About Us       Contact

 

15ನೇಯ ವಿಶ್ವ ಕನ್ನಡ ಸಂಸ್ಕ್ರತಿ ಸಮ್ಮೇಳನ ಯು.ಎ.ಇ.ಯ ರಾಜದಾನಿ ಅಬುದಾಬಿಯಲ್ಲಿ 22 ಮತ್ತು 23 ಫೆಬ್ರವರಿ 2019 ರಮದು ಜರಗಿತು. ಅಬುದಾಬಿ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಜಂಟಿ ಆಶ್ರಯದಲ್ಲಿ ನಡೆದ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಖ್ಯಾತ ಸಾಹಿತಿ ಹಾಗೂ ಕನ್ನಡ ಪುಸ್ತಕ ಪ್ರಧಿಕಾರ ಅಧ್ಯೆಕ್ಷೆ ಡಾ. ವಸುಂಧರ ಭೂಪತಿ ವಹಿಸಿದ್ದರು.

ಅಬುದಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರ ನೇತೃತ್ವದಿಂದ ನಡೆದ ಸಮ್ಮೇಳನದಲ್ಲಿ ಉತ್ತಮ ಕಾರ್ಯಕ್ರಮಗಳು ಮೂಡಿ ಬಂದವು . ಯು.ಎ.ಇ.ಯ ಕನ್ನಡಿಗರ ಹೆಮ್ಮೆಯ ನಾಯಕ ಮತ್ತು ಅಬುದಾಬಿ ಕರ್ನಟಕ ಸಮಘದ ಮಹಾಪೋಷಕರಾದ ಏನ್.ಎಂ.ಸಿ. ಸಮೂಹ ಸಂಸ್ಥಯ ಅಧ್‍ಯಕ್ಷ ಬಿ. ಆರ್. ಶೆಟ್ಟಿಯವರು ಎರಡು ದಿನದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕರ್ನಾಟಕದಿಂದ ಆಗಮಿಸಿದ್ದ 100ಕ್ಕೂ ಹೆಚ್ಚು ಕಲಾವಿದರಿಗೆ ಡಾ. ಬಿ.ರ್ ಶೆಟ್ಟಿಯವರು ನೆನಪಿನ ಕಾಣಿಕೆ ನೀಡುವ ಮೂಲಕ ಶುಭ ಹಾರೈಸಿದರು.

ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ವಸುಂಧರ ಭೂಪತಿಯವರು ಜ್ಯೋತಿ ಬೆಳಗಿಸಿ ಎರಡು ದಿನಗಳ ಕನ್ನಡ ಹಬ್ಬಕ್ಕೆ ಚಾಲನೆ ನೀಡಿದರು. “ನಮ್ಮ ಕನ್ನಡ ಭಾಷೆ ಜಗತ್ತಿನ ಸರ್ವಶ್ರೇಷ್ಠ ಭಾಷೆಗಳಲ್ಲಿ ಒಂದು ಆದ್ದರಿಂದ ಕನ್ನಡ ಭಾಷೆಯ ಉನ್ನತಿಗೆ ದಿನ ನಿತ್ಯ ಬಳಸುವ ಮೂಲಕ ಕೊಡುಗೆ ನೀಡುವ ಅನಿವಾರ್ಯತೆ ಇದೆ. ಕರ್ನಾಟಕಕ್ಕೆ ಬರುವ ವಲಸಿಗರಿಗಿಂತ ಕನ್ನಡಿಗರ ಅತೀ ಉದಾರತೆ ಕನ್ನಡಕ್ಕೆ ಹಾನಿ ಮಾಡುವ ಸಾಧ್ಯತೆಯಿದೆ. ಕನ್ನಡ ಸಾಹಿತ್ಯ- ಕಲಾ ಸೇವೆ ನಿರಂತರವಾಗಿ ನಡೆದು, ಕನ್ನಡದ ಹಿರಿಮೆ ಹೆಚ್ಚುವಂತಹ ಕಾರ್ಯಕ್ರಮಗಳಲ್ಲಿ ಕನ್ನಡಿಗರ ಹೆಚ್ಚು ಹೆಚ್ಚು ಪಾಲ್ಗೊಳ್ಳುವಿಕೆ ಬಹಳ ಅತ್ಯವಶ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಶ್ರೀ ಮುಖ್ಯ ಮಂತ್ರಿ ಚಂದ್ರುರವರು ಕನ್ನಡ ಅಳಿವಂಚಿನ ಭಾಷೆ ಎನ್ನುವ ಮಾತಿದೆ. ಅದರೆ ಎರಡುವರೆ ಸಾವಿರ ವರ್ಷಗಳಿಂದ ಕನ್ನಡ ತನ್ನದೇ ಆದ ವಿಶಿಷ್ಟ ಸ್ಥಿತ್ಯಂತರಗಳನ್ನು ಹೊಂದಿದ್ದರೂ ಭಾಷೆಗೆ ಯಾವುದೇ ರೀತಿಯ ಧÀಕ್ಕೆಯಾಗಿಲ್ಲ. ಕನ್ನಡ ಉಳಿಸುವ ಬೆಳೆಸುವ ಮಾತಿಗಿಂತ ಕನ್ನಡವನ್ನು ಬಳಸುವ ಆಂದೋಲನ ನಡೆಸಬೇಕಾಗಿದೆ ಎಂದರು.
ವಿಶ್ವ ಕನ್ನಡ ಸಂಸ್ಕøತಿ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ ಮಂಜುನಾಥ್‍ಸಾಗರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಅವಕಾಶ ವಂಚಿತ ಪ್ರತಿಭಾವಂತ ಕಲಾವಿದರು ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ನೀಡುವ ನಮ್ಮ ಪರಿಕಲ್ಪನೆಗೆ ವಿದೇಶಿ ಕನ್ನಡ ಸಂಘಗಳ ಸಹಕಾರ ಅಪೂರ್ವವಾದದ್ದು ಈವರೆಗೆ ನಡೆದ 15 ನಮ್ಮ ಸಮ್ಮೇಳನಗಳಲ್ಲಿ 2900ಕ್ಕೂ ಹೆಚ್ಚು ಪ್ರತಿಭೆಗೆ ಅವಕಾಶ ಒದಗಿಸಿಕೊಟ್ಟ ಧನ್ಯತಾಭಾವ ನಮಗಿದೆ ಎಂದರು. ಇತ್ತೀಚೆಗೆ ನಮ್ಮನ್ನಗಲಿದ ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಸ್ಮರಣಾರ್ಥ “ಸಿದ್ಧಗಂಗಾ ಶ್ರೀ ವೇದಿಕೆ” ಎಂದು ಸಮ್ಮೇಳನದ ವೇದಿಕೆ ಹೆಸರಿಡÀಲಾಯಿತು.
2004ರಿಂದ 14 ಸಮ್ಮೇಳನಗಳಿಗೆ ಪುರುಷ ಸಾಹಿತಿಗಳನ್ನು ಸರ್ವಾದ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. 15ನೇ ಸಮ್ಮೇಳನಕ್ಕೆ ಪ್ರಥಮ ಬಾರಿಗೆ ಮಹಿಳಾ ಸಾಹಿತಿ ಡಾ. ವಸುಂಧರ ಭೂಪತಿಯವರನ್ನು ಆಯ್ಕೆ ಮಾಡುವ ಮೂಲಕ ಹೊಸತನವನ್ನು ನೀಡಿದ್ದೇವೆ ಎಂದರು.

ಮೊದಲ ದಿನ ಸಾಂಪ್ರದಾಯಿಕ ಪೂರ್ಣ ಕುಂಭ , ಚಂಡೆ ನಾದದ ಮೂಲಕ ಅತಿಥಿಗಳನ್ನು ಸ್ವಾಗತಿಸಿ ವೇದಿಕೆಗೆ ಕರೆ ತರಲಾಯಿತು . ನಂತರ ಪ್ರಾರ್ಥನೆ , ದೀಪ ಬೆಳಗಿಸಿ , ಯು . ಎ . ಇ . ಮತ್ತು ಭಾರತದ ರಾಷ್ಟ್ರ ಗೀತೆ ಹಾಡಿ , ಗಣ್ಯರ ಭಾಷಣದ ಮೂಲಕ ಸಮಾರಂಭ ಪ್ರಾರಂಭವಾಯಿತು. ಕರ್ನಾಟಕದಿಂದ ಬಂದ ವಿವಿಧ ತಂಡಗಳ ನೃತ್ಯ , ಕಿಕ್ಕೇರಿ ಕೃಷ್ಣ ಮೂರ್ತಿ ತಂಡದವರಿಂದ ರಸಮಂಜರಿ , ಗೋಪಿಯವರಿಂದ ಮಿಮಿಕ್ರಿ , ಅಬು ಧಾಬಿಯ ಕನ್ನಡಿತಿಯರಿಂದ ಜಾನಪದ ನೃತ್ಯ ಸೊಗಸಾಗಿ ಮೂಡಿ ಬಂದವು . ಯು. ಎ . ಇ. ಕನ್ನಡಿಗರ ಕವಿ ಗೋಷ್ಠಿ ಸಭೆಗೆ ಕಳೆ ಹೆಚ್ಚಿಸಿತು . ‘’ಬುದ್ಧನ ನಾಡು ಭೂತಾನ್ ‘’ ಕೃತಿ ಬಿಡುಗಡೆ ಮಾಡಲಾಯಿತು ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಯೊಂದರ ಶ್ರವಣ ದೋಷದ ಕಲಾವಿದರು ರಚಿಸಿದ ಚಿತ್ರಕಲೆ , ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು .

ಎರಡೆನೆಯ ದಿನ, ಸುಮಧುರ ಗೀತೆ , ನೃತ್ಯ ದಿಂದ ಶುರುವಾದ ಕಾರ್ಯಕ್ರಮ ಮುಂದುವರಿದು , ಎಂ . ಡಿ . ಕೌಶಿಕ್ ರವ ರು ಮ್ಯಾಜಿಕ್ ಜೊತೆಯಲ್ಲಿ ‘ಡಿ.ವಿ.ಜಿ . ಯವರ ಕಗ್ಗ ಮತ್ತು ಜೀವನ ಮೌಲ್ಯ’ ದ ಕುರಿತು ಉತ್ತಮ ವಿವರಣೆ ನೀಡಿದರು. ಮುಖ್ಯ ಮಂತ್ರಿ ಚಂದ್ರುರವರು ಅರ್ಧ ಘಂಟೆ ಸೊಗಸಾಗಿ ಕನ್ನಡತನದ ಬಗ್ಗೆ ಅತ್ಯುತ್ತಮ ಭಾಷಣ ಮಾಡಿದರು . ಅನಂತರ ನಡೆದ ಅನಿವಾಸಿ ಕನ್ನಡಿಗರಿಂದ ಮೂಡಿ ಬಂದ ‘ಹನಿಗವನ ಗೋಷ್ಠಿ’, ಸಭಿಕರನ್ನು ನಗೆ ಗಡಲಿನಲ್ಲಿ ತೇಲಿಸಿತು . ಮದ್ಯಾಹ್ನ ನಂತರ ಮಾಧ್ಯಮ ಗೋಷ್ಠಿಯಲ್ಲಿ ವಿಶ್ವವಾಣಿಯ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ , ಇಂದಿನ ಮಾಧ್ಯಮಗಳು ಎದುರಿಸುವ ಸವಾಲುಗಳನ್ನು ಹಂತ ಹಂತವಾಗಿ ವಿವರಿಸಿದರು . ಜೊತೆಗೆ ಸಭಿಕರೊಂದಿಗೆ ಒಂದಷ್ಟು ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು .

ಸಮಾರೋಪ ಸಮಾರಂಭದಲ್ಲಿ ಸಮಾಜ ಸೇವೆ , ಕನ್ನಡ ಸೇವೆ , ಸಾಹಿತ್ಯ , ಚಿತ್ರರಂಗ, ನೃತ್ಯ , ರಂಗಭೂಮಿ , ಪರಿಸರದ ಕ್ಷೇತ್ರಗಳಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸಿದವರಿಗೆ ವಿಶ್ವಮಾನ್ಯ ಪ್ರಶಸ್ತಿ , ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ ನೀಡಿ ಗೌರವಿಲಾಯಿಸಿತು . ಸಮ್ಮೇಳನಕ್ಕಾಗಿ ಕರುನಾಡಿನಿಂದ ಬಂದ ಗಣ್ಯರನ್ನು , ಬಿ . ಆರ್ . ಶೆಟ್ಟಿ ಯವರನ್ನು, ಸರ್ವೋತ್ತಮ ಶೆಟ್ಟಿಯವರನ್ನು , ದುಡಿದ ಮುಖ್ಯ ಸ್ವಯಂ ಸೇವಕರನ್ನು , ಸಹಕಾರ ನೀಡಿದ ಶ್ರಮಿಕರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಅಬುಧಾಬಿ ಕರ್ನಾಟಕ ಸಂಘ ಮೂರನೇ ಬಾರಿ ವಿಶ್ವಕನ್ನಡ ಸಂಸ್ಕ್ರತಿ ಸಮ್ಮೇಳನವನ್ನು ಆಯೋಜಿಸಿರುವುದು ಒಂದು ದಾಖಲೆ ಪ್ರಪ್ರಥಮ ಸಮ್ಮೇಳನ 2004ರಲ್ಲಿ ಆಯೋಜಿಸಿದ ಹೆಗ್ಗಳಿಕೆ ಅಬುಧಾಬಿ ಕರ್ನಾಟಕ ಸಂಘಕ್ಕೆ ಸಲ್ಲುತ್ತದೆ.ಈ ವಿಶೇಷ ಸಾಧನೆಗಾಗಿ ಸಂಘದ ಅಧ್ಯಕ್ಷ ಶ್ರೀ ಸರ್ವೋತ್ತಮ ಶೆಟ್ಟಿಯವರಿಗೆ 23ರಂದು ಜರಗಿದ ಸಮಾರೋಪ ಸಮಾರಂಭದಲ್ಲಿ “ವಿಶ್ವ ಕನ್ನಡರತ್ನ ಪ್ರಶಸ್ತಿ-2019” ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎರಡು ದಿನದ ಕಾರ್ಯಕ್ರಮ ಉಡುಪಿಯ ಅವಿನಾಶ್ ಕಾಮತ್ ರವರ ನಿರೋಪಣೆಯೊಂದಿಗೆ ಬಹಳ ಅಚ್ಚುಕಟ್ಟಾಗಿ ಮೂಡಿ ಬಂತು . ಈ ಕಾರ್ಯಕ್ರಮಕ್ಕೆ ವಿವಿಧ ತಂಡಗಳು , ಕಲಾವಿದರು , ಪುಟ್ಟ ಮಕ್ಕಳು , ಅವರ ಹೆತ್ತವರು ಕರುನಾಡಿನ ಬೇರೆ ಬೇರೆ ಭಾಗಗಳಿಂದ ಬಂದದ್ದು ವಿಶೇಷವಾಗಿತ್ತು .

ಒಟ್ಟಿನಲ್ಲಿ ಎರಡು ದಿನದ ಕಾರ್ಯಕ್ರಮ ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಪ್ರೀಯರಿಗೆ ರಸದೌತಣ, ಸೇವಾ ನಿರತವರಿಗೆ ಸನ್ಮಾನ ,ಕಲಾವಿದರಿಗೆ ಪ್ರೋತ್ಸಾಹ ನೀಡಿತು . ಇಂದಿನ ನಾಗಾಲೋಟದ ತಂತ್ರಜ್ಞಾನದ ಯುಗದಲ್ಲಿ , ಇಂತಹ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುದು ಬಹಳ ಮುಖ್ಯ ವಾಗಿದೆ. ಮುಖ್ಯ ಅತಿಥಿಗಳಾದ ಖ್ಯಾತ ತುಳು ಲೇಖಕ ಡಾ. ಸಂಜೀವ ದಂಡಕೇರಿ, ಅಬುಧಾಬಿ ಇಂಡಿಯನ್ ಬ್ಯುಜಿನೆಸ್ ಪ್ರಪೆಸನಲ್ ಗ್ರ್ರೂಪ್‍ನ ಅಧ್ಯಕ್ಷ ಪದ್ಮನಾಭ್ ಆಚಾರ್ಯ ಮತ್ತು ಅಬುಧಾಬಿ ಇಂಡಿಯನ್ ಸೋಷಿಯಲ್ ಸೆಂಟರ್ ಉಪಾಧ್ಯಕ್ಷ ಶ್ರೀ ಜಯರಾಮ್ ರೈ, ಕನ್ನಡಿಗರು ಯು.ಎ.ಇ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಗೌಡ ಮುಂತಾದ ಗಣ್ಯರು ಉಪಸ್ಥಿತರಿದ್ದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal