Print

 ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


ಮುಂಬಯಿ, ಮಾ.01: ನನಗೆ ಬಂಟ್ಸ್ ಸಮುದಾಯ ತುಂಬಾ ಹತ್ತಿರವಾದ ಜನಾಂಗ. ನಾನು ಮೊದಲು ಮಂಗಳೂರು, ನಂತರ ಉಡುಪಿ ಕ್ಷೇತ್ರದಿಂದ ಸಂಸದನಾಗಿದ್ದೆ. ನನ್ನ ಗೆಲುವಿನಲ್ಲಿ ಬಂಟ ಸಮುದಾಯ ಆಶೀರ್ವಾದವೂ ಮುಖ್ಯವಾಗಿತ್ತು. ಬಂಟರು ಎಲ್ಲ ಕಡೆಯಲ್ಲೂ ಇದ್ದಾರೆ. ಫಿಲ್ಮ್, ಕ್ರೀಡೆ, ಕಲೆ, ಹೊಟೇಲ್ ಉದ್ಯಮ, ವೈದ್ಯಕೀಯ ಕ್ಷೇತ್ರ. ಆ ಮೂಲಕ ಒಂದಲ್ಲಒಂದು ರೀತಿಯಿಂದ ಇಡೀ ದೇಶದಲ್ಲಿ ಬಂಟರು ಪ್ರಸಿದ್ಧರಾಗಿದ್ದಾರೆ. ರಾಷ್ಟೋನ್ನತಿಗೆ ಬಂಟರ ಕೊಡುಗೆ ಸರ್ವೋತ್ಕೃಷ್ಟವಾಗಿದ್ದು ಆದುದರಿಂದಲೇ ಬಂಟರು ದೇಶದ ಅಭಿವೃದ್ಧಿಗೆ ಕಾರಣಾರ್ಥರಾಗಿದ್ದಾರೆ. ಬಂಟರ ಈ ಕಾರ್ಯಕ್ರಮವೂ ಯುವ ಪೀಳೆಗೆಗೆ ಪ್ರೊತ್ಸಾಹದಾಯಕವಾಗಿದೆ. ಬಂಟರ ಭಾವೀ ಜನಾಂಗವೂ ಒಂದು ದಿನ ನಾವೂ ಇಂತಹ ಪುರಸ್ಕಾರ ಪಡೆಯಬೇಕೆಂಬ ಇಚ್ಛೆ ಮೂಡಿಸುವಂತಾಗಲಿ ಎಂದು ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿ, ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದ ಗೌಡ ಎಂದರು.

ಬಂಟ ಸಮುದಾಯದ ರಾಷ್ಟ್ರೀಯ ಮಾನ್ಯತೆಯ ಉದ್ಯಮಸ್ಥರ ಪ್ರತಿಷ್ಠಿತ ಸಂಸ್ಥೆ ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಇಂದಿಲ್ಲಿ ಆದಿತ್ಯವಾರ ಸಂಜೆ ಸಾಂತಾಕ್ರೂಜ್ ಪೂರ್ವದ ಸಹರಾಸ್ಟಾರ್ ಹೊಟೇಲು ಸಭಾಗೃಹದಲ್ಲಿ ಆಯೋಜಿಸಿದ್ದ ಐಬಿಸಿಸಿನ ಉದ್ಯಮಗಳ ಪ್ರದರ್ಶನ ಮತ್ತು ಬಂಟ್ಸ್ ಸ್ಟಾರ್ ಸಾಧಕ ಪುರಸ್ಕಾರ 2020' ಪ್ರದಾನ ಸಮಾರಂಭ ಉದ್ಘಾಟಿಸಿ ಸಚಿವ ಸದಾನಂದ ಗೌಡ ಮಾತನಾಡಿದರು.

ಲ್ಯೂಮೇನ್ಸ್ ಗ್ರೂಫ್ ಆಫ್ ಇಂಡಿಯಾ ಇದರ ಆಡಳಿತ ನಿರ್ದೇಶಕ ಮತ್ತು ಬಿಸಿಸಿಐ ಅಧ್ಯಕ್ಷ ಕುತ್ಪಾಡಿ ಚಂದ್ರ ಶೆಟ್ಟಿ (ಕೆ.ಸಿ ಶೆಟ್ಟಿ) ಅಧ್ಯಕ್ಷತೆಯಲ್ಲಿ ಜರುಗಿದ ಭವ್ಯ ಸಮಾರಂಭದಲ್ಲಿ ಕೇಂದ್ರ ಸರಕಾರದ ರಸ್ತೆ ಸಾರಿಗೆ, ಹೆದ್ದಾರಿ, ಸೂಕ್ಷ್ಮ- ಸಣ್ಣ ಮತ್ತು ಮಧ್ಯಮ ಉದ್ದಿಮೆ ಖಾತೆ ಸಚಿವ ನಿತಿನ್ ಗಡ್ಕರಿ, ಮುಂಬಯಿ ನಗರ ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಸಿಇಒ ಮತ್ತು ಆಡಳಿತ ನಿರ್ದೇಶಕ ರಾಜ್‍ಕಿರಣ್ ರೈ ಅತಿಥಿ ಅಭ್ಯಾಗತರಾಗಿದ್ದು ಎಂಆರ್‍ಜಿ ಸಮೂಹ ಬೆಂಗಳೂರು ಕಾರ್ಯಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಇವರಿಗೆ ಆತಿಥೇಯ (ಹೊಟೇಲು ಕ್ಷೇತ್ರದ) ತಾರಾ ಉದ್ಯಮಿ (Star Performer in Hospitality Industry), ಎಂರಿಸಲ್ಟ್ ಸಂಸ್ಥೆ ಬೂಸ್ಟನ್ ಇದರ ಸ್ಥಾಪಕಾಧ್ಯಕ್ಷ ಶೇಖರ್ ನಾಯ್ಕ್ ಶ್ರೇಷ್ಠ ಭವಿಷ್ಯ ಪ್ರಾರಂಭಿಕ ಉದ್ಯಮಿ (Excellence in futuristic Start-up),, ನಾರಾಯಣ ಆಸ್ಪತ್ರೆ ಬೆಂಗಳೂರು ಇದರ ಕಾರ್ಯಾಧ್ಯಕ್ಷ ಡಾ| ದೇವಿ ಪ್ರಸಾದ್ ಶೆಟ್ಟಿ ಇವರಿಗೆ (ಪರವಾಗಿ ಎಸ್.ಬಿ ಶೆಟ್ಟಿ) ವೃತ್ತಿಪರ ಶ್ರೇಷ್ಠತಾ ವ್ಯಕ್ತಿ (Eexcellence in Profession),ಆಲ್‍ಕಾರ್ಗೊ ಲಾಜಿಸ್ಟಿಕ್ ಲಿಮಿಟೆಡ್ ಕಾರ್ಯಾಧಕ್ಷ ಶಶಿಕಿರಣ್ ಶೆಟ್ಟಿ (ಪತ್ನಿ ಆರತಿ ಶಶಿಕಿರಣ್) ಇವರಿಗೆ ಶ್ರೇಷ್ಠತಾ ಉದ್ಯಮಿ (Eexcellence in Business) ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

 

 

  

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 ಸೇವೆ ಮತ್ತು ಸಾಧನೆಗಳೊಂದಿಗೆ ಬಂಟ್ಸ್ ಸಮುದಾಯದ ಇಡೀ ಪ್ರಪಂಚದಲ್ಲಿ ವಿಸ್ತರಿಸಿದ್ದಾರೆ. ಬಂಟರು ಎಲ್ಲಿ ಉದ್ಯಮದಲ್ಲಿದ್ದರೋ ಅಲ್ಲಿ ಸಾಹಸೋದ್ಯಮಿಗಳಾಗಿದ್ದಾರೆ. ಜೀವನದಲ್ಲಿ ಸಾಧನೆಯ ಖುಷಿ ತಾನು ಅನುಭವಿಸುವಲ್ಲಿ ಏನೂ ಅರ್ಥವಿಲ್ಲ. ಬದಲಾಗಿ ನಮ್ಮ ಮಿತ್ರರೂ, ನಮ್ಮೊಡನೆ ಕೆಲಸ ಮಾಡುವ ನೌಕರವೃಂದ ಖುಷಿ ಪಟ್ಟಾಗ ಮಾತ್ರ ಅದು ಸಾರ್ಥಕವಾಗುವುದು. ಸದ್ಯ ನಾವು ಯುವ ಪೀಳಿಗೆಗೆ ಸ್ವಉದ್ಯಮದ ಮಹತ್ವ ಮಾಹಿತಿ ನೀಡಬೇಕು. ಉದ್ಯಮ ಓಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಅದರ ಹಿಂದೆ ದಿನಾರಾತ್ರಿ ಕೆಲಸ ಮಾಡುವ ನೌಕರವೃಂದ, ಅವರ ಯೋಗದಾನ ತುಂಬಾ ಮಹತ್ವದ್ದು. ಉದ್ಯಮದಲ್ಲಿ ದೂರದೃಷ್ಟಿ ಇದ್ದಾಗ ಮಾತ್ರ ಯಶಸ್ಸು ಕಾಣಬಹುದು. ಎಲ್ಲಾ ಕ್ಷೇತ್ರದಲ್ಲಿ ಟೀಂ ಸ್ಪೀರಿಟ್ ಅಗತ್ಯವಿದೆ. ಸುಖ ದುಃಖ, ಸೋಲು ಗೆಲುವು ಎಲ್ಲಾ ಕಡೆಯಲ್ಲೂವಿದೆ. ಅದು ಒಂದು ಜೀವನದ ಭಾಗ. ಆ ಸಮಸ್ಯೆಗಳನ್ನು ಎದುರಿಸಿ ಮುಂದೆ ಸಾಗುವುದೆ ಜೀವನ. ನೀವು ಉದ್ಯೋಗವನ್ನು ಸೃಷ್ಟಿಸುವ ಒಂದು ಮಾಧ್ಯಮ. ನೀವು ಬರೀ ಉದ್ಯಮಿಗಳಲ್ಲ, ನಿಮ್ಮಿಂದ ಎಷ್ಟು ಜನರಿಗೆ ಉದ್ಯೋಗ ಸಿಗುತ್ತಿದೆ. ನಮ್ಮ ದೇಶದ ಪ್ರಜೆಗಳು ಇಡೀ ಪ್ರಪಂಚದಲ್ಲಿ ಒಳ್ಳೆಯ ಉದ್ಯಮದಲ್ಲಿದ್ದಾರೆ. ದೇಶದಲ್ಲಿ ಪ್ರತಿಭೆಯಿದೆ ಆದರೆ ಪೆÇ್ರೀತ್ಸಾಹಯಿಲ್ಲ. ದೇಶದ ಬಡತನವನ್ನು ನಿವಾರಿಸಬೇಕು. ದೇಶದ ಪ್ರಗತಿಗಾಗಿ ರೈತರಿಗೆ ಸಹಾಯ ಮಾಡಬೇಕು. ಯುವ ಜನತೆಗೆ ಪ್ರೇರಣೆ ಮತ್ತು ಪ್ರೊತ್ಸಾಹ ಅಗತ್ಯವಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕು. ಆಗ ಮಾತ್ರ ನಿಶ್ಚಿತ ರೂಪದಲ್ಲಿ ದೇಶದ ಬಡತನ ನಿರ್ಮೂಲನವಾಗುವುದು. ಆವಾಗಲೇ ದೇಶದ ಸದೃಢ ಸಾಧ್ಯ. ದೇಶದ ಉನ್ನತಿ ಅಭಿವೃದ್ಧಿ ಪಥದಲ್ಲಿ ಸಾಗುವಲ್ಲಿ ಬಂಟ್ಸ್ ಛೇಂಬರ್‍ನಂತಹ ಸಂಸ್ಥೆಗಳಿಂದ ಸಾಧ್ಯ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ರಾಜ್‍ಕಿರಣ್ ರೈ ಮಾತನಾಡಿ ಇಂದು ನಾವೂ ಇಡೀ ಪ್ರಪಂಚಕ್ಕೆ ಬಂಟ್ಸ್ ಸಮಾಜ ಯಾರೆಂದು ತೋರಿಸಿದ್ದೇವೆ.ಇಲ್ಲಿ ಸೇರಿರುವ ವಿವಿಧ ಕ್ಷೇತ್ರದ ಉದ್ಯಮಿಗಳು ತಮ್ಮ ಸಾಧನೆ ಮೂಲಕ ಬಂಟರನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಬಂಟ್ಸ್ ಸಮಾಜವು ಎಲ್ಲರಿಗೂ ಸಹಾಯ, ಪೆÇೀತ್ಸಾಹ ನೀಡುವ ಸಮಾಜವಾಗಿದ್ದು ಇಂತಹ ವೇದಿಕೆಗಳು ಮತ್ತಷ್ಟು ಬಂಟರನ್ನು ಗುರುತಿಸುವಂತಾಗಲಿ ಎಂದು ಪುರಸ್ಕೃತ ಉದ್ಯಮಿಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು ಎಂದರು.

ಗೋಪಾಲ್ ಶೆಟ್ಟಿ ಮಾತನಾಡಿ ಇಂದು ನಾನು ರಾಜಕೀಯ ಕ್ಷೇತ್ರವನ್ನು ಅವಲಂಬಿಸದಿದ್ದರೆ ಬಹುಶಃ ನನ್ನ ಹೆಸರು ಕೂಡ ಪುರಸ್ಕೃತರ ಸಾಲಿನಲ್ಲಿ ಇರುತಿತ್ತೋ ಎನೋ. ಬಂಟ ಸಮಾಜ ಮುಂಬಯಿ ಮತ್ತು ಇಡೀ ದೇಶದಲ್ಲಿ ತನ್ನ ಅಸ್ತಿತ್ವವನ್ನು ರೂಪಿಸಿದೆ. ದೇಶವನ್ನು ಮುನ್ನಡೆಸಿ ಅಭಿವೃದ್ಧಿ ಪಥದತ್ತ ಸಾಗಿಸಲು ಬಂಟರು ಮುಂದಿದ್ದಾರೆ. ಬಂಟ್ಸ್ ಸಮಾಜ ಗಳಿಸುವುದರಕ್ಕಿಂತ ಸಮಾಜಕ್ಕೆ ನೀಡುವುದನ್ನೇ ಬಯಸುತ್ತಿದೆ. ಶೆಟ್ಟಿ ಎಂದರೆ ಬರೀ ಹೋಟೆಲ್ ಉದ್ಯಮ ಅಲ್ಲ, ನಾವೂ ಶಿಕ್ಷಣ, ವೈದ್ಯಕೀಯ ಸೇರಿದಂತೆ ವಿವಿಧ ಕೈಗಾರಿಕೋದ್ಯಮ ಕ್ಷೇತ್ರಗಳಲ್ಲಿ ಯಶಸ್ಸನ್ನು ಕಂಡಿದ್ದೇವೆ. ಸ್ಟಾರ್ಟ್ ಆಪ್ ಉದ್ಯಮಕ್ಕೆ ಜಾಸ್ತಿ ಪ್ರೊತ್ಸಾಹ ನೀಡಬೇಕು. ಉದ್ಯಮಸ್ಥರಿಗೆ ಸರಕಾರವು ಮೂರು ವರ್ಷ ತೆರಿಗೆ ವಿನಾಯಿತಿ ನೀಡಿದರೆ ಆ ಹಣವನ್ನು ಉದ್ಯಮಕ್ಕೆ ವಿನಿಯೋಗಿಸಿ ಉದ್ಯಮ ವಿಸ್ತರಿಸಲು ಸಾಧ್ಯವಾಗುವುದು. ಇದು ದೇಶದ ಸರ್ವೋನ್ನತಿಗೆ ಪೂರಕವಾಗಲಿದೆ. ದೇಶದ ಅಭಿವೃದ್ಧಿಗೆ ನಮ್ಮ ಯೋಗದಾನ ಬಹಳಷ್ಟಿದೆ. ಇಂತಹ ಗುರುತರ ಕಾರ್ಯಕ್ರಮದಿಂದ ದೇಶ ಮುನ್ನಡೆಸಲು ಸಾಧ್ಯವಾಗುವುದು ಎಂದು ಶುಭ ಹಾರೈಸಿದರು.

ಇಂದು ನನಗೆ ತುಂಬಾ ಹೆಮ್ಮೆ ಆಗುತ್ತಿದೆ ಈ ಪುರಸ್ಕೃತವನ್ನು ನಿತಿನ್ ಗಡ್ಕರಿ ಅವರ ಹಸ್ತದಿಂದ ಪಡೆದುಕೊಳ್ಳುವುದು ನನ್ನ ಗೌರವ. ನನ್ನ 26 ವರ್ಷದ ಸಾಧನೆಯಲ್ಲಿ ಹಲವು ಪ್ರಶಸ್ತಿ ಸಿಕ್ಕಿವೆ. ಆದರೆ ಈ ಪ್ರಶಸ್ತಿ ಎಲ್ಲವೂದಕ್ಕಿಂತಲೂ ಅಭಿಮಾನದ ಗೌರವ ಮತ್ತು ಈ ಪ್ರಶಸ್ತಿ ನನ್ನ ಹೃದಯಶೀಲತೆಯ ಗೌರವ ಅಂದುಕೊಂಡಿದ್ದೇನೆ. ಅಪ್ಪಅಮ್ಮ ಅವರ ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆದು ಇಂತಹ ಗೌರವಕ್ಕೆ ಪಾತ್ರನಾಗಿರುವೆ. ಸಮಾಜದ ಋಣ ಮುಕ್ತತೆಗೆ ನಾನು ನನ್ನ ಉದ್ಯಮದ ಒಂದು ಭಾಗ ಕಷ್ಟದಲ್ಲಿರುವ ಜನತೆಗೆ ನೀಡಿ ಸಮಾಜದ ಋಣ ತೀರಿಸುತ್ತೇನೆ. ಇದಕ್ಕೆಲ್ಲಾ ತಮ್ಮೆಲ್ಲರ ಅಭಿಮಾನವೇ ಕಾರಣ ಎಂದು ಪ್ರಕಾಶ್ ಶೆಟ್ಟಿ ಪ್ರಶಸ್ತಿಗೆ ಉತ್ತರಿಸಿ ತಿಳಿಸಿದರು.

ಶಶಿಕಿರಣ್ ಶೆಟ್ಟಿ ಮಾತನಾಡಿ ಇಂದು ನಿಮ್ಮೊಡನೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಹಾನ್ ವ್ಯಕ್ತಿಗಳ ಹಸ್ತದಿಂದ ಪುರಸ್ಕಾರ ಪಡೆಯುವುದು ನನ್ನ ಅದೃಷ್ಟ. ಎರಡು ಮಹಾನ್ ವ್ಯಕ್ತಿಗಳು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶದಲ್ಲಿ ದೇಶದ ಸೇವೆ ಮಾಡುತ್ತಿದ್ದಾರೆ. ನನ್ನ ಕುಟುಂಬವೇ ನಾನು ಉದ್ಯಮಿಯಾಗಲು ಕಾರಣ. ನನ್ನ ಕುಟುಂಬಕ್ಕೆ ನನ್ನ ಅಗತ್ಯವಿತ್ತು. ಅದು ನನ್ನ ಗುರಿಯಾಗಿದ್ದು. ಅದನ್ನು ನಾನು ಮುಂದೆಯಿಟ್ಟು ಕಷ್ಟದ ಪ್ರಯಾಸ ನಡೆಸಿ ನನ್ನನ್ನು ಪರಿಪೂರ್ಣ ಉದ್ಯಮಿಯಾಗಿಸಿತು. ನಮ್ಮ ಜೀವನದ ಉದ್ದೇಶ ಬರೇ ಸಾಧನೆ ಅಥವಾ ಹಣ ಗಳಿಸುವುದಲ್ಲಿ ಆಗದೆ ಸಮಾಜಪರ ನಮ್ಮ ಕರ್ತವ್ಯ ನಿಭಾಯಿಸಲೂ ಮರೆಯಬಾರದು. ಕಷ್ಟದಲ್ಲಿರುವ ಸಮಾಜ ಬಾಂಧವರಿಗೆ ಸಹಾಯವಾಗಬೇಕು. ನನ್ನ ಇಂದಿನ ಸಾಧನೆಗೆ ನನ್ನ ದೊಡ್ದ ಕುಟುಂಬ ನನ್ನ ಕರ್ಮಾಚಾರಿಗಳನ್ನು ಮರೆಯುವಂತಿಲ್ಲ. ಬಂಟ ಸಮಾಜದಲ್ಲಿ ಇನ್ನೂ ಉದ್ಯಮಿಗಳು ಹುಟ್ಟಿ ಬರಲಿ ಎಂದರು.

ಯುವ ಪೀಳಿಗೆಗೆ ಉತ್ತೇಜನ ನೀಡುವುದರೊಂದಿಗೆ ಅವರನ್ನು ದೇಶದ ಅಭಿವೃದ್ಧಿಯಾಗಲು ಪ್ರೊತ್ಸಾಹಿಸುವುದೇ ಐಬಿಸಿಸಿಐನ ಈ ಪುರಸ್ಕಾರ ಸಮಾರಂಭದ ಉದ್ದೇಶ. ಈ ಬಾರಿ ನಾಲ್ಕು ಕ್ಷೇತ್ರಗಳ ದಿಗ್ಗಜರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಮೊದಲಾದ ವಿಭಾಗಗಳಲ್ಲಿ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಶ್ರಮಿಸಿದ ಗಣ್ಯರಿಗೆ ಆದ್ಯತೆ ನೀಡಲಾಗಿದೆ. ಸ್ವಉದ್ಯೋಗಸ್ಥರಾಗಿ ಸಮಾಜದ ಮತ್ತು ದೇಶದ ಅಭಿವೃದ್ಧಿಗೆ ಪ್ರೇರಕರಾಗಬೇಕು. ನೆಟ್‍ವರ್ಕ್‍ನಿಂದ ವ್ಯವಹಾರ ಸಂಬಂಧ ಹೆಚ್ಚಿಸಿಕೊಳ್ಳಬಹುದು. ನೂತನ ಅನುಭವ, ಹೊಸತನ ಆಧುನಿಕ ತಂತ್ರಜ್ಞಾನದ ಅರಿವು ಇಲ್ಲಿ ಸುಲಭವಾಗಿ ಪ್ರಾಪ್ತಿಸಬಹುದು. ಆದ್ದರಿಂದ ಐಬಿಸಿಸಿಐ ಸಂಸ್ಥೆಯಲ್ಲಿ ಯುವ ಜನರು ಸದಸ್ಯರಾಗಿ ಬಂಟ ಜನಾಂಗದ ಭಾವೀ ಯುವ ಪೀಳಿಗೆ ಇದನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಕೆ.ಸಿ ಶೆಟ್ಟಿ ಅಧ್ಯಕ್ಷೀಯ ಭಾಷಣದಲ್ಲಿ ಕರೆಯಿತ್ತರು.

ಆರ್ಗ್ಯಾನಿಕ್ ಇಂಡಸ್ಟ್ರೀಸ್ ಮತ್ತು ಮ್ಯಾಕ್‍ಕೊೈ ಎ ಪ್ರಾಮಿಸ್ ಆಫ್ ಹ್ಯಾಪ್ಪಿನೆಸ್ ಸಂಸ್ಥೆಗಳ ಪ್ರಧಾನ ಪ್ರಾಯೋಜಕತ್ವ ಹಾಗೂ ಯೂನಿಯನ್ ಬ್ಯಾಂಕ್, ಲೂಮೆನ್ಸ್ (ಇಂಡಿಯಾ), ಯುನಿಟಾಪ್ ಸಮೂಹ, ಅಹರ್ವೇದ, ಅದಿತಿ ಎಸೆನ್‍ಶಲ್, ರಿಬ್ಬನ್‍ಸ್ ಎಂಡ್ ಬಲೂನ್ಸ್-ದ ಕೇಕ್ ಶಾಪ್, ಹೆಚ್‍ಡಿಎಫ್‍ಸಿ ಸಂಸ್ಥೆಗಳ ಸಹ ಪ್ರಾಯೋಜಕತ್ವದಲ್ಲಿ ಆಯೋಜಿಸ ಲಾಗಿದ್ದ ಸಮಾರಂಭದ ಆದಿಯಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಸಾರ್ವತ್ರಿಕ ಗಣಕ ಸೌಲಭ್ಯ (ಕಿಯೋಸ್ಕ್) ಉದ್ಘಾಟಿಸಿದರು. ಐಬಿಸಿಸಿ ನಿರ್ದೇಶಕ ಕಿಶನ್ ಜೆ.ಶೆಟ್ಟಿ ತನ್ನ ಪ್ರಾಯೋಜಕತ್ವದ ಪ್ರಾರಂಭಿಕ ಉದ್ಯಮಿ ಪ್ರಶಸ್ತಿ ಬಗ್ಗೆ ತಿಳಿಸಿದರು.

ಐಬಿಸಿಸಿಐ ಸಂಸ್ಥೆಯ ಮಾಜಿ ಕಾರ್ಯಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಪ್ರಸಕ್ತ ಉಪಾಧ್ಯಕ್ಷ ಎಸ್.ಬಿ ಶೆಟ್ಟಿ, ಕೋಶಾಧಿಕಾರಿ ದುರ್ಗಾಪ್ರಸಾದ್ ಬಿ.ರೈ, ಜತೆ ಕೋಶಾಧಿಕಾರಿ ಪ್ರಸಾದ್ ಪಿ.ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಐಬಿಸಿಸಿಐ ಪ್ರಶಸ್ತಿ ಸಮಿತಿ ಕಾರ್ಯಾಧ್ಯಕ್ಷ ಸಿಎ| ಶಂಕರ್ ಬಿ.ಶೆಟ್ಟಿ, ಪ್ರಶಸ್ತಿ ಆಯ್ಕೆ ಸಮಿತಿ ಕಾರ್ಯಾಧ್ಯಕ್ಷ ಬಿ.ವಿವೇಕ್ ಶೆಟ್ಟಿ, ಸದಸ್ಯರುಗಳಾದ ಶ್ರೀನಿವಾಸ್ ವಿ.ಶೆಟ್ಟಿ, ಸಿಎ| ಸದಾಶಿವ ಎಸ್.ಶೆಟ್ಟಿ ಉಪಸ್ಥಿತರಿದ್ದು,

ಆರ್ಗ್ಯಾನಿಕ್ ಇಂಡಸ್ಟ್ರೀಸ್‍ನ ಆನಂದ ಎಂ.ಶೆಟ್ಟಿ, (ಪತ್ನಿ ಶಶಿರೇಖಾ ಆನಂದ್), ಮ್ಯಾಕ್‍ಕೊೈ ಸಂಸ್ಥೆಯ ಕೆ.ಎಂ ಶೆಟ್ಟಿ (ಪತ್ನಿ ವಸಂತಿ) ದಂಪತಿಗಳನ್ನು, ರಿಬ್ಬನ್‍ಸ್ ಸಂಸ್ಥೆಯ ಸತೀಶ್ ವಿ.ಶೆಟ್ಟಿ, ಸಂತೋಷ್ ಶೆಟ್ಟಿ, ಲೂಮೆನ್ಸ್‍ನ ಕಾರ್ತಿಕ್ ಸಿ.ಶೆಟ್ಟಿ, ಬಗ್‍ಜೂನ್ ಶೆಟ್ಟಿ, ಅದಿತಿ ಎಸೆನ್‍ಶಲ್ ಸಂಸ್ಥೆಯ ಭರತ್ ಶೆಟ್ಟಿ, ಯುನಿಟಾಪ್‍ನ ಬಾರ್ಕೂರು ಬಾಲಕೃಷ್ಣ ಶೆಟ್ಟಿ, ಜೀನನಾಥ್ ಡಿ.ಶೆಟ್ಟಿ, ಅಹರ್ವೇದ ಸಂಸ್ಥೆಯ ಹರೀಶ್ ಜಿ.ಶೆಟ್ಟಿ, ಹೆಚ್‍ಡಿಎಫ್‍ಸಿ ಬ್ಯಾಂಕ್‍ನ ಬೀನಾ ಶ್ಹಾ ಮತ್ತಿತರ ಗಣ್ಯರನ್ನು ಅತಿಥಿಗಳನ್ನು ಸ್ಮರಣಿಕೆಗಳನ್ನಿತ್ತು ಗೌರವಿಸಿದರು.

 ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಡಾಟಿ ಸದಾನಂದ ಗೌಡ, ಕಾರ್ತಿಕ್ ಎಸ್.ಗೌಡ, ರಾಜೇಶ್ವರಿ ಕೆ.ಗೌಡ, ಐಬಿಸಿಸಿಐ ಡಾ| ಆರ್.ಕೆ ಶೆಟ್ಟಿ, ಪಾಂಡುರಂಗ ಎಲ್.ಶೆಟ್ಟಿ, ಶ್ರೀನಾಥ್ ಬಿ.ಶೆಟ್ಟಿ, ನಿಶಿತ್ ಶೆಟ್ಟಿ, ಕಿಶನ್ ಜೆ.ಶೆಟ್ಟಿ, ಹಿತೇಶ್ ಶೆಟ್ಟಿ, ಆರ್ಗ್ಯಾನಿಕ್ ಇಂಡಸ್ಟ್ರೀಸ್‍ನ ನಿರ್ದೇಶಕ ಪ್ರಬೀರ್ ಆನಂದ್ ಶೆಟ್ಟಿ, ವಿಕೇ ಸಮೂಹದ ನಿರ್ದೇಶಕ ಅಂಕಿತ್ ಕೆ.ಶೆಟ್ಟಿ, ಮಲ್ಲಿಕಾ ಕೆ.ಸಿ ಶೆಟ್ಟಿ, ಆರತಿ ಶಶಿಕಿರಣ್ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಉಪೇಂದ್ರ ಶೆಟ್ಟಿ ಬೆಂಗಳೂರು ಸೇರಿದಂತೆ ಅಪಾರ ಸಂಖ್ಯೆಯ ಬಂಟ ಉದ್ಯಮಿಗಳು, ಗಣ್ಯರು ಉಪಸ್ಥಿತರಿದ್ದು, ಐಬಿಸಿಸಿಐ ಕಾರ್ಯದರ್ಶಿ ಕೆ.ಜಯ ಸೂಡಾ ಸ್ವಾಗತಿಸಿ ಪ್ರಸ್ತಾವನೆಗೈದರು. ಭಾವನಾ ಬಾಟಿಯಾ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಪ್ರಭಾಕರ ಕೆ.ಶೆಟ್ಟಿ ವಂದಿಸಿದರು. ಚಿಣ್ಣರ ಬಿಂಬ ಸಂಸ್ಥೆಯ ಕಲಾವಿದ ಮಕ್ಕಳು ನೃತ್ಯಾವಳಿಗಳನ್ನು ಹಾಗೂ ವಿಐಪಿ ಪ್ರಸಿದ್ಧಿಯ ಸ್ಟಾ ್ಯಂಡ್ ಆಫ್ ಕಾಮೇಡಿಯನ್ ವಿಜಯ್ ಪವಾರ್ ಹಾಸ್ಯ ಪ್ರಹಸನ ಪ್ರಸ್ತುತ ಪಡಿಸಿದರು.