About Us       Contact

ಮಲಪ್ಪುರಂ : ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ವಿದ್ಯಾಲಯವಾದ ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯಾದಲ್ಲಿ ಏಪ್ರಿಲ್ ಏಳರಂದು ಉಳ್ಳಾಲದಲ್ಲಿ ನಡೆಯಲಿರುವ ಐತಿಹಾಸಿಕ ಸಮಸ್ತ ಮಹಾ ಸಮ್ಮೇಳನದ ಪ್ರಚಾರ ಸಂಗಮ ನಡೆಯಿತು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರೂ , ಮಲಪ್ಪುರಂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆದ ಶೈಖುನಾ ಕುಞ್ಞಾನಿ ಉಸ್ತಾದರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಮಿಅ ನೂರಿಯ್ಯಾದ ಮುದರ್ರಿಸರಾದ ಶೈಖುನಾ ಕೋಟುಮಲ ಮುಹಿಯುದ್ದೀನ್ ಕುಟ್ಟಿ ಉಸ್ತಾದ್, ಉಸ್ತಾದ್ ಹಂಝ ಫೈಝಿ ಹೈತಮಿ , ಳಿಯಾವುದ್ದೀನ್ ಫೈಝಿ ಮೇಲ್ಮುರಿ , ಸುಲೈಮಾನ್ ಫೈಝಿ ಚುಂಗತ್ತರ, ಮುಹಮ್ಮದ್ ಶಿಹಾಬ್ ಫೈಝಿ ಕೂಮಣ್ಣ ಮುಂತಾದವರು ಉಪಸ್ಥಿತರಿದ್ದರು. ಜಾಮಿಅ ನೂರಿಯ್ಯಾದಲ್ಲಿ ವಿದ್ಯಾರ್ಜನೆ ನಡೆಸುತ್ತಿರುವ ಕರ್ನಾಟಕದ ವಿದ್ಯಾರ್ಥಿಗಳು ಪ್ರಸ್ತುತ ಕಾರ್ಯಕ್ರಮನ್ನು ಆಯೋಜಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal