ಶ್ರೀ ಶಾಂತ ದುರ್ಗಾದೇವಿ ಮಂದಿರದ ಸಂಸ್ಥಾಪಕ ಧರ್ಮದರ್ಶಿ ಶ್ರೀ ಶ್ಯಾಮನಂದ ಸ್ವಾಮೀಜಿ ದೈವಕ್ಯ

ಮುಂಬಯಿ, ಅ.21: ಗೋರೆಗಾಂವ್ ಪಶ್ಚಿಮದಲ್ಲಿನ ಮೋತಿಲಾಲ್ ನಗರ ಇಲ್ಲಿನ ಶ್ರೀ ಶಾಂತ ದುರ್ಗಾ ಚಾರಿಟೇಬಲ್ ಟ್ರಸ್ಟ್ ಮಂದಿರದ ಸಂಸ್ಥಾಪಕ ಶ್ರೀ ಶ್ಯಾಮನಂದ ಸ್ವಾಮೀಜಿ (70.) ಅವರು ಇಂದಿಲ್ಲಿ ಬುಧವಾರ ಮುಂಜಾನೆ ಮಂದಿರದ ನಿವಾಸದಲ್ಲಿ ದೈವಕ್ಯರಾದರು.

ಸ್ವಾಮೀಜಿ ಹುಟ್ಟೆಸರು ಶ್ಯಾಮ ಎನ್.ಸಾಲ್ಯಾನ್ ಆಗಿದ್ದು ದಕ್ಷಿಣ ಕನ್ನಡದ ಕಾರ್ಕಳ ತಾಲೂಕು ಪೆವಾರ್ಜೆ ಮೂಲದವರಾಗಿದ್ದು, ಪತ್ನಿ, ಮಂದಿರದ ವಿಶ್ವಸ್ಥ ಸದಸ್ಯರುಗಳಾದ ಉದಯ ಎಸ್.ಸಾಲ್ಯಾನ್ ಮತ್ತು ಸೂರಜ್ ಎಸ್.ಸಾಲ್ಯಾನ್ ಎರಡು ಗಂಡು ಸೇರಿದಂತೆ ಅಪಾರ ಬಂಧು ಬಳಗ, ಭಕ್ತಾದಿ ವೃಂದ ಅಗಲಿದ್ದಾರೆ.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal