About Us       Contact

ಬಂಟ್ವಾಳ, June 25, 2018 : ಬಂಟ್ವಾಳ ತಾಲೂಕಿನ ಕಡೇಶಿವಾಲಯದಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿರುವ ತಿಮ್ಮಪ್ಪ ಮೂಲ್ಯ – ಯಶೋಧಾ ದಂಪತಿಯ ಪುತ್ರಿ ಯಶಸ್ವಿ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾಕೂಟಕ್ಕೆ ಪೂರ್ವಭಾವಿಯಾಗಿ ನವದೆಹಲಿಗೆ ಸೋಮವಾರ ತೆರಳುತ್ತಿದ್ದು ಈ ಸಂದರ್ಭ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಆಕೆಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ನಾೈಕ್, ಯಶಸ್ವಿ ಚೆಸ್ ನಲ್ಲಿ ಪ್ರಶಸ್ತಿ ಗೆದ್ದು ಯಶಸ್ವಿಯಾಗಿ ಮರಳಿ ಬರಲಿ ಎಂದು ಶುಭ ಹಾರೈಸಿ, ತನ್ನ ವೈಯಕ್ತಿಕ ನೆಲೆಯಲ್ಲಿ ನೆರವು ನೀಡಿ, ಶುಭಾಶಯ ಹೇಳಿದರು. ಯಶಸ್ವಿಯ ತಂದೆ ತಿಮ್ಮಪ್ಪ ಮೂಲ್ಯ, ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ, ರೊನಾಲ್ಡ್ ಡಿಸೋಜ, ಪ್ರಭಾಕರ ಪ್ರಭು, ರಂಜಿತ್ ಮೈರ, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ರಮಾನಾಥ ರಾಯಿ ಉಪಸ್ಥಿತರಿದ್ದರು.

ಬಂಟ್ವಾಳ ಖಾಸಗಿ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಲ್ಯಾಬ್ ಅಸಿಸ್ಟೆಂಟ್ ತಿಮ್ಮಪ್ಪ ಮೂಲ್ಯ ಮತ್ತು ಗಡಿಯಾರ ಸನಿಹದ ಶಾಲೆಯೊಂದರ ಶಿಕ್ಷಕಿ ಯಶೋಧಾ ದಂಪತಿಯ ಇಬ್ಬರು ಹೆಣ್ಣುಮಕ್ಕಳಲ್ಲಿ ಯಶಸ್ವಿ ಎರಡನೆಯವಳು. ಸತ್ಯಪ್ರಸಾದ್ ಕೋಟೆ ಅವರು ಪುತ್ತೂರಿನಲ್ಲಿ ಆರಂಭಿಸಿರುವ ಜೀನಿಯಸ್ ಚೆಸ್ ಸ್ಕೂಲ್‍ನಲ್ಲಿ ಸತತ ಮೂರು ವರ್ಷಗಳ ಕಾಲ ತರಬೇತಿ ಪಡೆದಿದ್ದು, , ಅಂತಾರಾಷ್ಟ್ರೀಯ ಮಟ್ಟದ ಫಿಡೆ ರೇಟಿಂಗ್ ನಲ್ಲಿ 1300ವರೆಗೆ ತಲುಪಿದ್ದಾಳೆ. ಜುಲೈ 6ರಿಂದ 16ರವರೆಗೆ ಶ್ರವಣಶಕ್ತಿಯ ಕೊರತೆ ಇರುವ ಮಹಿಳೆಯರಿಗಾಗಿ ಇರುವ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಇಂಗ್ಲೆಂಡ್ ಗೆ ತೆರಳಲಿರುವ ಈಕೆ ಇದಕ್ಕೆ ಪೂರ್ವಭಾವಿ ತಯಾರಿಗೋಸ್ಕರ ನವದೆಹಲಿಗೆ ತೆರಳಲಿದ್ದಾಳೆ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal