About Us       Contact

ಚಂದ್ರಶೇಖರ ಪಾಲೆತ್ತಾಡಿ ಮತ್ತಿತರ ಗಣ್ಯರಿಗೆ `ರಾಣಿ ಅಬ್ಬಕ್ಕಾ ಪ್ರಶಸ್ತಿ' ಪ್ರದಾನ

(ಚಿತ್ರ / ವರದಿ : ರೊನಿಡಾ ಮುಂಬಯಿ)

ಬಂಟ್ವಾಳ (ಪುಂಜಾಲಕಟ್ಟೆ), ನ.19, 2017: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಮತ್ತು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‍ನ ಸಹಭಾಗಿತ್ವದಲ್ಲಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಆಯೋಜಿಸಿದ್ದ 34ನೇ ವಾರ್ಷಿಕ ಹೊನಲು ಬೆಳಕಿನ ದ್ವಿದಿನಗಳ ಪ್ರೊ ಕಬಡ್ಡಿ ಪಂದ್ಯಾಟ ಇಂದಿಲ್ಲಿ ಭಾನುವಾರ ಸಂಜೆ ಸಮಾಪನ ಕಂಡಿತು. ಆಯೋಜಿತ ಸ್ವಸ್ತಿಕ್ ಪುರುಷರ ಹಾಗೂ ಮಹಿಳಾ ಮುಕ್ತ ವಿಭಾಗ ಮತ್ತು 60 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟದ ಕೊನೆಯಲ್ಲಿ `ರಾಣಿ ಅಬ್ಬಕ್ಕಾ ಪ್ರಶಸ್ತಿ' ಪ್ರದಾನ ಕಾರ್ಯಕ್ರಮ ನಡೆಸಲ್ಪಟ್ಟಿತು.

 

 

 

ಸಂಜೆ ನಡೆಸಲ್ಪಟ್ಟ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳೀನ್‍ಕುಮಾರ್ ಕಟೀಲು, ಸಮಾಜ ಸೇವಕರಾದ ಕಾಂತೇಶ್ ಕೆ.ಇ, ಹರಿಕೃಷ್ಣ ಬಂಟ್ವಾಳ, ಲಕ್ಷ್ಮೀನಾರಾಯಣ ಉಡುಪ, ಹರೀಂದ್ರ ಪೈ, ರಮೇಶ್ ಶೆಟ್ಟಿ ಮಜಲೋಡಿ, ಸುಂದರ ನಾಯ್ಕ, ಪ್ರಭಾಕರ ಪ್ರಭು, ಕಾರ್ಯಕ್ರಮದ ಪ್ರಧಾನ ಸಂಘಟಕ, ಮುಂಬಯಿ ಉದ್ಯಮಿ ಸುಂದರರಾಜ್ ಹೆಗ್ಡೆ ಮತ್ತಿತರ ಗಣ್ಯರು ಅತಿಥಿ ಅಭ್ಯಾಗತರುಗಳಾಗಿ ಉಪಸ್ಥಿತರಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಕ್ರೀಡಾಪಟುಗಳಾದ ಕರುಣಾಕರ ಶೆಟ್ಟಿ ಮತ್ತು ಹೇಮಚಂದ್ರ ಬಬ್ಬುಕಟ್ಟೆ, ಸಮಾಜ ಸೇವಕ ಬಾಲಕೃಷ್ಣ ರೈ, ಹಿರಿಯ ಕಬ್ಬಡ್ಡಿಪಟು ನಾರಾಯಣ ಪೂಜಾರಿ ಡೆಚ್ಚಾರು ಅವರಿಗೆ `ರಾಣಿ ಅಬ್ಬಕ್ಕಾ ಪ್ರಶಸ್ತಿ' ಪ್ರದಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಸಂಸ್ಥೆಯ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಅಧ್ಯಕ್ಷ ಪ್ರಶಾಂತ್ ಎಂ.ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ ಪಿ ಮಂಜಲಪಲ್ಕೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ ಮತ್ತಿತರ ಪದಾಶಿಕಾರಿಗಳು, ನೂರಾರು ಕ್ರೀಡಾಭಿಮಾನಿ-ಕ್ರೀಡಾಸಕ್ತರು ಉಪಸ್ಥಿತರಿದ್ದು ಶುಭಾರೈಸಿದರು.

ತುಂಗಪ್ಪ ಬಂಗೇರ ಸ್ವಾಗತಿಸಿ ಪ್ರಸ್ತಾವನೆಗೈದರು. ಹೆಚ್.ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಜಯರಾಜ್ ಅತ್ತಾಜೆ ಅಭಾರ ಮನ್ನಿಸಿದರು.

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal