About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.16: ಪತ್ರಕರ್ತರು ದಿನದ 24 ಗಂಟೆಗಳಲ್ಲೂ ಜಾಗೃತರಾಗಬೇಕು ಆಗ ಮಾತ್ರ ಉತ್ತಮ ಪತ್ರಿಕೆ ಬರಲು ಸಾಧ್ಯ. ಪತ್ರಿಕೆಯಲ್ಲಿ ಆಸಕ್ತಿ ಇದ್ದವರು ಮಾತ್ರ ಪತ್ರಿಕೋದ್ಯಮಕ್ಕೆ ಬರಬೇಕು. ಈ ಕಾರ್ಯಕ್ರಮ ಉತ್ತಮವಾಗಿ ಆಯೋಜನೆ ಮಾಡಿದ್ದು, ನಾಡಿನ ಗುರುತರ ಪ್ರತಿಷ್ಠಿತ ಸಂಸ್ಥೆಯ ಈ ಪ್ರಶಸ್ತಿಯನ್ನು ಬಹಳ ಪ್ರೀತಿ ಗೌರವ ಮತ್ತು ಅಭಿಮಾನದಿಂದ ಸ್ವೀಕರಿಸಿದ್ದೇನೆ ಎಂದು ನಾಡಿನ ಹೆಸರಾಂತ ಹಿರಿಯ ಪತ್ರಕರ್ತ, ಜನಮಾಧ್ಯಮ ಕನ್ನಡ ದೈನಿಕದ ಸಂಪಾದಕ ಅಶೋಕ್ ಹಾಸ್ಯಗಾರ ನುಡಿದರು.

ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಇಂದಿಲ್ಲಿ ರವಿವಾರ ಮಧ್ಯಾಹ್ನ ಘಾಟ್ಕೋಪರ್ ಪಶ್ಚಿಮದಲ್ಲಿನ ಹವ್ಯಾಕರ ಸಭಾಗೃಹದಲ್ಲಿ ಪ್ರದಾನಿಸಿದ ವಾರ್ಷಿಕ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ 2020' ಸ್ವೀಕರಿಸಿ ಅಶೋಕ್ ಹಾಸ್ಯಗಾರ ಮಾತನಾಡಿದರು. ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಇಂದಿಲ್ಲಿ ರವಿವಾರ ಮಧ್ಯಾಹ್ನ ಘಾಟ್ಕೋಪರ್ ಪಶ್ಚಿಮದಲ್ಲಿನ ಹವ್ಯಾಕರ ಸಭಾಗೃಹದಲ್ಲಿ ವಾರ್ಷಿಕ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2020' ಆಯೋಜಿಸಿದ್ದು ಸಮಾರಂಭದಲ್ಲಿ ಮುಂಬಯಿ ವಿಶ್ವ ವಿದ್ಯಾಲಯ ಕನ್ನಡದ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಮುಖ್ಯ ಅತಿಥಿಯಾಗಿದ್ದು ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆಯನ್ನೀಡಿ ಶಾಂತ ಶಾಸ್ತ್ರಿ ರಚಿತ `ಸಮಾಜ ಸ್ನೇಹಿ ಎನ್.ಆರ್ ಹೆಗ್ಡೆ' ಕೃತಿ ಬಿಡುಗಡೆ ಗೊಳಿಸಿದರು. ವಿಷ್ಣು ಭಾಗ್ವತ್ ಕೃತಿ ಪರಿಚಯಿಸಿದರು. ಎನ್.ಆರ್ ಹೆಗ್ಡೆ ಕೃತಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ದಾಕ್ಷಾಯಣಿ ಯೆಡವಳ್ಳಿ ಶುಭನುಡಿಗಳನ್ನಾಡಿದರು. ಶಾಂತ ಶಾಸ್ತ್ರಿ ಅವರು ಕೃತಿ ಪ್ರಕಾಶನಕ್ಕೆ ಸ್ಪಂದಿಸಿದವರಿಗೆ ಅಭಿವಂದಿಸಿದರು.

ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಹಯೋಗದಲ್ಲಿ ಹವ್ಯಕ ವೆಲ್ಫೇರ್ ಟ್ರಸ್ಟ್‍ನ ಅಧ್ಯಕ್ಷ ಶಿವಕುಮಾರ್ ಪಿ.ಭಾಗ್ವತ್ ಸಭಾಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಗೌರವ ಅತಿಥಿüಗಳಾಗಿ ಸಂಸ್ಕೃತ ಕಾಲೇಜು ಮೇಲುಕೋಟೆ ಇದರ ನಿವೃತ್ತ ಪ್ರಾಂಶುಪಾಲ ವಿದ್ವಾನ್ ಉಮಾಕಾಂತ್ ಭಟ್ ಶಿರಸಿ ಉಪಸ್ಥಿತರಿದ್ದು ಹಾಸ್ಯಗಾರ್ ಅವರಿಗೆ (ಪತ್ನಿ ಸುನಂದ ಹಾಸ್ಯಗಾರ್, ಸುಪುತ್ರಿಯರಾದ ಚೇತನಾ ಹಾಸ್ಯಗಾರ್, ಸೌಪರ್ಣಿಕ, ಅಳಿಯ ಮಹೇಶ್ ಹೊಳ್ಳಾ ಅವರನ್ನೊಳಗೊಂಡು) ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

ಮುಂಬಯಿಯ ಶ್ರೇಷ್ಠ ನಗರದಲ್ಲಿ ತಾವೆಲ್ಲ ಸೇರಿ ಹವ್ಯಕ ಸಾಮ್ರಾಜ್ಯವನ್ನು ಕಟ್ಟಿದ್ದೀರಿ. ಕರ್ಕಿ ಅವರ ಉದ್ದೇಶ ಏನಾಂದರೆ ಪತ್ರಿಕೋದ್ಯಮವನ್ನು ಅಸ್ತ್ರವಾಗಿಟ್ಟು ಬ್ರಿಟಿಷ್ ಸರಕಾರ ಅಡಗಿಸುವ ಉದ್ದೇಶವಾಗಿರಿಸಿದ್ದರು. ಅವರು ಬರೀ ಪತ್ರಿಕೋದ್ಯಮಿಯಲ್ಲ, ಲೇಖಕ, ಸಾಹಿತಿ, ಚಿಂತಕ ಎಲ್ಲಾವನ್ನೂ ಸಿದ್ಧಿಸಿದ್ದಾರೆ. ಕರ್ಕಿ ಮುಂಬಯಿಯಲ್ಲಿ ಇದ್ದು 30ಕ್ಕಿಂತ ಅಧಿಕ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ನೀಡಿದ್ಡಾರೆ. ಅವರು ಮಾಡಿದಂತಹ ಕೃತಿಗಳನ್ನು ನೋಡಿದರೆ ಆಶ್ವರ್ಯವಾಗುತ್ತವೆ. ನಾವೂ ಬರೇ ನಾಟಕ ಎಂದೆನಿಸುತ್ತೇವೆ. ಅದರಲ್ಲಿ ಸತ್ಯ ಕಥೆಗಳು, ಧಾರ್ಮಿಕ ಕವನಗಳು ಮೊದಲಾದವನ್ನು ನೀಡಿದ ಶ್ರೇಯಸ್ಸು ಕರ್ಕಿ ವೆಂಕಟರಮಣ ಅವರಿಗೆ ಸಲ್ಲುತ್ತದೆ ಎಂದು ಡಾ| ಉಪಾಧ್ಯ ತಿಳಿಸಿದರು.

ಮುಂಬಯಿಯನ್ನು ಕರ್ಮಭೂಮಿಯಾಗಿ ಆಯ್ಕೆ ಮಾಡಿ ಕೊಂಡಿದ್ದು ಯಾಕೆ ಇದು ಪ್ರಬಂಧವಾದ ವಿಷಯ. ಅಂದು ಮುಂಬಯಿಯಲ್ಲಿ ಮಾತ್ರ ಮುದ್ರಣ ವ್ಯವಸ್ಥೆ ಇತ್ತು. ಹಾಗಾಗಿ ಮುಂಬಯಿನಲ್ಲಿ ಪತ್ರಿಕೆಛಾಪಿತ್ತಿದ್ದರು. ಕರ್ಕಿ ಕವಿಯಾಗಿ ಬೆಳೆದ ಮನೆತನ ಸೂರಿ ಮನೆತನ ಅದಕ್ಕೆ ತಕ್ಕಂತೆ ಅವರ ಬದುಕು. ಕವನಗಳು ಜನಗಳಿಗೆ ತಲುಪಬೇಕಾದರೆ ಅದು ಕಲೆಯ ರೂಪದಲ್ಲಿ ಕಲಾವಂತನನ್ನು ರೂಪಿಸುತ್ತಿದ್ದು ಕವಿಗಳ ಮನೆತನ ಮತ್ತು ಕಲಾವಂತನ ಮನೆತನ ಈ ಎರಡೂ ವಿಚಾರಗಳು ಸೂರಿ ಅವರ ಯೋಗತನವನ್ನು ಇಂದಿಗೂ ಸ್ಮರಣೀಯವಾ -ಗಿಸಿವೆ. ಶಾಸ್ತ್ರಿಗಳು ಕವಿಗಳಾಗಿ ಸಮಾಜ ಸುಧಾರಣೆ, ಪತ್ರಿಕೋದ್ಯಮವನ್ನೂ ಇಂದಿಗೂ ಜೀವಂತವಾಗಿಸಿದ್ದಾರೆ ಎಂದು ಉಮಾಕಾಂತ್ ಭಟ್ ಪುರಸ್ಕೃತರಿಗೆ ಅಭಿನಂದನಾ ನುಡಿಗಳನ್ನಾಡಿದರು.

ಕರ್ಕಿ ವೆಂಕಟರಮಣ ಅವರ ಹೆಸರಿನಿಂದ ನಮ್ಮ ಸಂಸ್ಥೆ ಮತ್ತು ಸಮಾಜಕ್ಕೆ ತುಂಬಾ ಅಭಿಮಾನ ತಂದಿದೆ. ಅವರೊರ್ವ ದೂರದೃಷ್ಟಿವುಳ್ಳ, ಸಾಮಾಜಿಕ, ಲೇಖಕ, ಕವಿ, ಕಲಾವಿದರು. ಕರ್ಕಿ ಅವರು ಹವ್ಯಕ ಸಮುದಾಯದ ಅತಿ ಬಡತನದಲ್ಲಿರುವ ಸಹಾಯ ನೀಡಿದ ಮಾಹಾನ್ ವ್ಯಕ್ತಿ. ಕನ್ನಡ ಸಂಸ್ಕೃತಿ ಮತ್ತು ಭಾಷೆಗೆ ಅವರ ಕೊಡುಗೆ ಅಮೂಲ್ಯವಾದುದು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಶಿವಕುಮಾರ್ ನುಡಿದರು.

ಅಪರ್ಣಾ ಭಟ್ ಪ್ರಾರ್ಥನೆಯನ್ನಾಡಿದರು. ಪ್ರಶಸ್ತಿ ಸಮಿತಿ ಸಂಚಾಲಕಿ ತನುಜಾ ಹೆಗಡೆ ಸ್ವಾಗತಿಸಿದರು. ಶಶಿಕಲಾ ಹೆಗಡೆ ಪ್ರಸ್ತಾವನೆಗೈದರು. ಶಾಂತಾ ಭಟ್ ಗಣ್ಯರ ಸಂದೇಶಗಳನ್ನು ವಾಚಿಸಿದರು. ಟ್ರಸ್ಟ್‍ನ ಉಪಾಧ್ಯಕ್ಷ ಸಂಜಯ ಭಟ್, ಗೌ| ಪ್ರ| ಕಾರ್ಯದರ್ಶಿ ನಾರಾಯಣ ಆರ್.ಅಕದಾಸ, ಗೌ| ಕೋಶಾಧಿಕಾರಿ ಎ.ಜಿ ಭಟ್ ಅತಿಥಿüಗಳಿಗೆ ಗೌರವಿಸಿದರು. ಪೂರ್ಣಿಮಾ ಅಕದಾಸ ಸನ್ಮಾನಪತ್ರ ವಾಚಿಸಿದರು. ಪ್ರಶಸ್ತಿ ಸಮಿತಿ ಸಂಚಾಲಕ ಚಿದಾನಂದ ಭಾಗ್ವತ್ ಪುರಸ್ಕೃತರನ್ನು ಪರಿಚಯಿಸಿದರು. ಕರ್ನಾಟಕ ಮಲ್ಲ ದೈನಿಕದ ಉಪ ಸಂಪಾದಕ ಶ್ರೀನಿವಾಸ ಜೋಕಟ್ಟೆ, ಕಲಾ ಭಾಗ್ವತ್ ಅತಿಥಿ ಪರಿಚಯಗೈದರು. ಟ್ರಸ್ಟ್‍ನ ಮುಖವಾಣಿ `ಹವ್ಯಕ ಸಂದೇಶ' ಮಾಸಿಕದ ಸಂಪಾದಕಿ ನ್ಯಾಯವಾದಿ ಅಮಿತಾ ಎಸ್.ಭಾಗ್ವತ್ ಕಾರ್ಯಕ್ರಮ ನಿರೂಪಿಸಿದರು. ರೂಪಾ ಭಟ್ ಧನ್ಯವದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿಸಿ ಕೇಶವ ಹೆಗಡೆ ಕೊಳಗಿ ಭಾಗವತಿಕೆಯಲ್ಲಿ ಆಖ್ಯನ `ಶರಸೇತು ಬಂಧನ' ತಾಳಮದ್ದಲೆ ನಡೆಸಲ್ಪಟ್ಟಿದ್ದು, ಉಮಾಕಾಂತ್ ಭಟ್ ಶಿರಸಿ (ಹನುಮಂತ), ಪ್ರಾ| ಎಂ.ಎನ್ ಹೆಗಡೆ ಯಲ್ಲಾಪುರ (ಕೃಷ್ಣ), ಹರೀಶ್ ಬೊಳಂತೆಮೊಗರು (ಅರ್ಜುನ) ಪಾತ್ರಧಾರಿಗಳಾಗಿದ್ದು ಶಂಕರ ಭಾಗ್ವತ್ ಯಲ್ಲಾಪುರ ಮೃದಂಗ ವಾದನದಲ್ಲಿ ಸಹಕರಿಸಿದರು. ಹವ್ಯಕ ವೆಲ್ಫೇರ್‍ನ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal