About Us       Contact

 

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


ಮುಂಬಯಿ, ಮಾ.02: ಲೂಮೆನ್ಸ್ ಗ್ರೂಫ್ ಆಫ್ ಇಂಡಿಯಾ ಇದರ ಆಡಳಿತ ನಿರ್ದೇಶಕ ಮತ್ತು ಐಬಿಸಿಸಿಐ ಅಧ್ಯಕ್ಷ ಕುತ್ಪಾಡಿ ಚಂದ್ರ ಶೆಟ್ಟಿ (ಕೆ.ಸಿ ಶೆಟ್ಟಿ) ಇವರ ಅಂಧೇರಿ ಪಶ್ಚಿಮದ ಡಿ.ಎನ್ ನಗರದಲ್ಲಿನ ಆದಾನಿ ವೆಸ್ಟನ್ ಹೈಟ್ಸ್ ಇಲ್ಲಿರುವ ಇನ್‍ಸ್ಪಾಯರ್ ಹಬ್ ಇದರ ಮೊದಲ ಮಹಡಿಯಲ್ಲಿ ಅತ್ಯಾಧುನಿಕವಾಗಿ ಸಜ್ಜುಗೊಳಿಸಿದ ಲೂಮೆನ್ಸ್‍ನ ನೂತನ ಕಛೇರಿಯನ್ನು ಇಂದಿಲ್ಲಿ ಸೋಮವಾರ ಮುಂಜಾನೆ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದ ಗೌಡ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.

ದಾಟಿ ಸದಾನಂದ ಗೌಡ ದೀಪಬೆಳಗಿಸಿ ವಿಧ್ಯುಕ್ತವಾಗಿ ಕಛೇರಿಯನ್ನು ಸೇವಾರ್ಪಣೆ ಗೊಳಿಸಿದರು. ಕೆ.ಸಿ ಶೆಟ್ಟಿ ಮತ್ತು ಮಲ್ಲಿಕಾ ಕೆ.ಸಿ ಶೆಟ್ಟಿ, ಕಾರ್ತಿಕ್ ಸಿ.ಶೆಟ್ಟಿ ಪರಿವಾರ ಡಿವಿಎಸ್ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಗೋಪಾಲ ಭಟ್ ಭಯಂದರ್ ಲಕ್ಷ್ಮೀ ಪೂಜೆ, ದ್ವಾರಪೂಜೆ ಇನ್ನಿತರ ಪೂಜಾಧಿಗಳನ್ನು ನೆರವೇರಿಸಿ ಆಶೀರ್ವಚಿಸಿದರು. ನಿತ್ಯಾನಂದ ಹೆಬ್ಬಾರ್, ನಾಗರಾಜ ಐತಾಳ್, ವಿಶ್ವೇಶ ಭಟ್ ಪೂಜೆಗೆ ಸಹಕರಿಸಿ ತೀರ್ಥಪ್ರಸಾದ ವಿತರಿಸಿದರು.

ಈ ಸಂದರ್ಭದಲ್ಲಿ ಪಾಂಡುರಂಗ ಎಲ್.ಶೆಟ್ಟಿ, ವನಿತಾ ಪಾಂಡುರಂಗ ಶೆಟ್ಟಿ, ಸೋನಿಕಾ ಕೆ. ಶೆಟ್ಟಿ, ಕು| ಆಯನಾ ಕೆ. ಶೆಟ್ಟಿ, ಬಗ್‍ಜೂನ್ ಶೆಟ್ಟಿ, ರತ್ನಾ ಬಿ.ಶೆಟ್ಟಿ, ಮಾ| ಯೂವಿನ್ ಬಿ.ಶೆಟ್ಟಿ, ಕು| ರಿವಾ ಬಿ.ಶೆಟ್ಟಿ, ಪ್ರಸಾದ್ ಹೆಗ್ಡೆ, ರೇಶ್ಮಾ ಪಿ.ಹೆಗ್ಡೆ, ವಿಶ್ವನಾಥ್ ಯು.ಮಾಡಾ, ಉಷಾ ಎನ್.ಶೆಟ್ಟಿ, ಕೆ.ಕೆ ನಂಬಿಯಾರ್, ಜಯಂತಿಭಾೈ ಪಾಟೇಲ್, ಡಾ| ವಿಜಯ್ ಹೆಗ್ಡೆ, ಸಿಎ| ಅಶ್ವಜಿತ್ ಹೆಜ್ಮಾಡಿ, ಗಂಗಾಧರ್ ಶೆಟ್ಟಿ ಕುತ್ಪಾಡಿ (ವಿೂರಾರೋಡ್), ವಾಮನ ಎಸ್.ಶೆಟ್ಟಿ (ಮನೀಷ್ ಕ್ಯಾಟರರ್ಸ್) ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಶುಭಾರೈಸಿದರು.

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal