ನಿಧನ

ಫೆಲಿಕ್ಸ್ ಜೆ.ಡಿ'ಸೋಜಾ (90.) 

ಮುಂಬಯಿ, ಆ.08: ಕನ್ನಡ ಸಂಘ ಸಾಂತಾಕ್ರೂಜ್ ಇದರ ಮಾಜಿ ಅಧ್ಯಕ್ಷ ಫೆಲಿಕ್ಸ್ ಜೋಸೆಫ್ ಡಿ'ಸೋಜಾ (90.) ಕಳೆದ ಬುಧವಾರ ವೃದ್ಧಾಪ್ಯದಿಂದ ಬಾಂದ್ರಾದಲ್ಲಿ ನಿಧನ ಹೊಂದಿದರು.

ದ.ಕ ಜಿಲ್ಲೆಯ ಬಂಟ್ವಾಳ ತಾಲೂಕು ಲೋರೆಟ್ಟೊ ಮೂಲತಃ ಫೆಲಿಕ್ಸ್ ಮಂಗಳೂರು ಕೆಪಿಟಿಯಲ್ಲಿ ಸಿವಿಲ್ ಇಂಜೀನೀಯರ್ ಪದವಿ ಗಳಿಸಿ ಮುಂಬಯಿಯಲ್ಲಿ ನೆಲೆಯಾಗಿ ದುರ್ಗಾಪುರ್ ಹಾಗೂ ಸಿಂಡ್ರಿ ಫರ್ಟಿಲೈಸರ್ ಸಂಸ್ಥೆಗಳಲ್ಲಿ ಆರ್ಕಿಟೆಕ್ಟ್, ಕನ್ಸಲ್ಟಿಂಗ್ ಇಂಜಿನೀಯರ್ ಆಗಿ ವೃತ್ತಿಯಲ್ಲಿದ್ದು ಬಳಿಕ ಸ್ವತಃ ಗ್ರಲಿಕ್ಸ್ ಕನ್‍ಸ್ಟ್ರಕ್ಶನ್ ಕಂಪೆನಿ ಇಂಜೀನೀಯರ್ಸ್ ಎಂಡ್ ಕಾಂಟ್ರಕ್ಟರ್ಸ್ ಸಂಸ್ಥೆ ನಡೆಸಿ ನಿವೃತ್ತ ಜೀವನ ಸಾಗಿಸುತ್ತಿದ್ದರು.

ಮೃತರು ಪತ್ನಿ, ನಾಲ್ಕು ಗಂಡು, ಒಂದು ಹೆಣ್ಣು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ (ಆ.09) ಸಂಜೆ 3.00 ಗಂಟೆಗೆ ಬಾಂದ್ರಾ ಪಶ್ಚಿಮದ ಸ್ವನಿವಾಸದಿಂದ ಹೊರಟು ಸೈಂಟ್ ಆ್ಯಂಡ್ರೂಸ್ ಇಗರ್ಜಿ ಬಾಂದ್ರಾ ಇಲ್ಲಿ ಸಂಜೆ 3.30 ಗಂಟೆಗೆ ನೆರವೇರಲಿದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ.

1985- 2000 ತನಕ ಸುಮಾರು ಹದಿನೈದು ವರ್ಷಗಳಲ್ಲಿ ನಿರಂತರವಾಗಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಫೆಲಿಕ್ಸ್ ಡಿ'ಸೋಜಾ ನಿಧನಕ್ಕೆ ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್.ವಿ ಅವಿೂನ್, ಉಪಾಧ್ಯಕ್ಷ ಗುಣಪಾಲ ಶೆಟ್ಟಿ ಐಕಳ, ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ, ಗೌ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಗೌ| ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಗೌ| ಜೊತೆ ಕೋಶಾಧಿಕಾರಿ ದಿನೇಶ್ ಬಿ.ಅವಿೂನ್, ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರು, ಗ್ರೆಗೋರಿ ಅಲ್ಮೇಡಾ ವಕೋಲಾ ಶ್ರದ್ಧಾಂಜಲಿ ಅರ್ಪಿಸಿ ಸಂತಾಪ ವ್ಯಕ್ತ ಪಡಿಸಿದ್ದಾರೆ.

.........................................................

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal