About Us       Contact


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಫೆ.24: ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ಸಾಯನ್ ತನ್ನ `ಗೋಕುಲ ಯೋಜನೆಗಳ ವಿಷನ್ 2020' ಯೋಜನೆಯಡಿ ನಿರ್ಮಾಣ ಹಂತದಲ್ಲಿರುವ ಗೋಕುಲ ಕಟ್ಟಡ ಹಾಗೂ ಶ್ರೀ ಕೃಷ್ಣ ಮಂದಿರದ ಸಹಾಯಾರ್ಥ ಬಿಎಸ್‍ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಸಾರಥ್ಯದಲ್ಲಿ ಕಳೆದ ರವಿವಾರ ಸಂಜೆ ಕಿಂಗ್ಸ್ ಸರ್ಕಲ್‍ನ ಷಣ್ಮುಖಾನಂದ ಸಭಾಗೃಹದಲ್ಲಿ `ಏಕ್ ಶಾಮ್ ಪಂಚಮ್ ದಾ ಕೆ ನಾಮ್' ಹಿಂದಿ ರಸಮಂಜರಿ ಆಯೋಜಿಸಿತ್ತು.

ಎಸ್‍ಬಿಐ ಲೈಫ್ ಇನ್ಸುರೆನ್ಸ್‍ನ ಕಾರ್ಯನಿರ್ವಾಹಣಾ ನಿರ್ದೇಶಕ ಆನಂದ ಪೇಜಾವರ, ವಿಶ್ವಾತ್ ಕೆಮಿಕಲ್ಸ್ ಆಡಳಿತ ನಿರ್ದೇಶಕ ಬಿ.ವಿವೇಕ್ ಶೆಟ್ಟಿ, ಎನ್‍ಐಐಎಫ್-ಐಎಫ್‍ಎಲ್ ಸಂಸ್ಥೆಯ ಸಿಇಒ ಸದಾಶಿವ ರಾವ್, ಎಸ್‍ಬಿಐ ವೆಲ್ತ್‍ನ ಮುಖ್ಯ ಪ್ರಧಾನ ಪ್ರಬಂಧಕ ಗಿರಿಧರ್ ಕಿಣಿ ತುಳಸೀ ಗಿಡಕ್ಕೆ ಸುರಿದು ಸಂಪ್ರದಾಯಕವಾಗಿ ಹಾಗೂ ದೀಪ ಬೆಳಗಿಸಿ ವಿಧ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆನೀಡಿ ಶುಭಾರೈಸಿದರು.

 

 

 

 

 

 

 

 

 

 

 

 

 

 

 

 

 

 

 

ಮಧ್ಯಾಂತರದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರುಗಳಾಗಿ ನವಿಮುಂಬಯಿ ಅಲ್ಲಿನ ಪ್ರಸಿದ್ಧ ವಾಸ್ತುಶಿಲ್ಪಿ (ಆರ್ಕಿಟೆಕ್) ಹಿರೆನ್ ಸೇಥಿ, ಕೃಷ್ಣ ಪ್ಯಾಲೇಸ್ ಸಮೂಹದ ಆಡಳಿತ ನಿರ್ದೇಶಕ ಕೃಷ್ಣ ವೈ.ಶೆಟ್ಟಿ, ಕರ್ನಾಟಕ ಬ್ಯಾಂಕ್‍ನ ಮುಂಬಯಿ ಪ್ರಾದೇಶಿಕ ಪ್ರಬಂಧಕ ಸತೀಶ್ ಶೆಟ್ಟಿ, ಯು.ಆರ್ ಭಟ್, ಬಿ.ನಾರಾಯಣ ರಾವ್, ಬಿಎಸ್‍ಕೆಬಿಎ ಮಾಜಿ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್ ವೇದಿಕೆಯಲ್ಲಿದ್ದು, ಗೋಕುಲಾ ಸ್ಮರಣಿಕೆ ಬಿಡುಗಡೆ ಗೊಳಿಸಿದರು ಹಾಗೂ ಬಿಎಸ್‍ಕೆಬಿಎ ಪದಾಧಿಕಾರಿಗಳು ಸಂಸ್ಥೆಯ ಐಡೆಂಟಿಟಿ ಕಾರ್ಡ್ ಅನಾವರಣ ಗೊಳಿಸಿದರು.

ಹಿಂದಿ ಚಲನಚಿತ್ರ ರಂಗದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದ ಸಂಗೀತ ಸುಧೇಶ್ ಭೋಸ್ಲೆ ಹಾಗೂ ಶ್ರೀಕಾಂತ್ ನಾರಾಯಣ್, ಶೈಲಜಾ ಸುಬ್ರಮಣಿಯನ್ ಅಲೋಕ್ ಕಟ್ದಾರೆ, ಸೋನಾಲಿ ಕಾರ್ನಿಕ್ ಮುಂತಾದ ಖ್ಯಾತ ಹಿನ್ನೆಲೆ ಗಾಯಕ ಗಾಯಕಿಯರು ಹಾಗೂ ಸುಮಾರು 25 ವೈವಿಧ್ಯಮಯ ಸಂಗೀತೋಪಕರಣ ವಾದಕರ ಸಂಯೋಜನೆಯಲ್ಲಿ ಪಂಚಮ್ ದಾ ನಾಮಾಂಕಿತ ರಾಹುಲ್ ದೇವ್ ಬರ್ಮನ್ (ಆರ್.ಡಿ ಬರ್ಮನ್) ತಂಡ ಸಂಯೋಜಿಸಿದ, ಚಿತ್ರಗೀತೆ ಪ್ರೇಮಿಗಳ ನೆನಪಿನಲ್ಲಿ ಸದಾ ಹಸಿರಾಗಿರುವ ಹಿಂದಿ ಚಿತ್ರಗೀತೆಗಳ `ಏಕ್ ಶಾಮ್ ಪಂಚಮ್ ದಾ ಕೆ ನಾಮ್' ಹಿಂದಿ ರಸಮಂಜರಿ' ಸಂಗೀತ ಕಾರ್ಯಕ್ರಮ ಮನೋರಂಜನೆ ನೀಡಿತು.

ಕಾರ್ಯಕ್ರಮದ ಪ್ರಾಯೋಜಕ ಸಂಸ್ಥೆಗಳ ಎಸ್‍ಬಿಐ ಲೈಫ್ ಇನ್ಸುರೆನ್ಸ್ (ಪ್ಲಾಟಿನಂ), ಎಸ್‍ಬಿಐ ವೆಲ್ತ್ ಕ್ಲಾಸಿಕ್ ಮಾರ್ಬಲ್ಸ್, ಸರ್‍ಪೆÇರ್ಜಿ ಪಾಲೊನ್‍ಜಿ ಗ್ರೂಪ್ (ಎನ್‍ಐಐಎಫ್‍ಐಎಫ್ ಎಲ್ (ಗೋಲ್ಡ್), ಎಸ್‍ಬಿಐ, ಶ್ರೀರಾಮ್ ಟ್ರಾನ್ಸ್‍ಪ್ರೊರ್ಟ್ ಪೈನಾನ್ಸ್ ಕಾಪ್ರೊರೇಶನ್ಮ್ ಎಡಲ್‍ವೈಜ್ಸ್, ಬ್ಯಾಂಕ್ ಆಫ್ ಇಂಡಿಯಾ (ಸಿಲ್ವರ್), ಮಹೇಂದ್ರ ಪೈನಾನ್ಸ್ (ಬ್ರಾನ್ಜ್) ಸಂಸ್ಥೆಗಳ ಮುಖ್ಯಸ್ಥರನ್ನು ಹಾಗೂ ಕಲಾವಿದರನ್ನೂ ಡಾ| ಸುರೇಶ್ ಎಸ್.ರಾವ್ ಕಟೀಲು ಗೌರವಿಸಿದರು.

ಬಿಎಸ್‍ಕೆಬಿಎ ಉಪಾಧ್ಯಕ್ಷ ವಾಮನ್ ಹೊಳ್ಳ ಕೋಶಾಧಿಕಾರಿ ಹರಿದಾಸ್ ಭಟ್, ಜೊತೆ ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಚಿತ್ರಾ ಮೇಲ್ಮನೆ, ಜೊತೆ ಕೋಶಾಧಿಕಾರಿ ಕುಸುಮ್ ಶ್ರೀನಿವಾಸ್, ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥರಾದ ಎ.ಎಸ್ ರಾವ್, ಬಿ.ರಮಾನಂದ ರಾವ್ ಸೇರಿದಂತೆ ಟ್ರಸ್ಟ್‍ನ ಇತರ ವಿಶ್ವಸ್ಥರು, ಬಿಎಸ್‍ಕೆಬಿಯ ಇನ್ನಿತರ ಪದಾಧಿಕಾರಿಗಳು, ಸದಸ್ಯರನೇಕರು, ಅಪಾರ ಸಂಖ್ಯೆಯ ಸಂಗೀತಾಭಿಮಾನಿಗಳು ಉಪಸ್ಥಿತರಿದ್ದರು.

 ಆರಂಭದಲ್ಲಿ ವಿಡಿಯೋ ಕ್ಲಿಪ್ಪಿಂಗ್ ಮೂಲಕ ಆಶ್ರಯ, ಗೋಕುಲ ಯೋಜನೆ, ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಬಿತ್ತರಿಸಲಾಯಿತು. ಬಿಎಸ್‍ಕೆಬಿಎ ಉಪಾಧ್ಯಕ್ಷೆ ಶೈಲಿನಿ ರಾವ್ ಮತ್ತು ಡಾ| ಸಹನಾ ಎ.ಪೆÇೀತಿ ಪ್ರಾರ್ಥನೆಯನ್ನಾಡಿದರು. ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಪ್ರಸ್ತಾವಿಕ ನುಡಿಗಳನ್ನಾಡಿ ಗೋಕುಲ ಯೋಜನೆಗಳ ವಿಷನ್ 2020 ಬಗ್ಗೆ ಸ್ಥೂಲವಾಗಿ ಮಾಹಿತಿಯನ್ನಿತ್ತರು. ಜಯಲಕ್ಷ್ಮೀ ಹೊಳ್ಳ ಬಿಎಸ್‍ಕೆಬಿ ಬಗ್ಗೆ ಮಾಹಿತಿ ನೀಡಿದರು. ಎಂ.ಹೆಚ್ ಮುರಳೀಧರ ಅತಿಥಿಗಳನ್ನು ಹಾಗೂ ಸನ್ಮಾನಿತರನ್ನು ಪರಿಚಯಿಸಿದರು. ಆಶಾ ಹರಿದಾಸ್ ಭಟ್ ಮತ್ತು ಪ್ರಶಾಂತ್ ಹೆರಳೆ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಎ.ಪಿ.ಕೆ ಪೋತಿ ವಂದನಾರ್ಪಣೆಗೈದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal