About Us       Contact

ಕ್ರೀಡೆಯು ವ್ಯಕ್ತಿತ್ವ ವಿಕಾಸನಕ್ಕೆ ಪೂರಕ  : ಎನ್.ಬಿ ಮೋಟೆ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.25, 2017: ಕ್ರೀಡೆಯು ವ್ಯಕ್ತಿತ್ವ ವಿಕಾಸನಕ್ಕೆ ಪೂರಕ ಆದುದರಿಂದ ಕ್ರೀಡೆಗೆ ಮಹಾರಾಷ್ಟ್ರ ಸರಕಾರದಿಂದ ಅನೇಕ ಸೌಲತ್ತುಗಳಿವೆ. ಅವುಗಳ ಪ್ರಯೋಜನ ಪಡೆಯಬೇಕು. ಕ್ರೀಡೆ ಜೊತೆಗೆ ಸಾಂಸ್ಕೃತಿಕ ಸಂಭ್ರಮವನ್ನು ತೋರ್ಪಡಿಸಿದ್ದೀರಿ. ಇಂತಹ ಕ್ರೀಡಾಕೂಟವನ್ನು ನಾನು ಮೊದಲಾಗಿ ನೋಡುತ್ತಿದ್ದೇನೆ ಎಂದು ಮಹಾರಾಷ್ಟ್ರ ಸರಕಾರದ ಕ್ರೀಡಾ ಮತ್ತು ಯುವ ಸೇವಾ ಮುಂಬಯಿ ವಿಭಾಗೀಯ ಉಪ ನಿರ್ದೇಶಕ ಎನ್.ಬಿ ಮೋಟೆ ಕರೆಯಿತ್ತರು.

 

 

 

 

 

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಯುವಾಭ್ಯದಯ ಸಮಿತಿ ಆಯೋಜಿಸಿದ್ದ 2017ರ ವಾರ್ಷಿಕ `ಕೋಟಿ-ಚೆನ್ನಯ' ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿದ್ದು ಕ್ರೀಡೋತ್ಸವಕ್ಕೆ ಚಾಲನೆಯನ್ನಿತ್ತು ಮೋತೆ ಮಾತನಾಡಿದರು.

ಇಂದಿಲ್ಲಿ ಸೋಮವಾರ ಬೆಳಿಗ್ಗೆ ಮರೇನ್‍ಲೈನ್ಸ್ ಪಶ್ಚಿಮದ ಮುಂಬಯಿ ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿದ ವಾರ್ಷಿಕ ಕ್ರೀಡೋತ್ಸವವ ನ್ನು ಪ್ರಧಾನ ಅಭ್ಯಾಗತರಾಗಿ ಉಪಸ್ಥಿತ ಅಸೋಸಿಯೇಶನ್‍ನ ಮಾರ್ಗದರ್ಶಕ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಅತಿಥಿಗಳಾಗಿ ಅಸೋಸಿಯೇಶನ್‍ನ ನಿಕಟಪೂರ್ವ ಅಧ್ಯಕ್ಷ ಎಲ್.ವಿ ಅಮೀನ್, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಬಿಸಿಸಿಐ ನಿರ್ದೇಶಕ, ಯುವ ಉದ್ಯಮಿ ಹರೀಶ್ ಜಿ.ಅಮೀನ್, ಸುಖ್‍ಸಾಗರ್ ಸಮೂಹ ಮುಂಬಯಿ ಇದರ ನಿರ್ದೇಶಕ ಭರತ್ ಎಸ್.ಪೂಜಾರಿ, ರಾಷ್ಟ್ರೀಯ ಕ್ರೀಡಾಪಟು ದಯಾನಂದ ಕುಮಾರ್, ಸಾಯಿಕೇರ್ ಸಂಸ್ಥೆಯ ಆಡಳಿತ ನಿರ್ದೇಶಕ ಸುರೇಂದ್ರ ಎ.ಪೂಜಾರಿ, ಹಿರಿಯ ಸಮಾಜ ಸೇವಕ ಶಂಕರ್ ಕೆ.ಸುವರ್ಣ ಖಾರ್, ಚಿತ್ರನಟರಾದ  ರಾಜಶೇಖರ್ ಆರ್.ಕೋಟ್ಯಾನ್, ಸೌರಭ್ ಭಂಡಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅತಿಥಿಗಳನ್ನು ಮತ್ತು ಇಂಡಿಯಾನ್ ಹಾಕಿ ತಂಡ ಆಟಗಾರ ಸೂರಜ್ ಎಚ್.ಕರ್ಕೇರ ಅವರನ್ನು ಜಯ ಸಿ.ಸುವರ್ಣರು ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು.

 

 

 

 

 

ಮುಖ್ಯ ಅತಿಥಿಯಾಗಿದ್ದ ಎನ್.ಬಿ ಮೋಟೆ ಧ್ವಜಾರೋಹಣಗೈದು ಪಥ ಸಂಚಲನಾ ಗೌರವ ವಂದನೆ ಸ್ವೀಕರಿಸಿದರು. ಕಳೆದ ಕ್ರೀಡೋತ್ಸವದ ಚ್ಯಾಂಪಿಯನ್ ತಂಡದ ದೀಪಿಕಾ ಕೋಟ್ಯಾನ್ ಹಾಗೂ ತಂಡ ವೇದಿಗೆ ತಂದಿದ್ದ ಕ್ರೀಡಾಜ್ಯೋತಿ ಸ್ವೀಕರಿಸಿಲಾಯಿತು. ಜಯ ಸಿ. ಸುವರ್ಣ ಕ್ರೀಡಾಜ್ಯೋತಿ ಪ್ರಜ್ವಲಿಸಿ ಕ್ರೀಡೋತ್ಸವಕ್ಕೆ ಚಾಲನೆಯನ್ನಿತ್ತು ಬಣ್ಣದ ಬಲೂನ್ ಗೊಂಚಲನ್ನು ಬಾನೆತ್ತರಕ್ಕೆ ಉಡಾಯಿಸಿ ವಿಧ್ಯುಕ್ತವಾಗಿ ಕ್ರೀಡೋತ್ಸವ ಘೋಷಿಸಿದರು.

ಪ್ರಾರಂಭದಲ್ಲಿ ನೆರೆದ ಕ್ರೀಡಾಸಕ್ತರು ಕೋಟಿ ಚೆನ್ನಯ, ಕಾಂತಾಬಾರೆ-ಬೂದಬಾರೆ, ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆ ನೆರವೇರಿಸಿ ಕ್ರೀಡೋತ್ಸವದ ಯಶಸ್ಸಿಗೆ ಹಾರೈಸಿದರು. ಬಳಿಕ ನಡೆಸಲ್ಪಟ್ಟ ಅತ್ಯಾಕರ್ಷಕ ಪಥಸಂಚಲನದಲ್ಲಿ ಅಸೋಸಿಯೇಶನ್‍ನ ವಿವಿಧ ಉಪಸಮಿತಿಗಳು, ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಪಡೆ, ಭಾರತ್ ಬ್ಯಾಂಕ್ ಉನ್ನತಾಧಿಕಾರಿ, ಸಿಬ್ಬಂದಿಗಳು, ಸೇವಾದಳದ ಸದಸ್ಯರು, ಸಮಾಜದಲ್ಲಿನ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರಿಯ ಕ್ರೀಡಾಪಟುಗಳು ವೈವಿಧ್ಯತೆ ಸಾರುವ ರಂಗುರಂಗಿನ ಸಮವಸ್ತ್ರಗಳನ್ನು ಧರಿಸಿ ಕ್ರೀಡೋತ್ಸವಕ್ಕೆ ಮೆರುಗು ನೀಡಿದರು. ಕು| ದೀಪಿಕಾ ಕೋಟ್ಯಾನ್ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದ ರು. ಮುದ್ದು ಅಂಚನ್ ಚೆಂಡೆ-ಮದ್ದಳೆ ಕೊಂಬು-ಕಹಳೆಯ ನಾದದೊಂದಿಗೆ ಯಕ್ಷಗಾನ ದಾಟಿಯಲ್ಲಿ ಉದ್ಘ್ಘಾಟನಾ ಶ್ಲೋಕವನ್ನಾಡಿದರು.

ಕ್ರೀಡೋತ್ಸವದಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ರಾಜ ವಿ.ಸಾಲ್ಯಾನ್, ಶಂಕರ ಡಿ.ಪೂಜಾರಿ, ಡಾ| ಯು.ಧನಂಜಯ ಕುಮಾರ್, ಮಹೇಂದ್ರ ಸೂರು ಕರ್ಕೇರ, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಸೇವಾದಳದ  ಸೇನಾಪತಿ ಗಣೇಶ್ ಕೆ.ಪೂಜಾರಿ ಮತ್ತಿತರ ಪದಾಧಿಕಾರಿಗಳು, ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಮುಖ್ಯಸ್ಥರು, ಅಸೋಸಿಯೇಶನ್‍ನ ಸಂಚಾಲಕತ್ವದ ಭಾರತ್ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ನಿರ್ದೇಶಕರು ಉಪಸ್ಥಿತರಿದ್ದು, ಆಯೋಜಿಸಲಾಗಿದ್ದ ಹತ್ತಾರು ಸ್ಪರ್ಧೆಗಳಲ್ಲಿ ರಾಷ್ಟ್ರದಾದ್ಯಂತ ಆಗಮಿಸಿದ್ದ ಬಿಲ್ಲವ ನೂರಾರು ಕ್ರೀಡಾಸಕ್ತರು ಸ್ಪರ್ಧಿಗಳು ಭಾಗವಹಿಸಿದ್ದರು.

ಯುವಾಭ್ಯದಯ ಸಮಿತಿ ಸದಸ್ಯರುಗಳಾದ ಹರೀಶ್ ಜಿ.ಸಾಲ್ಯಾನ್, ಸದಾಶಿವ ಎ.ಕರ್ಕೇರ, ನಾಗೇಶ್ ಎಂ.ಕೋಟ್ಯಾನ್, ರಜಿತ್ ಎಲ್.ಸುವರ್ಣ, ಅಶೋಕ್ ಕುಕ್ಯಾನ್, ನಾಗೇಶ್ ಎಸ್.ಕೋಟ್ಯಾನ್, ಅಕ್ಷಯ್ ಪೂಜಾರಿ, ಗಣೇಶ್ ಹೆಚ್.ಅಂಚನ್ ಉಪಸ್ಥಿತರಿದ್ದು, ಯುವಾಭ್ಯದಯ ಸಮಿತಿ ಕಾರ್ಯಧ್ಯಕ್ಷ ನಿಲೇಶ್ ಪೂಜಾರಿ ಪಲಿಮಾರ್ ಸ್ವಾಗತಿಸಿದರು. ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಅತಿಥಿಗಳನ್ನು ಪರಿಚಯಿಸಿದರು. ಕ್ರೀಡಾ ಸಂಚಾಲಕ ರವಿ.ಎಸ್ ಸನೀಲ್, ಕಾರ್ಯಕ್ರಮ ನಿರೂಪಿಸಿದರು. ಯುವಾಭ್ಯದಯದ ಕಾರ್ಯದರ್ಶಿ ಗೌರವ ಕಾರ್ಯದರ್ಶಿ ಉಮೇಶ್ ಎನ್.ಕೋಟ್ಯಾನ್ ವಂದಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal