About Us       Contact


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಫೆ.24: ಮುಂಬಯಿ ಕನ್ನಡ ಸಂಘವು ಕಳೆದ ಭಾನುವಾರ ಸಂಜೆ ಮಾಟುಂಗಾ ಅಲ್ಲಿನ ಮೈಸೂರು ಅಸೋಸಿಯೇಶನ್‍ನ ಕಿರು ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಜಿ.ಎಸ್.ನಾಯಕ್ ಅಧ್ಯಕ್ಷತೆಯಲ್ಲಿ ಶ್ರೀ ಪುರಂದರದಾಸರ 454ನೇ ಆರಾಧನಾ ಮಹೋತ್ಸವ ನಡೆಸಿತು.

ಸಂಘದ ಪದಾಧಿಕಾರಿಗಳು ದೀಪಹಚ್ಚಿ ಮಹೋತ್ಸವಕ್ಕೆ ಚಾಲನೆಯನ್ನಿತ್ತರು. ಆರಾಧನಾ ಮಹೋತ್ಸವ ಪ್ರಯುಕ್ತ ಶ್ರೀ ದೇವರ ನಾಮ ಗಾಯನ ಸ್ಪರ್ಧೆ ಆಯೋಜಿಸಲಾಗಿದ್ದು ನಗರದ ಬಹುಭಾಷಾ ಸಂಗೀತಕಾರ ರು ಸ್ಪರ್ಧೆಯಲ್ಲಿ ಪಾಲ್ಗೊಂಡು ಗಾಯನ ಪ್ರಸ್ತುತ ಪಡಿಸಿರು. ವಿದ್ವಾನ್ ಟಿ.ಎನ್ ಅಶೋಕ್ ಸ್ಪರ್ಧಾ ತೀರ್ಪುಗಾರರಾಗಿದ್ದು ಹಿತವಚನಗೈದರು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಆಶಾ ಕುಲ್ಕರ್ಣಿ ಮತ್ತು ತಂಡವು ಪುರಂದರದಾಸರ ಭಕ್ತಿಗೀತೆ ಪ್ರಸ್ತುತ ಪಡಿಸಿದರು.

 

 

 

 

 

 

 

 

ಕೊನೆಯಲ್ಲಿ ನಡೆಸಲ್ಪಲ್ಪಟ್ಟ ಸರಳ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ಬೃಹನ್ಮುಂಬಯಲ್ಲಿನ ಹಿರಿಯ ಮತ್ತು ಪ್ರತಿಷ್ಠಿತ ಕಲಾವಿದ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ಉಪಸ್ಥಿತರಿದ್ದು ಪುರಂದರದಾಸರ ಸಂದೇಶವನ್ನಿತ್ತು ಸಂಘದ ಸೇವಾ ವೈಖರಿ ಪ್ರಶಂಸಿಸಿದರು ಹಾಗೂ ಕಾರ್ಯಕ್ರಮದ ಪ್ರಾಯೋಜಕ ರನ್ನು ಗೌರವಿಸಿ, ಸ್ಪರ್ಧಾ ವಿಜೇತರಿಗೆ ಪಾರಿತೋಷ ಕಗಳನ್ನು ನೀಡಿ ಗೌರವಿಸಿ ಅಭಿನಂದಿಸಿದರು.

ಸಂಘದ ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ ಸ್ವಾಗತಿಸಿದರು. ಕು| ಎಂ.ಆರ್ ಚಿತ್ರರಥ್ ಮತ್ತು ಕು| ಎಂ.ಆರ್ ಎಸ್.ಹರ್ಷಿತಾ ಪ್ರಾರ್ಥನೆಯನ್ನಾಡಿದರು. ಜಿ.ಎಸ್ ನಾಯಕ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಗೌರವ ಕಾರ್ಯದರ್ಶಿ ಸತೀಶ್ ಎನ್.ಬಂಗೇರÀ ಅತಿಥಿ ಪರಿಚಯಗೈದರು. ರಾಜೇಂದ್ರ ಗಡಿಯಾರ ಬಹುಮಾನ ವಿಜೇತರ ಯಾದಿಯನ್ನು ಹಾಗೂ ನರ್ಮದಾ ಕಿಣಿ ಶೈಕ್ಷಣಿಕ ಪ್ರತಿಭಾ ಪುರಸ್ಕೃತರ ಯಾದಿ ಪ್ರಕಟಿಸಿದರು.

ಜಿ.ಎಸ್.ಬಿ ಸಭಾ ಮುಂಬಯಿ (ಮಾಟುಂಗಾ) ಇದರ ವಿಶ್ವಸ್ಥೆ ಸುಧಾ ಪೈ, ಶಾಂತೇರಿ ನಾಗೇಶ್ ನಾಯಕ್, ಶಿಕ್ಷಕ ಮಲ್ಲಿಕಾರ್ಜುನ ಬಡಿಗೇರ, ಶ್ಯಾಮಲಾ ಮಾಧವ್, ಅನಿತಾ ಪೂಜಾರಿ ತಾಕೋಡೆ, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಡಾ| ರಜನಿ ವಿ.ಪೈ, ಎಸ್.ಕೆ ಪದ್ಮನಾಭ, ನಾರಾಯಣ ಎ.ಆರ್ ರಾವ್, ವಿಠಲ್ ಆಚಾರ್ಯ, ಸಂಧ್ಯಾ ಪ್ರಭು ಮತ್ತಿತರರು ಉಪಸ್ಥಿತರಿದ್ದು, ಗೌರವ ಜೊತೆ ಕಾರ್ಯದರ್ಶಿ ಸೋಮನಾಥ ಎಸ್.ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಗೌರವ ಕೋಶಾಧಿಕಾರಿ ಸುಧಾಕರ್ ಸಿ.ಪೂಜಾರಿ ಉಪಕಾರ ಸ್ಮರಿಸಿದರು. ಮಹಾ ಮಂಗಳಾರತಿ, ಪ್ರಸಾದ ವಿತರಣೆಯೊಂದಿಗೆ ವಾರ್ಷಿಕ ಆರಾಧನೋತ್ಸವ ಸಮಾಪನ ಕಂಡಿತು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal