About Us       Contact

 


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಮಾ.15: ಭಗವಂತನು ಒಂದು ಉದ್ದೇಶದಿಂದ ಹಾಂಗ್ಯೋ ಪರಿವಾರವನ್ನು ಪೈ ಪರಿವಾರದ ಮುಖೇನ ಜೊತೆಗೂಡಿಸಿದ್ದು, ಇದನ್ನು ಅನುಭವಿಸಲು ನಾವೂ ಜೊತೆಗೂಡಿದ್ದೇವೆ. ಆದ್ದರಿಂದ ದೀಪಾ ಪ್ರದೀಪ್ ಪೈ ಪರಿವಾರವಿಡೀ ಇಂದು ಹೆಮ್ಮೆಪಡುವ ಸುದಿನವಾಗಿದೆ. ಉದ್ಯಮದ ಉದ್ದೇಶವನ್ನು ಪ್ರದೀಪ್ ಪೈ ಶ್ರಮದಾಯಕವಾಗಿಸಿ ಫಲಪ್ರದ ಗೊಳಿಸಿದ್ದು ಮುಂದೆ ಸಂಕೀರ್ಣ್ ಪೈ ಮುನ್ನಡೆಸಿ ರಾಷ್ಟ್ರವ್ಯಾಪಿ ಆಗಿಸಿ ಬೆಳೆಸಬೇಕಾಗಿದೆ. ಇಂದಿನಿಂದ ಪ್ರತೀಯೊಂದು ಮನೆಗಳಲ್ಲೂ ಹಾಂಗ್ಯೋ ಸ್ಥಾನ ರೂಪಿಸುವಂತಾಗಬೇಕು. ಹಾಂಗ್ಯೋ ನಾಮವೇ ಒಂದಷ್ಟು ವಿಶೇಷ ಮತ್ತು ಇನ್ನಷ್ಟು ಅದ್ಭುತವಾದದು ಎಂದು ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ಪ್ರವರ್ತಕಿ ಮೇಡಂ ಡಾ| ಗ್ರೇಸ್ ಪಿಂಟೊ ತಿಳಿಸಿದರು.

ಇಂದಿಲ್ಲಿ ಭಾನುವಾರ ಸಂಜೆ ಮಹಾನಗರದ ಅಂಧೇರಿ ಪೂರ್ವದಲ್ಲಿನ ಹೋಟೆಲ್ ಕೊಹಿನೂರ್ ಕಾಂಟಿನೆಂಟ ಲ್‍ನ ಎಮರಾಲ್ಡ್ ಸಭಾಗೃಹದಲ್ಲಿ ಹಾಂಗ್ಯೋ ಐಸ್‍ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್‍ನ `ಯೋ' ಐಸ್‍ಕ್ರೀಂ ಉತ್ಪನ್ನ ಮಹಾರಾಷ್ಟ್ರ ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಗೊಳಿಸಲಾದ ಸಮಾರಂಭದಲ್ಲಿ ಅತಿಥಿ ಅಭ್ಯಾಗತರಾಗಿದ್ದು ಮೇಡಂ ಪಿಂಟೊ ಮಾತನಾಡಿದರು.

ಬಾಲಿವುಡ್ ಅಭಿನೇತ್ರಿಯರಾದ ಪ್ರಿಯಾ ಬಾಪಟ್ ಮತ್ತು ರಶ್ಮಿ ದೇಸಾಯಿ ಸೆಲೆಬ್ರೆಟಿ ಅತಿಥಿಗಳ ಆಕರ್ಷಣೆಯೊ -ಂದಿಗೆ ಜರಗಿದ ಭವ್ಯ ಸಮಾರಂಭದಲ್ಲಿ ಭುವನೇಶ್ವರದ ಆದಾಯ ತೆರಿಗೆ ಆಯುಕ್ತ ಶ್ಯಾಮ್‍ಸುಂದರ ಕೇಶ್‍ಕಾಮತ್ ಮತ್ತು ಸುಜತಾ ಶ್ಯಾಮ್‍ಸುಂದರ (ದಂಪತಿ), ರಿಲಾಯನ್ಸ್ ರಿಟೇಲ್ ಲಿಮಿಟೆಡ್‍ನ ಆರ್ಥಿಕ ಮುಖ್ಯಾಧಿಕಾರಿ ರಾಜೇಂದ್ರ ಕಾಮತ್, ಇಂಡಿಯನ್ ಹೋಟೆಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್‍ನ (ಆಹಾರ್) ಅಧ್ಯಕ್ಷ ಶಿವಾನಂದ್ ಶೆಟ್ಟಿ, ಮತ್ತು ರಿಬ್ಬನ್‍ಸ್ ಎಂಡ್ ಬಲೂನ್ಸ್-ದ ಕೇಕ್ ಶಾಪ್‍ನ ಆಡಳಿತ ನಿರ್ದೇಶಕ ಸತೀಶ್ ವಿ.ಶೆಟ್ಟಿ ಉಪಸ್ಥಿತರಿದ್ದು `ಯೋ' ಐಸ್‍ಕ್ರೀಂಗಳ ವಿವಿಧ ಶ್ರೇಣಿಗಳನ್ನು ಬಿಡುಗಡೆ ಗೊಳಿಸಿ ಅಭಿನಂದಿಸಿದರು. ಪ್ರಿಯಾ ಬಾಪಟ್ `ಯೋ' ಐಸ್‍ಕ್ರೀಂನ ಲಾಂಛನ ಅನಾವರಣಗೊಳಿಸಿ ಶುಭಾರೈಸಿದರು.

ಅಂತರಾಷ್ಟ್ರೀಯ ಬ್ರಾ ್ಯಂಡೆಡ್ ಉತ್ಪನ್ನಗಳು ನಮ್ಮಲ್ಲೇ ದೊರೆಯುವ ಕಾರಣ ಮತ್ತೆಲ್ಲಿಗೂ ಹೋಗುವ ಅವಶ್ಯಕತೆ ಇನ್ನಿಲ್ಲ. ಇದನ್ನು ಹಾಂಗ್ಯೋ ಸಂಪನ್ನಗೊಳಿಸಿದೆ. ಮುಂದಿನ ದಿನಗಳಲೂ ಬಹಳಷ್ಟು ಆಶ್ಚರ್ಯಕರ ಉತ್ಪನ್ನಗಳೊಂದಿಗೆ ಹಾಂಗ್ಯೋ ಜಗದ್ವಾ ್ಯಪಿಯಾಗಿ ಬೆಳೆಯಲಿ ಎಂದು ಪ್ರಿಯಾ ಬಾಪಟ್ ತಿಳಿಸಿದರು.

ರಶ್ಮಿ ದೇಸಾಯಿ ಮಾತನಾಡಿ ಹಾಂಗ್ಯೋ ಐಸ್‍ಕ್ರೀಮ್‍ಗಳ ಪ್ರತೀಯೊಂದು ಉತ್ಪನ್ನಗಳನ್ನು ನಾನು ಆಸ್ವಾಧಿಸಿದ್ದೇನೆ. ಇವೆಲ್ಲವುಗಳೂ ಒಂದಕ್ಕಿಂತ ಒಂದು ಕೆನೆ ಭರಿತ ಮತ್ತು ರುಚಿಕರವಾಗಿವೆ. ಬರೇ ಮಕ್ಕಳನ್ನೇ ಆಕರ್ಷಿಸದೆ ವಯೋವೃದ್ಧರ ತನಕದ ಎಲ್ಲರನ್ನೂ ಇಷ್ಟಪಡಿಸುವಂತಹ ಮಂಜುಕೆನೆಯ ಉತ್ಪನ್ನಗಳಾಗಿವೆ. ಮನೆಗಳಲ್ಲಿ ತಾವೆಲ್ಲರೂ ಹಾಂಗ್ಯೋ ನಿತ್ಯವಾಗಿ ಸವಿಯುವಂತಾಗಲಿ ಎಂದರು.

ಸದ್ಯ ಆರೋಗ್ಯದ ಅತೀ ಕಾಳಜಿ ಬಗ್ಗೆ ಗಮನಿಸುವ ಜನತೆ ತಾವು ಸೇವಿಸುವ ಆಹಾರಗಳಲ್ಲಿನ ಕಾವಳತೆ (ಕ್ಯಾಲೊರಿ) ಬಗ್ಗೆ ತಾವೇ ನಿರ್ಧಾರಿಸುತ್ತಾರೆ. ಕೊಬ್ಬು ಪದಾರ್ಥಗಳನ್ನೊಳಗೊಂಡಿರುವ ಆಹಾರಗಳಲ್ಲಿ ನಿಗಾವನ್ನಿರಿಸುತ್ತಾರೆ. ಇವೆಲ್ಲಕ್ಕೂ ಹೊಂದಿಸಿಕೊಂಡು ಸಂಶೋಧನಾತ್ಮಕವಾಗಿ ಹಾಂಗ್ಯೋ ತನ್ನ ಐಸ್‍ಕ್ರೀಂ ಉತ್ಪನ್ನಗಳನ್ನು ತಯಾರಿಸಿ ಜನಮನ ಗಳಿಸಿದೆ. ಇದೀಗ ರಾಷ್ಟ್ರದ ಉದ್ದಗಲಕ್ಕೂ ತನ್ನ ಉತ್ಪನ್ನಗಳನ್ನು ವಿತರಿಸುತ್ತಿರುವುದು ಅಭಿನಂದನೀಯ. ಮಂಗಳೂರುನಿಂದ ಹಾಂಗ್ಯೋ ಸಂಸ್ಥೆ ಹೆಚ್ಚು ತೆರಿಗೆ ಭರಿಸುವ ಸಂಸ್ಥೆಯಾಗಿದ್ದು ಮುಂದೆ ತಮ್ಮ ಉದ್ಯಮದಲ್ಲಿ ಇನ್ನಷ್ಟು ಪ್ರಗತಿಕಂಡು ಕರ್ನಾಟಕದಲ್ಲೇ ಅತಿಹೆಚ್ಚು ತೆರಿಗೆ ಪಾವತಿಸುವ ಉದ್ಯಮ ಸಂಸ್ಥೆಯಾಗಲಿ ಎಂದು ಹಾರೈಸಿದರು ಎಂದು ಶ್ಯಾಮ್‍ಸುಂದರ ನುಡಿದರು.

ರಾಜೇಂದ್ರ ಕಾಮತ್ ಮಾತನಾಡಿ ಹಾಂಗ್ಯೋ ಅರ್ಥದಂತೆಯೇ ಉತ್ಪನ್ನಗಳನ್ನು ತೃಪ್ತಿದಾಯಕವಾಗಿಸಿ ಎಲ್ಲರನ್ನೂ ಆಕರ್ಷಿಸಿದೆ. ಭವಿಷ್ಯದಲ್ಲೂ ಭವ್ಯ ಉದ್ಯಮವಾಗಿ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು.

ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿಗೆ ಪೂರ್ಣಪ್ರಮಾಣದೊಂದಿಗೆ ಹೆಜ್ಜೆಯನ್ನಿಡುತ್ತಿರುವ ಹಾಂಗ್ಯೋ ಐಸ್‍ಕ್ರೀಮ್ಸ್ ಉದ್ಯಮಕ್ಕೆ ನಾವು ಆದರಪೂರ್ವಕವಾಗಿ ಬರಮಾಡಿಕೊಳ್ಳುತ್ತೇವೆ. ಭೋಜನ ನಂತರದ ಸಿಹಿ ತಿನಿಸುಗಳಲ್ಲಿನ ಐಸ್‍ಕ್ರೀಮ್ ವಿನಃ ಆಹಾರ ಸೇವನೆಯೇ ಅಪೂರ್ಣ ಅನ್ನುವ ಈ ಕಾಲದಲ್ಲಿ ಹಾಂಗ್ಯೋ ನಿರ್ಧಿಷ್ಟ ಮಾಪನಗಳನ್ನಾಗಿಸಿ ತನ್ನ ಉತ್ಪನ್ನಗಳನ್ನು ಜನತೆಗೆ ಒದಗಿಸುತ್ತಿರುವುದು ಸ್ತುತ್ಯಾರ್ಹ ಎಂದು ಶಿವಾನಂದ್ ಶೆಟ್ಟಿ ತಿಳಿಸಿದರು.

 

 

 

ಐಸ್‍ಕ್ರೀಮ್ಸ್ ತಯಾರಿಯಲ್ಲಿ ಪ್ರದೀಪ್ ಪೈ ಪರಿವಾರದ ಸಾಧನೆ ಬೆರಗುಗೊಳಿಸುವಂತಹದ್ದು. ಇವರ ಸಾಧನೆಗೆ ಇನ್ನಷ್ಟು ಯಶದೊರೆತು ರಾಷ್ಟ್ರದ ಎಲ್ಲಾ ನಗರಗಳಲ್ಲೂ ಹಾಂಗ್ಯೋ ದೊರೆಯುವಂತಾಗಲಿ. ಇದೀಗಲೇ ಗ್ರಾಹಕರಲ್ಲಿ ಅತ್ಯುತ್ತಮ ಛಾಪು (ಬೆಸ್ಟ್ ಬ್ರಾ ್ಯಂಡ್) ಮೂಡಿಸಿ ಮನೆಮಾತಾಗಿರುವ ಹಾಂಗ್ಯೋ ಅಂತರಾಷ್ಟ್ರೀಯ ಬ್ರ್ಯಾಂಡ್ ಆಗಿ ರೂಪುಗೊಳ್ಳಲಿ ಎಂದುಸತೀಶ್ ಶೆಟ್ಟಿ ತಿಳಿಸಿದರು.

ಹಾಂಗ್ಯೋ ಐಸ್‍ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ಪ್ರದೀಪ್ ಜಿ.ಪೈ ಸ್ವಾಗತಿಸಿ ಪ್ರಸ್ತಾವನೆಗೈದು ಹಾಂಗ್ಯೋವನ್ನು ಆಧುನಿಕ ವ್ಯಾಪಾರದಲ್ಲಿ ತೊಡಗಿಸುವಂತಹ ಪ್ರಯತ್ನ ನಮ್ಮದಾಗಿದೆ. ಜಾಗತೀಕರಣದ ಈ ಕಾಲಘಟ್ಟದಲ್ಲಿ ನಮ್ಮ ಉತ್ಪನ್ನಗಳನ್ನು ಡಿಮಾರ್ಟ್, ಬಿಗ್‍ಬಜ್ಹಾರ್, ರಿಲಾಯನ್ಸ್‍ಗಳಂತ ಮಳಿಗೆಗಳಲ್ಲಿ ಇಡೀ ಪರಿವಾರದ ಗ್ರಾಹಕರಲ್ಲಿ ಒದಗಿಸುವಂತಾಗಬೇಕು. ನಮ್ಮ ಐಸ್‍ಕ್ರೀಮ್‍ಗಳ ವಿಶೇಷತೆ ಅಂದರೆ ಆಧುನಿಕ ಜಗತ್ತಿಗೆ ಬೇಕಾದಂತೆ ಓಮೇಗಾ ತ್ರಿಸಿಕ್ಸ್‍ನೈನ್ ಎಂಡ್‍ರಿಚ್ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದೇವೆ. ಇದು ಮೆದುಳು ಮತ್ತು ಹೃದಯಕ್ಕೂ ಉತ್ತಮವಾಗಿದ್ದು ಉತ್ಕೃಷ್ಟ ಪುಷ್ಟೀಕರಣದ ಉತ್ಪನ್ನಗಳಾಗಿವೆ. ಮಹಾರಾಷ್ಟ್ರದಲ್ಲಿ ಕಳೆದ ಎರಡುವರೆ ವರ್ಷಗಳಲ್ಲಿ ನಮ್ಮ ಅನುಭವ ಅತ್ಯುತ್ತಮವಾಗಿದೆ. ಗ್ರಾಹಕರ ಬೇಡಿಕೆಯನ್ನು ಅನುಕೂಲಕರ ಆಗಿಸುವ ಉದ್ದೇಶದಿಂದ ಪೂರ್ಣಪ್ರಮಾಣದಲ್ಲಿ ಹಾಂಗ್ಯೋ ಇಂದಿನಿಂದ ಸೇವಾನಿರತವಾಗಲಿದೆ ಎಂದರು.

ಸಂಸ್ಥಾಪಕ ಕಾರ್ಯಾಧ್ಯಕ್ಷ ಜಿ.ಎಸ್ ಕಾಮತ್, ಉದ್ಯಮಿಗಳಾದ ಕೆ.ಸಿ ಶೆಟ್ಟಿ, ಎನ್.ಟಿ ಪೂಜಾರಿ, ಆ್ಯಂಟನಿ ಸಿಕ್ವೇರಾ, ದಿವ್ಯ ಡಿ.ಪೈ, ಮಾಧವಿ ಕಾಮತ್, ನ್ಯಾ| ಎಂ.ವಿ ಕಿಣಿ, ಕೆ.ಎಸ್ ಪ್ರಭು, ಎನ್.ಎನ್ ಪಾಲ್, ಯಶ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು, ಹ್ಯಾಂಗ್ಯೋ ವಿತರಕರು ಉಪಸ್ಥಿತರಿದ್ದರು.

ನಿಕೇಶ್ ದೇಸಾಯಿ ಪ್ರಾರ್ಥನೆಯನ್ನಾಡಿದರು. ಅನುರಾಗ್ ಬಂಗೇರಾ ಮಂಗಳೂರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಹಾಂಗ್ಯೋ ನಿರ್ದೇಶಕಿ ದೀಪಾ ಪಿ.ಪೈ, ನಿರ್ದೇಶಕ ಸಂಕೀರ್ಣ್ ಪಿ.ಪೈ, ಕಾರ್ಯನಿರ್ವಾಹಕ ಕಾರ್ಯಧ್ಯಕ್ಷ ದಿನೇಶ್ ಆರ್.ಪೈ ಹುಬ್ಬಳ್ಳಿ, ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ್ ಆರ್.ಪೈ, ಮಂಜುನಾಥ್ ಎನ್.ಬೆಂಗಳೂರು, ಉಪಾಧ್ಯಕ್ಷ (ವಿಕ್ರಯ) ಎಫ್.ಎಸ್ ಮಿರಾಂದಾ, ತಾಂತ್ರಿಕ ಸಲಹೆಗಾರ ಸಹೀದ್ ಮನ್ಸೂರಿ, ಬ್ರಾಯನ್ ಡಿಸೋಜಾ ಅತಿಥಿಗಳಿಗೆ ಪುಷ್ಫಗುಪ್ಚÀನೀಡಿ ಗೌರವಿಸಿದರು. ಮನೋರಂಜನಾ ಕಾರ್ಯಕ್ರಮವಾಗಿಸಿ ಅವಧೂತ್ ಜೆ.ರೆಗೇ ನಿರ್ದೇಶನದ ಶಮಾಂಗ್ ತಂಡವು ಸಂಗೀತ ಕಛೇರಿ ಪ್ರಸ್ತುತ ಪಡಿಸಿತು. ವಿನಿತ್ ಮಸ್ರಮ್ ಮನೋರಂಜನಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal