About Us       Contact

ಫೆ.26, 2018: ಮಹಾನಗರದ ಹೆಸರಾಂತ ಉದ್ಯಮಿ, ಸಂಘಟಕ ಕರ್ನಿರೆ ವಿಶ್ವನಾಥ ಶೆಟ್ಟಿ ಅವರನ್ನು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕ್ಷೇತ್ರವೊಂದರಲ್ಲಿ ಅಭ್ಯರ್ಥಿಯಾಗಿ ನಿಲ್ಲಿಸುವ ಭಾರೀ ಸಿದ್ಧತೆ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಆ ನಿಟ್ಟಿನಲ್ಲಿ ಕರ್ನಿರೆ ಅವರ ಮನವೊಲಿಸಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಕೆಲವೊಂದು ಪಕ್ಷಗಳ ಮುಖ್ಯಸ್ಥರು ಮಾತುಕತೆ ನಡೆಸುವುದಾಗಿ ತಿಳಿದು ಬಂದಿದೆ.

 

 

ಬರುವ ಮೇ ತಿಂಗಳಲ್ಲಿ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯ ಹಿನ್ನಲೆಯಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಜನಪ್ರತಿನಿಧಿ, ಮುಖಂಡರುಗಳನ್ನು ತಮ್ಮತಮ್ಮ ಪಕ್ಷಗಳತ್ತ ಕರೆತರಲು ಕಸರತ್ತು ನಡೆಸುತ್ತಾ ಆಪರೇಶನ್ ಪ್ರಕ್ರಿಯೆಯಲ್ಲಿ ತೊಡಗಿಸಿ ಕೊಳ್ಳುತ್ತಿದ್ದಂತೆಯೇ ಪ್ರಭಾವಿ ನಾಯಕರೆಣಿಸಿದ ಕರ್ನಿರೆ ಜೊತೆ ಇದೀಗಲೇ ಮಾತುಕತೆ ನಡೆಸಿ ತಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಮಾತುಕತೆ ನಡೆಯುತ್ತಿದೆ ಎಂದು ವದಂತಿಗಳು ದಟ್ಟವಾಗಿವೆ.

ಬಂಟ ಸಮಾಜದ ಧುರೀಣರಾಗಿ ಗುರುತಿಸಿ ಕೊಂಡಿರುವ ಕರ್ನಿರೆ ಸಮಾಜ ಸೇವೆಯ ಮುಂಚೂಣಿಯಲ್ಲಿ ಕಾಣಿಸುತ್ತಿದ್ದು ನಾಡಿನ ಎಲ್ಲಾ ಸಮಾಜಗಳ ಹಿತಕ್ಕಾಗಿ ಶ್ರಮಿಸಿ ಜನಾನುರೆಣಿಸಿ ಕೊಂಡಿರುವ ಬಗ್ಗೆ ಕಲೆಹಾಕಿದ ರಾಜಕೀಯ ನೇತಾರರು ತೆರೆಮರೆಯಲ್ಲಿದ್ದೇ ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ ಎನ್ನಲಾಗಿದೆ. ಕರ್ನಿರೆ ವಿಶ್ವನಾಥ್ ಶೆಟ್ಟಿ ಅವರನ್ನು ತವರೂರ ಸುರತ್ಕಲ್ (ಮಂಗಳೂರು ಉತ್ತರ) ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷಗಳ ಮುಖಂಡರು ಸಂಪರ್ಕಿಸಿರುವುದಾಗಿ ತಿಳಿದು ಬಂದಿದೆ. ಇತ್ತೀಚೆಗೆ ಜಾತ್ಯಾತೀತ ಜನತಾ ಪಕ್ಷದ ರಾಷ್ಟ್ರಧ್ಯಕ್ಷ ಹೆಚ್.ಡಿ ದೇವೇಗೌಡ, ರಾಜ್ಯಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿ ಕೊಂಡ ಕರ್ನಿರೆ ಇದೀಗ ಎಂಎಲ್‍ಎ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದಾರೆ.

ಮಹಾನಗರದಲ್ಲಿನ ಅಪಾರ ಅಭಿಮಾನಿ ಬಳಗ ಹೊಂದಿರುವ ಕರ್ನಿರೆ ವಿವಿಧ ಕ್ಷೇತ್ರಗಳಲ್ಲಿ ಸೇವಾ ನಿರತರಾಗಿ ಸಾಹಸ, ಶ್ರದ್ಧೆಯಿಂದ ಬದುಕನ್ನು ಸಾಗಿಸಿ ತಮ್ಮ ಅಸಾಧಾರಣ ಸಾಮರ್ಥ್ಯಯುಳ್ಳ ಸಾಧನೆಯಿಂದ ಗುರುತಿಸಿ ಕೊಂಡಿರುವರು.ಇಂತಹ ಸಾಧನಶೀಲ ವಿಶ್ವನಾಥ ಶೆಟ್ಟಿ ಅವರ ಸ್ಪರ್ಧೆ ಅಗತ್ಯವಾಗಿದೆ ಎಂದು ಅವರ ನಿಕಟವರ್ತಿ ಓರ್ವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡದ ಅಭ್ಯುದಯಕ್ಕೆ ಮುಂಬಯಿಯಲ್ಲಿ ನೆಲೆಯಾದ ತುಳುಕನ್ನಡಿಗರ ಕೊಡುಗೆ ಗಮನೀಯವಾದದ್ದು. ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲಾ ರಂಗದ ಬೆಳವಣಿಗೆಗೆ ಮುಂಬಯಿಗರ ಕೊಡುಗೆ ಗಮನಾರ್ಹ. ಹೊರನಾಡ ಮುಂಬಯಿಯಲ್ಲಿ ಗುರುತರ ಸಮಾಜ ಸೇವಕರಾಗಿದ್ದು, ಸದಾ ಜನಪರ ಸೇವೆಯಲ್ಲಿಯದ್ದು ಅಪ್ರತಿಮ ಪ್ರತಿಭೆಯಿಂದ ಶ್ರೇಷ್ಠ ಸಮಾಜ ಸೇವಕ ಸಂಘಟಕರಾಗಿ ಶ್ರಮಿಸಿ ಸಾಮಾಜಿಕ ಕ್ಷೇತ್ರಕ್ಕೆ ಜೀವನವನ್ನೇ ಮುಡುಪಾಗಿರಿಸಿದ ಕರ್ನಿರೆ ಶಾಸಕ ಸ್ಥಾನಕ್ಕೆ ಸೂಕ್ತವ್ಯಕ್ತಿ ಆಗಿದ್ದಾರೆ ಎಂದೂ ಅವರ ನಿಕಟವರ್ತಿಯೋರ್ವರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕರ್ನಿರೆ ಬೋಲ ನಂದಬೆಟ್ಟು ನಿವಾಸಿ ವಿಶ್ವನಾಥ್ ಶೆಟ್ಟಿ ವಿಜಯ ಕಾಲೇಜ್ ಮೂಲ್ಕಿ ಇಲ್ಲಿನ ಪದವಿಧರರಾಗಿ ಬದುಕನ್ನು ಅರಸಿಕೊಂಡು ಮುಂಬಯಿಗೆ ಬಂದು ಸದ್ಯ ಹೋಟೇಲು ಉದ್ಯಮದಲ್ಲಿ ವಿರಾಜಮಾನ ಉದ್ಯಮಿ. ಹೊಟೇಲಿಗರ ಸಂಘಟನೆಗಾಗಿ ವಸಾಯಿ ತಾಲೂಕು ಹೊಟೇಲು ಅಸೋಸಿಯೇಶನ್ ಸ್ಥಾಪಿಸಿ ಅಧ್ಯಕ್ಷರಾಗಿ ಮತ್ತು ವಸಾಯಿ ಪರಿಸರದಲ್ಲಿ ತಾವೇ ಹುಟ್ಟು ಹಾಕಿದ ತುಳುನಾಡ ಬಂಟ್ಸ್ ವಸಾಯಿ ತಾಲೂಕ ಸ್ಥಾಪಕಾಧ್ಯಕ್ಷರಾಗಿ ಪರಿಸರದ ಸಾಮಾಜಿಕ ನೆಲೆಯಲ್ಲಿ ಪ್ರಸಿದ್ಧಿ ಪಡೆದ ಯುವ ಉದ್ಯಮಿಯಾಗಿ ಮೇರು ವ್ಯಕ್ತಿತ್ವದ ಯುವ ಹೊಟೇಲಿಗರಾಗಿದ್ದಾರೆ. ಮುಂಬಯಿ ಮಹಾನಗರದ ಹತ್ತಾರು ಸಂಘಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಯುವಜನತೆಗೆ ಪ್ರೋತ್ಸಾಹಕರಾಗಿ ಒಬ್ಬ ಸಾಧನಾಶೀಲ ಸಂಘಟಕ ಎಣಿಸಿದ್ದಾರೆ. ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷರಾಗಿ ಅಸಂಖ್ಯಾತ ಸಮಾಜ ಬಾಂಧವರನ್ನು ಸಂಘದ ಸದಸ್ಯರನ್ನಾಗಿಸಿ ಸಾಧನೀಯ ಸೇವೆಗೈದ ಕರ್ಣಿರೆ ಹತ್ತಾರು ಚಿನ್ನದ ಪದಕಗಳಿಂದ ಪುರಸ್ಕೃತರಾಗಿದ್ದಾರೆ. ಸಂಘದ ಸಮಾಜ ಸೇವಾ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾಗಿಯೂ ಶ್ರಮಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಸದ್ಯ ಬಂಟ್ಸ್ ಸಂಘ ಮುಂಬಯಿ ಇದರ ಟ್ರಸ್ಟೀ ಆಗಿದ್ದಾರೆ.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal