About Us       Contact


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಫೆ.23: ಪೂರ್ವಜರ ಸೇವಾ ದೂರದೃಷ್ಠಿ ಅದ್ಭುತವಾದುದು. ಅವರು ಸಾಂಘಿಕತೆಯಲ್ಲಿ ವಿಶ್ವಾಸನೀಯವುಳ್ಳವರಾಗಿ ಸಮಾಜದ ಅಭ್ಯುದಯಕ್ಕಾಗಿ ಜನರನ್ನು ಒಗ್ಗೂಡಿಸಿ ಸಂಘಸಂಸ್ಥೆಗಳನ್ನು ರೂಪಿಸಿ ನಮಗೆ ವರವಾಗಿದ್ದಾರೆ. ಅಂತೆಯೇ ಸುಮಾರು ಆರುವರೆ ದಶಕಗಳ ಹಿಂದೆ ನಮ್ಮ ಹಿರಿಯರು ಕಟ್ಟಿದ ಈ ಸಂಸ್ಥೆ ಈ ಮಟ್ಟಕ್ಕೆ ಬೆಳೆದು ಹೆಮ್ಮರವಾಗಿದೆ. ಇದೀಗ ನಾರಾಯಣ ಮೆಂಡನ್ ಅವರ ಅಧ್ಯಕ್ಷತೆಯಲ್ಲಿ ಈ ಸಂಸ್ಥೆಯು ಸಾಹಿತಿಕ, ಸಾಮಾಜಿಕ ಸೇವೆಯೊಂದಿಗೆ ಮುನ್ನಡೆಯುತ್ತಿದೆ. ಪದಾಧಿಕಾರಿಗಳು, ಸದಸ್ಯರು ಸಕ್ರೀಯರಾಗಿ ಏಕತೆಯಿಂದ ಒಗ್ಗೂಡಿ ಈ ಹೆಸರಾಂತ ಸಂಸ್ಥೆಯನ್ನು ಮಾರ್ಗದರ್ಶಿಕ ಸಂಸ್ಥೆಯಾಗಿಸಬೇಕು ಎಂದು ಸಾಫಲ್ಯ ಸಮಾಜದ ಧುರೀಣ, ಹಿರಿಯ ಹೊಟೇಲು ಉದ್ಯಮಿ ಸದಾನಂದ ಕೆ.ಸಫಲಿಗ ತಿಳಿಸಿದರು.

ಮುಂಬಯಿನ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ಗೋರೆಗಾಂವ್ ಕರ್ನಾಟಕ ಸಂಘವು ಇಂದಿಲ್ಲಿ ರವಿವಾರ ಮಲಾಡ್ ಪಶ್ಚಿಮದ ಬಜಾಜ್ ಸಭಾಗೃಹದಲ್ಲಿ ಸಂಭ್ರಮಿಸಿದ್ದ ಅರ್ವತ್ತೆರಡನೇ (62) ವಾರ್ಷಿಕ ನಾಡಹಬ್ಬ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಸದಾನಂದ ಸಫಲಿಗ ಮಾತನಾಡಿದರು.

ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ನಾರಾಯಣ ಆರ್.ಮೆಂಡನ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಸಭಾಧ್ಯಕ್ಷತೆಯಲ್ಲಿ ವಹಿಸಿ ಸಂಘದ ವಾರ್ಷಿಕ ಸಂಚಿಕೆ `ಮುಂಬೆಳಕು' ಬಿಡುಗಡೆ ಗೊಳಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

ಉದ್ಯಮಿ ಪಳ್ಳಿ ಕಾವೇರಿಬೆಟ್ಟು ಜಯಕರ ಎಸ್.ಶೆಟ್ಟಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದುಹತ್ತು ವರುಷಗಳಿಂದ ಗೋರೆಗಾಂವ್ ಕರ್ನಾಟಕ ಸಂಘವನ್ನು ಕೇಳಿ ತಿಳಿದಿದ್ದೇನೆ. ಇಂದು ಪ್ರತೇಕ್ಷವಾಗಿ ಈ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿತು. ಸಂಘದಲ್ಲಿ ಮಹಿಳೆಯರು ತುಂಬಾ ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಾಹಿಸುತ್ತಿರುವ ಬಗ್ಗೆ ಅಭಿಮಾನವಿದ್ದು, ಯುವಕರೂ ಸಕ್ರಿಯರಾಗಬೇಕು. ಕಾರ್ಣ ಯುವ ಪೀಳಿಗೆಯೇ ಇಂತಹ ಸಂಸ್ಥೆಗಳ ಭವಿಷ್ಯ ಮತ್ತು ಅವರೇ ಉತ್ತರಾಧಿಕಾರಿಗಳು ಆದ್ದರಿಂದ ಯುವಶಕ್ತಿ ಇನ್ನಷ್ಟು ಪಾಲ್ಗೊಳ್ಳಬೇಕು ಎಂದು ಜಯಕರ ಶೆಟ್ಟಿ ತಿಳಿಸಿದರು.

ನಾರಾಯಣ ಮೆಂಡನ್ ಅಧ್ಯಕ್ಷೀಯ ನುಡಿಗಳನ್ನಾಡಿ ನನ್ನ ಅಧ್ಯಕ್ಷವಧಿಯಲ್ಲಿ ಸಂಘದ ವಜ್ರಮಹೋತ್ಸವ ಆಚರಣೆ ನನ್ನ ಭಾಗ್ಯ ಅಂದೆಣಿಸಿದ್ದೇನೆ. ಗೋರೆಗಾಂವ್ ಕರ್ನಾಟಕ ಸಂಘ ತನ್ನ ನಾಲ್ಕು ವಿಭಾಗದ ಮುಖಾಂತರ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಪ್ರೊತ್ಸಾಹಿಸಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸದ್ಯ ಸಂಘದಲ್ಲಿ ಕಾರ್ಯ ವೈಖ್ಯರ್ಯಗಳು ಜಾಸ್ತಿಯಾಗಿದ್ದು ಜಾಗದ ಕೊರತೆಯೇ ಹೆಚ್ಚಾಗಿದೆ. ಅದಕ್ಕಾಗಿ ದೊಡ್ಡ ಜಾಗದ ವ್ಯವಸ್ಥೆಯ ಅಗತ್ಯವಿದೆ. ಇದನ್ನು ಅದಷ್ಟು ಬೇಗ ಹೊಸ ಯೋಜನೆ ಮೂಲಕ ರೂಪುಗೊಳಿಸುವಲ್ಲಿ ಸಂಘವು ಚಿಂತಿಸುತ್ತಿದೆ. ಸಂಘದ ಪದಾಧಿಕಾರಿಗಳು ದೂರ ದೂರದಿಂದ ಬಂದು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದು ಅವರ ಪ್ರೊತ್ಸಾಹದಿಂದ ನನಗೆ ಮತ್ತಷ್ಟು ಕೆಲಸ ಮಾಡಲು ಸಹಾಯವಾಗುತ್ತದೆ. ಇತ್ತೀಚಿಗೆ ತುಳು ಭಾಷೆಯ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ ಎಂದರು.

ಮುಂಬಯಿನ ಹಿರಿಯ ಸಾಹಿತಿ ಮಿತ್ರಾ ವೆಂಕಟ್ರಾಜ್ ಅಧ್ಯಕ್ಷತೆಯಲ್ಲಿ `ಸಾಮಾಜಿಕ ಸವಾಲುಗಳು' ವಿಚಾರವಾಗಿ ನಡೆಸಲ್ಪಟ್ಟ ವಿಚಾರ ಗೋಷ್ಠಿಯಲ್ಲಿ ಅತಿಥಿü ಅಭ್ಯಾಗತರುಗಳಾಗಿ ಮುಂಡಪ್ಪ ಎಸ್.ಪಯ್ಯಡೆ, ವಿಜಯ ಆರ್.ಭಂಡಾರಿ ಉಪಸ್ಥಿತರಿದ್ದು, `ವಿವಾಹ ಬಂಧನ' ವಿಚಾರವಾಗಿ ದಾಮೋದರ ಶೆಟ್ಟಿ ಇರುವೈಲು ಹಾಗೂ `ವಿವಾಹ ವಿಚ್ಫೇದನ' ವಿಚಾರವಾಗಿ ಶಿಕ್ಷಕಿ ಅಮೃತಾ ಎ.ಶೆಟ್ಟಿ ಉಪನ್ಯಾಸ ನೀಡಿದರು.

ಸಂಘದ ಮಾಜಿ ಅಧ್ಯಕ್ಷರುಗಳಾದ ಎಸ್.ಎಂ ಶೆಟ್ಟಿ, ಶಕುಂತಳಾ ಆರ್.ಪ್ರಭು, ಜಿ.ಟಿ ಆಚಾರ್ಯ, ರಮೇಶ್ ಶೆಟ್ಟಿ ಪಯ್ಯಾರು, ಭಾಸ್ಕರ್ ಶೆಟ್ಟಿ ದೇವಲ್ಕುಂದ, ಗೌರವ ಕೋಶಾಧಿಕಾರಿ ವಿಶಾಲಾಕ್ಷಿ ಉಳುವಾರ, ಹಾಲಿ ಮತ್ತು ಮಾಜಿ ಪದಾಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಸದಸ್ಯರನೇಕರು ಉಪಸ್ಥಿತರಿದ್ದು, ಮಹಿಳಾ ವೃಂದದ ಸದಸ್ಯೆಯರು ಪ್ರಾರ್ಥನೆ, ಸ್ವಾಗತಗೀತೆ ಮತ್ತು ಉದ್ಘಾಟನಾ ಗೀತೆಯನ್ನಾಡಿದರು. ಪದ್ಮಜಾ ಮಣ್ಣೂರು ಸ್ವಾಗತಿಸಿ ಪ್ರಸ್ತಾವನೆಗೈದರು. ವಾಣಿ ಶೆಟ್ಟಿ ಮತ್ತು ಸುಮತಿ ಆರ್.ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಜಿ.ಟಿ ಆಚಾರ್ಯ ಮತ್ತು ನಿತ್ಯಾನಂದ ಡಿ.ಕೋಟ್ಯಾನ್ ಅತಿಥಿಗಳಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಗೌ| ಪ್ರ| ಕಾರ್ಯದರ್ಶಿ ಗುಣೋದಯ ಎಸ್.ಐಲ್ ಸಭಾ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಸಂಘದ ರಂಗಸ್ಥಳ ವಿಭಾಗದ ಕಲಾವಿದರು, ಇತರ ಉಪ ವಿಭಾಗಗಳ ಹಾಗೂ ಮಹಾನಗರದ ವಿವಿಧ ಸಂಸ್ಥೆಗಳ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸುತ ಪಡಿಸಿದರು. ಸಂಜೆ ದಾಮೋದರ ಶೆಟ್ಟಿ ಇರುವೈಲು ಪ್ರಾಯೋಜಕತ್ವ ಹಾಗೂ ಭಾಸ್ಕರ್ ಶೆಟ್ಟಿ ದೇವಲ್ಕುಂದ ಭಾಗವತಿಕೆಯಲ್ಲಿ ಚಂದ್ರಶೇಖರ ಆಚಾರ್ಯ ಮೆರ್ಣೆ ಇವರ ಮದ್ದಳೆ ವಾದಕದೊಂದಿಗೆ ಸಂಘದ ಮಹಿಳಾ ವಿಭಾಗದ ಸದಸ್ಯೆಯರು `ಅಂಬಾ ಶಪಥ' ಯಕ್ಷಗಾನ ತಾಳಮದ್ದಲೆ ಪ್ರಸ್ತುತ ಪಡಿಸಿದರು. ಸರಿತಾ ನಾಯಕ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal