ನಿಧನ

ನಾರಾಯಣ ಉಚ್ಚಿಲ್ಕರ್ (81.)

 ಮುಂಬಯಿ, ಡಿ.01: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸೋಮೇಶ್ವರ ಉಚ್ಚಿಲ ಮೂಲತಃ ನಾರಾಯಣ ಉಚ್ಚಿಳ್ಕರ್ (81.) ಇಂದಿಲ್ಲಿ ಮುಂಜಾನೆ ಅನಾರೋಗ್ಯದಿಂದ ಉಪನಗರ ಥಾಣೆ ಪಶ್ಚಿಮದ ಕರ್ವಾಲೋ ನಗರ್ ಇಲ್ಲಿನ ದುರ್ಗಾ ಅಪಾರ್ಟ್‍ಮೆಂಟ್‍ನ ಸ್ವಗೃಹದಲ್ಲಿ ನಿಧನರಾದರು.

ತಾಯಿನುಡಿ ಬಳಗ, ಬೋವಿ ಯಂಗ್‍ಮೆನ್ಸ್ ಅಸೋಸಿಯೇಶನ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿ ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿ ಸೇವೆಸಲ್ಲಿಸಿದ್ದರು. ಸಾಹಿತ್ಯ, ಯಕ್ಷಗಾನ ವಿಮರ್ಶಕ, ಸಾಹಿತ್ಯ ಪರಿಚಾರಕರಾಗಿ, ಯಕ್ಷಗಾನ ಅಭಿಮಾನಿಯಾಗಿ ಓರ್ವ ನಿಷ್ಠಾವಂತ ಸಮಾಜ ಸೇವಕರಾಗಿ ಜನಾನುರೆಣಿಸಿದ್ದರು. ಮಹಾನಗರ ಮುಂಬಯಿಯಲ್ಲಿನ ಹೆಸರಾಂತ, ಪ್ರತಿಷ್ಠಿತ ಶಿಕ್ಷಕಿ ಡಾ| ವಾಣಿ ಉಚ್ಚಿಲ್ಕರ್ ಅವರ ಪಿಹೆಚ್‍ಡಿ ಪದವಿಗೆ ಬೆನ್ನೆಲುಬುವಾಗಿ ಸಹಯೋಗವಿತ್ತ ಮೃತರು ಪತ್ನಿ ಡಾ| ವಾಣಿ ಉಚ್ಚಿಲ್ಕರ್, ಇಬ್ಬರು ಸುಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದಿಲ್ಲಿ ರವಿವಾರ ಮಧಾಹ್ನ ಥಾಣೆ ಪಶ್ಚಿಮದಲ್ಲಿನ ರುಧ್ರಭೂಮಿಯಲ್ಲಿ ನೆರವೇರಿಸಲಾಯಿತು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal