ತುಳಸೀ ವೇಣುಗೋಪಾಲ್ (65.)

ಮುಂಬಯಿ, ಎ.08: ಮುಂಬಯಿ ಮಹಾನಗರದಲ್ಲಿನ ಹೆಸರಾಂತ ಲೇಖಕಿ, ಕವಯತ್ರಿ, ಕನ್ನಡ ಲೇಖಕಿಯರ ಬಳಗ ಮುಂಬಯಿ `ಸೃಜನ' ಸಂಸ್ಥೆ ಮತ್ತು ಸ್ಪಾ ್ಯರೋ ಸಂಸ್ಥೆಗಳ ಸಕ್ರೀಯ ಸದಸ್ಯೆ, ಉದಯವಾಣಿ ಮುಂಬಯಿ ಇದರ ನಿವೃತ್ತ ಬ್ಯೂರೋ ಚೀಫ್ ಸ್ವರ್ಗೀಯ ಕೆ.ಟಿ ವೇಣುಗೋಪಾಲ್ ಧರ್ಮಪತ್ನಿ ತುಳಸೀ ವೇಣುಗೋಪಾಲ್ (65.) ಮಂಗಳೂರು ದೇರಳಕಟ್ಟೆ ಅಲ್ಲಿನ ಖಾಸಾಗಿ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸ್ವಸ್ಥತೆಯಿಂದ ಇಂದಿಲ್ಲಿ ಸೋಮವಾರ (ಎ.08) ನಿಧನರಾದರು.

ಮಂಗಳೂರು ಬೋಳಾರ ಮೂಲತಃ ತುಳಸೀ ವೇಣುಗೋಪಾಲ್ ಅವರು ವಿಕಾಸ್ ವೇಣುಗೋಪಾಲ್ (ಸುಪುತ್ರ), ರಿಚಾ ವಿಕಾಸ್ (ಸೊಸೆ) ಹಾಗೂ ಕುಟುಂಬಸ್ಥರು ಮತ್ತು ಅಪಾರ ಸಂಖ್ಯೆಯ ಮಿತ್ರವರ್ಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ಮಂಗಳೂರುನ ರುಧ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಸುಪುತ್ರ ವಿಕಾಸ್ ತಿಳಿಸಿದ್ದಾರೆ.

ತುಳಸೀ ನಿಧನಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ, ಸೃಜನಾ ಬಳಗದ ಮಾರ್ಗದರ್ಶಿ ಡಾ| ಸುನೀತಾ ಎಂ.ಶೆಟ್ಟಿ, ಸಂಚಾಲಕಿ ದಾಕ್ಷಾಯಣಿ ಯಡಹಳ್ಳಿ, ಮಿತ್ರಾ ವೆಂಕಟ್ರಾಜ್, ಡಾ| ಗಿರಿಜಾ ಶಾಸ್ತ್ರಿ, ಅಹಲ್ಯಾ ಬಲ್ಲಾಳ, ಡಾ| ವಾಣಿ ಉಚ್ಚಿಲ್ಕರ್, ಮೀನಾ ಕಾಳಾವರ್ ಶ್ಯಾಮಲಾ ಮಾಧವ, ಡಾ| ಸುಮಾ ದ್ವಾರಕನಾಥ್, ಶ್ಯಾಮಲಾ ಮಾಧವ್, ಡಾ| ಜಿ.ಪಿ ಕುಸುಮಾ, ಸಾ. ದಯಾ, ಮೋಹನ್ ಮಾರ್ನಾಡ್, ಡಾ| ಭರತ್ ಕುಮಾರ್ ಪೋಲಿಪು, ಓಂದಾಸ್ ಕಣ್ಣಂಗಾರ್ ಮತ್ತಿತರರು ಸಂತಾಪ ವ್ಯಕ್ತ ಪಡಿಸಿದ್ದಾರೆ.

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal