About Us       Contact


(ಚಿತ್ರ / ವರದಿ : ರೊನಿಡಾ ಮುಂಬಯಿ)


ಮುಂಬಯಿ, ಫೆ.23: ಮಲಾಡ್ ಪೂರ್ವದ ಕುರಾರ್ ವಿಲೇಜ್‍ನ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಸಂಚಾಲಕತ್ವದ ಶ್ರೀ ದುರ್ಗಾ ಪರಮೇಶ್ವರಿ ಮಂದಿರದ ಪುನಃರ್‍ನಿರ್ಮಾಣ ನಿಮಿತ್ತ ಶ್ರೀ ಗಣಪತಿ ದೇವರ ಹಾಗೂ ಶ್ರೀ ದುರ್ಗಾ ಪರಮೇಶ್ವರಿ ದೇವಿಯ ಪುನಃರ್ ಪ್ರತಿಷ್ಠಾಪನೆ ಮತ್ತು ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಉತ್ಸವಕ್ಕೆ ಇಂದಿಲ್ಲಿ ಭಾನುವಾರ ಬ್ರಹ್ಮಶ್ರೀ ಶಂಕರನಾರಾಯಣ ತಂತ್ರಿ ಡೊಂಬಿವಲಿ ಪೂಜಾಧಿಗಳನ್ನು ನೆರವೇಇಸಿ ಶಾಸ್ತ್ರೋಕ್ತವಾಗಿ ಚಾಲನೆ ನೀಡಿದರು.

ಮಂದಿರದ ಪ್ರಧಾನ ಅರ್ಚಕರಾದ ಸೂಡ ರಾಘವೇಂದ್ರ ಭಟ್ ಇವರ ಸಹಭಾಗಿತ್ವದಲ್ಲಿ ಇಂದಿನಿಂದ ಫೆ.28ನೇ ಶುಕ್ರವಾರ ತನಕ ನಡೆಯಲಿರುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಶ್ರೀ ಗಣಪತಿ ದೇವರ, ಶ್ರೀ ದುರ್ಗಾಪರಮೇಶ್ವರಿ ದೇವಿಯ ಪುನಃಪ್ರತಿಷ್ಠಾಪನೆ ಮತ್ತು ಅಷ್ಠಬಂಧ ಬ್ರಹ್ಮಕಲಶಾಭಿಷೇಕಕ್ಕೆ ಧಾರ್ಮಿಕ ಕೈಂಕರ್ಯಗಳೊಂದಿಗೆ ಉತ್ಸವಕ್ಕೆ ಪೂರ್ವಸಿದ್ಧತೆ ನಡೆಸಲಾಯಿತು.

 

 

 

 

 

 

 

ಆ ಪ್ರಯುಕ್ತ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಸ್ವಸ್ತಿ ಪುಣ್ಯಾಹ ವಾಚನ, ರಿತ್ವಿಕ್ ವರಣಿ, ದೇವ ನಾಂದೀ ಕಂಕಣ ಬಂಧ, ತೋರಣ ಸ್ಥಾಪನೆ, ಅರಣಿ ಮಥನ, ಭದ್ರ ದೀಪ ಪ್ರಜ್ವಲನೆ, ಮಹಾಗಣಪತಿ ಹೋಮ, ಸುಕೃತ ಹೋಮ, ಅಂಕುರ ಪೂಜೆ, ಪಂಚಗವ್ಯ ಹೋಮ, ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ಭೂಶುದ್ಧಿ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಪಾಲ ಬಲಿ, ಅಸ್ತ್ರ ಕಲಶ ಸ್ಥಾಪನೆ, ವಿವಿಧ ಭಜನಾ ಮಂಡಳಿಗಳಿಂದ ರಾತ್ರಿವಿಡೀ ಅರ್ಧ ಏಕಾಹ ಭಜನಾ ಕಾರ್ಯಕ್ರಮಗಳೊಂದಿಗೆ ಆದಿಗೊಳಿಸಲಾಯಿತು.

ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಅಧ್ಯಕ್ಷ ರಘುನಾಥ ಕೆ.ಕೊಟ್ಟಾರಿ, ಉಪಾಧ್ಯಕ್ಷರುಗಳಾದ ಪದ್ಮನಾಭ ಟಿ.ಶೆಟ್ಟಿ, ಗಣೇಶ್ ಎಲ್.ಕುಂದರ್, ನರೇಶ್ ಆರ್.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಸೋಮಪ್ಪ ಬಿ.ಕೋಟ್ಯಾನ್, ಜೊತೆ ಕಾರ್ಯದರ್ಶಿ ಗೋಪಾಲ್ ಬಿ.ಕೋಟ್ಯಾನ್, ಮುರಳೀಧರ ಬಿ. ಪೂಜಾರಿ, ರಮೇಶ್ ಟಿ.ಶೆಟ್ಟಿ, ಗೌ| ಕೋಶಾಧಿಕಾರಿ ಬಾಬು ಎಂ.ಸುವರ್ಣ, ಜೊತೆ ಕೋಶಾಧಿಕಾರಿಗಳಾದ ದೇವು ಬಿ.ಕೋಟ್ಯಾನ್, ಸುರೇಶ್ ಎಂ.ಕೋಟ್ಯಾನ್, ಗೀತಾ ಸಿ.ಜತ್ತನ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರೇಮನಾಥ ಎಸ್.ಸಾಲಿಯಾನ್, ಅಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಕಾರ್ಯದರ್ಶಿ ಆನಂದ ಕೆ.ಕೋಟ್ಯಾನ್, ಉಪಾಧ್ಯಕ್ಷರುಗಳಾದ ಡಾ| ಶೈಲೇಸ್ ಗೌಡ, ರಮೇಶ್ ಪೂಂಜ, ನ್ಯಾ| ಜಗನ್ನಾಥ ಎನ್.ಶೆಟ್ಟಿ, ನ್ಯಾ| ಸೋಮನಾಥ ಬಿ.ಅಮೀನ್, ಕುಮಾರೇಶ್ ಆಚಾರ್ಯ ಸೇರಿದಂತೆ ಸದಸ್ಯರನೇಕರು, ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal