ನಿಧನ

 

ಪ್ರೇರಣಾ ಮಾತೆ ಪ್ರಸಿದ್ಧ ಜಲಜ ಅಚ್ಚುತ ಶೆಟ್ಟಿ

ಮುಂಬಯಿ, ಮಾ.04: ಉಪನಗರದ ಹೆಸರಾಂತ ಯುವೋದ್ಯಮಿ, ವಿಹಂಗ್ ಹೊಟೇಲ್‍ನ ಪಾಲುದಾರ ರತ್ನಾಕರ್ ಎ.ಶೆಟ್ಟಿ ಇವರ ಮಾತೃಶ್ರೀ ಜಲಜ ಅಚ್ಚುತ ಶೆಟ್ಟಿ (89.) ಇವರು ಕಳೆದ ಮಂಗಳವಾರ ಮುಂಜಾನೆ ಕಟಪಾಡಿ ಮಣಿಪುರದ ಸ್ವನಿವಾಸದಲ್ಲಿ ವಯೋವೃದ್ಧ ಸಹಜತೆಯಿಂದ ನಿಧನರಾದರು.

ಸಹೃದಯಿ, ಸಭ್ಯ ಸುಸಂಸ್ಕೃತ ಗೃಹಿಣಿಯಾಗಿದ್ದು ಸಮಾಜಮುಖಿ ಚಿಂತನೆ ಉಳ್ಳುವರೆಣಿಸಿ ಕೊಡುಗೈದಾನಿಯಾಗಿ ಶೈಕ್ಷಣಿಕ ಮತ್ತು ಧಾರ್ಮಿಕ ಸೇವೆಗಳಲ್ಲಿ ತೊಡಗಿಸಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದ ಮಾತೃಹೃದಯಿ, ಎಲ್ಲರನ್ನೂ ತನ್ನವರು ಎಂದು ಪ್ರೀತಿಸುತ್ತಾ `ಪ್ರೇರಣಾ ಮಾತೆ' ಎಂದೇ ಹೆಸರಾಂತ ಮೃತರು ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮಕ್ಕಳು ಸೇರಿದಂತೆಅಪಾರ ಬಂಧು-ಬಳಗವನ್ನು ಅಗಲಿದ್ದು ಉಡುಪಿ ಉದ್ಯಾವರ ಇಲ್ಲಿನ ಮುಕ್ತಿಧಾಮದಲ್ಲಿ ಅಂತಿಮ ವಿಧಿಗಳೊಂದಿಗೆ ಅಗ್ನಿಸ್ಪರ್ಶ ನಡೆಸಲಾಯಿತು.

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal