ನಿಧನ

ಪ್ರವೀಣ್ ಕೋಟ್ಯಾನ್ (51)

ಕೋಟೆ ಮುಂಬಯಿ ಪರಿಸರದ ಜೆಮಿನಿ ಟೈಲರ್ಸ್‍ನ ಮಾಲಕ ದಿವಂಗತ ರಾಮಪ್ಪ ಕೋಟ್ಯಾನ್ (ಅತ್ತಾವರ)ರವರ ಕಿರಿಯ ಪುತ್ರ ಪ್ರವೀಣ್ ಕೋಟ್ಯಾನ್ (ಅಣ್ಣು) (51) ರವರು ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 20.06.2019 ರಂದು ನಿಧನರಾಗಿರುವರು. ಮೃತರು ಮೂಲತಃ ಮಂಗಳೂರಿನ ಬಿಜೈ ಸಮೀಪದ ಬಾರೆಬೈಲ್ ಮನೆತನದವರು.
ಡೊಂಬಿವಲಿ ಪೂರ್ವದ ತುಕಾರಾಮ್ ನಗರದ ಸುಂದರ್ ಅಪಾರ್ಟ್‍ಮೆಂಟ್‍ನ ನಿವಾಸಿಯಾಗಿದ್ದ ಪ್ರವೀಣ್ ಕೋಟ್ಯಾನ್‍ರವರು ಓರ್ವ ಸಹೋದರ, ನಾಲ್ಕು ಸಹೋದರಿಯರು, ಪತ್ನಿ, ಎರಡು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal