Print


(ಮಾಹಿತಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಆ.14: ತೆರೆಮರೆಯ ಅನನ್ಯ ಸಮಾಜ ಸೇವಕ, ನಿರ್ಗತಿಕರ ಪಾಲಿನ ತಪೋನಿರತ ಋಷಿ, ಗಾಣಿಗರತ್ನ ಎಂದೇ ಜನಜನಿತ, ಗಾಣಿಗ ಸಮಾಜ ಮುಂ¨ಯಿ ಸಂಸ್ಥೆಯ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ಅವರಿಗೆ ಇಂದು 75ರ ಹುಟ್ಟುಹಬ್ಬದ ಸುದಿನ. ಅಮೃತ ಜನ್ಮೋತ್ಸವದ ಸಂಭ್ರಮ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕಿ ಅಲ್ಲಿನ ಕುತ್ಪಾಡಿ ನಿವಾಸಿಗಳಾದ ಮಂಜಯ್ಯ ಗಾಣಿಗ ಮತ್ತು ರಾಧಾ ಗಾಣಿಗ ಅವರ ಸುಪುತ್ರರಾಗಿ ರಾಮಚಂದ್ರ ಜನಿಸಿದರು. ಹುಟ್ಟಿದ ಸಮಾಜದ ಸಂಘಟನಾ ನಾವೆಯನ್ನು ಹುಟ್ಟು ಹಾಕಿ, ಹುಟ್ಟ ಎಳೆದು ಸಾಗಿದ ನಾವಿಕರೂ ಇವರಾಗಿದ್ದಾರೆ. ಹುಟ್ಟಿದ ಸಮುದಾಯ ನಮಗೆ ಜನ್ಮ ಕೊಟ್ಟ ತಾಯಿ ತಂದೆಗಳಂತೆ, ಸ್ವಜಾತಿ, ಸ್ವಸಮಾಜದ ಹೆಸರನ್ನು ಮರೆಮಾಚುವುದು ಸರ್ವಥಾ ತಪ್ಪು ಎನ್ನುವ ಮನೋಭಾವಿ ಇವರಾಗಿದ್ದಾರೆ. ಇಳಿ ವಯಸ್ಸಿನಲ್ಲೂ ನಗು ಬೀರುವ ಆಕರ್ಷಕ ವ್ಯಕ್ತಿತ್ವ, ಸಮಾಜವನ್ನು ಸಾಮರ್ಥವಾಗಿ ಮುನ್ನಡೆಸಬಲ್ಲ ಸಂಘಟನಾ ಚಾತುರ್ಯ, ಗಂಡುಗತ್ತಿನ ಧ್ವನಿ, ಸಂಸ್ಕೃತಿ, ಪರಂಪರೆಗಳ ಆಳವಾದ ಜ್ಞಾನವಿರುವ ಮೇಧಾವಿಯೂ ಹೌದು. ಕರ್ಮಭೂಮಿ ಮುಂಬಯಿಯಲ್ಲೂ ಹುಟ್ಟಿದ ಸಮಾಜದ ಸಂಸ್ಥೆಗೆ ಆಡಿಗಲ್ಲನ್ನಿಟ್ಟು ಸ್ವಸಮುದಾಯದ ಬಲವರ್ಧನೆಗೈದ ಸ್ವಾಭಿಮಾನಿ. ತಾವು ಮಾಡಿದ ಸೇವೆ, ಸಾಧನೆಗಳನ್ನು ಎಂದೂ ತೋರ್ಪಡಿಸದೆ ಸದ್ದುಗದ್ದಲವಿಲ್ಲದೆ ತೆರೆಮರೆಯಲ್ಲಿದ್ದೇ ಸಾಮಾನ್ಯರಲ್ಲಿ ಅಸಮಾನ್ಯರಾಗಿ ಉಡುಪಿ ರಂಗಭೂಮಿ ಸಂಸ್ಥೆಯ ಪ್ರಮುಖರಾಗಿದ್ದ ಇವರು ಸುಮಾರು ನಾಲ್ಕುವರೆ ದಶಕದ ಸಮಾಜ ಮತ್ತು ಕಲಾ ಸೆವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನಾನುರಾಗಿದ್ದರು. ರಾಜ್ಯೋತ್ಸವ, ನಾಟಕ ಅಕಾಡೆಮಿ, ಆರ್ಯಭಟ ಪುರಸ್ಕಾರಗಳ ಪ್ರತಿಷ್ಠಿತ ಪ್ರಸಸ್ತಿಗಳ ಸಹಿತ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿರುವ ಕುತ್ಪಾಡಿ ಆನಂದ ಗಾಣಿಗ ಅವರ ದೂರದೃಷ್ಠಿಯ ಹೆಜ್ಜೆಗಳಲ್ಲೇ ಮುನ್ನಡೆದವರು.

 

 

ಸುಮಾರು ನಾಲ್ಕುವರೆ ದಶಕದ ಅವಿರತ ಶ್ರಮದಿಂದ ಹತ್ತಾರು ತುಳು, ಕನ್ನಡ ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಯಕ್ಷಗಾನ ಕಲಾವಿದನಾಗಿಯೂ ಮೆರೆದು ರಂಗ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿ, ಸಮಾಜ ಸೇವೆ ಹಾಗೂ ಕಲಾ ಸೆವೆಯ ಪೆÇೀಷಣೆಗೈದ ಧೀಮಂತ ಹಾಗೂ ಮಹಾನ್ ಚೇತನ, ಗಾಣಿಗ ಸಮಾಜದ ಹಿರಿಯ ಮುತ್ಸದ್ಧಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಂಗಕರ್ಮಿ ಕುತ್ಪಾಡಿ ಆನಂದ ಗಾಣಿಗ ಇವರ ಸಹೋದರ ಎನ್ನಲೇ ಖುಷಿ, ಹೆಮ್ಮೆಪಡುವ ರಾಮಚಂದ್ರ ಗಾಣಿಗ ಓರ್ವ ಪರಿಸರ ಮತ್ತು ಅಪ್ಪಟ ಕಲಾಪ್ರೇಮಿ.

ಸಮಾಜಮುಖಿ ಚಿಂತನೆಯ ವಿಶೇಷ ಭಾವನೆ ಹೊಂದಿದ ಇವರು ಸಮಾಜವನ್ನು ನಾವು ಎಷ್ಟು ಪ್ರೀತಿಸುತ್ತಿದ್ದೇವೆ ಅದಕ್ಕಾಗಿ ಎಷ್ಟು ಸಮಯ ವಿನಿಯೋಗಿಸುತ್ತಿದ್ದೇವೆ ಎನ್ನುವುದನ್ನು ಇವರಿಂದ ತಿಳಿಯಬೇಕಾಗಿದೆ. ಬೇಧಭಾವವಿಲ್ಲದೆ ಸರ್ವರಲ್ಲೂ ಒಟ್ಟಿಗೆ ವೇದಿಕೆ ಹಂಚಿಕೊಳ್ಳುವ ಅವರನ್ನೆಲ್ಲಾ ಪ್ರೀತಿ ಮತ್ತು ಗೌರವದಿಂದ ಕಾಣುವ ಇವರು ಸರಳ ಸಜ್ಜನಿಕಾ ವ್ಯಕ್ತಿತ್ವವನ್ನು ಮೈಗೂಡಿಸಿದ ಮೃದು ಸ್ವಾಭಾವದ ವ್ಯಕ್ತಿ ಇವರು. ಸಾಕ್ಷತ್ ರಾಮಚಂದ್ರನ ಅವತಾರವಾಗಿಸಿ ಉದಾರ ನೆರವಿತ್ತವರು. ಕಷ್ಟಗಳ ಕುಲಕ್ಕೇ ರಾಮಬಾಣವಾಗಿ ನಲಿವಿನ ಸಾಮ್ರಾಜ್ಯವನ್ನು ರೂಪಿಸಿದವರು. ಆಥಿರ್üಕವಾಗಿ ಸಾಂತ್ವಾನವಿತ್ತು ಖುಷಿಯಿಂದ ಕೊಡುಗೈದಾನಿಯಾಗಿ ಋಷಿಯಾದವರು. ಕಾಲವೇನೋ ಬದಲಾದರೂ ಆಧುನಿಕತೆಗೆ ಹೊಂದಿದರೂ ಮನುಷ್ಯನ ಜೀವನದ ಪಾಡು ಬದಲಾಯಿಸದೆ ಮಾನವೀಯತೆಯನ್ನು ಮೆರೆದು ಬಾಳಿದವರು.

ಕೊಡುಗೆಯನ್ನು ಎಂದೂ ಉಡುಗೊರೆಯಾಗಿ ತೋರಿಸದೆ ಸೇವಾಂಕ್ಷಿಗಳಿಗೆ ತನ್ನ ಸಾಮರ್ಥ್ಯ ಮತ್ತು ಬೆಂಬಲ ನೀಡಿ ಬೆಂಬಲಿಸುವ ಧೀಮಂತ ಹೃದಯಶೀಲತೆವುಳ್ಳವರು. ಮಹಾನಗರದಲ್ಲಿ ವಾಸವಾಗಿದ್ದರೂ ತನ್ನ ಸುತ್ತಮುತ್ತಲಿನ ಊರುಕೇರಿಯ ಜನಜೀವನ ತಿಳಿದು ಅದರಲ್ಲೂ ಕಲಾವಿದರ ಪಾಡನ್ನು ತಿಳಿದು ಸದ್ದಿಲ್ಲದೆ ಸಹಾಯಹಸ್ತ ಚಾಚಿದವರು. ಸಾಮರಸ್ಯದ ಒಮ್ಮುಖ ತುಡಿತ ಇವರ ಉದಾರತೆಯಾಗಿದೆ. ಬಡವ ಬಲ್ಲಿದವರಲ್ಲೂ ನಲಿವು ಗೆಲುವಿನ ಹೊಳೆಹರಿಸಿ ಕಷ್ಟಕಂಟಕಗಳ ಕುಲವನ್ನೇ ಮರೆಯಾಗಿಸುವ ಕನಸು ಕಾಣುತ್ತಾ ಕೈಯಲಾದಷ್ಟು ಸಹಾಯ ಮಾಡಿ ಪುಣ್ಯ ಕಟ್ಟಿಕೊಂಡ ಮಹಾದಾನಿ. ಸೇವೆ ಮೂಲಕವೇ ಶ್ರೀರಾಮನನ್ನು ಕಂಡ ಓರ್ವ ಆಧ್ಯಾತ್ಮಿಕ ಸಾಧಕರೂ ಹೌದು. ಪ್ರೀತಿ, ಶ್ರದ್ಧೆ ಮತ್ತು ನಿಷ್ಠೆಯ ನಿಷ್ಕಳಂಕ ಯಜಮಾನನಾಗಿ ಸಮಾಜವನ್ನು ಮುನ್ನಡೆಸಿ ಮೆರೆದವರು. ಜನರು ತನ್ನನ್ನು ಮಹಾಸಾಧಕ, ಸೇವಕ, ಸದ್ಭಕ್ತನೆಂದು ಕೊಂಡಾಡಬೇಕು ಎನ್ನುವ ಆಶಯ ವಿರಿಸದ ಅಪದ್ಭಂಧವ, ಅಸಾದರಣ ಪ್ರತಿಭೆ ಆಗಿದ್ದ ಇವರೋರ್ವ ಶುದ್ಧ ಅಪರಂಜಿ ಸೇವಕನೆಂದರೂ ತಪ್ಪಾಗಲಾರದು.

 

ಅಪ್ಪಟ ಸಮಾಜ ಸೇವಕರೆಣಿಸಿದ ಇವರು ಗಾಣಿಗ ಸಂಘದ ಬೆಳವಣಿಗೆಗೆ ಅವಿರತ ಶ್ರಮ ನೀಡಿದ ಸಮಾಜದ ಹಿರಿಯ ದಿಗ್ಗಜರೂ ಆಗಿದ್ದು, ಗಾಣಿಗ ಸಮಾಜ ಮುಂಬಯಿ ಇದರ ಸ್ಥಾಪಕರಲ್ಲೊರ್ವರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇದೀಗ ಅಧ್ಯಕ್ಷರಾಗಿ ಸೇವಾನಿರತರಾಗಿದ್ದಾರೆ. ಪ್ರವೃತ್ತಿಯಲ್ಲಿ ಸಮಾಜಸೇವಕಾರಿದ್ದರೂ ವೃತ್ತಿಯಲ್ಲಿ ಕ್ರೀಮ್‍ಚಿಲ್ಲ್‍ಸ್ ಮತ್ತು ಕೂಲ್‍ಕ್ಯಾಂಪ್ ಐಸ್‍ಕ್ರೀಂ ಸಂಸ್ಥೆಯ ಮಾಲಕರಾಗಿ ಮಹಾನಗರದಾದ್ಯಂತ ಚಿರಪರಿಚಯಿತರು.

ಎಲ್ಲ ವರ್ಗದ ಜನತೆ ಮತ್ತು ಸರ್ವ ಸಮುದಾಯ, ಸಮಾಜಗಳ ವಿಶ್ವಾಸಕ್ಕೆ ಪಾತ್ರರಾದ ಹಿರಿಯ ಚೇತನರಿವರು. ಸದಾ ಯುವ ಜನತೆಗೆ ಪ್ರೇರೆಪಿಸುತ್ತಾ ಸದ್ದುಗದ್ದಲವಿಲ್ಲದೆ ಕೊಡುಗೈದಾನಿಯಾಗಿ ತೆರೆಮರೆಯಲ್ಲಿದ್ದೇ ಸಮಾಜ ಹಿತ ಬಯಸಿದವರು. ತನ್ನ ಕಾರ್ಯ ಬಾಹುಳ್ಯವನ್ನು ತಾಯ್ನಾಡಿಗೂ ವಿಸ್ತರಿಸಿ ಸುಮಾರು ಎರಡುವರೆ ದಶಕದಿಂದ ಶೈಕ್ಷಣಿಕ, ಸಾಮಾಜಿಕ ಮತ್ತು ಕಲಾರಂಗದಲ್ಲಿ ಕಾರ್ಯ ಪ್ರವೃತ್ತವಾಗಿದ್ದ ಇವರು ಗಾಣಿಗರ ಧೀಮಂತ ಸೇವಾ ವ್ಯಕ್ತಿತ್ವಕ್ಕೆ ಪುಟ ಕೊಟ್ಟಂತಿದೆ.

ಜನ್ಮದಿನಗಳು ಜೀವನದ ಮೈಲಿಗಲ್ಲುಗಳಲ್ಲಿ ಒಂದಾಗಿದೆ. ಇದು ಎಲ್ಲಾ ರೀತಿಯ ಚಿಂತನೆ ಮತ್ತು ಹಳೆ ನೆನಪುಗಳನ್ನು ಮೆಲುಕು ಹಾಕಿಸುತ್ತಾ ಸೇವೆಗೆ ಪ್ರೇರೇಪಿಸುತ್ತದೆ. ಕಾರಣಾಂತರಗಳಿಂದ ಅನೇಕರು ಹುಟ್ಟುಹಬ್ಬ ಆಚರಣೆ ಮರೆತು ಬಿಡುತ್ತಾ ಸೇವೆಯೊಂದಿಗೆ ಸಂಭ್ರಮಿಸುತ್ತಿರುವುದು ನನಗೆ ಪ್ರೇರÀಣೆ ನೀಡಿದೆ. ನಮ್ಮವರು ಹುಟ್ಟುಹಬ್ಬ ಆಚರಿಸಲು ಯೋಜಿಸುತ್ತಿದ್ದರೂ ಆ ಸಂಭ್ರಮ ನಮಗೆ ಮನಸ್ಸಿಲ್ಲದಿದ್ದರೆ, ಅದು ಅಪ್ರಸ್ತುತವಾಗುತ್ತದೆ. ಆದರೆ ನಮ್ಮ ಗೌರವಾನ್ವಿತ ಸಾಧನೆಗಳು ಮೆಚ್ಚಿನ ಹವ್ಯಾಸಗಳು ಅಥವಾ ನಾವು ಮಾಡಲು ಇಷ್ಟಪಡುವ ವಿಷಯಗಳು ಹುಟ್ಟುಹಬ್ಬಗಳಂತೆಯೇ ಮೈಲಿಗಲ್ಲುಗಳಾಗಿದ್ದರೆ ಒಳಿತು. ಅಂತೆಯೇ ನಾನೂ ತನ್ನ ಬಾಲ್ಯಾರಂಭಿಕ ವರ್ಷಗಳ ಬಗ್ಗೆ ತಿಳಿದು ನಮ್ಮ ಜೀವನದ ಬಡತನ ಮರೆತು ಬಿಡುವುದು ಸರಿಯಲ್ಲ. ಇದಕ್ಕಾಗಿ ತನ್ನ ಹುಟ್ಟುಹಬ್ಬದ ಪ್ರಯುಕ್ತ ಶ್ರೀದೇವರು ತನಗೆ ಸದ್ಯ ಇಷ್ಟೊಂದು ಆಯುಷ್ಯವನ್ನು ನೆಮ್ಮದಿ, ಸಮೃದ್ಧಿಯುತವಾಗಿ ಪ್ರಾಪ್ತಿಸಿದ್ದಕ್ಕಾಗಿ ಬಡವರಿಗೆ ಉಳಕೊಳ್ಳಲು ಐದು ಮನೆಗಳನ್ನು ಕಟ್ಟಿಕೊಟ್ಟು ಜೀವನ ಪಾವನ ಆಗಿಸುವಂತಿದ್ದೇನೆ ಅನ್ನುತ್ತಾರೆ ರಾಮಚಂದ್ರ ಗಾಣಿಗರು.

75 ಅನ್ನು ತಿರುಗಿಸುವಂತೆ ಯೋಚಿಸಬೇಡ. 57 ವರ್ಷಗಳ ಅನುಭವದೊಂದಿಗೆ 18 ವರ್ಷಕ್ಕೆ ತಿರುಗುವಂತೆ ಯೋಚಿಸುವುದು ಒಳಿತು ಎನ್ನುವಂತೆ ರಾಮಚಂದ್ರರು ಈ ಸುದಿನವನ್ನು ರಂಗಕಲಾವಿದರು ಮತ್ತು ಸಮಾಜ ಸೇವಕರಿಗೆ ನಾಲ್ಕೈದು ಮನೆಗಳನ್ನು ಕಟ್ಟಿಕೊಟ್ಟು ತನ್ನ ಹುಟ್ಟು ಅಮೃತಮಹೋತ್ಸವ ಸಂಭ್ರಮಿಸುತ್ತಿರುವುದು ಇವರ ಜನ್ಮೋತ್ಸವದ ವೈಶಿಷ್ಟ ್ಯವಾಗಿದೆ. ಅಪಾರ ಸಂಖ್ಯೆಯ ಕಲಾಭಿಮಾನಿ, ಹಿತೈಷಿಗಳನ್ನು ಹೊಂದಿರುವ ಗಾಣಿಗರು ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು, ಪೆÇೀಷಕರಾಗಿಯೂ ಶ್ರಮಿಸಿರುವರು. ಹಲವಾರು ಗೌರವಗಳಿಂದ ಪುರಸ್ಕೃತರಾಗಿರುವ ಇವರಿಗೆ ಕುಲದೇವರಾದ ಶ್ರೀ ವೇಣುಗೋಪಾಲಕೃಷ್ಣ ಆಯುರಾರೋಗ್ಯ ಭರಿತ ನೆಮ್ಮದಿ ಬಾಳನ್ನು ಕರುಣಿಸಿ ಶತಾಯುಷ್ಯವನ್ನು ಕಾಣುವಂತಾಗಲಿ ಎಂದೇ ನಮ್ಮ ಹಾರೈಕೆ.