About Us       Contact

ಮುಂಬಯಿ, ಮೇ.31: ಹರೀಶ್ ಕುಮಾರ್ ಕಾಂಗ್ರೇಸ್ ಪಕ್ಷದ ಕಷ್ಟ ಕಾಲದಲ್ಲಿ ನಿಷ್ಠೆಯಿಂದ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರ ಪ್ರೀತಿಗೆ, ವರಿಷ್ಠರ ಮೆಚ್ಚುಗೆಗೆ ಪಾತ್ರರಾದ ಪ್ರಾಮಾಣಿಕ ರಾಜಕಾರಣಿ. ಕಾಂಗ್ರೇಸ್ ಪಕ್ಷದ ದ.ಕ ಜಿಲ್ಲಾಧ್ಯಕ್ಷರಾಗಿಯೂ ತನ್ನ ಕರ್ತವ್ಯವನ್ನು ಕಾರ್ಯಕರ್ತರ ಮನಸ್ಸರಿತು ನಿರ್ವಹಿಸುತ್ತಾ ಬಂದ ಶ್ರೀ ಕೆ. ಹರೀಶ್ ಕುಮಾರ್ ರವರನ್ನು ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವ ಪಕ್ಷದ ವರಿಷ್ಠ ಮಂಡಳಿಯ ನಿರ್ಧಾರ, ಪಕ್ಷ ನಿಷ್ಠೆಗೆ ಸಂದ ಅರ್ಹ ಗೌರವ.

ಹರೀಶ್ ಕುಮಾರ್

 

ಇದು ಪಕ್ಷದ ಸೋಲಿನಿಂದ ನೊಂದ ಕಾರ್ಯಕರ್ತರಲ್ಲಿ ಪುನಶ್ಚೇತನ ತುಂಬಲು ಸಹಕಾರಿಯಾಗಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೇಸ್ ಪ್ರಚಾರ ಸಮಿತಿಯ ವೀಕ್ಷಕ ಫಾರೂಕ್ ಉಳ್ಳಾಲ್ ಹರ್ಷ ವ್ಯಕ್ತ ಪಡಿಸಿದ್ದಾರೆ.

ಪಕ್ಷದ ಅಧ್ಯಕ್ಷನಾದ ಅಲ್ಪ ಸಮಯದಲ್ಲೇ ಕಾರ್ಯಕರ್ತರ ವಿಶ್ವಾಸ ಗಳಿಸಲು ಸಾಧ್ಯವಾದ ಹರೀಶ್ ಕುಮಾರ್ ಶಾಸಕರಾಗಿಯೂ ಪಕ್ಷ ಮತ್ತು ನಾಡಿನ ಅಭಿವೃದ್ಧಿ-ಕೀರ್ತಿಗೂ ಕಾರಣರಾಗಲಿ, ಹೊಸ ಹುದ್ದೆ ಅಭಿನಂದನಾರ್ಹ ಕೆಲಸಗಳಿಗೆ ಪೂರಕವಾಗಲಿ ಎಂದು ಹಾರೈಸಿರುವ ಫಾರೂಕ್ ಉಳ್ಳಾಲ್ ಈ ಆಯ್ಕೆಗೆ ಸಹಕರಿಸಿದ ಹಿರಿಯ ನಾಯಕರಿಗೆ ಕಾರ್ಯಕರ್ತರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರಲ್ಲದೆ, ಶಾಸಕತ್ವದ ಅವಧಿಯಲ್ಲಿ ಹರೀಶ ಕುಮಾರ್‍ರಿಗೆ ಉತ್ತರೋತ್ತರ ಯಶಸ್ಸು ಸಿಗಲಿ ಎಂದೂ ಪತ್ರಿಕಾ ಹೇಳಿಕೆಯಲ್ಲಿ ಫಾರೂಕ್ ಉಳ್ಳಾಲ್ ಶುಭ ಕೋರಿದ್ದಾರೆ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal