About Us       Contact

ಕ್ರೀಡೆಯಿಂದ ಆರೋಗ್ಯಕರ ದೈಹಿಕ ಸದೃಢತೆ ಸಾಧ್ಯ : ಕಿಶೋರ್ ಭಂಡಾರಿ

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಡಿ.04, 2017: ಭಂಡಾರಿ ಸೇವಾ ಸಮಿತಿ (ರಿ.) ಮುಂಬಯಿ ಇದರ ವಾರ್ಷಿಕ ಕ್ರಿಡೋತ್ಸವ-2017 ಕಳೆದ ಆದಿತ್ಯವಾರ ಬೆಳಿಗ್ಗೆ ಉಪನಗರದ ಡೊಂಬಿವಿಲಿ ಪೂರ್ವದ ಡೊಂಬಿವಿಲಿ ಜಿಮ್ಖಾನ ಕ್ರೀಡಾಂಗಣ ದಲ್ಲಿ ದಿನೇಶ್ ಭಂಡಾರಿ ಹಳೆಯಂಗಡಿ, ಎರ್ಮಾಳ್ ಶೇಖರ್ ಭಂಡಾರಿ ಸಾಕಿನಾಕ, ಗಂಗಾಧರ್ ಭಂಡಾರಿ ಬಿರ್ತಿ, ಸದಾನಂದ ಭಂಡಾರಿ ಅಸಲ್ಫಾ ಮತ್ತಿತರರ ಸಹಯೋಗದಲ್ಲಿ ದಿನವಿಡೀ ನಡೆಸಲ್ಪಟ್ಟ ಕ್ರಿಡೋತ್ಸಕ್ಕೆ ಬೆಳಿಗ್ಗೆ ಸಮಿತಿ ಅಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ ಪದಾಧಿಕಾರಿಗಳೊಂದಿಗೆ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತರು.

 

 

 

ಸಂಜೆ ನಡೆಸಲ್ಪಟ್ಟ ಕ್ರಿಡೋತ್ಸವ ಸಮಾರೋಪದಲ್ಲಿ ಯುವ ರಾಜಕಾರಣಿ, ಶಿವಸೇನಾ ಮುಂದಾಳು ಕಿಶೋರ್ ಭಂಡಾರಿ ಅಂಬರನಾಥ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಜೇತರಿಗೆ ಪಾರಿತೋಷಕಗಳನ್ನು ಪ್ರದಾನಿಸಿ ಅಭಿನಂದಿಸಿದರು.

ಕ್ರೀಡೆಯಿಂದ ಪ್ರಾಕೃತಿಕ ಸ್ವಸ್ಥತೆ ಮತ್ತು ದೈಹಿಕ ಸದೃಢತೆ ಸಾಧ್ಯವಾಗುವುದು. ಆದುದರಿಂದ ಕ್ರೀಡೆಯನ್ನು ಲಘುವಾಗಿ ಪರಿಗಣಿಸದೆ ಸಮಾಜ ಮುುಖಿಯಾಗಿ ತಿಳಿದುಕೊಳ್ಳಬೇಕು. ಕ್ರೀಡೆ ಹಾಗೂ ಇನ್ನೀತರ ಕ್ಷೇತ್ರಗಳಲ್ಲಿ ಉತ್ಸುಕರರಾಗಿ ಸಮುದಾಯವನ್ನು ಮುನ್ನಡೆಯ ಬೇಕು ಎಂದು ಕಿಶೋರ್ ಭಂಡಾರಿ ತಿಳಿಸಿದರು.

ಆರೋಗ್ಯಮಯ ಜೀವನಕ್ಕೆ ಕ್ರೀಡೆ ಪೂರಕವಾಗಿದೆ ಆದುದರಿಂದ ಕ್ರೀಡಾ ಹವ್ಯಾಸ ಪ್ರತೀಯೊಬ್ಬರು ರೂಢಿಸಿಕೊಳ್ಳಬೇಕು. ಇದಕ್ಕೆಲ್ಲಾ ಇಂತಹ ಕ್ರೀಡೋತ್ಸವ ಉತ್ತೇಜನವಾಗಿದೆ. ಇದೊಂದು ಸ್ವಸಮುದಾಯ ದೊಳಗಿನ ಕ್ರೀಡಾಸ್ಪರ್ಧೆ. ಆದುದರಿಂದ ಇಲ್ಲಿ ಕ್ರೀಡಾಳುಗಳು ಸೋಲು ಗೆಲುವುಗಳನ್ನು ಪರಿಗಣಿಸದೆ ಅವಕಾಶವನ್ನೇ ಮಾಪನವಾಗಿಸಿ ಉತ್ಸುಕತೆಯಿಂದ ಭಾಗವಹಿಸಿ ಕ್ರೀಡಾ ಮನೋಭಾವ ತೋರಬೇಕು ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಅಧ್ಯಕ್ಷ ಶೇಖರ್ ಭಂಡಾರಿ ಮಾತನಾಡಿ ಕರೆ ನೀಡಿದರು.

 

 

 

ಈ ಸಂದರ್ಭ ಸಮಿತಿಯ ಗೌ| ಕೋಶಾಧಿಕಾರಿ ಕರುಣಾಕರ ಜಿ. ಭಂಡಾರಿ, ಜೊತೆ ಕಾರ್ಯದರ್ಶಿ ಶಶಿಧರ್ ಡಿ. ಭಂಡಾರಿ, ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಕೇಶ್ ಭಂಡಾರಿ, ರಮೇಶ್ ಭಂಡಾರಿ, ವಿಶ್ವನಾಥ ಭಂಡಾರಿ, ಕರುಣಾಕರ ಭಂಡಾರಿ, ಜಯ ಭಂಡಾರಿ, ಮಹಿಳಾ ವಿಭಾಗದ ಕಾರ್ಯದರ್ಶಿ ರೇಖಾ ಎ. ಭಂಡಾರಿ, ಮಹಿಳಾ ಸಮಿತಿ ಸದಸ್ಯರುಗಳಾದ ಲಲಿತಾ ವಿ. ಭಂಡಾರಿ, ಶಾಲಿನಿ ರಮೇಶ್ ಭಂಡಾರಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.  

ಶ್ರೀ ಕಚ್ಚೂರು ನಾಗೇಶ್ವರ ದೇವರಿಗೆ ಆರತಿಗೈದು ಕ್ರೀಡೋತ್ಸವಕ್ಕೆ  ಚಾಲನೆ ನೀಡಲಾಯಿತು. ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್.ಭಂಡಾರಿ ಸ್ವಾಗತಿಸಿ ಪ್ರಾರ್ಥನೆಗೈದರು. ಕ್ರೀಡಾ ಸಂಚಾಲಕ ಕೇಶವ ಭಂಡಾರಿ ಸಾರಥ್ಯದಲ್ಲಿ ನಡೆಸಲ್ಪಟ್ಟ ವಾರ್ಷಿಕ ಕ್ರೀಡಾ ಉತ್ಸವದಲ್ಲಿ ಜಯಶೀಲ ಭಂಡಾರಿ ಅವರು ಯೋಗ ಮತ್ತು ಪ್ರಹಸನ ಪ್ರದರ್ಶಿಸಿದ ರು. ಉಪಾಧ್ಯಕ್ಷರುಗಳಾದ ನ್ಯಾ| ರಾಮಣ್ಣ ಎಂ.ಭಂಡಾರಿ ಮತ್ತು ಪ್ರಭಾಕರ್ ಪಿ.ಭಂಡಾರಿ ಥಾಣೆ,  ಅತಿಥಿಗಳಿಗೆ ಪುಷ್ಪಗುಪ್ಚಗಳನ್ನಿತ್ತು ಗೌರವಿಸಿದರು. ಜೊತೆ ಕಾರ್ಯದರ್ಶಿ ಪುರುಷೋತ್ತಮ ಜಿ. ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪಲ್ಲವಿ ರಂಜಿತ್ ಭಂಡಾರಿ ಅಭಾರ ಮನ್ನಿಸಿದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal