About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಫೆ.22: ಯಾರು ಭಾರತ ಮಾತಾ ಎಂಬ ಶೀರ್ಷಿಕೆಯನ್ನು ಹೊಂದಿರುವ ಈ ಪುಸ್ತಕ ಮಾಜಿ ಪ್ರಧಾನಿ ಜವಹರಲಾಲ್ ನೆಹರು ಅವರ ಬರಹ ಮತ್ತು ಭಾಷಣಗಳನ್ನು ಒಳಗೊಂಡಿರುವ ಒಂದು ಅದ್ಭುತವಾದ ಕೃತಿಯಾಗಿದೆ. ನಿಜಕ್ಕೂ ಇದೊಂದು ಸ್ಪೂರ್ತಿದಾಯಕ ಕೃತಿ. ಭಾರತ ದೇಶದ ಸ್ವಾತಂತ್ರ್ಯ ಹೋರಾಟದ ಕಾಲದ ಸಂಪೂರ್ಣ ಚಿತ್ರಣ ಒಳಗೊಂಡಿದೆ. ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಾಬಾಯಿ ಪಟೇಲ್, ಮೌಲಾನಾ ಆಝಾದ್, ಅರಣ ಅಸಫ್ ಆಲಿ, ಶೇಖ್ ಅಬ್ದುಲ್ಲಾ, ಸುಭಾಸ್‍ಚಂದ್ರ ಭೋಸ್, ಮಹಮ್ಮದ್ ಆರಿಸ್ ಸಿಂಗ್, ಅಲಿ ಸರ್ದಾರ್ ಹಾಗೂ ಇನ್ನಿತರ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಮಹಾನ್ ಸಾಧನೆಗಳ ಸಂಗ್ರಹವಾಗಿದೆ. ಪುಸ್ತಕದ ಕನ್ನಡ ಅವತರಣಿಕೆ ನಿಜಕ್ಕೂ ಉತ್ತಮವಾಗಿ ಮೂಡಿದ್ದ್ದು ಇದಕ್ಕೆ ಶ್ರಮಿಸಿದ ಪೆÇ್ರಫೆಸರ್ ರಾಧಾಕೃಷ್ಣನ್ ಅವರಿಗೆ ಕೃತಜ್ಞತೆಗಳು. ಈ ಪುಸ್ತಕ ಪ್ರಸಾರದ ಅದ್ಭುತ ಯಶಸ್ಸಿಗೆ ಹಾರೈಸುತ್ತೇನೆ ಎಂದು ಭಾರತದ ಮಾಜಿ ಪ್ರಧಾನ ಮಂತ್ರಿ ಡಾ| ಮನಮೋಹನ್ ಸಿಂಗ್ ತಿಳಿಸಿದರು.

ದೆಹಲಿಯ ವರ್ಧಮಾನ್ ರಸ್ತೆಯಲ್ಲಿನ ಇಂಡಿಯಾ ಹ್ಯಾಬೀಟಾತ್ ಸೆಂಟರ್‍ನ ಗುಲ್‍ಮೋಹರ್ ಸಭಾಗೃಹದಲ್ಲಿ ದೆಹಲಿ ಕರ್ನಾಟಕ ಸಂಘ ಸಹಯೋಗದೊಂದಿಗೆ ಸಪ್ನ ಬುಕ್ ಹೌಸ್ ಬೆಂಗಳೂರು ಸಂಸ್ಥೆಯು ಸ್ಪಿಕಿಂಗ್ ಟೈಗರ್ ಪ್ರಕಟಿಸಿದ `ಯಾರು ಭಾರತ್ ಮಾತೆ?' ಕನ್ನಡ ಅನುವಾದಿತ ಕೃತಿ ಬಿಡುಗಡೆ ಗೊಳಿಸಿ ಡಾ| ಸಿಂಗ್ ಮಾತನಾಡಿದರು.

ರಾಜ್ಯಸಭಾ ಸದಸ್ಯ ಹಾಗೂ ಹೆಸರಾಂತ ಲೇಖಕ ಜೈರಾಮ್ ರಮೇಶ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಾಗಿ ಕರ್ನಾಟಕ ಕ್ಯಾಥೋಲಿಕ್ ಫೇಡರೇಷನ್‍ನ ಅಧ್ಯಕ್ಷ ರೊನಾಲ್ಡ್ ಕೊಲಾಸೋ, ಭಾರತೀಯ ತೇರಾಪಂಥಿ ಜೈನ ಯುವ ಸಂಘದ ಅಧ್ಯಕ್ಷ ವಿಮಲ್ ಕರಾರಿಯಾ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ| ವೆಂಕಟಾಚಲ ಹೆಗಡೆ, ದೆಹಲಿ ಕನ್ನಡ ವಿದ್ಯಾಸಂಸ್ಥೆಯ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮತ್ತಿತರ ಗಣ್ಯರು ಉಪಸ್ಥಿತರಿದ್ದು ನಾಡಿನ ಪ್ರಸಿದ್ಧ ಲೇಖಕ ಕೆ.ಈ ರಾಧಾಕೃಷ್ಣ ಕನ್ನಡಕ್ಕೆ ಭಾಷಾಂತರಿತ ಸ್ಪಿಕಿಂಗ್ ಟೈಗರ್ ಪ್ರಕಟಿಸಿದ `ಯಾರು ಭಾರತ್ ಮಾತೆ?' ಕನ್ನಡ ಕೃತಿ (ರಾಷ್ಟ್ರದ ಪ್ರಸಿದ್ಧ ಲೇಖಕ ಪೆÇ್ರ| ಪುರುಷೋತ್ತಮ ಅಗರ್‍ವಾಲ್ ಅವರು ಇಂಗ್ಲೀಷ್‍ನಲ್ಲಿ ರಚಿತ `ಹೂ ಈಜ್ ಭಾರತ್ ಮಾತಾ?'- ಪಂಡಿತ್ ಜವಾಹರಲಾಲ್ ನೆಹರೂ ಅವರಿಂದ ಮತ್ತು ಅವರನ್ನು ಕುರಿತ ಬರಹ ಸಂಗ್ರಹ) ಕೃತಿಯನ್ನು ಅನಾವರಣ ಗೊಳಿಸಿದರು. ಡಾ| ಮನಮೋಹನ್ ಸಿಂಗ್ ಉಪಸ್ಥಿತರಿದ್ದ ಗಣ್ಯರಿಗೆ ಕೃತಿಯನ್ನು ನೀಡಿ ಗೌರವಿಸಿದರು.

ರೊನಾಲ್ಡ್ ಕೊಲಾಸೋ ಮಾತನಾಡಿ ವಿವಾದ, ವಾಗ್ವಾದ, ಪರಸ್ಪರ ದ್ವೇಷ, ನಂಬಿಕೆ, ಸುಳ್ಳುಸುದ್ಧಿ ಮತ್ತು ಸಾಮಾಜಿಕ ಉದ್ವೇಗ ಮೊದಲಾದವು ಸದ್ಯ ನಮ್ಮ ಸಮಾಜವನ್ನು ವಿಭಾಜಿಸುತ್ತಿದೆ. ಈ ಕೃತಿ ಓದಿದ ನಂತರ ನಮ್ಮ ಸಮಾಜದಲ್ಲಿ ನಡೆಯುವಂತಹ ಉದ್ವೇಗ ಸ್ಥಿತಿಯು ಬದಲಾಗಬಹುದು ಅನ್ನುವುದು ನನ್ನ ಅಭಿಮತ. ಅವಾಗಲೇ ನಾವೆಲ್ಲಲ್ಲರೂ ಸಮಾಜದಲ್ಲಿ ಪರಸ್ಪರ ಯೋಗ್ಯವಾದ, ಸಾಮರಸ್ಯದ ಜೀವನ ನಡೆಸಬಹುದು. ನಾವು ನಮ್ಮ ಹಿರಿಯರಿಗೆ, ನಮ್ಮ ಸಂಸ್ಕೃತಿಗೆ ನಮ್ಮ ಧರ್ಮಕ್ಕೆ ಸದಾ ಗೌರವವನ್ನು ನೀಡಬೇಕು. ಅದೇ ಮಾನವ ಜೀವನವಾಗಿದೆ. ಕನ್ನಡ ಹಾಗೂ ಇಂಗ್ಲೀಷ್ ಬಾಷೆಯಲ್ಲಿ ಈ ಪುಸ್ತಕವನ್ನು ನೀಡಿದ ಇಬ್ಬರೂ ಪೆÇ್ರಫೆಸರ್ ಗಳನ್ನು ಧನ್ಯವದಿಸುತ್ತೇನೆ ಎಂದರು.

ಪೆÇ್ರ| ಪುರುಷೋತ್ತಮ ಅಗರ್‍ವಾಲ್ ಮಾತನಾಡಿ ಜವಾಹರಲಾಲ್ ನೆಹರೂ ಓರ್ವ ಉತ್ತಮ ಹಾಗೂ ಪ್ರಸಿದ್ಧ ಲೇಖಕರಾಗಿದ್ದು ಸುಮಾರು 64-65,000 ಸಾವಿರ ಪುಟಗಳಷ್ಟು ಬರಹಗಳನ್ನು ಬರೆದಿದ್ದಾರೆ. ಅವರ ಲೇಖನಗಳು ಬರೇ ಓದಿಗೆ ಸೀಮಿತವಲ್ಲ, ಅವರಿಂದ ಸ್ಪೂರ್ತಿ ಸಿಗುವಂತಹ, ಗೌರವಿಸುವಂತಹ ಬರವಣಿಗೆ ಆಗಿಸಿ ದೇಶದ ಸಂಸ್ಕೃತಿಯನ್ನು ತನ್ನ ಬರಹ ರೂಪದಲ್ಲಿ ಭಾವೀ ಪೀಳಿಗೆಗೆ ಪರಿಚಯಿಸಿದ್ದಾರೆ. ದೇಶದ ಪವಿತ್ರ ಪುಸ್ತಕಗಳಾದ ರಾಮಾಯಣ, ಮಹಾಭಾರತ, ಶ್ರದ್ಧಾಶನ, ವಾಸುದೇವ ಪುತ್ರಸ್, ಭಗವದ್ಗೀತಾ, ಅಕ್ಭರ್, ಅಶೋಕ್ ಮೊದಲಾದವುಗಳಲ್ಲಿ ಪರಿಪೂರ್ಣತೆ ಅಧ್ಯಯನ ಮಾಡಿ ನಮಗೆ ಜ್ಞಾನವನ್ನು ನೀಡಿದ್ದಾರೆ. ಇಂತಹ ನೆಹರೂ ಅವರನ್ನು ನಾವೂ ಗುರುತಿಸದಿದ್ದರೆ ಅದು ನಮಗೆ ದೊಡ್ಡ ನಷ್ಟ ಎಂದರು.

ಜೈರಾಮ್ ರಮೇಶ್ ಅಧ್ಯಕ್ಷೀಯ ನುಡಿಗಳನ್ನಾಡಿ ಯಾರು ಭಾರತ ಮಾತಾ? ಇದೊಂದು ಅದ್ಭುತವಾದ ಸಂಗ್ರಹದ ಕೃತಿ. ಭಾರತದ ಧೀಮಂತ ಪ್ರಧಾನಿಯೊಬ್ಬರ ಬರಹ ಮತ್ತು ಭಾಷಣಗಳನ್ನು ಒಳಗೊಂಡ ಕೃತಿ. ಇಂಗ್ಲಿಷ್ ಭಾಷೆ ಬಹಳ ಮಹತ್ವವಾದುದು, ಕನ್ನಡ ಭಾಷೆಗೆ ಹೆಚ್ಚು ಮಹತ್ವ ನೀಡಬೇಕು, ಅದೇ ರೀತಿ ಹಿಂದಿ ಭಾಷೆಯೂ ಬಹಳ ಮಹತ್ವದ್ದಾಗಿದೆ. ಈ ಪುಸ್ತಕ ನೆಹರೂ ಅವರ ಜೀವನದ ಅತ್ಯಂತ ಮಹತ್ವದ ಅಂಶಗಳನ್ನು ಒಳಗೊಂಡಿದೆ. ಈ ಪುಸ್ತಕ ಬರೆಯುವ ಈ ನಿಟ್ಟಿನಲ್ಲಿ ಪುರುಷೋತ್ತಮ್ ಅವರ ಶ್ರಮವನ್ನು ನಾನು ಕೊಂಡಾಡುತ್ತೇನೆ. ಇದೊಂದು ಕಾಂಗ್ರೆಸ್ ಪಕ್ಷದ ಒಬ್ಬ ವ್ಯಕ್ತಿ ಕಂಡು ಹಿಡಿಯಬೇಕಾದ ವಿಷಯವಲ್ಲ. ನೆಹರು ಭಾರತದ ವ್ಯಕ್ತಿ. ನೆಹರೂ ಅವರು ಬರೇ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೇರಿದವರಲ್ಲ. ಅವರು ಇಡೀ ಭಾರತದ ಸ್ಪೂರ್ತಿಯ ಪ್ರತೀಕ, ಇಡೀ ದೇಶದ ಸಂಪತ್ತು. ನೆಹರು ಅವರ ಬಗ್ಗೆ ಪ್ರತಿಯೊಬ್ಬರೂ ಅನ್ವೇಷಣೆ ಮಾಡಬೇಕು. ಪಕ್ಷಬೇಧವಿಲ್ಲದೆ ಈ ನಿಟ್ಟಿನಲ್ಲಿ ಅನ್ವೇಷನೆ ನಡೆಯಬೇಕು. ಭಾರತದ ಮಾಜಿ ಪ್ರಧಾನಿ ಜವಹರಲಾಲ್ ನೆಹರು ಅವರ ಸಾಧನೆಗಳ ಅನ್ವೇಷಣೆ ಇಡೀ ಸಾಮೂಹದ ಉದ್ಯಮವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ದೆಹಲಿ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ ನಾಗರಾಜ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಡಾ| ವೆಂಕಟಾಚಲ ಹೆಗಡೆ ಸ್ವಾಗತಿಸಿದರು. ರಹಮಾನ್ ಖಾನ್ ಅವರು ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಕೆ.ಈ ರಾಧಾಕೃಷ್ಣ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal