Print


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


ಮುಂಬಯಿ, ಫೆ.17: ಸ್ವಶ್ರಮ, ಸಾಹಸತನ, ಸ್ವಘನತೆಯಿಂದ ಬದುಕು ಕಂಡುಕೊಂಡ ಬಂಟರು ಸದ್ಯ ಹೊಟೇಲು ಉದ್ಯಮದೊಂದಿಗೆ ಜಾಗತಿಕವಾಗಿ ಪರಿಚಯಿಸಿ ಕೊಂಡಿದ್ದರೂ ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮದಲ್ಲೂ ಕಡಿಮೆ ಏನಿಲ್ಲ. ಧೈರ್ಯ, ಅರಿವು, ತಿಳುವಳಿಕೆಯಿಂದ ಮಾತ್ರ ಉದ್ಯಮದಲ್ಲಿ ಯಶಸ್ಸು ಕಾಣಲು ಸಾಧ್ಯ. ಬಂಟರಾದ ನಾವು ಇದನ್ನೆಲ್ಲಾ ತಿಳಿದು ಇದನ್ನು ಸಾಧಿಸಿದ್ದೇವೆ. ಹೊಟೇಲು ಕಾರ್ಮಿಕರಾಗಿದ್ದು, ಟೀ-ಕಾಫಿ ಶಾಪ್‍ನಿಂದ ಹೊಟೇಲು ಮಾಲಿಕರಾಗಿ ಇದೀಗ ಟು, ತ್ರೀ-ಪೋರ್ ಸ್ಟಾರ್ ಹೊಟೇಲುಗಳ ಮಾಲಿಕರಾಗಿರುವುದೇ ನಮ್ಮ ಸಾಧನೆಯಾಗಿದೆ. ಸದ್ಯ ಎಲ್ಲಾ ಔದ್ಯೋಗಿಕ ವಲಯದಲ್ಲಿನ ಬಂಟರನ್ನು ಸ್ವಸಮುದಾಯ ಗುರುತಿಸುವಲ್ಲಿ ಇಂತಹ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸ್ತುತ್ಯಾರ್ಹ. ಈ ಮೂಲಕ ಬಂಟರ ಅಸ್ತಿತ್ವ ಜಾಗತಿಕವಾಗಿ ಪರಿಚಯಿಸುವಂತೆ ಆಗಬೇಕು ಎಂದು ಆರ್ಗ್ಯಾನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ ಆನಂದ ಎಂ.ಶೆಟ್ಟಿ ತಿಳಿಸಿದರು.

ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಸಂಸ್ಥೆಯು ಇದೇ ಮಾ.01ರಂದು ಆಯೋಜಿಸಿರುವ `ಐಬಿಸಿಸಿಐ ಬಂಟ್ಸ್ ಸ್ಟಾರ್ ಸಾಧಕ ಪುರಸ್ಕಾರ 2020' ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದಿಲ್ಲಿ ಸೋಮವಾರ ರಾತ್ರಿ ಅಂಧೇರಿ ಪೂರ್ವದ ಎಂಐಡಿಸಿ ಅಲ್ಲಿನ ಸನ್‍ಸಿಟಿ ಹೊಟೇಲು ಸಭಾಗೃಹದಲ್ಲಿ ಆಯೋಜಿಸಿದ್ದು ಆನಂದ ಶೆಟ್ಟಿ ಆಹ್ವಾನಪತ್ರಿಕೆ ಬಿಡುಗಡೆ ಗೊಳಿಸಿ ಮಾತನಾಡಿದರು. ಆರ್ಗ್ಯಾನಿಕ್ ಸಂಸ್ಥೆಯ ನಿರ್ದೇಶಕ ಪ್ರಬೀರ್ ಆನಂದ್ ಶೆಟ್ಟಿ, ವಿಕೇ ಸಮೂಹ (ಮ್ಯಾಕಾೈ), ಮುಂಬಯಿ ನಿರ್ದೇಶಕ ಅಂಕಿತ್ ಕೆ.ಶೆಟ್ಟಿ ಪ್ರಾಯೋಜಕರ ಯಾದಿ ಅನಾವರಣ ಗೊಳಿಸಿ ಶುಭಾರೈಸಿದರು.

ಎಸ್‍ಎಂ ಗ್ರೂಪ್ ಆಫ್ ಇಂಡಿಯಾ ಇದರ ಆಡಳಿತ ನಿರ್ದೇಶಕ, ಐಬಿಸಿಸಿಐ ಇದರ ಸ್ಥಾಪಕ ಕಾರ್ಯಧ್ಯಕ್ಷ ಎಸ್.ಎಂ ಶೆಟ್ಟಿ, ದ್ವಿತೀಯ ಕಾರ್ಯಧ್ಯಕ್ಷ ವಿ.ಕೆ ಶೆಟ್ಟಿ (ಸ್ವರ್ಗಸ್ಥರು), ಅತ್ಯುತ್ಸಾಹಿ ಮತ್ತು ತೃತೀಯ ಕಾರ್ಯಧ್ಯಕ್ಷ ಬಿ.ಡಿ ಶೆಟ್ಟಿ, ನಗ್ರಿಗುತ್ತು ವಿವೇಕ್ ಶೆಟ್ಟಿ ಇವರ ಅತ್ಯಾಮೂಲ್ಯ ಸೇವೆಯನ್ನು ಕಾರ್ಯಧ್ಯಕ್ಷ ಕೆ.ಸಿ ಶೆಟ್ಟಿ ಮನವರಿಸಿ ಅಭಿವಂದಿಸಿದರು. ಸಮಾರಂಭಕ್ಕೆ ಅತಿಥಿs ಅಭ್ಯಾಗತರುಗಳಾಗಿ ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದ ಗೌಡ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಖಾತೆ ಸಚಿವ ನಿತಿನ್ ಗಡ್ಕರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಸಿಇಒ, ಆಡಳಿತ ನಿರ್ದೇಶಕ ರಾಜ್‍ಕಿರಣ್ ರೈ ಆಗಮಿಸಿ ಉತ್ಸಹಿ ಯುವ ಉದ್ಯಮಿಗಳಿಗೆ ಸ್ವಉದ್ಯಮಿಗಳಾಗಿ ಸ್ವರಾಷ್ಟ್ರದ ಅಭಿವೃದ್ಧಿಗೆ ಪ್ರೇರೆಪಿಸುವ ಆಶಯವನ್ನೂ ಕೆ.ಸಿ ಶೆಟ್ಟಿ ವ್ಯಕ್ತಪಡಿಸಿದರು.

ಮೂರು ದಶಕಗಳ ಸಾರ್ಥಕ ಸೇವೆಯೊಂದಿಗೆ ಮುನ್ನಡೆಯುತ್ತಿರುವ ಬಂಟರ ಉದ್ಯಮಸ್ಥರ ಸಂಸ್ಥೆ ಐಬಿಸಿಸಿಐ ಇದೀಗ ಬಂಟ ಉದ್ಯಮಶೀ ಸಾಧಕರಿಗೆ ಗುರುತಿಸಿ ಭಾವೀ ಯುವ ಉದ್ಯಮಿಗಳಿಗೆ ಪ್ರೇರೆಪಿಸುವ ಉದ್ದೇಶ ಈ ಸಾಧಕ ಪುರಸ್ಕಾರ ಪ್ರದಾನ ಕಾರ್ಯಕ್ರಮವಾಗಿದೆ. ಐಬಿಸಿಸಿಐ ಸದಸ್ಯತ್ವ, ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿಪ್ಛಿಸುವ ಬಂಟ ಮಹಾನೀಯರು ಐಬಿಸಿಸಿಐ ವೆಬ್‍ಸೈಟ್ ಮೂಲಕ ಅಧಿಕ ಮಾಹಿತಿ ಪಡೆಯುವಂತೆ ಸಿಎ| ಶಂಕರ್ ಶೆಟ್ಟಿ ತಿಳಿಸಿದರು.

ಐಬಿಸಿಸಿಐ ಕಾರ್ಯಧ್ಯಕ್ಷ ಕುತ್ಪಾಡಿ ಚಂದ್ರ ಶೆಟ್ಟಿ (ಕೆ.ಸಿ ಶೆಟ್ಟಿ), ಉಪಾಧ್ಯಕ್ಷ ಎಸ್.ಬಿ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಸಾದ್ ಬಿ.ಶೆಟ್ಟಿ ಮತ್ತು ಪ್ರಶಸ್ತಿ ಪ್ರದಾನ ಸಮಿತಿ ಕಾರ್ಯಾಧ್ಯಕ್ಷ ಸಿಎ| ಶಂಕರ್ ಬಿ.ಶೆಟ್ಟಿ ವೇದಿಕೆಯಲ್ಲಿ ಹಾಗೂ ಬಿ.ಬಿ ಶೆಟ್ಟಿ, ಕಿಶನ್ ಜೆ.ಶೆಟ್ಟಿ, ಡಾ| ಮನೋಹರ್ ಹೆಗ್ಡೆ, ವಿಶ್ವನಾಥ ಯು.ಮಾಡ, ಸುರೇಶ್ ಬಿ.ಶೆಟ್ಟಿ, ಪಾಂಡುರಂಗ ಎಲ್.ಶೆಟ್ಟಿ, ಪ್ರವೀಣ್ ಎ.ಶೆಟ್ಟಿ, ಕಾರ್ತಿಕ್ ಕೆ.ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರನೇಕರು, ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ನಿಶಿತ್ ಶೆಟ್ಟಿ ಪ್ರಸ್ತಾವನೆಗೈದರು. ಶ್ರೀನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ್ ಬಿ.ಶೆಟ್ಟಿ ಧನ್ಯವಾದಗೈದರು.