ವಿಷಯ : ಪ್ರಕಟಣೆಯ ಕೃಪೆಗಾಗಿ

 


ಮೈಸೂರು ಅಸೋಸಿಯೇಷನ್‍ಗೆ 90 ವರ್ಷ ತುಂಬಿದ ಸಂಭ್ರಮದ ಅಂಗವಾಗಿ 2016 ರಿಂದ ಪ್ರತಿ ವರ್ಷ ಜಾಗತಿಕ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅದರಂತೆ, 2018 ನೆಯ ಸಾಲಿನ ಮೂರನೆಯ ಜಾಗತಿಕ ಕವನ ಸ್ಪರ್ಧೆಯ ಘೋಷಣೆಯನ್ನು ಈ ಮೂಲಕ ಮಾಡಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ಇಡೀ ವಿಶ್ವದಾದ್ಯಂತ ಇರುವ ಎಲ್ಲ ಕನ್ನಡಿಗರು ಇದರಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ಯಾವುದೇ ವಿಷಯದ ಕುರಿತಂತೆ ಕವಿತೆಗಳನ್ನು ರಚಿಸಬಹುದಾಗಿದೆ. ಇಲ್ಲಿ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.

1. ಪ್ರಥಮ ಬಹುಮಾನ: ರೂ. 10,000/-,
2. ದ್ವಿತೀಯ ಬಹುಮಾನ: ರೂ. 5,000/-
3. ತೃತೀಯ ಬಹುಮಾನ: ರೂ. 3,000/-
4. ಪ್ರೋತ್ಸಾಹಕ ಬಹುಮಾನ : ರೂ. 1,000/- (ಇಬ್ಬರಿಗೆ)

ಸ್ಪರ್ಧೆಯ ನಿಯಮಾವಳಿಗಳು:
1) ಕವನಗಳು ಸ್ವರಚಿತವಾಗಿರಬೇಕು. ಅನುವಾದ, ಅನುಕರಣೆ ಆಗಿರಕೂಡದು.
2) ಕವನಗಳು ಸುಮಾರು 30 ಸಾಲಿನ ಮಿತಿಯಲ್ಲಿರಲಿ. ಕಾಗದದ ಒಂದೇ ಮಗ್ಗುಲಲ್ಲಿ ಚಿತ್ತಿಲ್ಲದಂತೆ ಸ್ಪುಟವಾಗಿ ಬರೆದು ಕಳುಹಿಸಿ. (ಹಸ್ತ ಲಿಖಿತ ಯಾ ಕಂಪ್ಯೂಟರ್ ಮುದ್ರಿತ). ಇಮೈಲ್‍ This email address is being protected from spambots. You need JavaScript enabled to view it. ಮೂಲಕವೂ ಕಳುಹಿಸಬಹುದು.
3) ಕವನದ ಕವಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇಮೈಲ್ ಪ್ರತ್ಯೇಕ ಕಾಗದದಲ್ಲಿ ಬರೆದು ಕಳುಹಿಸಿ.
4) ಸ್ಪರ್ಧೆಗೆ ಕಳುಹಿಸಿದ ಕವನಗಳು ಫಲಿತಾಂಶ ಬರುವ ತನಕ ಬೇರೆ ಎಲ್ಲಿಯೂ ಪ್ರಕಟವಾಗಿರಬಾರದು.
5) ಒಬ್ಬರು ಒಂದೇ ಕವನವನ್ನು ಬರೆದು ಕಳುಹಿಸಬೇಕು.
6) ಸ್ಪರ್ಧೆಗೆ ಬಂದ ಕವನಗಳನ್ನು ಮರಳಿಸಲಾಗುವುದಿಲ್ಲ.
7) ತೀರ್ಪುಗಾರರ ತೀರ್ಮಾನವೇ ಅಂತಿಮ.
8) ಕವನಗಳನ್ನು ಸ್ವೀಕರಿಸುವ ಅಂತಿಮ ದಿನಾಂಕ 30.04.2018
9) ತೀರ್ಪುಗಾರರ ತೀರ್ಮಾನವನ್ನು 15.06.2018ರ ನಂತರ ಜಾಹೀರುಗೊಳಿಸಲಾಗುವುದು.
ಆಯ್ಕೆಯಾದ ಕವನಗಳ ಫಲಿತಾಂಶವನ್ನು ಮೈಸೂರು ಅಸೋಸಿಯೇಷನ್‍ನ ಮಾಸಿಕ “ನೇಸರು”ಪತ್ರಿಕೆಯಲ್ಲಿ, ಅಂತರ್ಜಾಲ www.mysoreassociation.in, ಫೇಸ್ಬುಕ್: ಮೈಸೂರುಅಸೋಸಿಯೇಷನ್ಮುಂಬೈಫೇಜ್‍ನಲ್ಲಿಹಾಗೂ ಸ್ಥಳೀಯ ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.

 

Postal Address:
The Mysore Association, Mumbai
393, Bhau Daji Road, Matunga (E), Mumbai – 400019.
Tel: 022- 24024647, 24037065.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal