗಿ ರಾಜ್ಯ ಮಟ್ಟದ, ಅಂತರ್ಕಾಲೇಜು ಮಟ್ಟದ ತಾಂತ್ರಿಕ ಹಾಗೂ ಸಾಂಸ್ಕøತಿಕ ಹಬ್ಬಗಳು ಮತ್ತು ಪ್ರಾಜೆಕ್ಟ್‍ಗಳ ಪ್ರದರ್ಶನ ಮತ್ತು ಸ್ಪರ್ಧೆಗಳ ಸತತ ಆಯೋಜನೆ. ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ವಿದ್ಯಾಥಿರ್üಗಳಿಗೆ ಪೆÇ್ರೀತ್ಸಾಹ ಮತ್ತು ಮಾರ್ಗದರ್ಶನ, ಪಠ್ಯೇತರ ಮತ್ತು ಪಠ್ಯ ಪೂರಕ ಚಟುವಟಿಕೆಗಳಲ್ಲಿ ಪ್ರಶಸ್ತಿಗಳ ಗಳಿಕೆ.

ಐಎಸ್‍ಟಿಇ ವಿದ್ಯಾಥಿರ್ü ಘಟಕ, ರೋಟರ್ಯಾಕ್ಟ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್‍ಕ್ರಾಸ್ ಘಟಕಗಳ ಆಶ್ರಯದಲ್ಲಿ ವಿವಿಧ ತಾಂತ್ರಿಕ ಯಾ ಸಮಾಜ ಸೇವಾ ಕಾರ್ಯಕ್ರಮಗಳ ನಿಯಮಿತವಾ ದ ಆಯೋಜನೆ. ಪದವಿಪೂರ್ವ ವಿದ್ಯಾಥಿರ್üಗಳ ಪ್ರತಿಭಾನ್ವೇಷಣೆ ಮತ್ತು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ವಿಜ್ಞಾನ ಮಾದರಿ ಮತ್ತು ಯೋಜನಾ ಮಾದರಿ ಪ್ರದರ್ಶನಗಳ ಆಯೋಜನೆ. ಪದವಿಪೂರ್ವ ವಿದ್ಯಾಥಿರ್üಗಳ ಅನುಕೂಲಕ್ಕಾಗಿ ವೃತ್ತಿ ಮಾರ್ಗದರ್ಶನ ಶಿಬಿರ/ ಪ್ರವೇಶ ಪೂರ್ವಸಮಾಲೋಚನೆಗಳ ಆಯೋಜನೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀ ಯ ಮಟ್ಟದ ತಾಂತ್ರಿಕ ಸಮ್ಮೇಳನ ಮತ್ತು ವಿಚಾರ ಸಂಕೀರ್ಣಗಳ ವೇದಿಕೆಗಳಲ್ಲಿ ಸಂಸ್ಥೆಯ ಶಿಕ್ಷಕರ ಪ್ರಾತಿನಿಧ್ಯಗಳಿಗಾಗಿ ಆಹ್ವಾನ ಮತ್ತು ಭಾಗವಹಿಸುವಿಕೆಗಳು.

ಭವಿಷ್ಯದಯೋಜನೆಗಳು.....

ಅಮೇರಿಕಾದ ರೋಚೆಸ್ಟರ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪೆÇ್ರ| ಡಾ| ಪಿ.ಆರ್ ಮುಕುಂದ್ ಅವರ ಮಾರ್ಗದರ್ಶನದಲ್ಲಿ ಪ್ರಾಚೀನ ತಾಳೆಗರಿ ಗ್ರಂಥಗಳ ಸಂರಕ್ಷಣೆಗಾಗಿ ಅತ್ಯಾಧುನಿಕ ಸಂರಕ್ಷಣಾ ಕೇಂದ್ರ (ಸೆಂಟರ್ ಫಾರ್ ಪ್ರಿಸರ್ವೇಷನ್ ಆಫ್ ಏನ್ಸಿಯೆಂಟ್ ಮ್ಯಾನುಸ್ಕ್ರಿಪ್ಟ್ಸ್-ಸಿಪಿಎಎಮ್) ಉತ್ಸಾಹೀ ಯುವ ಉದ್ಯಮಿಗಳಿಗೆ ತಮ್ಮ ಸ್ವಂತ ಉದ್ದಿಮೆಗಳನ್ನು ಸ್ಥಾಪಿಸಲು ಸಹಕಾರಿಯಾಗಲು, ಕಾಲೇಜಿನಿಂದ ಪ್ರವರ್ತಿತ ತಂತ್ರಜ್ಞಾನ ಪ್ರವರ್ಧನಾ ಕೇಂದ್ರದ ಸ್ಥಾಪನೆ. ಭಾರತ ಸರಕಾರದ ಸ್ಟಾರ್ಟ್ ಅಪ್ ಇಂಡಿಯಾ ಸ್ಟಾಂಡ್ ಆಫ್ ಇಂಡಿಯಾ-ಡಿಜಿಟಲ್ ಇಂಡಿಯಾ ಯೋಜನೆಗಳ ಮೂಲಕ ವಿದ್ಯಾಥಿರ್üಗಳು ಸ್ವೋದ್ಯೋಗಿಗಳಾಗಿ ಯಶಸ್ವಿಯಾಗಲು ಪೂರಕ ಮಾರ್ಗದರ್ಶನ ಮತ್ತು ಸಹಕಾರ, ಸದ್ಯೋ ಭವಿಷ್ಯದಲ್ಲಿ ಪರಿಸರ ಸ್ನೇಹಿ ಕ್ಯಾಂಪಸ್ ಅಭಿವೃದ್ಧಿ-ಜಲ ಮತ್ತು ಶಕ್ತಿ ಸಂಪನ್ಮೂಲಗಳ ಸಮರ್ಪಕ ನಿರ್ವಹಣೆಗಾಗಿ, ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳ ಬಳಕೆಗೆ ಉತ್ತೇಜನ.

ಎಸ್‍ಎಂವಿಐಟಿಎಂ ಕೇವಲ ತಾಂತ್ರಿಕ ಶಿಕ್ಷಣವನ್ನು ನೀಡಿ ಪದವೀಧರರನ್ನು ಸೃಷ್ಠಿಮಾಡುವ ಕಾರ್ಖಾನೆಯಾಗದೆ, ವಿದ್ಯಾಥಿರ್üಗಳಲ್ಲಿ ನಾವೀನ್ಯವನ್ನುಉತ್ತೇಜಿಸಿ, ನಾಯಕತ್ವ ಮತ್ತು ಸ್ವೋದ್ಯೋಗದ ಚಿಂತನೆಯನ್ನು ಅಭಿವೃದ್ಧಿಪಡಿಸಿ, ಅವರ ಸರ್ವತೋಮುಖ ಅಭಿವೃದ್ಧಿಯ ಮೂಲಕ ದೇಶದ ಉಜ್ವಲ ಭವಿಷ್ಯಕ್ಕೆ ಕಾಣಿಕೆಯನ್ನು ಕೊಡುವ ದೂರದೃಷ್ಟಿ ಮತ್ತು ಧ್ಯೇಯಗಳೊಂದಿಗೆ, ಆರೋಗ್ಯವಂತ ಸ್ವಸ್ಥ ಮತ್ತು ನೈತಿಕ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಬಹು ಆಯಾಮದ ಮಹತ್ವದ ಹೆಜ್ಜೆಗಳನ್ನು ಇರಿಸುತ್ತಾ ವಿಶ್ವ ಮಟ್ಟದ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲು ಉದ್ದೇಶಿಸಿದೆ. ಸಂಸ್ಥೆಯ ಬಗ್ಗೆ ಆಸಕ್ತರು ಸಂಸ್ಥೆಯ ಅಂತರ್ಜಾಲ ತಾಣ ತಿತಿತಿ.soಜe-eಜu.iಟಿ ಸಂದರ್ಶಿಸುವ ಮೂಲಕ ಅಥವಾ ದೂರವಾಣಿ ಸಂಖ್ಯೆ (820) 2589182 ಯಾ 4294005, ಇ-ಮೈಲ್ This email address is being protected from spambots. You need JavaScript enabled to view it. ಯಾ This email address is being protected from spambots. You need JavaScript enabled to view it. ಇದಕ್ಕೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಕೊಳ್ಳಬಹುದು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal