About Us       Contact


(ಚಿತ್ರ / ವರದಿ : ರೊನಿಡಾ ಮುಂಬಯಿ)


ದುಬಾಯಿ (ಅಲ್ ನಾಸರ್), ನ.24: ತುಳುವರಲ್ಲಿ ಜಾತೀಯತೆ ತೊಲಗಿ ಪ್ರೀತಿ ಬದುಕಿನ ಭಾವನೆ ಮೊಳಗಬೇಕು. ಜಾತೀಯತೆ ಮರೆಯಾಗಿ ತುಳುವರೆಂಬ ಸಂಬಂಧ ಮೈಗೂಡಬೇಕು. ತುಳುನಾಡಿನ ಸಂಬಂಧಗಳೇ ವಿಶಿಷ್ಟವಾದುದು. ತುಳುವರಿಗೆ ಹಣ ಬೇಕಾಗಿಲ್ಲ ಬದಲಾಗಿ ಪರಸ್ಪರ ಬೆಸೆದುಬಾಳುವ ಜನಬೇಕು ಎನ್ನುದು ವಾಸ್ತವ್ಯ. ಹಣೆಯಲ್ಲಿ ಬರೆದಿದ್ದರೆ ಮಾತ್ರ ಶ್ರೀಮಂತನಾಗಲು ಸಾಧ್ಯ. ಇದು ನಾನು ನನ್ನ ಜನನಿದಾತೆಯಿಂದಲೇ ತಿಳಿದವನು. ಆ ಮೂಲಕ ನಾವೆಲ್ಲರೂ ಸಹೋದರತ್ವದಿಂದ ಬಾಳೋಣ. ತುಳುವಿನ ಮಾನ್ಯತೆಗಾಗಿ ನಾನು ಪ್ರಧಾನಿ ಜೊತೆ ಮಾತುಕತೆ ನಡೆಸಿ ಶೀಘ್ರವೇ ಎಂಟನೇ ಪರಿಚ್ಛಯಕ್ಕೆ ಭಾಷೆಯನ್ನು ಸೇರಿಸುವ ಬಗ್ಗೆ ಪ್ರಯತ್ನಿಸುವೆ ಎಂದು ಎನ್‍ಎಂಸಿ ಸಮೂಹದ ಸಂಸ್ಥಾಪಕ ಕಾರ್ಯಾಧ್ಯಕ್ಷ ಪದ್ಮಶ್ರೀ ಡಾ| ಬಿ.ಆರ್ ಶೆಟ್ಟಿ ತಿಳಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

ಸಾಗರೋತ್ತರ ತುಳುವರ ಕೂಟವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲಭಾರತ ತುಳು ಒಕ್ಕೂಟದ ಸಹಯೋಗದೊಂದಿಗೆ ಇಲ್ಲಿನ ಅಲ್ ನಾಸರ್‍ನ ಲೀಸರ್ ಲ್ಯಾಂಡ್ ಐಸ್ ರಿಂಕ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದ್ವಿದಿನಗಳ `ವಿಶ್ವ ತುಳು ಸಮ್ಮೇಳನ ದುಬಾಯಿ 2018' ಸಮಾರೋಪದಲ್ಲಿ ಅಧ್ಯಕ್ಷೀಯ ಭಾಷಣಗೈದು ಬಿ.ಆರ್ ಶೆಟ್ಟಿ ಮಾತನಾಡಿದರು.

ಸಮಾರೋಪದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಉಡುಪಿ ಶ್ರೀ ಪುತ್ತಿಗೆ ಮಠದ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಗುರು ವೀರಾಂಜನೆಯ ಸ್ವಾಮಿ ಕ್ಷೇತ್ರ ಒಡಿಯೂರು ಮಠಾಧೀಶ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷಿ ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಪೆÇ್ರಟೆಸ್ಟೆಂಟ್ ಮಂಗಳೂರು ಪ್ರಾಂತ್ಯದ ಬಿಷಪ್ ವಂ| ಎಬಿನೆಜರ್ ಜತ್ತನ್ನ, ಮುಸ್ಲಿಂ ಧರ್ಮಶಾಸ್ತ್ರಜ್ಞ ಅಬ್ದುಸ್ಸಲಾಂ ಪುತ್ತಿಗೆ, ಮುಂಬಯಿನ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಬಾಲಿವುಡ್ ನಟ ಸುನೀಲ್ ಶೆಟ್ಟಿ, ಸಂಗೀತ ನಿರ್ದೇಶಕ ಗುರು ಕಿರಣ್ ಹಾಗೂ ಕರ್ನಾಟಕರ ರಾಜ್ಯ ತುಳು ಅಕಾಡಮಿ ಅಧ್ಯಕ್ಷ ಎ.ಸಿ ಭಂಡಾರಿ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ವೇದಿಕೆಯಲ್ಲಿದ್ದು ಪದ್ಮಭೂಷಣ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಜನ್ಮೋತ್ಸವಕ್ಕೆ ಶುಭಾರೈಸಿ ಸನ್ಮಾನಿಸಿದರು.

 

 

 

 

 

 

 

 

 

 

 

 

 

 

 

 

 

 

ಸಮ್ಮೇಳನದ ಸುಮಾರು ಆರು ತಿಂಗಳ ಶ್ರಮದ ಸಿದ್ಧತೆ ಸದಾ ಮಾಯ ಆಗಬಹುದು. ಆದರೆ ಈ ಎರಡು ದಿನಗಳ ನೆನಪು ಮಾತ್ರ ನಮ್ಮಲ್ಲಿ ಶಾಶ್ವತವಾಗಿರಲಿ. ಸಮ್ಮೇಳನವನ್ನು ಖುದ್ಧಾಗಿ ಅನುಭವಿಸಿದಾಗ ನಾನು ಊರಿನಲ್ಲೇ ಇದ್ದಂತೆ ಭಾಸವಾಗುತ್ತಿದೆ. ಸಮ್ಮೇಳನದ ಉದ್ದೇಶವೂ ಅದೇ ಆಗಿದೆ. ಸಮಗ್ರ ತುಳುನಾಡಿನ ಸಮೃದ್ಧಿಗೆ ಈ ಸಮ್ಮೇಳನ ಪೂರಕವಾಗಲಿ ಎಂದು ಡಾ| ಹೆಗ್ಗಡೆ ಆಶಯ ವ್ಯಕ್ತ ಪಡಿಸಿದರು.

ನನ್ನನ್ನು ದುಬಾಯಿ ಇಲ್ಲಿನ ಈ ತುಳು ಸಮ್ಮೇಳನಕ್ಕೆ ಹೋಗಿ ಬರುವಂತೆ ಉಡುಪಿ ಶ್ರೀಕೃಷ್ಣ ದೇವರು ಕಳುಹಿಸಿ ಕೊಟ್ಟಿದ್ದಾರೆ. ಮಧ್ವಾಚಾರ್ಯರೂ ತುಳುವ ಆಚಾರಗಳನ್ನು ಮನ್ನಿಸಿದವರಾಗಿದ್ದರು. ನಮ್ಮ ದಿವ್ಯೋಪಸ್ಥಿತಿಗೆ ಅವರ ಪ್ರೇರಣೆಯೂ ಕಾರಣ. ಮುಂಬಯಿ ಯಾ ದುಬಾಯಿನಲ್ಲಿನ ತುಳುವರ ಸಾಧನೆ ಅತ್ಯಾಧ್ಬುತವಾದುದು. ತುಳುವರಿಗೆ ಕೀರ್ತಿ, ಯಶಸ್ಸು ಸುಲಭ ಸಾಧ್ಯ. ಇಂತಹ ತುಳುವರ ಭಾಷಾಭಿಮಾನ ಸಾಂಸ್ಕೃತಿಕವಾಗಿ ಬೆಳೆಯಲಿ ಎಂದು ಪುತ್ತಿಗೆ ಶ್ರೀಪಾದರು ಅನುಗ್ರಹಿಸಿದರು.

\

 

 

 

 

 

ಸಂಸ್ಕೃತಿಯ ಹೃದಯವೇ ಭಾಷೆಯಾಗಿದೆ. ಇಂತಹ ತುಳುಭಾಷೆಯಲ್ಲಿ ಆಧ್ಯಾತ್ಮದ ಸೊಬಗು, ಧರ್ಮದ ಸಾರ ಒಳಗೊಂಡಿದೆ. ತುಳುವರು ವಿಶ್ವಾಸಿಗರು ಆದ್ದರಿಂದಲೇ ತುಳು ಅಂದರೆ ಕೀರ್ತಿ ಎಂದರ್ಥ. ಒಗ್ಗಟ್ಟಿದ್ದರೆ ಮಾತ್ರ ತುಳು ಬಲವರ್ಧಿತಗೊಂಡು ಬೆಳೆಯಲು ಸಾಧ್ಯ ಎಂದು ಗುರುದೇವಾನಂದ ಶ್ರೀಗಳು ತಿಳಿಸಿದರು.

ತುಳುನಾಡಿನ ಪ್ರತೀಯೊಂದು ಆತ್ಮದಲ್ಲಿ ತುಳುವಿನ ಸೆಲೆ, ಬೆಲೆವಿದೆ. ವ್ಯವಸ್ಥೆಗೆ ತುಳುವೇ ಮೂಲವಾದುದು. ಆದ್ದರಿಂದ ತುಳುವಿನ ಕೆಲಸಗಳಿಗೆ ಆಮಂತ್ರಣ ಬೇಡ ಒಲವು ಬೇಕು ಎಂದು ಮಾಣಿಲ ಶ್ರೀ ತಿಳಿಸಿದರು.

ಬಿಷಪ್ ಜತ್ತನ್ನ ಮಾತನಾಡಿ ಇಂತಹ ಸಮ್ಮೇಳನಗಳು ಒಗ್ಗಟ್ಟಿನ ಸಂಕೇತವಾಗಲಿ. ತುಳು ಭಾಷೆಯು ತುಳುನಾಡಿನ ಎಲ್ಲಾ ಸಮೂದಾಯಗಳನ್ನು ಮತ್ತೆ ಒಗ್ಗೂಡಿಸುತ್ತಾ ಸಾಮರಸ್ಯದಿಂದ ಬಾಳುವಂತೆ ಕಾರಣೀಭೂತವಾಗಲಿ ಎಂದು ಸುಮಾರು 180 ವರ್ಷಗಳ ಇತಿಹಾಸವುಳ್ಳ ತುಳು ಬೈಬಲ್‍ನ್ನು ಡಾ| ಬಿ.ಆರ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

ಹೊರನಾಡಿನ ಅದೂ ಸಾಗರೋತ್ತರದಲ್ಲಿ ಆಯೋಜಿಸಲ್ಪಟ್ಟ ಈ ಸಮ್ಮೇಳನವು ತುಳುವ ಅಭಿಮಾನದಿಂದ ತುಂಬಿತು. ಈ ಭಾಷೆಯು ಮನಸ್ಸಿನ ಆಸಕ್ತಿಯನ್ನು ವೃದ್ಧಿಸಿದೆ. ಸಂಸ್ಕೃತಿಕೆ ಪ್ರೀತಿಯಿದೆ ಎನ್ನುವುದನ್ನು ತೋರಿಸಿದೆ. ಇದು ಬರೇ ತುಳು ಸಮ್ಮೇಳನವಲ್ಲ ವಿಶಿಷ್ಟವಾದ ಜಾಗತಿಕ ಸರ್ವಧರ್ಮ ಸಮ್ಮೇಳನ ಆಗಿದೆ. ಆದುದರಿಂದ ಕರ್ನಾಟಕದಲ್ಲಿ ದ್ವಿತೀಯ ಭಾಷೆಯಾಗಿ ಸರಕಾರ ಪರಿಗಣಿಸುವಂತೆ, ಮಾನ್ಯತೆಗೊಳಿಸುವಂತೆ ಮಾಡಬೇಕು. ಆ ಮೂಲಕ ಮುಂದೆ ವರ್ಷದ ಒಂದು ದಿನ ತುಳುದಿನ ಆಗಿ ಆಚರಿಸುಂತಾಗಬೇಕು ಎನ್ನುತ್ತಾ ಸುನೀತಾ ಶೆಟ್ಟಿ ಸಮ್ಮೇಳನದ ಅವಲೋಕನಗೈದರು.

 

 

 

 

 

 

 

 

 

 

 

 

 

 

 

 

 

ತುಳು ಸಮ್ಮೇಳನದ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಸ್ವಾಗತಿಸಿದರು. ಸಾಗರೋತ್ತರ ತುಳುವರ ಒಕ್ಕೂಟ ದುಬಾಯಿ ಮುಖ್ಯಸ್ಥ ಶೋಧನ್ ಪ್ರಸಾದ್ ಅಭಿನಂದನಾ ನುಡಿಗಳನ್ನಾಡಿದರು. ವಿಶ್ವ ತುಳು ಸಮ್ಮೇಳನದ ಸವಿನೆನಪಿಗಾಗಿ ಬಿ.ಕೆ ಗಣೇಶ್ ರೈ ಪ್ರಧಾನ ಸಂಪಾದಕತ್ವದಲ್ಲಿ ರಚಿತ `ವಿಶ್ವ ತುಳು ಐಸಿರಿ' ಸ್ಮರಣಿಕೆಯನ್ನು ಬಿಡುಗಡೆ ಗೊಳಿಸಲ್ಪಟ್ಟಿತು. ಭಾಸ್ಕರ್ ರೈ ಕುಕ್ಕುವಳ್ಳಿ, ಸಾಯಿಲ್ ರೈ, ಪ್ರಿಯಾ ಹರೀಶ್ ರೈ, ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ ಮುಂಬಯಿ ಅತಿಥಿüಗಳ ನ್ನು ಪರಿಚಯಿಸಿದರು. ಬಿ.ಆರ್ ಶೆಟ್ಟಿ ಮತ್ತು ಸರ್ವೋತ್ತಮ ಶೆಟ್ಟಿ ಅತಿಥಿüಗಳಿಗೆ ಶಾಲು ಹೊದಿಸಿ ಸ್ಮರಣಿಕೆಗಳನ್ನೀಡಿ ಗೌರವಿಸಿದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಕೃತಜ್ಞತೆ ಅರ್ಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಮೋದ್ ಕುಮಾರ್ ಮತ್ತು ಬಳಗದ ವೆರಾಸಟೈಲ್ಸ್ ದುಬಾಯಿ ತಂಡವು ರಸ ಮಂಜರಿ ಗೈದರು. ನಾಗೇಶ್ ಕುಲಾಲ್ ಮಂಗಳೂರು ತಂಡವು ತುಳುನಾಡ ಸಾಂಪ್ರದಾಯಿಕ ಆಟೋಟಗಳನ್ನು, ಕೆ.ವೆಂಕಟ್ರಮಣ ಮತ್ತು ಬಳಗವು ನಾಟ್ಯವೈಭವ ಹಾಗೂ ಡಾ| ರಾಜೇಶ್ ಆಳ್ವ ಬದಿಯಡ್ಕ ತಂಡವು `ಪಾಡ್ದನೆ ಮೇಳ ಬೊಕ್ಕ ಮಾಂಕಾಳಿ ನಲಿಕೆ' ಪ್ರದರ್ಶಿಸಿದರು. ಭಾಸ್ಕರ್ ರೈ ಕುಕ್ಕುವಳ್ಳಿ ಸಾರಥ್ಯದಲ್ಲಿ ಜಬ್ಬರ್ ಸುಮೋ, ಕದ್ರಿ ನವನೀತ್ ಶೆಟ್ಟಿ, ತೋನ್ಸೆ ಪುಷ್ಕಳ್ ಕುಮಾರ್, ದಯಾನಂದ ಕತ್ತಲ್‍ಸಾರ್ ಕೂಡುವಿಕೆಯಲ್ಲಿ ತಾಳಮದ್ದಳೆ, ಪಶಂಸಾ ಕಾಪು, ಸಂದೀಪ್ ಶೆಟ್ಟಿ ಮಾಣಿಬೆಟ್ಟು ತಂಡವು ಪ್ರಸನ್ನ ಶೆಟ್ಟಿ ಬೈಲೂರು, ಮಾರ್ವಿನ್ ಶಿರ್ವಾ ಮತ್ತು ಶರತ್ ಕುಮಾರ್ ಕೂಡುವಿಕೆಯಲ್ಲಿ ಹಾಸ್ಯ ಪ್ರಹಸನ, ಸನಾತನ ನಾಟ್ಯಾಲಯ ಮಂಗಳೂರು ಬಳಗವು ಚಂದ್ರಶೇಖರ್ ಶೆಟ್ಟಿ ನಿರ್ದೇಶನದಲ್ಲಿ `ಸತ್ಯನಾ ಪುರತ ಸಿರಿ' ತುಳು ನೃತ್ಯ ರೂಪಕ, ಮನೋಹರ್ ಕುಮಾರ್ ಉಳ್ಳಾಲ್ ಸಾರಥ್ಯಲ್ಲಿ ನಾಟ್ಯನಿಕೇತನ ಮಂಗಳೂರು ತಂಡವು `ಏಳ್ವೆರ್ ದೈಯಾರ್' ತುಳುನಾಟ್ಯ ರೂಪಕ ಪ್ರದರ್ಶಿಸಿತು.

 

 

 

 

 

 

 

 

 

 

 

 

 

 

 

ನಡೆದ ಮತ್ತು ಮರೆಯಾದ ಗೋಷ್ಠಿಗಳು
ಡಾ| ಬಿ.ಎ ವಿವೇಕ್ ರೈ ಅಧ್ಯಕ್ಷತೆಯಲ್ಲಿ ತುಳುನಾಡ ಆಚರಣೆ ಗೋಷ್ಠಿ ನಡೆಸಲ್ಪಟ್ಟಿದ್ದು, ಪೆÇ್ರ| ತುಕರಾಂ ಪೂಜಾರಿ, ದಯಾನಂದ ಕತ್ತಲ್‍ಸಾರ್, ಡಾ| ಗಣೇಶ್ ಅವಿೂನ್ ಸಂಕಮಾರ್, ಕುದಿ ವಸಂತ್ ಶೆಟ್ಟಿ ಗೋಷ್ಠಿಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಗೋಷ್ಠಿ ನಡೆಸಿದರು.

ಡಾ| ವೈ.ಎನ್ ಎನ್.ಶೆಟ್ಟಿ ಅಧ್ಯಕ್ಷತೆಯಲ್ಲಿ ತುಳು ಕವಿಗೋಷ್ಠಿ ನಡೆಸಲ್ಪಟ್ಟಿದ್ದು, ಪ್ರಕಾಶ್ ರಾವ್ ಪಯ್ಯಾರ್, ಇರ್ಷಾದ್ ಮೂಡಬಿದ್ರಿ, ಗೋಪಿನಾಥ್ ರಾವ್, ಎಂ.ಇ ಮೂಳೂರು, ಉಷಾ ನಾಗಭೂಷಣ್ ಕೊಲ್ಪೆ ಗೋಷ್ಠಿಯಲ್ಲಿ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು. ಅಶೋಕ್ ಪಕ್ಕಳ ಮುಂಬಯಿ ಕವಿಗೋಷ್ಠಿ ನಿರೂಪಿಸಿದರು. ಸಮಯದ ಅಭಾವದಿಂದ ರಂಗಭೂಮಿ ಗೋಷ್ಠಿ ಮತ್ತು ತುಳು ಮಾಧ್ಯಮ ಗೋಷ್ಠಿ ಮರೆಯಾಗಿ ಉತ್ಸುಕತೆಯಿಂದ ಸಿದ್ಧರಾಗಿ ಬಂದ ಗೋಷ್ಠಿದಾರರು ಬೇಸರಪಟ್ಟು ಪಾನಗೋಷ್ಠಿಯಿಂದಲೇ ಸಂತೃಪ್ತರಾದರು.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal