ಮುಂಬಯಿ, ಜೂ.14, 2018 : ಐತಿಹಾಸಿಕ ಶ್ರೀಜೈನ ಮಹಾಕ್ಷೇತ್ರ ಶ್ರವಣಬೆಳಗೊಳದಲ್ಲಿ ಗೋಮಟೇಶ್ವರ ಭಗವಾನ್ ಶ್ರೀಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ-2018 ಸಂಪನ್ನಗೊಂಡಿದ್ದು, ಕಳೆದ ರವಿವಾರ ಎಸ್‍ಡಿಜೆಎಂಐ ಮ್ಯಾನೇಜಿಂಗ್ ಕಮಿಟಿ ಟ್ರಸ್ಟ್ (ರಿ.) ಶ್ರವಣಬೆಳಗೊಳ ಇವರ ವ್ಯವಸ್ಥಾಪನೆಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕುಟುಂಬದ ಸದಸ್ಯರಿಗಾಗಿ ಮಾಧ್ಯಮ ವಿಶೇಷ ಮಹಾಮಸ್ತಕಾಭಿಷೇಕ ಜರುಗಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಪಾಲ್ಗೊಂಡರು. ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮದನ್ ಗೌಡ, ಚೆನ್ನರಾಯಪಟ್ಟಣ ತಾಲೂಕು ಸಂಘದ ಅಧ್ಯಕ್ಷ ಸ್ವಾಮಿಗೌಡ, ಕರ್ನಾಟಕರಾಜ್ಯ ಸಂಘದ ಅಧ್ಯಕ್ಷ ಎನ್.ರಾಜು, ಪ್ರಧಾನ ಕಾರ್ಯದರ್ಶಿ ಸಗಡು ಶಿವಣ್ಣ, ಉಪಾಧ್ಯಕ್ಷ ಶಿವಾನಂದ್ ಸ್ಥಳೀಯ ಸಂಘಟನೆಯ ಪಧಾಧಿಕಾರಿಗಳು ಕಾಪು ತಾಲೂಕು ಸಂಘದ ಅಧ್ಯಕ್ಷ ಮತ್ತು ಕುಟುಂಬದ ಸದಸ್ಯರನ್ನು ಅಭಿನಂದಿಸಿದರು.

ಕೆ.ಪ್ರಕಾಶ್ ಸುವರ್ಣ, ಕರುಣಾಕರ ನಾಯಕ್, ಬಿ.ಪುಂಡಲೀಕ ಮರಾಠೆ, ನಡಿಮನೆ ವಾದಿರಾಜ್‍ರಾವ್, ಬಾಲಕೃಷ್ಣ ಪೂಜಾರಿ ಉಚ್ಚಿಲ, ಹರಿಪ್ರಸಾದ್ ನಂದಳಿಕೆ, ಪ್ರಮೋದ್ ಸುವರ್ಣ, ಸಂತೋಷ್ ಕಾಪು ಹಾಗೂ ಮತ್ತಿತರ ಪತ್ರಕರ್ತರು ಭಾಗವಹಿಸಿದ್ದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal