About Us       Contact

(ಚಿತ್ರ  /  ವರದಿ : ರೊನಿಡಾ ಮುಂಬಯಿ)


ಮುಂಬಯಿ, ಡಿ.09: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಾರ್ಯಕಾರಿ ಸಮಿತಿ ಸದಸ್ಯ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಸ್ಯಾಂಡಲ್‍ವುಡ್ ನಟ, ನಿರ್ಮಾಪಕ, ನಿರ್ದೇಶಕ, ಹೊಟೇಲು ಉದ್ಯಮಿ ಡಾ| ರಾಜಶೇಖರ ಆರ್.ಕೋಟ್ಯಾನ್ ಅವರು ಸಕ್ರೀಯ ರಾಜಕೀಯಕ್ಕೆ ದಾಪುಗಾಲಿರಿಸಿದ ಶುಭಾವಸರದಲ್ಲಿ ಅವರ ಅಭಿಮಾನಿ ಬಳಗವು ಇಂದಿಲ್ಲಿ ಶನಿವಾರ ಸಂಜೆ ಮಂಗಳೂರುನ ಡಾ| ಟಿ.ಎಂ.ಎ ಪೈ ಸಭಾಗೃಹದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂ ಭ ಆಯೋಜಿಸಿತ್ತು.

ಮುಂಬಯಿನ ಯುವೋದ್ಯಮಿ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ ಇಂಡಸ್ಟ್ರಿ ಸಂಸ್ಥೆಯ ನಿರ್ದೇಶಕ  ಹರೀಶ್ ಜಿ.ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಅರಣ್ಯ ಮತ್ತು ದ.ಕ ಜಿಲ್ಲಾ ಉಸ್ತುವರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ನಿವೃತ್ತ ಎಸ್ಪಿ, ಶ್ರೀ ಕ್ಷ್ರೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಪಡುಮಲೆ ಇದರ ಕಾರ್ಯಾಧ್ಯಕ್ಷ ಪಿತಾಂಬರ ಹೆರಾಜೆ ಅಭಿನಂದನಾ ಭಾಷಣಗೈದರು.

 

 

 

 

 

 


ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್, ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್, ಶಾಸಕರುಗಳಾದ ಜೆ.ಆರ್ ಲೋಬೊ, ಮೊೈದ್ಧೀನ್ ಬಾವ, ಮಂಗಳೂರು ಮೇಯರ್ ಕವಿತಾ ಸನೀಲ್, ಕಾಂಗ್ರೇಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಮಹಿಳಾಧ್ಯಕ್ಷೆ ಶಾಲೆಟ್ ಪಿಂಟೋ, ಜಿಲ್ಲಾ ಯುವಧ್ಯಕ್ಷ ಮಿಥುನ್ ರೈ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ ಇಂಡಸ್ಟ್ರಿ ಅಧ್ಯಕ್ಷ ಎನ್.ಟಿ ಪೂಜಾರಿ, ಚಿತ್ತರಂಜನ್ ಕಂಕನಾಡಿ, ಚಂದ್ರಶೇಖರ್ ಸುವರ್ಣಮೂಲ್ಕಿ, ಕೆಪಿಸಿಸಿ ಕಾರ್ಯದರ್ಶಿ ನವೀನ್ ಡಿ'ಸೋಜಾ, ಪ್ರತಿಭಾ ಕುಳಾಯಿ, ಸುರೇಂದ್ರ ಎ.ಪೂಜಾರಿ (ಸಾಯಿಕೇರ್), ನರೇಶ್‍ಕುಮಾರ್ ಸಸಿಹಿತ್ಲು, ದಿನೇಶ್ ಸುವರ್ಣ, ದೀಪಕ್ ಪೂಜಾರಿ, ರವಿ ಪೂಜಾರಿ, ಸೇರಿದಂತೆ ಅನೇಕ ಕಾಂಗ್ರೇಸ್ ಮುಂದಾಳುಗಳು ಉಪಸ್ಥಿತರಿದ್ದು ರಾಜಶೇಖರ ಕೋಟ್ಯಾನ್ ಅವರನ್ನು ಸನ್ಮಾನಿಸಿ ಗೌರವಿಸಿ ಶುಭಾರೈಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal