About Us       Contact

 ಜಿದ್ದಾ: ಇಂಡಿಯಾ ಫ್ರೆಟರ್ನಿಟಿ ಫಾರಂ ಕರ್ನಾಟಕ ಚಾಪ್ಟರ್ ಜಿದ್ದಾ ಇದರ ವತಿಯಿಂದ ಫ್ರೆಟರ್ನಿಟಿ ಫೆಸ್ಟ್ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಂಗವಾಗಿ ಬೃಹತ್ ಕುಟುಂಬ ಸಮ್ಮಿಲನ ಮತ್ತು ಸಂಭ್ರಮ 2019. ಇತ್ತೀಚಿಗೆ ಜಿದ್ದಾದ ಮದ್ಹಲ ಸಭಾಂಗಣದಲ್ಲಿ ನಡೆಯಿತು.

ಇಂಡಿಯಾ ಫ್ರೆಟರ್ನಿಟಿ ಫಾರಂ ರೀಜನಲ್ ಅಧ್ಯಕ್ಷ ಫಯಾಝುದ್ದೀನ್ ಚೆನ್ನೈ ಕಾರ್ಯಕ್ರಮದ ಉದ್ಘಾಟಿಸಿದರು. ಐ ಎಫ್ ಎಫ್ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಮಜೀದ್ ವಿಟ್ಲಾ ದಿಕ್ಸೂಚಿ ಭಾಷಣ ಮಾಡಿದರು.
ಐ ಎಫ್ ಎಫ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಹಾರಿಸ್ ಗೂಡಿನಬಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಪತ್ರಕರ್ತಆರೀಫ್ ಕಲ್ಕಟ್ಟ ರನ್ನು ಐ ಎಫ್ ಎಫ್ ವತಿಯಿಂದ ಸನ್ಮಾನಿಸಲಾಯಿತು.

ಮುಖ್ಯ ಅತಿಥಿsಗಳಾಗಿ ಲುಲು ಹೈಪರ್ ಮಾರ್ಕೆಟ್ ಜನರಲ್ ಮ್ಯಾನೇಜರ್ ಮುಹಮ್ಮದ್ ಅಶ್ರಫ್ ಕೆ ಸಿ ರೋಡ್, ಇಂಡಿಯನ್ ಸೋಶಿಯಲ್ ಫಾರಂ ಪಶ್ಚಿಮ ವಲಯ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಮುಹಮ್ಮದ್ ಅಲಿ ಮೂಳೂರ್, ಐ ಎಫ್ ಎಫ್ ಕಾರ್ಯದರ್ಶಿ ಆರಿಫ್ ಬಜ್ಪೆ,ಉದ್ಯಮಿ ಲಿಯಾಖತ್ ಮಾಸ್ಟರ್ ಟ್ರೇಡರ್ಸ್ ಅಂಡ್ ಟ್ರಾನ್ಸ್ಪೋರ್ಟ್, ಎನ್ ಸಿ ಎಂ ಎಸ್ ನ ಜನರಲ್ ಮ್ಯಾನೇಜರ್ ರಹೀಂ ಬಜ್ಪೆ , ಸಾದಾ ಜನರಲ್ ಸೆಕ್ರೆಟರಿ ಐ ಪಿ ಡಬ್ಲ್ಯೂ ಎಫ್ ಕಮರ್, ಹಿದಾಯ ಫೌಂಡೇಶನ್ ಅಧ್ಯಕ್ಷ ಜಾವೇದ್ ಕಲ್ಲಡ್ಕ, ಐ ಎಫ್ ಎಫ್ ಜಿದ್ದಾ ವಲಯ ಅಧ್ಯಕ್ಷ ಮುದ್ದಸ್ಸರ್ ಅಬ್ದುಲ್ ಉಪಸ್ಥಿತರಿದ್ದರು.

ಐ ಎಫ್ ಎಫ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಹಾರಿಸ್ ಗೂಡಿನಬಳಿ ಸ್ವಾಗತಿಸಿಯ,ಐ ಎಫ್ ಎಫ್ ಜಿದ್ದಾ ವಲಯಾಧ್ಯಕ್ಷ ಮುದಸ್ಸರ್ ಅಬ್ದುಲ್ ವಂದಿಸಿದರು. ಫಿರೋಜ್ ಕಲ್ಲಡ್ಕ,ಮುತ್ತಲಿಬ್ ಪಡುಬಿದ್ರೆ ಮತ್ತು ಶಾಕಿರ್ ಹಕ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡೆಗಳು ನಡೆಸಲಾಯಿತು.ವಿಶೇಷವಾಗಿ ಲುಲು ಹೈಪರ್ ಮಾರ್ಕೆಟ್ ಪ್ರಾಯೋಜಕತ್ವದಲ್ಲಿ ನಡೆದ ಮಹಿಳೆಯ ಡೆಸರ್ಟ್ ಫುಡ್ ಸ್ಪರ್ಧೆ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು.ಡೆಸರ್ಟ್ ಫುಡ್ ತೀರ್ಪುಗಾರರಾಗಿ ಲುಲು ಹೈಪರ್ ಮಾರ್ಕೆಟ್ ನ ಚೀಫ್ ಚೆಫ್ ಹನೀಫ್ ಕೆ ಎಂ ಹಾಗು ಸಹ ತೀರ್ಪುಗಾರರಾಗಿ ಬಾಸ್ಕಿನ್ ರಾಬಿನ್ಸ್ ನ ಡ್ಯಾನಿಷ್ ಸಹಕರಿಸಿದರು.ಹನೀಫ್ ಮತ್ತು ಡ್ಯಾನಿಷ್‍ರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal