About Us       Contact

 


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.18: ಕ್ರೀಡೆಯನ್ನು ಸ್ವಪ್ರೇರಿತರಾಗಿ ರೂಢಿಸಿದರೆ ದೇಹಕ್ಕೂ, ಆರೋಗ್ಯಕ್ಕೂ ಒಂದೆಡೆ ಒಳಿತಾದರೆ, ಪ್ರತಿಷ್ಠೆಯನ್ನು ತನ್ನದಾಗಿಸಿ ಕೊಂಡಾಗ ಸ್ವಸಮುದಾಯ, ದೇಶಕ್ಕೂ ಹೆಮ್ಮೆಯಾಗುತ್ತದೆ. ಮನಸ್ಸು ಮತ್ತು ಶರೀರಿಕ ಶಕ್ತಿ ಪ್ರದರ್ಶನದ ಪ್ರಾಕೃತಿಕ ಕಲೆ ಕ್ರೀಡೆ ಆಗಿದ್ದು, ಆದುದರಿಂದ ಕ್ರೀಡೋತ್ಸವಗಳಿಗೆ ಪೆÇ್ರೀತ್ಸಾಹ ಅತ್ಯಗತ್ಯ. ಇದೇ ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಕ್ರೀಡಾಕೂಟವು ಸಮೂದಾಯದ ಒಟ್ಟು ಶಕ್ತಿಯನ್ನು ಪ್ರತಿನಿಧಿಸುವಂತಿದ್ದು ಸಮಾಜದ ಏಕತೆ ಸಾರುವ ಶಕ್ತಿಯಾಗಿದೆ. ಇದು ಸ್ಪರ್ಧೆಯಾಗಿ ಪರಿಗಣಿಸದೆ ಸಮುದಾಯದ ಏಕತೆಯನ್ನು ಪ್ರದರ್ಶಿಸುವ ಉತ್ಸವವಾಗಿಸಿ. ಆ ಮೂಲಕ ಮಾನಸಿಕ, ದೈಹಿಕ ಚಟುವಟಿಕೆಗಳನ್ನು ಸದಾ ಅನುಷ್ಠಾನ ಗೊಳಿಸಿ ನಮ್ಮ ಸಾಧನೆ ಸಫಲ ಗೊಳಿಸೋಣ ಎಂದು ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ನ್ಯಾ| ಸುಭಾಷ್ ಬಿ.ಶೆಟ್ಟಿ ತಿಳಿಸಿದರು.

 

 

 

 

 

 

 

 

 

 

ಕಳೆದ ಆದಿತ್ಯವಾರ ಸಯಾನ್ ಪಶ್ಚಿಮ ಧಾರಾವಿ ಅಲ್ಲಿನ ರಾಜೀವ ಗಾಂಧಿ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ಸಂಜೆ ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಆಯೋಜಿಸಿದ್ದ 12ನೇ ವಾರ್ಷಿಕ ಕ್ರೀಡೋತ್ಸವದ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಸುಭಾಷ್ ಶೆಟ್ಟಿ ಮಾತನಾಡಿದರು.

ಕ್ರೀಡೋತ್ಸವ ಸಮಾರೋಪದಲ್ಲಿ ಮುಖ್ಯ ಅತಿಥಿsಯಾಗಿ ವೀಕೇ ಸಮೂಹದ ನಿರ್ದೇಶಕ ಆದಿತ್ಯ ಕರುಣಾಕರ್ ಶೆಟ್ಟಿ, ಗೌರವ ಅತಿಥಿüಗಳಾಗಿ ಭವಾನಿ ಫೌಂಡೇಶನ್‍ನ ಸಂಸ್ಥಾಪಕಾಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕೆ.ಡಿ ಶೆಟ್ಟಿ, ಥಾಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಕುಶಲ್ ಸಿ.ಭಂಡಾರಿ, ಮುಲುಂಡ್ ಬಂಟ್ಸ್ ಅಧ್ಯಕ್ಷ ಹುಂತ್ರಿಕೆ ಪ್ರಕಾಶ್ಚಂದ್ರ ಶೆಟ್ಟಿ, ಬೆಂಗಳೂರುನ ಯುವ ಉದ್ಯಮಿ, ಅನೂಪ್ ರೇವಣ್ಣ, ಸೆಲೆಬ್ರೆಟಿಗಳಾಗಿ ಮಿಸ್ ಕರ್ನಾಟಕ ದ್ವಿತೀಯ ಸ್ಥಾನ ವಿಜೇತೆ ಕೀರ್ತಿ ಕೆ.ಶೆಟ್ಟಿ, ತುಳು ಸಿನಿಸ್ಟಾರ್ ಪ್ರಥಿü್ವ ಅಂಬರ್ ಹಾಗೂ ಅಸೋಸಿಯೇಶನ್‍ನ ಗೌ| ಪ್ರ| ಕೋಶಾಧಿಕಾರಿ ಸಿಎ| ವಿಶ್ವನಾಥ ಎಸ್.ಶೆಟ್ಟಿ, ಜೊತೆ ಕಾರ್ಯದರ್ಶಿ ನ್ಯಾ| ಗುಣಕರ್ ಶೆಟ್ಟಿ, ಜೊತೆ ಕೋಶಾಧಿಕಾರಿ ಶ್ಯಾಮಸುಂದರ ಎಸ್.ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಶಾರದಾ ಶ್ಯಾಮ ಶೆಟ್ಟಿ, ಯುವ ವಿಭಾಗಧ್ಯಕ್ಷ ಚರಣ್ ಆರ್.ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ, ಕಾರ್ಯದರ್ಶಿ ಉದಯ ಎಲ್.ಶೆಟ್ಟಿ, ಮಾಜಿ ಮಹಿಳಾ ವಿಭಾಗಧ್ಯಕ್ಷೆ, ಕ್ರೀಡಾ ಸಂಯೋಜಕಿ ಸರಳಾ ಬಿ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷರು ಸುರೇಶ್ ಶೆಟ್ಟಿ ಯೆಯ್ಯಾಡಿ ಮತ್ತು ಸರಳಾ ಬಿ.ಶೆಟ್ಟಿ ಅವರನ್ನು ವಿಶೇಷವಾಗಿ ಗೌರವಿಸಿದರು. ಉದಯ ಪೂಜಾರಿ ಮಂಗಳೂರು ಇವರು ಸುರೇಶ್ ಯೆಯ್ಯಾಡಿ ಅವರ ಭಾವಚಿತ್ರವನ್ನು ರಚಿಸಿ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಿದರು.

ಕೆ.ಡಿ ಶೆಟ್ಟಿ ಮಾತನಾಡಿ ಬಂಟ್ಸ್ ಸಂಘ ಮುಂಬಯಿ ಮತ್ತು ಬೊಂಬೇ ಬಂಟ್ಸ್ ಅಸೋಸಿಯೇಶನ್ ಸಸ್ಥೆಗಳು ಮುಂಬಯಿ ನಗರದ ಎರಡು ಕಣ್ಣುಗಳು ಇದ್ದಂತೆ. ಕೊಡುಕೊಳ್ಳುವಿಕೆಯಲ್ಲಾಗಲೀ, ತ್ವರಿತ ಸ್ಪಂದನೆಗಾಗಲಿ ಎಂದೂ ಬೇಧಭಾವ ಇಲ್ಲದೇ ಸ್ಪಂದಿಸುವ ಬಂಟರು ಸಹೃದಯಿಗಳಾಗಿದ್ದಾರೆ. ಬಂಟ್ಸ್ ಅಸೋಸಿಯೇಶನ್‍ನ ಪದಾಧಿಕಾರಿಗಳಂತೂ ಪರಸ್ಪರ ಸುಧಾರಿಸಿ ಕೊಡು ಹೊಂದಿಕೊಳ್ಳುವವರಾಗಿದ್ದಾರೆ. ಐಕ್ಯತೆ ನೋಡಬೇಕಾದರೆ ಅದು ಬಂಟರಲ್ಲಿ ಕಾಣಬೇಕು. ಒಂದು ಮನೆಗೆ ಯಜಮಾನನ ದಕ್ಷತೆ ಹೇಗೆಯೋ ಹಾಗೆಯೇ ಸಂಸ್ಥೆಗೆ ಅಧ್ಯಕ್ಷನ ದಕ್ಷತೆ ಸರಿಯಾದಲ್ಲಿ ಎಲ್ಲವೂ ಸರಿ ಹೋಗುತ್ತದೆ. ಇಂತಹ ಅರ್ಹ ಅಸೋಸಿಯೇಶನ್‍ನಿಂದ ನವಿ ಮುಂಬಯಿಯ ಲ್ಲಿ ಕಾಲೇಜು ನಿರ್ಮಾಣವಾಗಿ ಜನತೆಗೆ ದೊಡ್ಡ ಸಂಪತ್ತಾಗಲಿ ಎಂದು ಶುಭಾರೈಸಿದರು.

 

 

 

 

 

 

 

 

 

 

 

 

 

 

ನಮ್ಮವರಿಗೆ ಎಂದೂ ಒಂದೇ ಊರು, ಒಂದೇ ತುಳುನಾಡು ಇದನ್ನು ಪ್ರೀತಿಸಿ ಅಲ್ಲಿನ ಸಂಸ್ಕೃತಿ ರೂಪಿಸಿ ಬಾಳುತ್ತಾ ಮನಸ್ಸಿಗೆ ಮುದ ನೀಡುವ ಪ್ರಯತ್ನ ಮಾಡುತ್ತಾ ಪರಸ್ಪರ ಅನ್ಯೋನ್ಯತೆಯಿಂದ ಬಾಳುತ್ತಿರುವುದು ನಮ್ಮ ದೊಡ್ದತನ ಅದಕ್ಕೆ ಪೂರಕ ಎಂಬಂತೆ ತಾವು ಆಯೋಜಿಸಿದ ಇಂತಹ ಕ್ರೀಡಾಕೂಟ ಪ್ರಶಂಸನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರೀಡಾಜಗತ್ತಿನಲ್ಲಿ ಪಳಗಿಸಿ ನಮ್ಮಲ್ಲಿನ ಮಕ್ಕಳನ್ನು ವಿಶ್ವಕ್ರೀಡೆ ಕ್ರಿಕೆಟ್‍ನಲ್ಲಿ ಸಕ್ರೀಯಗೊಳಿಸುವಂತೆ ಮಾಡಬೇಕು. ಅದಕ್ಕಾಗಿ ಮಕ್ಕಳಲ್ಲಿ ಕ್ರೀಡೆಗೆ ಉತ್ತೇಜನ ನೀಡುವ ಪ್ರಯತ್ನ ನಡೆಯಲಿ ಎಂದು ಕುಶಲ್ ಭಂಡಾರಿ ಆಶಯ ವ್ಯಕ್ತ ಪಡಿಸಿದರು.

ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಇಂದಿಲ್ಲಿ ಆಯೋಜಿಸಿದ್ದ ಕ್ರೀಡೋತ್ಸವದಲ್ಲಿ ನಮ್ಮ ಮುಲುಂಡ್ ಬಂಟ್ಸ್ ತಂಡಕ್ಕೆ14 ಪ್ರಶಸ್ತಿ, ಪದಕಗಳು ಲಭ್ಯವಾಗಿರುವುದು ಹೆಮ್ಮೆಯಾಗಿದೆ. ಕ್ರೀಡೆಯಲ್ಲಿ ಸರ್ವರಿಗೂ ಉತ್ತಮ ಭವಿಷ್ಯವಿದೆ. ಆದುದರಿಂದ ಮಕ್ಕಳಲ್ಲಿ ಕ್ರೀಡಾಸಕ್ತಿ ಮೂಡಿಸಿ. ಯಾವುದೇ ಕಾರಣಕ್ಕೂ ಶಿಕ್ಷಣದ ಒತ್ತಡ ಹಾಕದೆ ವಿದ್ಯಾರ್ಜನಾ ದಬ್ಬಾಳಿಕೆ ಮಾಡದಿರಿ. ಅಲ್ಲದೆ ಪರೀಕ್ಷೆಯ ವೇಳೆ ಮಕ್ಕಳಲ್ಲಿ ನಿರುತ್ಸಾಹಗೊಳಿಸದೆ ಪ್ರೀತಿಯಿಂದಲೆ ಸಲಹಿ, ಪೆÇ್ರೀತ್ಸಾಹಿಸಿರಿ ಎಂದÀು ಸಮಾಜ ಬಾಂಧವರಿಗೆ ಸಲಹಿದರು.

ನಾನೋರ್ವ ಬಂಟ ಪರಿವಾರದವಳು ಎನ್ನುವುದೇ ನನ್ನ ದೊಡ್ದತನವಾಗಿದೆ. ಬಂಟಪರಂಪರೆಯನ್ನು ಸದಾ ಗೌರವಿಸಿ ಅದನ್ನು ಮುಚ್ಚುಮರೆಯಿಲ್ಲದೆ ಅನಾವರಣ ಗೊಳಿಸುವಲ್ಲಿ ಪ್ರಯತ್ನ ಮಾಡುವೆ. ನಮ್ಮಲ್ಲಿನ ಪ್ರತಿಭೆಗಳೂ ಬಂಟತನವನ್ನು ಪ್ರದರ್ಶಿಸಿ ಜಾಗತಿಕವಾಗಿ ಮೆರೆದು ಪ್ರತಿಷ್ಠಿತ ಸಮಾಜ ರೂಪಿಸಬೇಕು ಎಂದೂ ಎಂದು ಕೀರ್ತಿ ಶೆಟ್ಟಿ ನುಡಿದರು.

ಪರಶುರಾಮನ ಸೃಷ್ಟಿಯಿಂದ ಮಾಯಾಲೋಕ ಮುಂಬಯಿನಲ್ಲಿ ಇಂತಹ ಸಂಸ್ಥೆಗಳ ಸೇವೆಯೊಂದಿಗೆ ಕಿರು ತುಳುನಾಡು ಕಾಣುತ್ತಿದ್ದು ಅಭಿಮಾನವಾಗುತ್ತಿದೆ. ಬಂಟರು ತುಳುನಾಡ ಮಣ್ಣಿನ ಆಸ್ತಿ ಆಗಿದ್ದಾರೆ. ನಿಮ್ಮಲ್ಲಿ ಸಂಕುಚಿತ ಮನೋಭಾವ ಎಂದೂ ಕಂಡಿಲ್ಲ. ಬದಲಾಗಿ ಪೆÇ್ರೀತ್ಸಹಕ ಭಾವನೆ ಕಂಡಿದ್ದೇನೆ. ಕಲಾವಿದರಿಗಂತೂ ಬಂಟರ ಪೆÇ್ರೀತ್ಸಾಹ ಅನುಮಪವಾದದ್ದು. ಅಂತೆಯೇ ನಮ್ಮೂರಿಗೂ ಮುಂಬಯಿಗರ ಕೊಡುಗೆ ಅಪಾರ ತಮ್ಮೆಲ್ಲರ ಸಹಕಾರಕ್ಕಾಗಿ ಅಭಾರಿಯಾಗಿದ್ದೇನೆ ಎನ್ನುತ್ತಾ ಹಾಡೊದ್ದಕ್ಕೆ ನೃತ್ಯಹೆಜ್ಜೆಯನ್ನಾಕಿ ತನ್ನ ಪ್ರತಿಭೆ ಪ್ರದರ್ಶಿಸಿದ ರು ಎಂದು ಪ್ರಥಿü್ವ ಅಂಬರ್ ಎಂದರು.

ಅನೂಪ್ ರೇವಣ್ಣ ಮಾತನಾಡಿ ಬೇರೊಂದು ಊರಲ್ಲಿ ನಮ್ಮೂರ ಹಿರಿಮೆ ಕಂಡು ಬೆರಗಾಗಿದ್ದೇನೆ. ಹೊರನಾಡ ಮುಂಬಯಿಯಲ್ಲೂ ಇಷ್ಟೊಂದು ದೊಡ್ದದಾದ ಸಂಘಟನೆ ಎಲ್ಲರ ಮೆಚ್ಚುಗೆಯಾಗಿದೆ. ಕ್ರೀಡೆಯಿಂದ ಉತ್ತಮ ಆರೋಗ್ಯ ಭಾಗ್ಯ ಸಾಧ್ಯವಾಗಿದ್ದು ಮುಂಬರುವ ದಿನಗಳಲ್ಲಿ ಇನ್ನಷ್ಟು ಕ್ರೀಡಾಸಂಘಟನೆ ರೂಪಿಸಿ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಿರಿ. ನಿಮ್ಮ ಸಾಧನೆಗೆ ಸದಾ ಯಶ ಲಭಿಸಲಿ ಎಂದಾರೈಸಿದರು.

 

 

 

 

 

 

 

 

 

 

ಅಸೋಸಿಯೇಶನ್‍ನ ಅಸೋಸಿಯೇಶನ್‍ನ ಮಾಜಿ-ಹಾಲಿ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದರು. ದಿನಪೂರ್ತಿಯಾಗಿ ನಡೆಸಲ್ಪಟ್ಟ ಕ್ರೀಡೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ಹಿರಿಕಿರಿಯರಿಗೆ ವಿವಿಧ ಸ್ಪರ್ಧೆಗಳನ್ನು, ಪುರುಷರು ಮತ್ತು ಮಹಿಳೆಯರಿಗಾಗಿ ಹಗ್ಗಜಗ್ಗಟ, ಮಹಿಳೆಯರಿಗೆ ಥ್ರೋಬಾಲ್ ಸ್ಪರ್ಧೆ ನಡೆಸಲ್ಪಟ್ಟಿvದ್ದು ವಿಜಯ್ ಶೆಟ್ಟಿ ಸ್ಪರ್ಧೆಗಳನ್ನು ನಿರ್ವಹಿಸಿದರು. ಗಣ್ಯರು ವಿಜೇತ ತಂಡಗಳಿಗೆ ಮತ್ತು ವೈಯಕ್ತಿಕ ಪಾರಿತೋಷಕಗಳನ್ನು ಪ್ರದಾನಿಸಿ ಅಭಿನಂದಿಸಿದರು.

ಅಸೋಸಿಯೇ ಶನ್‍ನ ಉಪಾಧ್ಯಕ್ಷ ಮುರಳೀ ಕೆ.ಶೆಟ್ಟಿ ಸ್ವಾಗತಿಸಿದರು. ಸರಳಾ ಬಿ.ಶೆಟ್ಟಿ ವಿಜೇತರ ಯಾದಿಯನ್ನು ಪ್ರಕಟಿಸಿದರು. ಗೌ| ಪ್ರ| ಕಾರ್ಯದರ್ಶಿ ಸಿಎ| ಸುರೇಂದ್ರ ಕೆ.ಶೆಟ್ಟಿ ವಂದನಾರ್ಪಣೆಗೈದರು. ಮಧುರಾಜ್ ಶೆಟ್ಟಿ ಮತ್ತು ಅಮಿೃತಾ ಎ.ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕ್ರೀಡೋತ್ಸವ ಸಮಾಪನ ಗೊಂಡಿತು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal