Print

 

ನಿಧನ

ಬಿ.ಸತೀಶ್ ರಾವ್(55)


ಬಂಟ್ವಾಳ: ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ಮಾಲೀಕರೂ ಆಗಿರುವ ಹಲವು ಉದ್ಯಮಗಳನ್ನು ಬಿ.ಸಿ.ರೋಡಿನಲ್ಲಿ ನಡೆಸುತ್ತಿರುವ ಬಿ.ಸತೀಶ್ ರಾವ್ (55) ಜ.26ರ ಭಾನುವಾರ ನಿಧನ ಹೊಂದಿದರು. ಪತ್ನಿ, ಪುತ್ರ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು, ತಾಯಿ ಹಾಗೂ ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ. ಬಿ.ಸಿ.ರೋಡಿನ ದಿ.ಡಾ. ಶ್ರೀನಿವಾಸ ರಾವ್ ಅವರ ಎರಡನೇ ಪುತ್ರರಾಗಿದ್ದ ಸತೀಶ್ ರಾವ್, ಪದ್ಮಾ ಕಾಂಪ್ಲೆಕ್ಸ್, ಡಾ. ಬಿ.ಶ್ರೀನಿವಾಸ ರಾವ್ ವಾಣಿಜ್ಯ ಸಂಕೀರ್ಣ ಸಹಿತ ನಾನಾ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. ಕಲಾಸಕ್ತರೂ ಆಗಿದ್ದ ಅವರು, ಕಲಾಪೋಷಕರೂ ಆಗಿದ್ದರು. ಸತೀಶ್ ರಾವ್ ನಿಧನಕ್ಕೆ ನಾನಾ ಕ್ಷೇತ್ರಗಳಲ್ಲಿರುವ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಮನೆಗೆ ಭೇಟಿ ನೀಡಿ ಕುಟುಂಬದವರನ್ನು ಸಂತೈಸಿದರು.