About Us       Contact

ಸೃಜನಶೀಲ ಚಟುವಟಿಕೆಗೆ ಕ್ರೀಡೆ ಸಾಧನ: ಶಶಿಧರ್ ಶೆಟ್ಟಿ ಬರೋಡಾ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.25, 2017: ನನಗೆ ಜಯ ಸುವರ್ಣರ ನಡೆನುಡಿ ಪ್ರೇರಣೆ ಆಗಿದೆ. ಹಾಗಾಗಿ ನಾನು ಬಿಲ್ಲವರ ಪರಿವಾರ ಸ್ನೇಹಿತನಾಗಿರುವೆ. ಸೃಜನಶೀಲ ಚಟುವಟಿಕೆಗೆ ಕ್ರೀಡೆ ಸಾಧನವಾಗಿದ್ದು ಇಂತಹ ಕ್ರೀಡಾಕೂಟದಿಂದ ನನಗೂ ಕ್ರೀಡಾಸ್ಫೂರ್ತಿ ತುಂಬಿದೆ. ನಮ್ಮ ಸಂಘದಲ್ಲೂ ಕ್ರೀಡಾಕೂಟ ಆಯೋಜಿಸಿ ನಮ್ಮವರಿಗೆ ಕ್ರೀಡೆಗೆ ಪ್ರೋತ್ಸಾಹಿಸುವ ಪ್ರಯತ್ನ ಮಾಡುವೆ. ವಿಶೇಷವಾಗಿ ಮಹಿಳೆಯರಿಗೆ ತ್ರೋಬಾಲ್‍ನಂತಹ ಸ್ಪರ್ಧೆ ನಡೆಸಲು ನಿಮ್ಮ ಕ್ರೀಡಾಕೂಟ ಪ್ರೇರಪಣೆ ಒದಗಿಸಿದೆ. ನಾರಾಯಣಗುರುಗಳ ತತ್ವಾದರ್ಶಗಳೊಂದಿಗೆ ಎಲ್ಲಾ ಜಾತಿ-ಬಾಂಧವರನ್ನು ಜೊತೆಗೂಡಿಸಿ ಕ್ರೀಡೋತ್ಸವ ಆಯೋಜಿಸಿರುವುದು ಸ್ತುತ್ಯರ್ಹ. ಇದು ಸಮಗ್ರ ಸಮಾಜದವರಿಗೂ ಮಾದರಿ ಆಗಲಿ. ಭವಿಷ್ಯತ್ತಿನುದ್ದಕ್ಕೂ ಇನ್ನಷ್ಟು ಉತ್ತಮವಾಗಿ ಈ ಕ್ರೀಡಾಕೂಟ ಜರಗುತ್ತಿರಲಿ. ಸಂಘಟನೆಯ ಮುಖೇನ ಅಲ್ಲಲ್ಲಿ ಹಿಂದೂ ಸಮಾಜೋತ್ಸವದ ಕಾರ್ಯಗಳೂ ಬಿಲ್ಲವ ಸಮಾಜದಿಂದ ಆಗುತ್ತಿರಲಿ. ನಾವೆಲ್ಲಾ ಜಾತಿ ಭೇದವಿಲ್ಲದೆ ಸೌಹಾರ್ದತೆಯಿಂದ ಬಾಳಿ ವಿಶ್ವಕ್ಕೆ ಪ್ರೇರಕರಾಗೋಣ ಎಂದು ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಗುರುವಾಯನಕೆರೆ ಕರೆಯಿತ್ತರು.

 

 

 

 

 

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಯುವಾಭ್ಯದಯ ಸಮಿತಿ ಆಯೋಜಿಸಿದ್ದ 2017ರ ವಾರ್ಷಿಕ `ಕೋಟಿ-ಚೆನ್ನಯ' ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ಕ್ರೀಡಾಭಿಮಾನಿ ಗಳನ್ನು ಉದ್ದೇಶಿಸಿ ಶಶಿಧರ್ ಶೆಟ್ಟಿ ಮಾತನಾಡಿದರು.

ಮರೇನ್‍ಲೈನ್ಸ್ ಪಶ್ಚಿಮದ ಮುಂಬಯಿ ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ನಿರ್ಮಿತ ಸ್ವರ್ಗಸ್ಥ ಗಿರಿಯ ಟಿ.ಪೂಜಾರಿ ಮತ್ತು ದಿ| ಯೋಗೇಶ್ ಸೂರು ಪೂಜಾರಿ ವೇದಿಕೆಯಲ್ಲಿ ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾ ನ್ ಅಧ್ಯಕ್ಷತೆ ಹಾಗೂ ಅಸೋಸಿಯೇಶನ್‍ನ ಮಾರ್ಗದರ್ಶಕ, ಭಾರತ್ ಬ್ಯಾಂಕ್  ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ದಿವ್ಯೋಪಸ್ಥಿತಿಯಲ್ಲಿ ಜರುಗಿದ ಕ್ರೀಡೋತ್ಸವ ಸಮಾಪನದಲ್ಲಿ ಭಾರತ್ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ಗುಜರಾತ್ ಬಿಲ್ಲವ ಸಂಘದ ಗೌ| ಪ್ರ| ಕಾರ್ಯದರ್ಶಿ ವಾಸು ವಿ.ಸುವರ್ಣ, ಗುಜರಾತ್ ಬಿಲ್ಲವ ಸಂಘದ ಸೂರತ್ ಘಟಕ ಅಧ್ಯಕ್ಷ ವಿಶ್ವನಾಥ ಜಿ.ಪೂಜಾರಿ, ಸಮಾಜ ಸೇವಕ ಉದಯ ಶೆಟ್ಟಿ ಮುನಿಯಾಲ್, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಆಹಾರ್ ವಲಯ-1ರ ಉಪಾಧ್ಯಕ್ಷ ಮಹೇಂದ್ರ ಸೂರು ಕರ್ಕೇರ, ಸಮಾಜ ಸೇವಕ ರಮಾನಾಥ್ ಪೈ ಗೌರವ ಅತಿಥಿಗಳಾಗಿ ಹಾಗೂ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ರಾಜ ವಿ.ಸಾಲ್ಯಾನ್, ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾರಿ, ಡಾ| ಯು.ಧನಂಜಯ ಕುಮಾರ್ ವೇದಿಕೆಯಲ್ಲಿದ್ದು ವಿಜೇತರಿಗೆ ಪಾರಿತೋಷಕಗಳನ್ನು ಪ್ರದಾನಿಸಿ ಶುಭಾರೈಸಿದರು.

 

 

 

 

 

ಬಂಟರು ಮತ್ತು ಬಿಲ್ಲವರು ಅವಿನಾಭಾವ ಸಂಬಂಧವುಳ್ಳವರು. ಇಂದಿಗೂ ಭೇದಬಾವ ಇಲ್ಲದೆ ಸಹೋದರರಂತೆ ಬಾಳುತ್ತಿದ್ದೇವೆ. ಆದರೆ ಕೆಲವೊಂದು ಶಕ್ತಿಗಳು ಜಾತಿ ಹಿಡಿದಿಟ್ಟು ಸಾಮರಸ್ಯದ ವ್ಯವಸ್ಥೆ ಹಾಳು ಮಾಡುತ್ತಿರುವುದು ಖೇದಕರ. ಬಿಲ್ಲವರು ಪ್ರೋತ್ಸಾಹಕ ಪ್ರೇರಕರು. ನಮ್ಮತನವನ್ನು ಮೆಲುಕು ಹಾಕಲು ಇಂತಂಹದ್ದು ಸುದಿನವಾಗಿದೆ. ನಮ್ಮ ಸೇವೆ ಮನಸ್ಸಿನ ಮಾತಾಗಿ ನುಡಿದಂತೆ ನಡೆಯಂತಿರಬೇಕು. ಅದಕ್ಕೆ ಗುರುನಾರಾಯಣ ತತ್ವ ದರ್ಶಗಳು ಅನುಕರಣೀಯವಾಗಲಿ ಎಂದು ಮುನಿಯಾಳ ಉದಯ ತಿಳಿಸಿದರು.

ವಿಶ್ವನಾಥ್ ಸೂರತ್ ಮಾತನಾಡಿ ಪ್ರತೀಯೊಬ್ಬರಲ್ಲಿ ಆಡುವ ಕ್ರೀಡಾಪ್ರತಿಭೆ ಇರುತ್ತದೆ. ಅದನ್ನು ಆಟದ ಮೂಲಕ ಪ್ರದರ್ಶಿಸಿದಾಗಲೇ ಪ್ರತಿಭಾವನ್ವಿತರಾಗಿ ಬೆಳಗಲು ಸಾಧ್ಯ ಎಂದರು.

ಜಯ ಸುವರ್ಣರು ಮಾತನಾಡಿ ಸಂಘಟಿತರಾಗಿ ಸ್ಪರ್ಧೆಗಳನ್ನು ಎದುರಿಸಿದಾಗ ಜಯ ಸುಲಭ ಸಾಧ್ಯವಾಗುವುದು. ಮಕ್ಕಳಿಗೆ ಕೋಟಿಚೆನ್ನಯರು ಯಾರೆಂದು ತಿಳಿಪಡಿಸಲು ಅವರ ನಾಮದಲ್ಲಿ ಈ ಕ್ರೀಡೋತ್ಸವ ವರ್ಷಂಪ್ರತಿ ಆಚರಿಸುತ್ತಿದ್ದೇವೆ. ಈ ಮೂಲಕ ನಮ್ಮಲ್ಲಿನ ಪ್ರತಿಭೆಗಳ ಅನಾವರಣ ಸಾಧ್ಯ. ಶೀಘ್ರವೇ ನಿರ್ಮಿಸಲುದ್ದೇಶಿಸಿದ ಇಂಜಿನೀಯರ್ ಕಾಲೇಜ್‍ಗೆ ಸಹಾಯ ಸರಕಾರವಿತ್ತು ಪ್ರೋತ್ಸಾಹಿಸಿ ಎಂದರು.

 

 

 

 

 

ಕೋಟಿಚೆನ್ನರ ತತ್ವದರ್ಶ ಮೂಲಕ ಸತ್ಯಧರ್ಮದಲ್ಲಿ ಮುನ್ನಡೆಯ ಬೇಕೆಂಬ ಆಶಯ ನಮ್ಮದಾಗಿದೆ. ಯುವಪೀಳಿಗೆ ಅವಕಾಶಗಳನ್ನಿತ್ತು ಪ್ರೇರೆಪಿಸುವುದೇ ನಮ್ಮ ಉದ್ದೇಶವಾಗಿದೆ. ನಮ್ಮಲ್ಲಿನ ಯುವ ಸಂಘಟಿಕರ ಅವಿರತ ಶ್ರಮದಿಂದ ಈ ಕ್ರೀಡೋತ್ಸವ ಸಾಧ್ಯವಾಗುತ್ತಿದ್ದು ಸಮಾಜ ಬಂಧುಗಳು ಇದರ ಸದುಪಯೋಗ ಪಡೆದು ಸಂತೃಪ್ತರಾಗಬೇಕು. ಸಮುದಾಯವನ್ನು ಮುನ್ನಡೆಸಬೇಕು ಎಂದು ನಿತ್ಯಾನಂದ ಕೋಟ್ಯಾನ್ ಆಶಯ ವ್ಯಕ್ತ ಪಡಿಸಿದರು.

ಜಯ ಸುವರ್ಣರು ಕ್ರೀಡೋತ್ಸವದ ಪ್ರೋತ್ಸಾಹಕರು, ಪ್ರಾಯೋಜಕರನ್ನು, ದೀಪಕ್ ಕೋಟ್ಯಾನ್ ಇನ್ನಾ, ಹೊಟೇಲು ಉದ್ಯಮಿ ಹರೀಶ್ ಸೂರು ಪೂಜಾರಿ ವಡಾಲ, ದಯಾನಂದ್ ಕುಮಾರ್ ಮತ್ತು ಶೋಭಾ ದಯಾನಂದ್, ಕ್ರೀಡಾ ಪ್ರಧಾನ ಸಂಯೋಜಕ ರವಿ ಎಸ್.ಸನಿಲ್, ಕುಶ ಆರ್.ಸನಿಲ್, ಕು| ರಿಖಿತಾ ಆರ್.ಸನಿಲ್ ಮತ್ತಿತರರನ್ನು ಸ್ಮರಣಿಗಳನ್ನಿತ್ತು ಗೌರವಿಸಿದರು.

ಈ ವೇಳೆ ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್, ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ಯು.ಎಸ್ ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ಕೆ.ಬಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಅಸೋಸಿಯೇಶನ್‍ನ ಪ್ರಬಂಧಕ ಭಾಸ್ಕರ್ ಟಿ.ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಸ್ಥಳೀಯ, ಸಮನ್ವಯ ಸಮಿತಿಗಳ ಮುಖ್ಯಸ್ಥರು ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.

 

 

 

 

 

ದಯಾನಂದ್ ಕುಮಾರ್ ಮತ್ತು ತಂಡವು ಸ್ಪರ್ಧೆಗಳನ್ನು ನಿರ್ವಹಿಸಿದರು. ಅನುಷಾ ಪೂಜಾರಿ ಗೋರೆಗಾಂ, ಕು| ರಿಖಿತಾ ಆರ್.ಸನಿಲ್, ಶ್ವೇತಾ ಸುವರ್ಣ, ಅನುಷಾ ಪೂಜಾರಿ ವಿಕ್ರೋಲಿ ಕ್ರೀಡಾ ನಿರೂಪಣೆಗೈದರು. ಯುವಾಭ್ಯದಯ ಸಮಿತಿ ನಿಲೇಶ್ ಪೂಜಾರಿ ಪಲಿಮಾರ್ ಸ್ವಾಗತಿಸಿದರು. ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಯುವಾಭ್ಯದಯದ ಗೌರವ ಕಾರ್ಯದರ್ಶಿ ಉಮೇಶ್ ಎನ್.ಕೋಟ್ಯಾನ್ ಅಭಾರ ಮನ್ನಿಸಿದರು.

ಸೇವಾದಳದ ಸೇನಾಪತಿ ಗಣೇಶ್ ಕೆ.ಪೂಜಾರಿ, ಗೌ| ಜೊತೆ ಕಾರ್ಯದರ್ಶಿಗಳಾದ ಹರೀಶ್ ಜಿ.ಸಾಲ್ಯಾನ್, ಪ್ರೇಮನಾಥ ಪಿ. ಕೋಟ್ಯಾನ್, ಆಶಾಲತಾ ಕೋಟ್ಯಾನ್, ಗೌ| ಜೊತೆ ಕೋಶಾಧಿಕಾರಿಗಳಾದ ರಾಜೇಶ್ ಜೆ.ಬಂಗೇರ, ಸದಾಶಿವ ಎ. ಕರ್ಕೇರ, ನಾಗೇಶ್ ಎಂ.ಕೋಟ್ಯಾನ್, ರಜಿತ್ ಎಲ್.ಸುವರ್ಣ, ಅಶೋಕ್ ಕುಕ್ಯಾನ್, ನಾಗೇಶ್ ಎಸ್.ಕೋಟ್ಯಾನ್, ಅಕ್ಷಯ್ ಪೂಜಾರಿ, ಗಣೇಶ್ ಹೆಚ್.ಅಂಚನ್ ಮತ್ತಿತರರು ಸಹಕರಿಸಿದ್ದು, 2017ರ ವಾರ್ಷಿಕ `ಕೋಟಿ-ಚೆನ್ನಯ' ಕ್ರೀಡಾಕೂಟದ ಚಾಂಪಿಯನ್‍ಶಿಪ್ ಪ್ರಥಮ ಟ್ರೋಫಿಯನ್ನು ವಸಾಯ್ ಸಮಿತಿ ತನ್ನದಾಗಿಸಿದ್ದು ಬೋರಿವಿಲಿ ಸಮಿತಿಯು ದ್ವಿತೀಯ ಸ್ಥಾನಕ್ಕೆ ಪಾತ್ರವಾಯಿತು. ರಾಷ್ಟ್ರಗೀತೆಯೊಂದಿಗೆ ವಾರ್ಷಿಕ ಕ್ರೀಡೋತ್ಸವ ಸಮಾಪನ ಗೊಂಡಿತು.

 

 

 

 

 

 

 

 

 

 

 

 

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal