ಭಾರತ್ ಕೋ.ಅಪರೇಟಿವ್ ಬ್ಯಾಂಕ್‍ನ
ಮಾಜಿ ನಿರ್ದೇಶಕ ದಾಮೋದರ ಸಿ.ಕುಂದರ್ ನಿಧನ


ಮುಂಬಯಿ, ಜ.28: ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ಮಾಜಿ ನಿರ್ದೇಶಕ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಬೋರಿವಿಲಿ ಸ್ಥಳೀಯ ಕಛೇರಿಯ ಮಾಜಿ ಕಾರ್ಯಾಧ್ಯಕ್ಷ ದಾಮೋದರ ಸಿ.ಕುಂದರ್ (73.) ಇದಿಲ್ಲಿ ಮಂಗಳವಾರ ಮಧ್ಯಾಹ್ನ ಅನಾರೋಗ್ಯದಿಂದ ಅಂಧೇರಿ ಪಶ್ಚಿಮದ ಜೆ.ಪಿ ರೋಡ್ ಇಲ್ಲಿನ ಮನು ಕೋ.ಅಪರೇಟಿವ್ ಸೊಸೈಟಿ ಅಪಾರ್ಟ್‍ಮೆಂಟ್‍ನ ಸ್ವನಿವಾಸದಲ್ಲಿ ನಿಧನರಾದರು.

ಅವಿಭಜಿತ ದಕ್ಷಿಣ ಕನ್ನಡ (ಉಡುಪಿ) ಜಿಲ್ಲೆಯ ಮಲ್ಪೆ ಮೂಲತಃ ಇವರು ಮಹಾನಗರ ಮತ್ತು ಉಪನಗರಗಳಲ್ಲಿ ಸ್ಟರ್ಲಿಂಗ್ ಮ್ಯಾನ್‍ಪವರ್ ಕನ್ಸಲ್ಟೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದು, ಬೋರಿವಿಲಿ ಐಸಿ ಕಾಲೋನಿ ಇಲ್ಲಿನ ಸಿಲ್ವರ್ ಕೊೈನ್ ಹೊಟೇಲ್‍ನ ಮಾಲೀಕರಾಗಿ ಪ್ರಸಿದ್ಧ ಉದ್ಯಮಿ ಎಂದೇ ಗುರುತಿಸಿಕೊಂಡಿದ್ದರು.

ಸಹೃದಯಿ, ಅಸೀಮ ಛಲವಾದಿ, ಅವಿರತ ಪರಿಶ್ರಮದಿಂದ ಸುಸಂಸ್ಕೃತ ಸಭ್ಯ, ಸದೃಹಸ್ಥನಾಗಿ ಜೀವನ ರೂಪಿಸಿ ಸಮಾಜದ ಏಳಿಗೆಗಾಗಿ ನಿಷ್ಠಾವಂತರಾಗಿ ಶ್ರಮಿಸಿದ್ದರು. ಅದೆಷ್ಟೋ ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ದಾನಧರ್ಮಗೈದು ಜನಾನುರಾಗಿದ್ದ ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಮನು ಅಪಾರ್ಟ್‍ಮೆಂಟ್‍ಗೆ ತೆರಳಿದ ಅವರ ಅಪಾರ ಅಭಿಮಾನಿಗಳು, ಹಿತೈಷಿಗಳು, ಭಾರತ್ ಬ್ಯಾಂಕ್ ಮಂಡಳಿಯ ನಿರ್ದೇಶಕರು, ಉನ್ನತಾಧಿಕಾರಿಗಳು ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು.

ದಾಮೋದರ ಕುಂದರ್ ನಿಧನಕ್ಕೆ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಗೌರವಾಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಉಪಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ.ಸಾಲ್ಯಾನ್, ಎಲ್ಲಾ ನಿರ್ದೇಶಕರು, ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ, ಬಿಸಿಸಿಐ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಮಾಜಿ ಅಧ್ಯಕ್ಷರಾದ ಎಲ್.ವಿ ಅವಿೂನ್, ನಿತ್ಯಾನಂದ ಡಿ.ಕೋಟ್ಯಾನ್, ವಾಸುದೇವ ಆರ್.ಕೋಟ್ಯಾನ್, ಕೆ.ಭೋಜರಾಜ್ (ಕುಳಾಯಿ), ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮತ್ತು ಬೋರಿವಿಲಿ ಹಾಗೂ ಇತರ ಸ್ಥಳೀಯ ಸಮಿತಿ ಇದರ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರನೇಕರು, ಭಾರತ್ ಬ್ಯಾಂಕ್‍ನ ಉನ್ನತಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು (ಜು.28) ರಾತ್ರಿ 8.00 ಗಂಟೆಗೆ ಓಶಿವಾರ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal