About Us       Contact

ಮಂಗಳೂರು ವಿಧಾನಸಭಾ ಕ್ಷೇತ್ರದ CPI(M) ಪಕ್ಷದ ಚುನಾವಣಾ ಕಛೇರಿಯನ್ನು ಶ್ರೀ ಜೈ ವೀರಮಾರತಿ ವ್ಯಾಯಾಮ ಶಾಲೆಯ ಮುಖ್ಯ ಶಿಕ್ಷಕರಾದ ರಾಜೀವ್ ಮೆಂಡನ್ ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ರಾಜೀವ್ ಮೆಂಡನ್ ರವರು ನಾವೆಲ್ಲರೂ ಒಟ್ಟು ಸೇರಿ ಕೆಲಸ ಮಾಡಿದರೆ ಖಂಡಿತಾ ಜಯ ನಮ್ಮದೇ. ಜನ ಸಾಮಾನ್ಯರ ಅಭಿವೃದ್ಧಿಯಾಗಬೇಕಾದರೆ ಸಿಪಿಐಎಂ ಗೆಲ್ಲಲೇ ಬೇಕು ಈ ನಿಟ್ಟಿನಲ್ಲಿ ಯುವ ಅಭ್ಯರ್ಥಿಗಳು ಗೆಲ್ಲಬೇಕು, ನಿತಿನ್ ಕುತ್ತಾರ್ ಗೆಲುವು ಸಾಧಿಸಿದರೆ ಒಳ್ಳೆಯ ಕೆಲಸ ನಿರ್ವಹಿಸುವುದರಲ್ಲಿ ಯಾವುದೇ ಸಂಶಯಯವಿಲ್ಲ, ಈ ಹಿಂದೆ ನಮ್ಮ ಕ್ಷೇತ್ರದಲ್ಲಿ ಎರಡು ಬಾರಿ ನಮ್ಮ‌ ನಾಯಕರು ಶಾಸಕರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಬಾರಿ ನಮ್ಮ ಪಕ್ಷದಲ್ಲಿ ಯುವ ತರುಣನನ್ನು ಚುನಾವಣಾ ಕಣಕ್ಕೆ ಆಯ್ಕೆ ಮಾಡಿರುವುದು ಒಂದು ಒಳ್ಳೆಯ ತೀರ್ಮಾನ ಹಾಗಾಗಿ ನಾವೆಲ್ಲರೂ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಹೇಳಿ. ನಿತಿನ್ ಕುತ್ತಾರ್ ಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ CPI(M)ಪಕ್ಷದ ಅಭ್ಯರ್ಥಿ ನಿತಿನ್ ಕುತ್ತಾರ್, CPI(M) ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಮಹಿಳಾ ಮುಖಂಡರಾದ ಪದ್ಮಾವತಿ ಶೆಟ್ಟಿ ಉಪಸ್ಥಿತಿರಿದ್ದರು.

ಸಭೆಯ ಅಧ್ಯಕ್ಷತೆಯನ್ನು ಚುನಾವಣಾ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ಬಬ್ಬುಕಟ್ಟೆ ವಹಿಸಿದ್ದರು. ಜಯಂತ ನಾಯ್ಕ ಸ್ವಾಗತಿಸಿದರು. ವಿಲಾಶಿನಿ ತೊಕ್ಕೊಟ್ಟು ಧನ್ಯವಾದ ಗೈದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal