ನಿಧನ

ಸಂಪದಮನೆ ನಾಗಯ್ಯ ಶೆಟ್ಟಿ (84.)
ಮುಂಬಯಿ, ಜೂ.12: ಯಶಸ್ವಿ ವ್ಯಕ್ತಿ ಮಾಸಿಕದ ಸಂಪಾದಕ ಮತ್ತು ಪ್ರಕಾಶಕ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಜೊತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ ಅವರ ತಂದೆ ಶ್ರೀ ಸಂಪದಮನೆ ನಾಗಯ್ಯ ಶೆಟ್ಟಿ (84.) ಅವರು ಇಂದಿಲ್ಲಿ ಬುಧವಾರ (ಜೂ.12) ಸಂಜೆ ವೃದ್ಧಾಪ್ಯ ಸಹಜ ಅಸ್ವಸ್ಥತೆಯಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಇಲ್ಲಿನ ಸಂಪದಮನೆ ಸ್ವನಿವಾಸದಲ್ಲಿ ನಿಧನ ಹೊಂದಿದರು.

ಕೃಷಿಕರಾಗಿದ್ದ ಮೃತರು ಪತ್ನಿ, ಎಂಟು ಗಂಡು, ಆರು ಹೆಣ್ಣು ಸೇರಿದಂತೆ ಒಟ್ಟು ಹದಿನಾಲ್ಕು ಮಕ್ಕಳು, ಅಪಾರ ಬಂಧು-ಬಳಗ ಅಗಲಿದ್ದಾರೆ.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal