ಫೆ.05, 2018: ಜಿಲ್ಲೆಯ ತಾಳೆ ಬೆಳೆಗಾರರು ಮತ್ತು ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಾಳೆ ಬೆಳೆಗಾರರ ಸಭೆ ಬಂಟ್ವಾಳ ತಾಲೂಕಿನ ಮೇಲ್ಕಾರಿನ ಬಿರುವ ಭವನದಲ್ಲಿ ಫೆ.5 ರಂದು ಬೆಳಗ್ಗೆ ನಡೆಯಿತು. ಕಾರ್ಯ ಕ್ರಮವನ್ನು ತಾ.ಪಂ.ಸದಸ್ಯ ಸಂಜೀವ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು.

 

 

ಉಡುಪಿ ಮತ್ತು ಶಿವಮೊಗ್ಗ ಜಿಲ್ಲಾ ತಾಳೆ ಬೆಳೆಗಾರರ ಸಂಘದ ಪದಾಧಿಕಾರಿಗಳೂ ಪಾಲ್ಗೊಂಡಿದ್ದರು. ಕಾಸರಗೋಡು ಸಿಪಿಸಿಆರ್‌ಐನ ತೋಟಗಾರಿಕಾ ಬೆಳೆಗಳ ಪ್ರಾಯೋಜನಾ ಸಂಯೋಜಕರಾದ ಡಾ. ಎಚ್.ಪಿ. ಮಹೇಶ್ವರಪ್ಪ‌ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಕೊಂಕೊಡಿ ಪದ್ಮನಾಭ ಭಟ್, ಮಂಗಳೂರು ತೋಟಗಾರಿಕಾ ಉಪನಿರ್ದೇಶಕ ಎಚ್ ಅರ್ ನಾಯಕ್, ಮಡಿಕೇರಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಲೀನಾ, ಉಡುಪಿ‌ಜಿಲ್ಲೆಯ ತಾಳೆ ಬೆಳಗಾರರ ಸಂಘದ ಅದ್ಯಕ್ಷ ಕೆ.ನರಸಿಂಹ ನಾಯಕ್, ಜಿಕ್ಕಮಂಗಳೂರು ಜಿಲ್ಲೆಯ ತಾಳೆ ಬೆಳೆಗಾರರ ಸಂಘದ ಅದ್ಯಕ್ಷ ರತ್ನಾಕರ ಜಿ.ಎನ್.ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು

ವಸಂತ ಭಟ್, ಸಂಯೋಜಕರು ಪ್ರಸ್ತಾವಿಕವಾಗಿ ಮಾತನಾಡಿ ದರು. ತೋಟಗಾರಿಕಾ ಸಹಾಯಕ ನಿರ್ದೇಶಕ ದಿನೇಶ್ ಸ್ವಾಗತಿಸಿ ವಂದಿಸಿದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal